ಅನುದಿನದ ಮನ್ನಾ
ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
Friday, 15th of November 2024
2
1
64
Categories :
ಗುಣ(character)
ಹಣ ನಿರ್ವಹಣೆ ( Money Management)
ಏಳನೆಯ ದಿನದಲ್ಲಿ ಎಫ್ರಾಯೀಮ್ ಕುಲಾಧಿಪತಿಯೂ, ಅಮ್ಮೀಹೂದನ ಮಗನೂ ಆದ ಎಲೀಷಾಮನು ಕಾಣಿಕೆಯನ್ನು ಸಮರ್ಪಿಸಿದನು. (ಅರಣ್ಯ ಕಾಂಡ 7:48)
ನಮ್ಮ ದೈನಂದಿನ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ನೀವು ಹಣವನ್ನು ಬಳಸುವ ವಿಧಾನವು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ. ದೇವರಿಗೆ ಹಣವೇ ಮುಖ್ಯವೋ? ಚರ್ಚ್ ಅಥವಾ ಪ್ರಾರ್ಥನಾ ಸಭೆಯಲ್ಲಿ ಯಾರಾದರೂ ಹಣದ ಬಗ್ಗೆ ಮಾತನಾಡುವಾಗ, ಕೆಲವರು ಭಯಭೀತರಾಗುವುದನ್ನು ನಾನು ಗಮನಿಸಿದ್ದೇನೆ; ಇತರರು ಮನನೊಂದುಕೊಳ್ಳುತ್ತಾರೆ; ಕೆಲವರು ಜನರನ್ನು ನ್ಯಾಯತೀರ್ಪು ಮಾಡುವ ಮಟ್ಟಿಗೆ ಕಟುವಾಗಿ ಟೀಕಿಸುತ್ತಾರೆ, . ಹಣವು ಅಂತಹ ಭಾವೋದ್ರಿಕ್ತ ಭಾವನೆಗಳನ್ನು ಏಕೆ ಉಂಟುಮಾಡುತ್ತದೆ?
ನಮ್ಮಲ್ಲಿ ಹೆಚ್ಚಿನವರು ಹಣಕ್ಕಾಗಿ ಸಮಯವನ್ನು ವಿನಿಮಯ ಮಾಡಿಕೊಳ್ಳುತ್ತಾರೆ; ಇತರರು ಪ್ರತಿಭೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಅಥವಾ ಹಣವನ್ನು ಎದುರು ನೋಡುತ್ತಾರೆ. ಕೆಲವರು ದಿನಕ್ಕೆ 10-15 ಗಂಟೆಗಳ ಕಾಲ ಕೆಲಸ ಮಾಡುವ ಮೂಲಕ ತಮ್ಮ ಶಕ್ತಿ ಮತ್ತು ಬೆವರು ಹರಿಸುವ ಮೂಲಕ ಹಣಕ್ಕಾಗಿ ತಮ್ಮನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಣವು 'ನೀವು ಯಾರು' ಎಂಬುದನ್ನು ಪ್ರತಿನಿಧಿಸುತ್ತದೆ.
ನೀವು ಗಳಿಸುವ ಹಣದಿಂದ ಈ ಪ್ರಪಂಚದ ಜನರು ನಿಮ್ಮನ್ನು ಗೌರವಿಸುತ್ತಾರೆ. ಈಗ ನೀವು ನಿಮ್ಮ ಹಣವನ್ನು ಕರ್ತನಿಗೆ ಕಾಣಿಕೆಯಾಗಿ ತಂದಾಗ, ನೀವು ಅಕ್ಷರಶಃ ನಿಮ್ಮ ಒಂದು ಭಾಗವನ್ನು ದೇವರಿಗೆ ತರುತ್ತೀರಿ. ಸೈತಾನ ಮತ್ತು ಅವನ ದೂತರಿಗೂ ಈ ಸತ್ಯದ ಅರಿವಿದೆ. ಅವುಗಳು ಸಹ ನಿಮ್ಮ ಹಣದ ಮೂಲಕ ಆರಾಧನೆಯನ್ನು ಕೇಳಿಕೊಳ್ಳುತ್ತವೆ.
ಸತ್ಯವೆಂದರೆ, ಹಣವು ತಟಸ್ಥವಾಗಿದೆ - ಅದು ಒಳ್ಳೆಯದೂ ಅಲ್ಲ ಅಥವಾ ಕೆಟ್ಟದ್ದೂ ಅಲ್ಲ. ಒಳ್ಳೆಯವರ ಕೈಯಲ್ಲಿ ಇದ್ದರೆ ಬಿಳಿ ಹಣ, ಇಲ್ಲದಿದ್ದರೆ ಕಪ್ಪು ಹಣ ಎನ್ನುತ್ತಾರೆ.
ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಅವನಿಗೆ ಬುದ್ಧಿಯೇ ಇಲ್ಲವಲ್ಲಾ. (ಜ್ಞಾನೋಕ್ತಿ 17:16)
ಹಣವು ವ್ಯಕ್ತಿಯ ಚಾರಿತ್ರ್ಯವನ್ನು ವರ್ಣಿಸುತ್ತದೆ ಮತ್ತು ಅದು ನೀವು ನಿಜವಾಗಿಯೂ ಬದ್ಧತೆ ಯುಳ್ಳ ವ್ಯಕ್ತಿಗಳೇ ಎಂಬುದನ್ನು ತಿಳಿಸುವ ಅಳತೆಗೋಲಾಗಿದೆ. ಈ ತಿಳುವಳಿಕೆಯೇ ನಿರ್ಣಾಯಕ ಅಂಶವಾಗಿದೆ.
ಉದಾಹರಣೆಗೆ: ನೀವು ಒಂದು ನಿರ್ದಿಷ್ಟ ಕೆಟ್ಟ ಅಭ್ಯಾಸವನ್ನು ಹೊಂದಿದ್ದರೆ ಮತ್ತು ನೀವು ಬಹಳಷ್ಟು ಹಣವನ್ನು ಹೊಂದಿಕೊಂಡಾಗ ಆ ಚಟಗಳನ್ನು ತೀರಿಸಿಕೊಳ್ಳಲು ನೀವು ಆ ಹಣವನ್ನು ಖರ್ಚು ಮಾಡುವ ಸಾಧ್ಯತೆಯಿದೆ. ಹಣವು ಕೆಟ್ಟ ಅಭ್ಯಾಸವನ್ನು ವೃದ್ಧಿಸುವುದಷ್ಟೇ ಅಲ್ಲದೇ ಇದು ವ್ಯಕ್ತಿಯ ಚಾರಿತ್ರ್ಯವನ್ನು ಸಹ ವರ್ಣಿಸುತ್ತದೆ
ಹಾಗಾದರೆ, ಮದರ್ ತೆರೇಸಾ ಬಗ್ಗೆ ಏನು ಹೇಳೋಣ?ಆಕೆಯು ತನ್ನ ಹಣವನ್ನು ಬಡವರು ಮತ್ತು ನಿರ್ಗತಿಕರ ಸೇವೆಗಾಗಿ ಬಳಸಿದರು. ಹಣವು ಚಾರಿತ್ರ್ಯವನ್ನು ವರ್ಣಿಸುವ ಸಕಾರಾತ್ಮಕ ಉದಾಹರಣೆ ಇದಾಗಿದೆ.
ಹಣದಷ್ಟು ಮನುಷ್ಯನ ಹೃದಯ ಅಥವಾ ಚಾರಿತ್ರ್ಯದ ಆಂತರಿಕ ಆಲೋಚನೆಗಳನ್ನು ಬಹಿರಂಗಪಡಿಸುವಂತದ್ದು ಮತ್ತಾವುದಿಲ್ಲ. ಇಂದು ನಿಮ್ಮ ಹಣವನ್ನು ವಿವೇಕಯುತವಾಗಿ ಬಳಸುತ್ತೇವೆ ಎಂಬ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ವಯಸ್ಸಾದ ಪೋಷಕರಿಗೆ ಆಧಾರವಾಗಿರಿ . ನಿಯಮಿತವಾಗಿ ಕೊಡುವ ಮೂಲಕ ದೇವರರಾಜ್ಯದ ಕಾರ್ಯಗಳನ್ನು ಬೆಂಬಲಿಸಿ. ವಿಧವೆ ಮತ್ತು ಅನಾಥರಿಗೆ ಆಶೀರ್ವದಕರವಾಗಿರಲು ನಿಮ್ಮ ಹಣವನ್ನು ಬಳಸಿ. ಈ ರೀತಿಯಾಗಿ, ನಿಮ್ಮ ಹಣವನ್ನು ವೆಚ್ಚ ಮಾಡುವುದು ನಿಜವಾಗಿಯೂ ದೇವರಿಗೆ ಮಹಿಮೆಯನ್ನು ತರುತ್ತದೆ. (ಜ್ಞಾನೋಕ್ತಿ 3:9)
ಪ್ರಾರ್ಥನೆಗಳು
1. ಪರಲೋಕದ ತಂದೆಯೇ, ನೀವು ನನಗೆ ನೀಡಿದ ಆರ್ಥಿಕ ಆಶೀರ್ವಾದಗಳಿಗಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ನನ್ನ ಹಣಕಾಸನ್ನು ಸರಿಯಾಗಿ ಬಳಸಲು ದಯವಿಟ್ಟು ನನಗೆ ಸಹಾಯ ಮಾಡಿ.
2. ತಂದೆಯೇ, ನಾನು ನಿಮ್ಮ ಕೆಲಸಕ್ಕೆ ನನ್ನ ಆರ್ಥಿಕ ಕೊಡುಗೆಯನ್ನು ನೀಡುತ್ತಿರುವಾಗ, ನಿಮ್ಮ ಆಶೀರ್ವಾದವನ್ನು ನನ್ನ ಮೇಲೆ ಸುರಿಸಿ ಮತ್ತು ನಾನು ಬಿತ್ತುವ ಬೀಜವನ್ನು ಯೇಸುವಿನ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿ . ಆಮೆನ್.
2. ತಂದೆಯೇ, ನಾನು ನಿಮ್ಮ ಕೆಲಸಕ್ಕೆ ನನ್ನ ಆರ್ಥಿಕ ಕೊಡುಗೆಯನ್ನು ನೀಡುತ್ತಿರುವಾಗ, ನಿಮ್ಮ ಆಶೀರ್ವಾದವನ್ನು ನನ್ನ ಮೇಲೆ ಸುರಿಸಿ ಮತ್ತು ನಾನು ಬಿತ್ತುವ ಬೀಜವನ್ನು ಯೇಸುವಿನ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿ . ಆಮೆನ್.
Join our WhatsApp Channel
Most Read
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ದೇವರು ನನಗಿಂದು ಒದಗಿಸುತ್ತಾನೋ?
● ಬೀಜದಲ್ಲಿರುವ ಶಕ್ತಿ -3
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
ಅನಿಸಿಕೆಗಳು