ಅನುದಿನದ ಮನ್ನಾ
1
0
64
ನಿಮ್ಮ ವಿಮೋಚನೆ ಮತ್ತು ಗುಣಪಡಿಸುವಿಕೆಯ ಉದ್ದೇಶ
Sunday, 3rd of August 2025
Categories :
ಬಿಡುಗಡೆ (Deliverance)
" ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ - ನಾನೇ ಯೆಹೋವನು, ಇನ್ನು ಯಾವನೂ ಅಲ್ಲ."(ಯೆಶಾಯ 45:18)
ದೇವರು ಭೂಮಿಯನ್ನು ವ್ಯರ್ಥವಾಗಿ ಸೃಷ್ಟಿಸಲಿಲ್ಲ. ನಮ್ಮ ದೇವರು ಉದ್ದೇಶಗಳ ದೇವರು. ಆತನು ಏನೇ ಮಾಡಿದರೂ, ಆತನು ಅದನ್ನು ಒಂದು ಉದ್ದೇಶಕ್ಕಾಗಿ ಮಾಡುತ್ತಾನೆ. ಆತನು ಉದ್ದೇಶವಿಲ್ಲದೆ ಏನನ್ನೂ ಮಾಡುವುದಿಲ್ಲ. ನೀವು ಇದನ್ನು ಓದುತ್ತಿರುವುದು ನೀವು ನಿಮಗಾಗಿ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ವಿಮೋಚನೆಯನ್ನು ಬಯಸುತ್ತಿರುವುದರಿಂದಾಗಿರಬಹುದು.
ಬಹುಶಃ ನಿಮ್ಮಲ್ಲಿ ಕೆಲವರು ದೈಹಿಕ ಅಥವಾ ಭಾವನಾತ್ಮಕವಾದ ಸ್ವಸ್ಥತೆಯನ್ನು ಬಯಸುತ್ತಿರಬಹುದು. ಆದರೆ, ನಾನು ನಿಮಗೆ ಹೇಳುತ್ತೇನೆ, ಸ್ವಸ್ಥತೆ ಮತ್ತು ವಿಮೋಚನೆಗೂ ಸಹ ಒಂದು ಉದ್ದೇಶವಿದೆ. ದೈವಿಕ ಸ್ವಸ್ಥತೆ ಮತ್ತು ವಿಮೋಚನೆಯ ಉದ್ದೇಶವನ್ನು ನೀವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ದೇವರು ಏಕೆ ಗುಣಪಡಿಸುತ್ತಾನೆ ಮತ್ತು ಏಕೆ ಬಿಡುಗಡೆ ಮಾಡುತ್ತಾನೆ ಎಂಬ ಉದ್ದೇಶವನ್ನು ನೀವು ಅರ್ಥಮಾಡಿಕೊಂಡಾಗ, ನೀವು ಅದನ್ನು ಮೌಲ್ಯೀಕರಿಸುವುದನ್ನು ಕಲಿಯುವಿರಿ ಮತ್ತು ಅದನ್ನು ನಿರ್ವಹಿಸಲು ಕಲಿಯುವಿರಿ. ದೇವರು ನಮ್ಮನ್ನು ಯಾವುದನ್ನಾದರೂ ಬಿಡುಗಡೆ ಮಾಡುವ ಉದ್ದೇಶವೆಂದರೆ ಆದರಿಂದ ನಾವು ಯಾವುದನ್ನಾದರೂ ಪ್ರವೇಶಿಸಲು ಸಾಧ್ಯವಾಗಬೇಕು.
ದೈವಿಕ ವಿಮೋಚನೆ ಎಂದರೆ ನೀವು ಈಗ ಇರುವ ಸ್ಥಳದಿಂದ ಹೊರಗೆ ಬರಮಾಡುವುದು ಅಷ್ಟೇ ಅಲ್ಲ, ಬದಲಾಗಿ ಯಾವುದಕ್ಕೋ ನಿಮ್ಮನ್ನು ಪ್ರವೇಶಿಸುವಂತೆ ಮಾಡುವುದೂ ಆಗಿರುತ್ತದೆ. ದುರದೃಷ್ಟವಶಾತ್, ಅನೇಕ ಜನರು ಯಾವುದರಿಂದಲೋ ಹೊರಬರುತ್ತಾರೆ,ಅವರು ಇರುವ ಸ್ಥಳದಲ್ಲಿಯೇ ಇದ್ದು ಬಿಡುತ್ತಾರೆಯೇ; ಹೊರತು ಅವರು ಯಾವುದಕ್ಕೂ ಪ್ರವೇಶಿಸದೇ ತಮ್ಮ ವಿಮೋಚನೆಯನ್ನು ಕಳೆದುಕೊಳ್ಳುತ್ತಾರೆ.
ಇಸ್ರೇಲ್ 430 ವರ್ಷಗಳ ಕಾಲ ಈಜಿಪ್ಟಿನ ಗುಲಾಮಗಿರಿಯಲ್ಲಿತ್ತು. (ವಿಮೋಚನಕಾಂಡ 12:40, ಗಲಾತ್ಯ 3:15) ದೇವರು ಅವರನ್ನು ಒಂದೇ ರಾತ್ರಿಯಲ್ಲಿ ಹೊರಗೆ ತಂದನು. ಆತನು ಅವರನ್ನು ಹೊರಗೆ ತಂದಿದ್ದಲ್ಲದೆ, ವಾಗ್ದತ್ತ ದೇಶಕ್ಕೂ ಕರೆತಂದನು. ಅವರು ಮತ್ತೊಂದರ ಒಳಗೆ ಹೋಗಲು ಸಾಧ್ಯವಾಗುವಂತೆ ಒಂದರಿಂದ ಹೊರಗೆ ಬಂದರು.
ಒಬ್ಬ ವ್ಯಕ್ತಿ ಒಂದು ದಿನ ನನ್ನ ಬಳಿಗೆ ಬಂದು, “ಪಾಸ್ಟರ್, “ನನಗೆ ಮದ್ಯಪಾನದಿಂದ ಬಿಡುಗಡೆಯಾಗಿದೆ” ಎಂದು ಹೇಳಿದನು. “ಅದು ತುಂಬಾ ಒಳ್ಳೆಯದು” ನಾನು ಉತ್ತರಿಸಿದೆ. ಅವನು ಮುಂದುವರಿಸಿ, “ಈಗ ನಾನು ಆಮದು ಮಾಡಿದ ಸುವಾಸನೆಯ ತಂಬಾಕನ್ನು ಮಾತ್ರ ಜಗಿಯುತ್ತೇನೆ” ಎಂದನು.
ಕೆಲವು ಜನರು ಒಂದು ಚಟದಿಂದ ಹೊರಬಂದು ಇನ್ನೊಂದು ಚಟಕ್ಕೆ ಸಿಲುಕುತ್ತಾರೆ. ನಾನು ಇಲ್ಲಿ ಮಾತನಾಡುತ್ತಿರುವುದು ಅದನ್ನಲ್ಲ.
[ತಂದೆ] ನಮ್ಮನ್ನು ಅಂಧಕಾರದ ಅಧಿಕಾರದಿಂದ ಮತ್ತು ಪ್ರಭುತ್ವದಿಂದ ಬಿಡುಗಡೆ ಮಾಡಿ ತನ್ನ ಬಳಿಗೆ ಸೆಳೆದುಕೊಂಡು ತನ್ನ ಪ್ರೀತಿಯ ಮಗನ ರಾಜ್ಯಕ್ಕೆ ನಮ್ಮನ್ನು ಸೇರಿಸಿದ್ದಾನೆ.. (ಕೊಲೊಸ್ಸಿಯನ್ಸ್ 1:13 ವರ್ಧಿತ)
ದೇವರು ನಮ್ಮನ್ನು ಅಂಧಕಾರದ ರಾಜ್ಯದಿಂದ ಬಿಡುಗಡೆ ಮಾಡಿ ತನ್ನ ಮಗನಾದ ಕರ್ತನಾದ ಯೇಸು ಕ್ರಿಸ್ತನ ರಾಜ್ಯಕ್ಕೆ ನಮ್ಮನ್ನು ಕರೆತಂದಿದ್ದಾನೆ ಎಂದು ದೇವರವಾಕ್ಯವು ಸ್ಪಷ್ಟವಾಗಿ ಹೇಳುತ್ತದೆ.
ನಿಮ್ಮ ವಿಮೋಚನೆ ಮತ್ತು ಸ್ವಸ್ಥತೆಯ ಪ್ರಾಥಮಿಕ ಉದ್ದೇಶವೆಂದರೆ ನೀವು ನಿಮ್ಮ ದೇವರು ಕೊಟ್ಟ ನಿಯೋಜನೆಗೆ ಪ್ರವೇಶಿಸುವುದಾಗಿದೆ.
Bible Reading: Isaiah 38-41
ಅರಿಕೆಗಳು
1. ನಾನು ಕ್ರಿಸ್ತ ಯೇಸುವಿನಲ್ಲಿ ನೂತನ ಸೃಷ್ಟಿಯಾಗಿದ್ದೇನೆ. (2 ಕೊರಿಂಥ 5:17).
2. ಯೇಸುನಾಮದಲ್ಲಿ ನಾನು ಅಂಧಕಾರದ ದೊರೆತನದಿಂದ ಬಿಡುಗಡೆ ಹೊಂದಿ ನಾನು ಆತನ ದೈವಿಕ ಸ್ವಭಾವದ ಪಾಲುದಾರನು/ಳು ಆಗಿದ್ದೇನೆ. (2 ಪೇತ್ರ 1:4)(ಕೊಲೊಸ್ಸೆ 1:13)
(ದಿನವಿಡೀ ಮೇಲಿನ ಅರಿಕೆಗಳನ್ನು ಹೇಳುತ್ತಲೇ ಇರಿ)
Join our WhatsApp Channel

Most Read
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.● ನಿಮ್ಮ ಭೂಮಿಯನ್ನು ಉತ್ತು ಹದಮಾಡಿರಿ
● ನಿಮ್ಮ ಗತಿಯನ್ನು ಬದಲಾಯಿಸಿ
● ದುಷ್ಟ ಮಾದರಿಗಳಿಂದ ಹೊರಬರುವುದು.
● ದೇವರು ಹೇಗೆ ಒದಗಿಸುತ್ತಾನೆ #2
● ಹೊಟ್ಟೆಕಿಚ್ಚು ಎಂಬ ಪೀಡೆ.
● ದೇವರು ಹೇಗೆ ಒದಗಿಸುತ್ತಾನೆ #1
ಅನಿಸಿಕೆಗಳು