ಯಾವಾಗಲೂ , ನಮ್ಮ ಪ್ರಾರ್ಥನೆಗಳು ಬೇಡಿಕೆಗಳ ಪಟ್ಟಿಯಂತೆ ಪ್ರತಿಧ್ವನಿಸುತ್ತಿರುತ್ತದೆ. "ಕರ್ತನೇ, ಇದನ್ನು ಸರಿಪಡಿಸಿ," "ಕರ್ತನೇ, ನನ್ನನ್ನು ಆಶೀರ್ವದಿಸಿ," "ಕರ್ತನೇ, ಆ ಸಮಸ್ಯೆಯನ್ನು ತೆಗೆದುಹಾಕು." ನಾವು ನಮ್ಮ ಅಗತ್ಯಗಳನ್ನು ಆತನ ಬಳಿಗೆ ತರಬೇಕೆಂದು ದೇವರು ಖಂಡಿತವಾಗಿಯೂ ಬಯಸುತ್ತಿರುವಾಗಲೂ (ಫಿಲಿಪ್ಪಿ 4:6), ಅದಕ್ಕೂ ಮೀರಿದ ಆಳವಾದ, ಹೆಚ್ಚು ಪ್ರಬುದ್ಧವಾದ "ಕರ್ತನೇ, ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ?" ಎನ್ನುವಂತ ಒಂದು ಪ್ರಾರ್ಥನಾ ವಿಧಾನವಿದೆ: ಈ ಪ್ರಶ್ನೆಯು ನಮ್ಮ ಗಮನವನ್ನು ನಮ್ಮ ಸ್ವಂತಿಕೆಯಿಂದ ಆತನ ಕಡೆಗೆ ವರ್ಗಾಯಿಸುತ್ತದೆ. ಈ ವಿಚಾರವು ನಮ್ಮ ಪ್ರಾರ್ಥನೆಯ ಕೇಂದ್ರವಾಗಿರುವುದರಿಂದ ದೇವರ ಚಿತ್ತದ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.
ಈ ಸಂಗತಿಯನ್ನು ಗಮನಿಸಿ : ಸೌಲನು ದಮಾಸ್ಕಕ್ಕೆ ಹೋಗುವ ದಾರಿಯಲ್ಲಿ ಯೇಸುವನ್ನು ಸಂಧಿಸಿದಾಗ , ಅವನ ಮೊದಲ ಪ್ರತಿಕ್ರಿಯೆಯು, "ಕರ್ತನೇ, ಈ ಕುರುಡುತನದಿಂದ ನನ್ನನ್ನು ಬಿಡಿಸು" ಅಥವಾ "ಕರ್ತನೇ, ನೀನು ಯಾರೆಂದು ವಿವರಿಸು." ಎಂಬುದಾಗಿ ಇರಲಿಲ್ಲ ಬದಲಾಗಿ, ಅಪೊಸ್ತಲ ಪೌಲನಾಗಲಿರುವ ಸೌಲನು, "ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀಯಾ?" (ಅ. ಕೃ 9:6, )ಎಂಬುದಾಗಿತ್ತು.
ಆ ಪ್ರಶ್ನೆಯು ಅವನ ಜೀವನದಲ್ಲಿ ಆಮೂಲಾಗ್ರ ಪರಿವರ್ತನೆಯ ಆರಂಭ ಬಿಂದುವಾಗಿ ಗುರುತಿಸಲ್ಪಟ್ಟಿತು. ದೇವರ ಧ್ವನಿಯನ್ನು ಆಲಿಸುವುದು ನಾವು ಏನು ಮಾಡಬೇಕೆಂದು ದೇವರನ್ನು ಕೇಳುವುದು ನಾವು ಅಗತ್ಯವಾಗಿ ಕೇಳಬೇಕಾದ ಪ್ರಶ್ನೆ ಯಾಗಿರುತ್ತದೆ, ನಮ್ಮಲ್ಲಿ ಅನೇಕರು ಗೊಂದಲದಿಂದ ತುಂಬಿರುವ ಈ ಜಗತ್ತಿನಲ್ಲಿ ಹೋರಾಡುತ್ತಿದ್ದಾರೆ. ಅದಕ್ಕಾಗಿ ಯೆಶಾಯ 30:21 ರಲ್ಲಿ ದೇವರು ನಮಗೊಂದು ಭರವಸೆ ನೀಡುತ್ತಾನೆ ಅದೇನೆಂದರೆ " ನೀವು ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಿಕೊಳ್ಳುವಾಗ, “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು."
ಆದರೆ ಆ ಧ್ವನಿಯನ್ನು ಕೇಳಲು, ನಾವು ನಮ್ಮ ಹೃದಯವನ್ನು ನಾವು ಮೊದಲು ಶಾಂತಗೊಳಿಸಿಕೊಳ್ಳಬೇಕು ಮತ್ತು ದೇವರು ಮಾತನಾಡಲು ಅವಕಾಶ ನೀಡಬೇಕು. ಸಭಾಸೇವೆಯ ಜವಾಬ್ದಾರಿಗಳು ಮತ್ತು ವೈಯಕ್ತಿಕ ಸವಾಲುಗಳನ್ನು ಕಣ್ತುಂಬಿಕೊಳ್ಳುತ್ತಾ, ನಾನು ಒಮ್ಮೆ ಮುಳುಗಿಹೋಗಿದ್ದೆ. ಆಗ ನನ್ನ ಪ್ರಾರ್ಥನೆಗಳು “ಕರ್ತನೇ, ಇದನ್ನು ಮಾಡು! ಕರ್ತನೇ, ಈ ಪರಿಸ್ಥಿತಿಯನ್ನು ಬದಲಾಯಿಸು! ” ಎನ್ನುವ ದೇವರಿಗಾಗಿರುವ ಸೂಚನೆಗಳಿಂದ ತುಂಬಿಹೋಗಿದ್ದವು:ಒಂದು ದಿನ, ನಾನು ನಿಂತು "ಕರ್ತನೇ, ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ?"ಎಂದು ಕೇಳುವಾಗ ನನ್ನ ಆತ್ಮದಲ್ಲಿ ಒಂದು ರೀತಿಯ ನೂಕುನುಗ್ಗಲು ಅನುಭವಿಸಿದೆ. ಆಗ “ಇದನ್ನು ನನಗೆ ಒಪ್ಪಿಸು . ನನ್ನ ಸಮಯವನ್ನು ನಂಬು." ಎಂಬ ಒಂದು ಉತ್ತರವು ಮೆಲುವಾಗಿ ಆದರೆ ಶಕ್ತಿಯುತವಾಗಿ ಬಂದಿತು.
ಅದಕ್ಕೆ ವಿಧೇಯವಾದ ಆ ಕ್ಷಣವು ನಾನು ಆ ವಾರಗಳಲ್ಲಿ ಅನುಭವಿಸದಂತಾ ಸ್ಪಷ್ಟತೆಯನ್ನು ಮತ್ತು ಶಾಂತಿಯನ್ನು ನನಗೆ ತಂದು ಕೊಟ್ಟಿತು.
ಸತ್ಯವೇದದಲ್ಲಿರುವ ವಿಧೇಯತೆಯ ಉದಾಹರಣೆಗಳು:
ತಮ್ಮ ಯೋಜನೆಗಳನ್ನು ಆತನಿಗೆ ಹೇಳುವ ಬದಲು ದೇವರ ನಿರ್ದೇಶನವನ್ನು ಕೇಳಿದ ಅಥವಾ ಅದನ್ನು ಅನುಸರಿಸಿದ ಜನರ ಉದಾಹರಣೆಗಳಿಂದ ಸತ್ಯವೇದವು ತುಂಬಿದೆ. ಯೇಸುವಿನ ತಾಯಿಯಾದ ಮರಿಯಳನ್ನು ತೆಗೆದುಕೊಳ್ಳಿ. ದೇವದೂತನು ಆಕೆಗೆ ದೇವರ ಮಗನನ್ನು ನೀನು ಹಡೆಯುವೆ ಎಂದು ಹೇಳಿದಾಗ, ಅವಳ ಪ್ರತಿಕ್ರಿಯೆಯು "ಆದರೆ ನನ್ನ ಯೋಜನೆಗಳ ಬಗ್ಗೆ ಏನು?" ಎಂದು ಹೇಳದೇ , ಅವಳು ನಮ್ರತೆಯಿಂದ "ನಾನು ಕರ್ತನ ಸೇವಕಿ ನಿನ್ನ ಮಾತು ನನ್ನಲ್ಲಿ ನೆರವೇರಲಿ"ಎಂದು ಹೇಳಿದಳು (ಲೂಕ 1:38, ). ತನ್ನ ಜೀವನವನ್ನು ದೇವರ ಚಿತ್ತದೊಂದಿಗೆ ಜೋಡಿಸಲು ಅವಳು ತೋರಿದ ವಿಧೇಯತೆಯು ಇತಿಹಾಸದ ಹಾದಿಯನ್ನೇ ಬದಲಾಯಿಸಿತು.
ಮತ್ತೊಂದೆಡೆ, ಯೋನನು ದೇವರ ಮಾರ್ಗದರ್ಶನವನ್ನು ವಿರೋಧಿಸಿದನು, ಆತನ ಕರೆಯ ವಿರುದ್ಧವಾದ ದಿಕ್ಕಿನಲ್ಲಿ ಓಡಿಹೋಗಲು ಯತ್ನಿಸಿದನು. ಆದರೆ ಯೋನನು ದೇವರಚಿತ್ತಕ್ಕೆ ಶರಣಾಗುವವರೆಗೆ ಮತ್ತು ಅದನ್ನು ಪಾಲಿಸುವವರೆಗೂ ದೇವರ ಯೋಜನೆಯು ಅವನ ಜೀವನದಲ್ಲಿಯೂ ಮತ್ತು ನಿನೆವೆಯವರ ಜೀವನದಲ್ಲಿ ನೆರವೇರದೆ ಹಾಗೆ ಇತ್ತು (ಯೋನ 3: 1-3).
ಶರಣಾಗತಿಯ ಹೃದಯ
“ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀಯಾ?” ಎನ್ನುವ ಪ್ರಶ್ನೆ ಏಕೆ ತುಂಬಾ ಕಷ್ಟಕರವಾಗಿದೆ? ಏಕೆಂದರೆ ಈ ಪ್ರಶ್ನೆ ಕೇಳಲು ನಮ್ಮೊಳಗೆ ನಮ್ರತೆ ಮತ್ತು ಶರಣಾಗತಿಯ ಅಗತ್ಯವಿದೆ. ದೇವರ ಮಾರ್ಗಗಳು ನಮ್ಮ ಮಾರ್ಗಗಳಿಗಿಂತ ಉನ್ನತವಾದದ್ದು ಎಂದು ಅದು ಒಪ್ಪಿಕೊಳ್ಳುತ್ತದೆ (ಯೆಶಾಯ 55: 8-9, ). ಇದು ನಂಬಿಕೆಯ ಕಾರ್ಯವಾಗಿದೆ, ಆತನ ಯೋಜನೆಯು ಉತ್ತಮವಾದುದಷ್ಟೇ ಅಲ್ಲದೆ ನಮ್ಮ ಅಂತಿಮ ಒಳಿತಿಗಾಗಿಯೂ ಇದೆ ಎಂದು ನಂಬುತ್ತದೆ. (ರೋಮನ್ನರು 8:28, ).
ಒಬ್ಬ ಮಹಾನ್ ವ್ಯಕ್ತಿ "ದೇವರ ಬಗ್ಗೆ ಗಮನಾರ್ಹವಾದ ವಿಷಯವೆಂದರೆ ನೀವು ದೇವರಿಗೆ ಭಯಪಡುವಾಗ ನೀವು ಬೇರೆ ಯಾವುದಕ್ಕೂ ಹೆದರುವುದಿಲ್ಲ, ಆದರೆ ನೀವು ದೇವರಿಗೆ ಭಯಪಡದಿದ್ದರೆ, ನೀವು ಎಲ್ಲದಕ್ಕೂ ಭಯಪಡುತ್ತೀರಿ."ಎಂದು ಬರೆದಿದ್ದಾರೆ. ನಾವು ದೇವರ ಚಿತ್ತಕ್ಕೆ ಶರಣಾದಾಗ, ನಾವು ಆತನ ಸಮಾಧಾನದೊಂದಿಗೆ ಹೆಜ್ಜೆ ಹಾಕುವವರಾಗುತ್ತೇವೆ, ಆತನ ಯೋಜನೆಗಳು ನಮಗೆ ಅರ್ಥವಾಗದಿದ್ದರೂ ಸಹ ಅದು ಪರಿಪೂರ್ಣವಾದವೆಂದು ನಂಬುತ್ತೇವೆ.
ದೇವರ ಚಿತ್ತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಇರುವ ಪ್ರಾಯೋಗಿಕ ಕ್ರಮಗಳು
1.ವಿಶ್ರಮಿಸಿ ಮತ್ತು ಪ್ರಾರ್ಥಿಸಿ.
"ಕರ್ತನೇ, ನಾನು ಇಂದು ಏನು ಮಾಡಬೇಕೆಂದು ನೀವು ಬಯಸುತ್ತೀರಿ?" ಎಂದು ಕೇಳುವ ಮೂಲಕ ನಿಮ್ಮ ಪ್ರತಿದಿನವನ್ನು ಪ್ರಾರಂಭಿಸಿ. ಈ ಸರಳ ಪ್ರಾರ್ಥನೆಯು ಆತನ ನಿರ್ದೇಶನಕ್ಕೆ ನಿಮ್ಮ ಹೃದಯವನ್ನು ತೆರೆದು ಕೊಡುತ್ತದೆ. ದೇವರ ವಾಕ್ಯಗಳನ್ನು ಧ್ಯಾನಿಸಿ. ದೇವರು ಆಗಾಗ ತನ್ನ ವಾಕ್ಯದ ಮೂಲಕ ನಿಮ್ಮೊಡನೆ ಮಾತನಾಡುತ್ತಾನೆ. ನೀವು ನಿಮ್ಮ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಮಾರ್ಗದರ್ಶನ ನೀಡುವ ದೇವರ ವಾಕ್ಯಗಳನ್ನು ಓದಲು ಮತ್ತು ಧ್ಯಾನಿಸುವ ಸಲುವಾಗಿ ಕೆಲ ಸಮಯವನ್ನು ಕಳೆಯಿರಿ.
2.ಉದಾಹರಣೆಗೆ
ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು." ಜ್ಞಾನೋಕ್ತಿಗಳು 3: 5-6 ಹೇಳುತ್ತದೆ.
3.ಆಲಿಸುತ್ತಾ ಕಾಯುತ್ತಿರಿ
ಮೌನ ಶಕ್ತಿಶಾಲಿ. ದೇವರ ಮಾರ್ಗದರ್ಶನಕ್ಕಾಗಿ ನೀವು ಆಲಿಸಬಹುದಾದ ನಿಶ್ಚಲತೆಯ ಕ್ಷಣಗಳನ್ನು ಸೃಷ್ಟಿಸಿಕೊಳ್ಳಿ. ಕೀರ್ತನೆ 46:10 “ಶಾಂತವಾಗಿರಿ, ನಾನೇ ದೇವರಾಗಿದ್ದೇನೆಂದು ತಿಳಿದುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ಉನ್ನತನಾಗಿರುವೆನು,” ಎಂದು ಕರ್ತನು ಹೇಳುತ್ತಾನೆ ಎಂಬುದನ್ನು ನಮಗೆ ನೆನಪಿಸುತ್ತದೆ.
ಈ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ:
- ನಾನು ದೇವರನ್ನು ನಾನು ಏನು ಮಾಡಬೇಕೆಂದು ಕೊನೆಯ ಬಾರಿಗೆ ಯಾವಾಗ ಕೇಳಿದೆ?
- ನನ್ನ ಜೀವನದಲ್ಲಿ ದೇವರ ಚಿತ್ತಕ್ಕೆ ಶರಣಾಗುವ ಬದಲು ನಾನೇ ನಿಯಂತ್ರಣ ಸಾಧಿಸುತ್ತಿರುವ ಯಾವುದಾದರೂ ಕ್ಷೇತ್ರಗಳಿವೆಯೇ?
- ದೇವರ ಧ್ವನಿಯನ್ನು ಕೇಳಲು ನನ್ನ ಜೀವನದಲ್ಲಿ ನಾನು ಹೆಚ್ಚು ಅವಕಾಶವನ್ನು ಹೇಗೆ ಸೃಷ್ಟಿಸಿಕೊಳ್ಳಬಹುದು?
Bible Reading : Genesis 16 -18
ಪ್ರಾರ್ಥನೆಗಳು
ತಂದೆಯೇ, ನಾನು ದೀನ ಹೃದಯದಿಂದ ನಿಮ್ಮ ಮುಂದೆ ಬರುತ್ತೇನೆ. ನನ್ನ ಯೋಜನೆಗಳ ಪ್ರಕಾರ ನೀನು ಕಾರ್ಯಮಾಡುವಂತೆ ನಾನು ಯಾವಾಗಲೂ ಪ್ರಾರ್ಥಿಸುತ್ತಿದ್ದೆ. ಆದರೆ ಇಂದು "ಕರ್ತನೇ, ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ?"ಎಂದು ನಾನು ನಿಮ್ಮನ್ನು ಕೇಳುತ್ತೇನೆ.
ನಿನ್ನ ಮಾರ್ಗಗಳಲ್ಲಿ ನನ್ನನ್ನು ನಡೆಸು, ನಿನ್ನ ಆತ್ಮದಿಂದ ನನಗೆ ಮಾರ್ಗದರ್ಶನ ನೀಡು ಮತ್ತು ವಿಧೇಯನಾಗುವ ಧೈರ್ಯವನ್ನು ನನಗೆ ಅನುಗ್ರಹಿಸು. ನನ್ನ ಯೋಜನೆಗಳು, ನನ್ನ ಭಯಗಳು ಮತ್ತು ನನ್ನ ಆಸೆಗಳನ್ನೆಲ್ಲ ನಾನು ನಿಮಗೆ ಒಪ್ಪಿಸುತ್ತೇನೆ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ನನ್ನ ಜೀವನದಲ್ಲಿಯೂ ಯೇಸುನಾಮದಲ್ಲಿ ನೆರವೇರಲಿ. ಆಮೆನ್.
Join our WhatsApp Channel
Most Read
● ದೈವಿಕ ಅನುಕ್ರಮ - 1● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● ಕೃಪೆಯ ವಾಹಕರಾಗಿ ಮಾರ್ಪಡುವುದು.
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
● ನಂಬಿಕೆಯ ಜೀವಿತ
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
ಅನಿಸಿಕೆಗಳು