ಅನುದಿನದ ಮನ್ನಾ
ಕಾಮದ ದುರಿಚ್ಛೆಗಳಿಂದ ಹೊರಬರುವುದು
Thursday, 4th of April 2024
0
0
469
Categories :
ಕಾಮ (Lust)
"ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ. ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು? "(ಯೋಬನು 31:1)
ನಮ್ಮ ಪ್ರಸ್ತುತ ಲೋಕದಲ್ಲಿ ಹಿಂದೆಂದೂ ಕಂಡರಿಯದಷ್ಟೂ ಕಾಮದ ಪ್ರಲೋಬನೆಗಳು ಪ್ರಚಲಿತವಾಗಿದೆ.ಅಂತರ್ಜಾಲದ ಆವಿಷ್ಕಾರ ಅಶ್ಲೀಲ ವಸ್ತುಗಳ ಸುಲಭವಾದ ಲಭ್ಯತೆಯಿಂದ ಇಂದು ಅನೇಕರು ಹೋರಾಟವನ್ನು ಎದುರಿಸುತ್ತಿದ್ದಾರೆ. ನಮ್ಮ ಚರ್ಚಿನ ಸದಸ್ಯರೊಬ್ಬರು ತಮ್ಮ ಕಚೇರಿಗೆ ಹೋದಾಗ ಅವರ ವ್ಯವಹಾರದ ಪಾಲುಗಾರರೊಬ್ಬರು ತಮ್ಮ ಕಂಪ್ಯೂಟರ್ನಲ್ಲಿ ಅಶ್ಲೀಲ ಚಿತ್ರಣದ ನೋಡುತ್ತಿದ್ದನ್ನು ಕಂಡು ಅವಕ್ಕಾದದುನ್ನು ಕುರಿತು ಹೇಳಿದರು. ಆ ಚಿತ್ರಣವು ಹೊರಗಿನವರಿಗೆ ಬಹಳ ಸುಲಭವಾಗಿ ಕಾಣುವಂತಿತ್ತು ಆದರೂ ಅವರು ಈ ವಿಚಾರವಾಗಿ ನಾಚಿಕೆ ಪಡದೆ ಅದನ್ನು ಬಚ್ಚಿಡಲು ಕೂಡ ಪ್ರಯತ್ನಿಸದೇ ಅದನ್ನೇ ವಿಜೃಂಭಿಸುವ ಹಾಗೆ ಅವರು ಜಂಬ ಕೊಚ್ಚಿಕೊಳ್ಳುತ್ತಿದ್ದದ್ದೂ ನಮ್ಮ ಸದಸ್ಯರಿಗೆ ಆಶ್ಚರ್ಯ ಎನಿಸಿತ್ತು.
ಈ ಒಂದು ಸಾಂದರ್ಭಿಕ ಪ್ರಕರಣವು ನಿಜಕ್ಕೂ ನಮ್ಮ ಸಮಾಜದಲ್ಲಿ ಅಶ್ಲೀಲತೆಯ ವ್ಯಾಪಕತೆಯನ್ನು ಅದರ ಕುರಿತು ಈ ತಲೆಮಾರಿಗೆ ಇರುವ ಸಂವೇದನಶೀಲ ಶೂನ್ಯತೆಯನ್ನು ಎತ್ತಿ ತೋರಿಸುತ್ತದೆ.ಅಪೋಸ್ತಲನಾದ ಪೌಲನು ಗಲಾತ್ಯದವರಿಗೆ ಬರೆದ ಪತ್ರದಲ್ಲಿ ಈ ಕುರಿತು ಹೀಗೆ ಎಚ್ಚರಿಸಿದ್ದಾನೆ "ನಾನು ಹೇಳುವದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ. [17] ಯಾಕಂದರೆ ಶರೀರಭಾವವು ಅಭಿಲಾಷಿಸುವದು ಆತ್ಮನಿಗೆ ವಿರುದ್ಧವಾಗಿದೆ, ಆತ್ಮನು ಅಭಿಲಾಷಿಸುವದು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಫಿಸುವದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ."(ಗಲಾತ್ಯದವರಿಗೆ 5:16-17)
ಕಾಮದ ದುರಿಚ್ಛೇಗಳಿಂದ ಆಗುವ ಮೋಸಗಳು.
ಅಶ್ಲೀಲತೆಯ ವಸ್ತುಗಳನ್ನು ಬಳಸುತ್ತಿರುವವರು ಹೇಳುವ ಒಂದು ಸರ್ವೆ ಸಾಮಾನ್ಯವಾದ ನೆಪ ಎಂದರೆ "ನಾವು ಇದರಿಂದ ಯಾರಿಗೂ ತೊಂದರೆ ಕೊಡುತ್ತಿಲ್ಲ" ಎಂಬುದು ಏನೇ ಆದರೂ ಇದೊಂದು ಸುಳ್ಳಾಗಿದೆ. ಅಶ್ಲೀಲ ವಸ್ತುಗಳ ಬಳಕೆಯು ಯಾವಾಗಲೂ ವೈಯಕ್ತಿಕ ಪರಿಧಿಯನ್ನು ಮೀರಿಯೇ ಹೋಗುತ್ತದೆ. ಅಪೋಸ್ತಲನಾದಂತ ಪೌಲನು ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ ಹೀಗೆ ಬರೆಯುತ್ತಾನೆ
"ಜಾರತ್ವ ಸಕಲ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು. 4ಹೊಲಸು ಮಾತು ಹುಚ್ಚು ಮಾತು ಕುಚೋದ್ಯ ಮಾತು ಇವು ಬೇಡ, ಅಯುಕ್ತವಾಗಿವೆ; 5ಇವುಗಳನ್ನು ಬಿಟ್ಟು ದೇವರಿಗೆ ಉಪಕಾರಸ್ತುತಿ ಮಾಡುವದು ಉತ್ತಮ. ಜಾರರು ದುರಾಚಾರಿಗಳು ವಿಗ್ರಹಾರಾಧಕರಂತಿರುವ ಲೋಭಿಗಳು ಇವರಲ್ಲಿ ಒಬ್ಬರಿಗಾದರೂ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೇ ಇಲ್ಲವೆಂದು ನೀವು ಚೆನ್ನಾಗಿ ಬಲ್ಲಿರಲ್ಲವೇ.6ಹುರುಳಿಲ್ಲದ ಮಾತುಗಳನ್ನಾಡುವವರಿಗೆ ಕಿವಿಗೊಟ್ಟು ಮೋಸಹೋಗಬೇಡಿರಿ; ಅಂಥ ಕೃತ್ಯಗಳ ನಿವಿುತ್ತದಿಂದ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ.7ನೀವು ಅವರೊಂದಿಗೆ ಪಾಲುಗಾರರಾಗಬೇಡಿರಿ.
9ಬೆಳಕಿನವರಂತೆ ನಡೆದುಕೊಳ್ಳಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ. 10ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ. 11ಕತ್ತಲೆಗೆ ಸಂಬಂಧವಾದ ಕೃತ್ಯಗಳಿಂದ ಯಾವ ಪ್ರಯೋಜನವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬೈಲಿಗೆ ತಂದು ಖಂಡಿಸಿರಿ."(ಎಫೆಸದವರಿಗೆ 5:3-11)
ಅಶ್ಲೀಲ ವಸ್ತುಗಳ ಬಳಕೆಯು ನಿಮ್ಮ ದುಡಿಮೆಯ ಸಾಮರ್ಥ್ಯವನ್ನು ಹಾಳುಮಾಡುತ್ತದೆ.ನಿಮ್ಮ ಪ್ರಾಮಾಣಿಕತೆಯನ್ನು ನಾಶ ಮಾಡುತ್ತದೆ. ನಿಮ್ಮ ಆಲೋಚನೆ ರೀತಿಯನ್ನು ಕಲಿಷಿತಗೊಳಿಸುತ್ತದೆ. ಮತ್ತು ನಿಮ್ಮ ಜೊತೆ ಇರುವಂತಹ ನಿಮ್ಮ ಪ್ರೀತಿ ಪಾತ್ರರಿಗೆ ಅದು ಆಘಾತವನ್ನು ತರುವಂತದ್ದಾಗಿದೆ.ಲೈಂಗಿಕತೆ ಬಗ್ಗೆ ನಿಮಗಿರುವ ನೋಟವನ್ನೇ ಅದು ಕಲುಷಿತಗೊಳಿಸುತ್ತದೆ. ಅದು ನಿಮ್ಮ ಸಂಬಂಧಗಳಲ್ಲಿ ವಿರೋಧಗಳನ್ನು ದುರ್ಬಳಕೆಯನ್ನು ತಂದೊಡ್ಡಬಹುದು. ಕ್ರೈಸ್ತರಾಗಿ ನಾವು ಕ್ರಿಸ್ತನ ಚಾರಿತ್ರವನ್ನು ಪ್ರತಿಬಿಂಬಿಸುವಂತೆ ಪವಿತ್ರವಾಗಿಯೂ ಪರಿಶುದ್ಧವಾಗಿಯೂ ಜೀವಿಸಲು ಕರೆಯಲ್ಪಟ್ಟಿದ್ದೇವೆ.
ಮತ್ತಾಯ 5:27-28ರಲ್ಲಿನ ಯೇಸುವಿನ ಮಾತುಗಳು ಹಾದರದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
"ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದ್ದೀರಷ್ಟೆ. [28] ಆದರೆ ನಾನು ನಿಮಗೆ ಹೇಳುವದೇನಂದರೆ - ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು."(ಮತ್ತಾಯ 5:27-28)
ಕಾಮದದುರಿಚ್ಛೇಗಳು ನಿರಪಾಯಕಾರಿಯೋ ಅಥವಾ ಕ್ಷಣಿಕ ಭೋಗವೋ ಅಷ್ಟೇ ಅಲ್ಲ ಅದು ದೇವರಿಂದ ನಮ್ಮನ್ನು ಬೇರ್ಪಡಿಸುವಂತಹ ಪಾಪವಾಗಿದೆ. ಅದು ನಮ್ಮನ್ನು ನರಕಕ್ಕೆ ನಡೆಸುವಂತದ್ದಾಗಿದೆ.
ಪವಿತ್ರಾತ್ಮನ ಬಲದ ಮೂಲಕ ಕಾಮದ ದುರಚ್ಚೆಗಳಿಂದ ಹೊರಬರುವುದು.
ಹೀಗಿರುವುದರಿಂದ, ಲೈಂಗಿಕ ಚಿತ್ರಣಗಳು ಅಶ್ಲೀಲ ವಸ್ತುಗಳಿಂದಲೇ ತುಂಬಿರುವಂತಹ ಈ ಲೋಕದಲ್ಲಿ ಈ ಕಾಮದದುರಿಚ್ಛೇಯಪ್ರಲೋಭನೆಗಳಿಂದ ಹೊರಬರುವುದು ಹೇಗೆ?ಇದಕ್ಕೆ ಉತ್ತರವು ಪವಿತ್ರಾತ್ಮನ ಬಲದಲ್ಲೇ ಅಡಗಿದೆ.
"ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ 21ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ."(ಯೂದನು 1:20-21)ಎಂದು ಯೂದನು ಬಹು ಕಾಳಜಿಯಿಂದ ನಮ್ಮನ್ನು ಪ್ರೋತ್ಸಾಹ ಪಡಿಸುತ್ತಾನೆ. ಪ್ರಾರ್ಥನೆ ಉಪವಾಸ ಮತ್ತು ದೇವರ ವಾಕ್ಯಗಳಲ್ಲಿ ಮುಳುಗಿರುವಾಗ ನಾವು ಆತ್ಮಿಕವಾಗಿ ಬಲ ಹೊಂದಿ ಈ ಎಲ್ಲಾ ಶರೀರದಿಚ್ಛೆಗಳ ವಿರುದ್ಧ ಹೋರಾಡಲು ಶಕ್ತರಾಗುತ್ತೇವೆ.
"ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ"(ಕೊಲೊಸ್ಸೆಯವರಿಗೆ 3:5)ಎಂದು ಅಪೋಸ್ತಲನಾದ ಪೌಲನು ಕೊಲಸ್ಸೆಯವರಿಗೆ ಬರೆದ ಪತ್ರದಲ್ಲಿ ಈ ಒಂದು ಕಾಮದ ಪ್ರಲೋಭನೆಗಳನ್ನು ಎದುರಿಸಲು ನಾವು ಶಕ್ತರಾಗಲು ಒಂದು ಪ್ರಾಯೋಗಿಕ ಸಲಹೆಯನ್ನು ನೀಡುತ್ತಾನೆ. ಕಾಮದ ದುರಿಚ್ಛೇಗಳ ವಿರುದ್ಧವಾಗಿ ಹೋರಾಡುವಲ್ಲಿ ನಾವು ಪೂರ್ವಭಾವಿಯಾಗಿ ಸಿದ್ಧರಾಗಿದ್ದು ಅಂಥಹ ಪ್ರತಿಯೊಂದು ಆಲೋಚನೆಗಳನ್ನು ಬಂಧಿಸಿ ಕ್ರಿಸ್ತನಿಗೆ ಅಧೀನ ಪಡಿಸಬೇಕು (ಕೊಲಸ್ಸೆ 10:5)
ಕಾಮದ ದುರಿಚ್ಚೆಗಳ ವಿರುದ್ಧ ಹೋರಾಡುವಂಥದ್ದು ನಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡ ಬೇಕಾದ್ದು ಬಹು ಮುಖ್ಯವಾದದ್ದು. ಪೌಲನು ರೋಮಾ 8:1ರಲ್ಲಿ ಬರೆಯುವಂತೆ.. "ಆದದರಿಂದ ಕ್ರಿಸ್ತ ಯೇಸುವಿನಲ್ಲಿ ಇರುವವರಿಗೆ ಅಪರಾಧನಿರ್ಣಯವು ಈಗ ಇಲ್ಲವೇ ಇಲ್ಲ." ಆದುದರಿಂದ ನಾವು ಎಡವಿದರೂ ಬಿದ್ದರೂ ನಮ್ಮ ರಕ್ಷಕನ ಪ್ರೀತಿಯ ಬಾಹುಗಳು ಸದಾ ನಮ್ಮ ಕೈಹಿಡಿದು ಎತ್ತಿ ರಕ್ಷಿಸಲೂ ಕ್ಷಮಿಸಲೂ ನಮ್ಮನ್ನು ಪುನಸ್ಥಾಪಿಸಲು ನಮಗಾಗಿ ಇದೆ.
ಕಾಮದದುರಿಚ್ಚೆಗಳನ್ನು ಜಯಿಸುವಂಥದ್ದು ಎಂಬುದು ದೈನಂದಿನ ಹೋರಾಟವಾಗಿದ್ದು ಅದು ಜಾಗರೂಕತೆಯನ್ನು, ಶಿಸ್ತನ್ನೂ ಮತ್ತು ಪವಿತ್ರಾತ್ಮನ ಮೇಲೆ ಆಧಾರಗೊಳ್ಳುವುದನ್ನೂ ನಮ್ಮಿಂದ ನಿರೀಕ್ಷಿಸುತ್ತದೆ.
ಆದರೆ ನಮ್ಮ ಹೋರಾಟದ ಪ್ರಯತ್ನವು ಪ್ರಾಮಾಣಿಕವಾಗಿರಬೇಕು ಮತ್ತು ಕ್ರಿಸ್ತನಲ್ಲಿನ ವಿಶ್ವಾಸಾರ್ಹ ಸಹೋದರ ಸಹೋದರಿಯರ ಪ್ರಾರ್ಥನೆ ಸಹಾಯ ಸಾಂತ್ವನ ತೆಗೆದುಕೊಳ್ಳಲು ನಾವು ಹಿಂಜರಿಯಬಾರದು. ನಿಮಗೆ ಒಂದು ನೆನಪಿರಲಿ ಯೇಸು ಪಾಪಿಯನ್ನು ಬಿಟ್ಟುಬಿಡುವುದಿಲ್ಲ. ಪ್ರತಿಯೊಂದು ಹೋರಾಟವನ್ನೂ ಪ್ರತಿಯೊಂದು ಶೋಧನೆಯನ್ನು ಗೆಲ್ಲಲು ಆತನ ಕೃಪೆಯೊಂದೇ ಸಾಕು ಎಂಬುದನ್ನು ಅರಿತುಕೊಂಡು ಆತನ ಪ್ರೀತಿಯನ್ನೇ ಎದುರು ನೋಡೋಣ.
"ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು."(1 ಕೊರಿಂಥದವರಿಗೆ 10:13)
ಆದುದರಿಂದ, ನಮ್ಮನ್ನು ನಡೆಸಲು, ಕಾಮದದುರಿಚ್ಚೆಗಳ ಮೇಲೆ ನಾವು ಜಯ ಸಾಧಿಸಲು ನಮಗೆ ಬೇಕಾದ ಬಲಕ್ಕಾಗಿ ಪವಿತ್ರಾತ್ಮನ ಅಪರಿಮಿತವಾದ ಶಕ್ತಿ ಹಾಗೂ ಜ್ಞಾನದ ಮೇಲೆ ಭರವಸೆ ಇಟ್ಟು ಪ್ರತಿದಿನ ಪರಿಶುದ್ಧತೆಯಿಂದ ಜೀವಿಸುವ ಆಜ್ಞೆಗೆ ಬದ್ಧರಾಗೋಣ. ನಾವು ಈ ರೀತಿ ನಡೆಯುವಾಗ ನಮ್ಮ ಜೀವಿತದಲ್ಲಿ ದೇವರ ಚಿತ್ತಕ್ಕೆ ವಿದೆಯರಾದವರಿಗೆ ದೊರಕುವ ಸ್ವಾತಂತ್ರವನ್ನು ಆನಂದವನ್ನು ನಾವು ಅನುಭವಿಸುವವರಾಗುತ್ತೇವೆ.
ಪ್ರಾರ್ಥನೆಗಳು
ತಂದೆಯೇ, ನಾನು ಕೇಡಿನ ಮಾರ್ಗದಲ್ಲಿ ಇರುತ್ತೇನೆಯೋ ಎಂದು ನೋಡಿ ನನ್ನ ಮಾರ್ಗಗಳನ್ನು ಕಾಮದದುರಿಚ್ಚೆಗಳಿಂದ ತಪ್ಪಿಸು ಮತ್ತು ನನ್ನ ಮನೋ- ನೇತ್ರಗಳನ್ನು ತೆರೆಮಾಡು. ನನ್ನ ಕಣ್ಣುಗಳನ್ನು ಮತ್ತು ನನ್ನ ಆಲೋಚನೆಗಳನ್ನು ನಿನ್ನ ಪರಿಶುದ್ಧವಾದ ರಕ್ತದಿಂದ ಯೇಸು ನಾಮದಲ್ಲಿ ಬಚ್ಚಿಡು.ಆಮೆನ್.
Join our WhatsApp Channel
Most Read
● ದೇವರ ರೀತಿಯ ನಂಬಿಕೆ● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸಮಾಧಾನದ ಮೂಲ :ಕರ್ತನಾದ ಯೇಸು
● ದೇವರಿಗಾಗಿ ದಾಹದಿಂದಿರುವುದು
● ಹೆಚ್ಚಿನ ಹೊರೆ ಬೇಡ
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
ಅನಿಸಿಕೆಗಳು