ಸಹೋದರರೇ, ಆತ್ಮಿಕ ವರಗಳ ವಿಷಯದಲ್ಲಿ ನೀವು ಅಜ್ಞಾನಿಗಳಾಗಬೇಕೆಂದು ನಾನು ಬಯಸುವುದಿಲ್ಲ (1 ಕೊರಿಂಥ 12:1).
ನೆನಪಿಡಿ, ಸೈತಾನನ ಯಶಸ್ಸು ನಮ್ಮ ಅಜ್ಞಾನದ ಮೇಲೆ ಅವಲಂಬಿತವಾಗಿದೆ. ನಿಮ್ಮ ಜೀವನದಲ್ಲಿ ಈ ಆತ್ಮೀಕ ವರಗಳನ್ನು ಹೇಗೆ ಸ್ವೀಕರಿಸಬೇಕು ಮತ್ತು ಬಳಸಬೇಕು ಎಂಬುದನ್ನು ನೀವು ಅರ್ಥಮಾಡಿಕೊಂಡಾಗ, ನಿಮಗೆ ಶತ್ರುವಿನ ಮೇಲೆ ಬಲ ಮತ್ತು ಅಧಿಕಾರವಿರುತ್ತದೆ.
ಇತ್ತೀಚೆಗೆ, ಒಬ್ಬರು ಹೇಳುವುದನ್ನು ನಾನು ಕೇಳಿದ್ದೇನೆಂದರೆ, ನೀವು ಪವಿತ್ರಾತ್ಮನ ಒಂದು ಅಥವಾ ಎರಡು ವರಗಳನ್ನು ಬಯಸಬಹುದು ಆದರೆ ಪವಿತ್ರಾತ್ಮನ ಎಲ್ಲಾ ವರಗಳನ್ನು ಬಯಸುವುದು ಆತ್ಮೀಕವಾಗಿ ಸ್ವಾರ್ಥತೆಯಾಗಿದೆ.
ಬಯಲಾಗದ ಸತ್ಯವು ಒಂದೂ ಇಲ್ಲ ಕುತೂಹಲಕಾರಿಯಾಗಿ, ಅಪೊಸ್ತಲ ಪೌಲನು ಪ್ರೀತಿಯ (1 ಕೊರಿಂಥ 13) ಕುರಿತಾದ ಪ್ರಸಿದ್ಧ ಅಧ್ಯಾಯವನ್ನು ಕೊನೆಗೊಳಿಸುತ್ತಾ 1 ಕೊರಿಂಥ 14:1 ಅನ್ನು ಹೀಗೆ ಪ್ರಾರಂಭಿಸುತ್ತಾನೆ,
“ಪ್ರೀತಿಯನ್ನು, ಬಿಡದೇ ಅಭ್ಯಾಸಿಸಿರಿ ಆದರೆ ಆತ್ಮೀಕ ವರಗಳನ್ನೂ ಬಯಸಿ, ಅದರಲ್ಲೂ ವಿಶೇಷವಾಗಿ ನೀವು ಪ್ರವಾದಿಸುವುದನ್ನೇ ಆಸಕ್ತಿಯಿಂದ ಬಯಸಿರಿ. ಇದರ ಸ್ಪಷ್ಟ ಅರ್ಥವೆಂದರೆ, ನಾವು ಆತನ ಎಲ್ಲಾ ವರಗಳನ್ನು ಬಯಸಬೇಕೆಂದು ಕರ್ತನು ಬಯಸುತ್ತಾನೆ, ಸ್ವಾರ್ಥ ಕಾರಣಗಳಿಗಾಗಿ ಅಲ್ಲ, ಆದರೆ “ಸಭೆಯು ಅಭಿವೃದ್ಧಿಗಾಗಿ ಮತ್ತು ಅದರಿಂದ ಒಳ್ಳೆಯದನ್ನು ಪಡೆಯಲು. (1 ಕೊರಿಂಥ 14:5 ವರ್ಧಿತ)
ಆದ್ದರಿಂದ, ನಾವು ಆತ್ಮದ ಎಲ್ಲಾ ವರಗಳನ್ನು ಹೊಂದಿಕೊಳ್ಳಲು ಬಯಸಬೇಕು ಏಕೆಂದರೆ ಅದು ದೇವರ ಆಜ್ಞೆಯಾಗಿದೆ. “ಆದರೆ ಅತ್ಯುತ್ತಮ ವರಗಳನ್ನು ಶ್ರದ್ಧೆಯಿಂದ ಅಪೇಕ್ಷಿಸಿ. (1 ಕೊರಿಂಥ 12:31)
ಎಲ್ಲಾ ಒಳ್ಳೆಯ ವಿಷಯಗಳಂತೆ, ವರಗಳನ್ನು ಸಹ ದುರುಪಯೋಗಪಡಿಸಿಕೊಳ್ಳಬಹುದು ಮತ್ತು ದುರ್ವಿನಿಯೋಗ ಮಾಡಬಹುದು ಎಂಬುದನ್ನು ನೆನಪಿನಲ್ಲಿಡಬೇಕು, ಆದರೆ ನಂತರ ಒಬ್ಬರು ಹೀಗೆ ಹೇಳಿದ್ದಾರೆ: “ದುರುಪಯೋಗವಾಗುವುದು ಖಂಡಿತವಾಗಿಯೂ ನಿಜವೇ ಆದರೆ ಅದಕ್ಕೆ ಕ್ಷಮೆ ಇಲ್ಲ.” ಕೊರಿಂಥದ ಸಭೆಯ ಜನರು ಈ ರಹಸ್ಯವನ್ನು ತಿಳಿದಿದ್ದು ಪವಿತ್ರಾತ್ಮನ ಎಲ್ಲಾ ವರಗಳು ತಮ್ಮ ಸೇವೆ ಮತ್ತು ಸೇವಾಕಾರ್ಯದಲ್ಲಿ ಪ್ರಕಟವಾಗುವುದರಿಂದ ಅವರು ತಾವು ವಾಸಿಸುತ್ತಿದ್ದ ಸಮಾಜದಲ್ಲಿ ಹೆಚ್ಚಿನ ಪ್ರಭಾವ ಬೀರಬಹುದು ಎಂಬುದನ್ನು ನೋಡಲು ಉತ್ಸುಕರಾಗಿದ್ದರು.
ಇದನ್ನು ತಿಳಿದ ಅಪೊಸ್ತಲ ಪೌಲನು ಇದಕ್ಕಾಗಿ ಅವರನ್ನು ಶ್ಲಾಘಿಸಿದನು. ಅವರು ಅವರನ್ನು ಮತ್ತಷ್ಟು ಪ್ರೋತ್ಸಾಹಿಸುತ್ತಾ ಹೀಗೆ ಹೇಳಿದರು: "ಈಗ ಇಡೀ ಸಭೆಯನ್ನು ಬಲಪಡಿಸುವ ವಿಷಯಗಳ ಕುರಿತು ಇನ್ನಷ್ಟು ಉತ್ಸುಕರಾಗಿರಿ." (1 ಕೊರಿಂಥ 14:12 ಓದಿ ವರ್ಧಿತ)
ಅರಿಕೆಗಳು
ತಂದೆಯೇ, ನನ್ನ ಜೀವನದಲ್ಲಿ ನಿಮ್ಮ ಮಹಿಮೆ ಮತ್ತು ಗೌರವಕಕ್ಕೋಸ್ಕರ ಪವಿತ್ರಾತ್ಮನ ಎಲ್ಲಾ ವರಗಳು ಯೇಸುನಾಮದಲ್ಲಿ ಪ್ರಕಟಗೊಳ್ಳಲು ಆರಂಭವಾಗಲಿ.
Join our WhatsApp Channel

Most Read
● ಭೂಮಿಗೆ ಉಪ್ಪಾಗಿದ್ದೀರಿ● ಉತ್ತಮ ಹಣ ನಿರ್ವಹಣೆ
● ಪ್ರವಾದನಾ ವಾಕ್ಯವನ್ನು ಸ್ವೀಕರಿಸಿದ ನಂತರ ಏನು ಮಾಡಬೇಕು?
● ನಡೆಯುವುದನ್ನು ಕಲಿಯುವುದು
● ಭಕ್ತಿವೃದ್ಧಿಮಾಡುವ ಅಭ್ಯಾಸಗಳು.
● ಆತ್ಮೀಕ ನಿಯಮ : ಸಹವಾಸ ನಿಯಮ
● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು