ಅನುದಿನದ ಮನ್ನಾ
ದಿನ 03 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Sunday, 24th of November 2024
4
0
119
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನಾನು ಸಾಯುವುದಿಲ್ಲ
"ನಾನು ಸಾಯುವುದಿಲ್ಲ; ಜೀವದಿಂದಿದ್ದು ಯೆಹೋವನ ಕ್ರಿಯೆಗಳನ್ನು ಸಾರುವೆನು". (ಕೀರ್ತನೆಗಳು 118:17)
ನಮ್ಮ ಜೀವಿತದ ಉದ್ದೇಶವನ್ನು ಪೂರೈಸಿ ವೃದ್ಧಾಪ್ಯದಲ್ಲಿ ಸಾಯುವುದು ದೇವರ ಇಚ್ಛೆಯಾಗಿದೆಯೇ ಹೊರತು ನಮ್ಮ ಜೀವನಕ್ಕಾಗಿ ದೇವರ ಚಿತ್ತವು ಅಕಾಲಿಕ ಮರಣ ಅಥವಾ ಅನಾರೋಗ್ಯ, ನೋವು, ದುಷ್ಟತ್ವ ಮತ್ತು ರೋಗದಿಂದ ತುಂಬಿದ ಜೀವನವನ್ನು ಒಳಗೊಂಡಿಲ್ಲ.
ಸಾವು ಎಂದರೆ "ಬೇರ್ಪಡುವಿಕೆ ಅಥವಾ ಮುಕ್ತಾಯ". ಸೈತಾನನು ಯಾವಾಗಲೂ ನಮ್ಮನ್ನು ದೇವರಿಂದ ಬೇರ್ಪಡಿಸಲು ಬಯಸುತ್ತಾನೆ ಮತ್ತು ಭೂಮಿಯ ಮೇಲಿನ ನಮ್ಮ ದೈವಿಕ ಕಾರ್ಯಯೋಜನೆಗಳನ್ನು ಕೊನೆಗೊಳಿಸಲು ಬಯಸುತ್ತಾನೆ; ನಾವು ಇದನ್ನು ಬಲವಾಗಿ ವಿರೋಧಿಸಬೇಕು ಮತ್ತು ಅವನ ಆಯುಧಗಳನ್ನು ನಾಶಪಡಿಸಬೇಕು.
ಪ್ರಮುಖವಾಗಿ ಮೂರು ವಿಧದ ಮರಣಗಳಿವೆ:
1. ಆತ್ಮೀಕ ಮರಣ :
ದೇವರ ಆತ್ಮವು ಮನುಷ್ಯನ ಆತ್ಮದಿಂದ ಬೇರ್ಪಟ್ಟಾಗ ಆತ್ಮೀಕ ಮರಣವಾಗಿದೆ . ಆದಾಮ ಮತ್ತು ಹವ್ವರು ಅನುಭವಿಸಿದ ಮೊದಲ ಸಾವು ಆತ್ಮೀಕವಾದದ್ದು ; ಅವರಿಬ್ಬರೂ ದೇವರ ಆತ್ಮದಿಂದ ಬೇರ್ಪಟ್ಟರು.
"ಆದರೆ ಒಳ್ಳೆಯದು ಮತ್ತು ಕೆಟ್ಟದ್ದರ ಜ್ಞಾನದ ಮರದ ಹಣ್ಣನ್ನು ನೀವು ತಿನ್ನಬಾರದು, ಏಕೆಂದರೆ ನೀವು ಅದನ್ನು ತಿನ್ನುವ ದಿನದಲ್ಲಿ ನೀವು ಖಂಡಿತವಾಗಿಯೂ ಸಾಯುವಿರಿ." (ಆದಿಕಾಂಡ 2:17)
2. ಶಾರೀರಿಕ ಸಾವು:
ಭೌತಿಕ ಮರಣವು ಭೌತಿಕ ದೇಹದಿಂದ ಪ್ರಾಣವನ್ನು ಬೇರ್ಪಡಿಸುವುದಾಗಿದೆ . ಆದಾಮನು ಆತ್ಮೀಕ ಮರಣವನ್ನು ಅನುಭವಿಸಿದ ನಂತರ, ಅವನು ಶಾರೀರಿಕ ಮರಣವನ್ನು ಅನುಭವಿಸಲು 930 ವರ್ಷಗಳನ್ನು ತೆಗೆದುಕೊಂಡನು. ಆದರೆ ದೇವರಿಗೆ ಅವಿಧೇಯರಾದ ನಂತರ ಅವರು ಅನುಭವಿಸಿದ ಆತ್ಮೀಕ ಸಾವಿನ ಫಲಿತಾಂಶ: ಶಾರೀರಿಕ ಮರಣವಾಗಿದೆ.
“ಆದಾಮನು ಬದುಕಿದ ಎಲ್ಲಾ ದಿನಗಳು ಒಂಭೈನೂರ ಮೂವತ್ತು ವರ್ಷಗಳು; ಮತ್ತು ಅವನು ಸತ್ತನು. (ಆದಿಕಾಂಡ 5:5)
3. ನಿತ್ಯ ಮರಣ:
ನಿತ್ಯ ಮರಣವು ಪಾಪ ಪರಿಹಾರವಿಲ್ಲದೆ ಮನುಷ್ಯನ ಆತ್ಮವು ದೇವರ ಆತ್ಮದಿಂದ ಶಾಶ್ವತವಾಗಿ ಬೇರ್ಪಟ್ಟಾಗ ಉಂಟಾಗುವಂತಾದ್ದಾಗಿದೆ.
"ಯಾವಾಗ ಕೊಡುವನಂದರೆ ಯೇಸು ಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು.8ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು. 9ಆ ದಿನದಲ್ಲಿ ಆತನು ತನ್ನ ಪವಿತ್ರರ ಮೂಲಕ ಪ್ರಭಾವ ಹೊಂದುವವನಾಗಿಯೂ ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವವನಾಗಿಯೂ ಬರುವಾಗ ಅಂಥವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು. (2 ಥೆಸಲೊನೀಕ 1:7-9)
ಇಲ್ಲಿ ನಿತ್ಯ ನಾಶನ ಎಂಬ ಪದಗುಚ್ಛದ ಉಲ್ಲೇಖವನ್ನು ಗಮನಿಸಿ,.
"ಆದರೆ ಹೇಡಿಗಳು, ನಂಬಿಕೆಯಿಲ್ಲದವರು, ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳುರಿಯುವ ಕೆರೆಯೇ; ಅದು ಎರಡನೆಯ ಮರಣವು.."(ಪ್ರಕಟನೆ 21:8) ಎರಡನೆಯ ಮರಣವು ಶಾಶ್ವತ ಮರಣವಾಗಿದೆ.
ಅಕಾಲಿಕ ಮರಣಕ್ಕೆ ಕಾರಣಗಳು.
ಅಕಾಲಿಕ ಮರಣ ಎಂಬುದು ಯಾರಾದರೂ ತಮ್ಮ ಸಾಮರ್ಥ್ಯವನ್ನು ಸಾಧಿಸುವ ಮೊದಲೇ ನಿಧನರಾಗುವಂತಾದ್ದಾಗಿದೆ ಕೆಲವರು ತಾವು ದುಡಿದಿದ್ದನ್ನೆಲ್ಲಾ ಅನುಭವಿಸುವ ಹಂತದಲ್ಲಿಯೇ ತೀರಿಹೋಗುತ್ತಾರೆ. ಇವೆಲ್ಲವೂ ಸೈತಾನನ ಕಾರ್ಯಾಚರಣೆಗಳನ್ನು (ಕೊಲ್ಲಲು, ಕದ್ದುಕೊಳ್ಳಲು ಮತ್ತು ನಾಶಮಾಡಲು, ಯೋಹಾನ 10:10 ನೋಡಿ)ಪ್ರಕಟಿಸುವತಾದ್ದಾಗಿದೆ.
ಪಾಪಮಯ ಜೀವಿತ:
"ಆಕಾನನು ಯೆಹೋಶುವನಿಗೆ - ನಾನು ಕೊಳ್ಳೆಯಲ್ಲಿ ಶಿನಾರ್ ದೇಶದ ಒಂದು ಉತ್ತಮವಾದ ನಿಲುವಂಗಿಯನ್ನೂ ಇನ್ನೂರು ರೂಪಾಯಿ ತೂಕದ ಬೆಳ್ಳಿಯನ್ನೂ ಐವತ್ತು ರೂಪಾಯಿ ತೂಕದ ಬಂಗಾರದ ಗಟ್ಟಿಯನ್ನೂ ಕಂಡು ಅದನ್ನು ಆಶೆಯಿಂದ ತೆಗೆದುಕೊಂಡೆನು. ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ಹುಗಿದಿಟ್ಟಿದ್ದೇನೆ; ಬೆಳ್ಳಿಯು ಅಂಗಿಯ ಕೆಳಗಿರುತ್ತದೆ. ನಾನು ನಿಜವಾಗಿ ಇಂಥದನ್ನು ಮಾಡಿ ಇಸ್ರಾಯೇಲ್ ದೇವರಾದ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಎಂದು ಉತ್ತರಕೊಟ್ಟನು.
25ಅಲ್ಲಿ ಯೆಹೋಶುವನು ಅವನಿಗೆ - ನೀನು ನಮ್ಮನ್ನು ಆಪತ್ತಿಗೆ ಗುರಿಮಾಡಿದ್ದೇಕೆ? ಈ ಹೊತ್ತು ಯೆಹೋವನು ನಿನ್ನ ಮೇಲೆ ಆಪತ್ತನ್ನು ಬರಮಾಡುವನು ಎಂದು ಹೇಳಿದ ಕೂಡಲೆ ಇಸ್ರಾಯೇಲ್ಯರೆಲ್ಲರೂ ಅವನನ್ನು ಕಲ್ಲೆಸೆದು ಕೊಂದರು. ಅವನಿಗಿದ್ದದ್ದೆಲ್ಲವನ್ನೂ ಕಲ್ಲೆಸೆದು ಬೆಂಕಿಯಿಂದ ಸುಟ್ಟುಬಿಟ್ಟರು. 26ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಅದು ಇಂದಿನವರೆಗೂ ಅದೆ. ಆಗ ಯೆಹೋವನ ರೋಷಾಗ್ನಿಯು ಅಡಗಿಹೋಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ."(ಯೆಹೋಶುವ 7:20-21, 25-26)
ಆಕಾನನು ತನ್ನ ಗಂಭೀರ ಪಾಪದ ಕಾರಣದಿಂದಾಗಿ ಅಕಾಲಿಕ ಮರಣವನ್ನು ಹೊಂದಿದ್ದನು. ದೇವರ ವಾಕ್ಯಕ್ಕೆ ನಿರಂತರವಾಗಿ ಅವಿಧೇಯತೆ ತೋರುವಂತದ್ದು ಮತ್ತು ಪಾಪಪೂರ್ಣ ಜೀವನಶೈಲಿಯನ್ನು ಜೀವಿಸುವಂತದ್ದು ಅಕಾಲಿಕ ಮರಣವನ್ನು ಆಕರ್ಷಿಸಬಹುದು. ಆ ಮರಣವು ಪ್ರಕಟಗೊಳ್ಳುವ ಮೊದಲು ಸ್ವಲ್ಪ ಸಮಯ ತೆಗೆದುಕೊಂಡರೂ ಅದು ಸಂಭವಿಸೇ ತೀರುತ್ತದೆ.
"ದುಷ್ಟರು ನಾಲಿಗೆಯೆಂಬ ಕತ್ತಿಯನ್ನು ಮಸೆದಿದ್ದಾರೆ; ವಿಷವಚನವೆಂಬ ಬಾಣವನ್ನು ಹೂಡಿ 4 ಗುಪ್ತಸ್ಥಳಗಳಲ್ಲಿದ್ದು ಸಜ್ಜನನಿಗೆ ಗುರಿಯಿಟ್ಟಿದ್ದಾರೆ. ಸ್ವಲ್ಪವೂ ಹೆದರದೆ ಅವನ ಮೇಲೆ ಫಕ್ಕನೆ ಎಸೆಯುತ್ತಾರೆ.(ಕೀರ್ತನೆ 64:3)
"ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನಿಗೆ - ಅಡವಿಗೆ ಹೋಗೋಣ ಬಾ ಎಂದನು. ಅಡವಿಗೆ ಬಂದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು". (ಆದಿಕಾಂಡ 4:8)
ಮನುಷ್ಯನ ಹೃದಯವು ದುಷ್ಟ ಆಲೋಚನೆಗಳು ಮತ್ತು ಸ್ವಾರ್ಥ ಉದ್ದೇಶಗಳಿಂದ ತುಂಬಿದೆ. ಮನುಷ್ಯರ ಹೃದಯದಲ್ಲಿರುವ ದುಷ್ಟತನವು ಅವರು ತಮ್ಮ ಪ್ರೀತಿಪಾತ್ರರನ್ನು ಮತ್ತು ತಮ್ಮ ಸುತ್ತಲಿನ ಜನರನ್ನೇ ಕೊಲ್ಲುವಂತೆ ಮಾಡುತ್ತದೆ.
ಆತ್ಮೀಕ ದಾಳಿಗಳು:
"ಆ ಸ್ತ್ರೀಯು ಗರ್ಭಿಣಿಯಾಗಿ ಎಲೀಷನು ಹೇಳಿದಂತೆ ಮುಂದಿನ ವರುಷ ಅದೇ ಕಾಲದಲ್ಲಿ ಒಬ್ಬ ಮಗನನ್ನು ಹೆತ್ತಳು. ಹುಡುಗನು ದೊಡ್ಡವನಾದ ಮೇಲೆ ಒಂದು ದಿವಸ ಹೊಲದಲ್ಲಿ ಕೊಯ್ಯುವವರ ಸಂಗಡ ಇದ್ದ ತನ್ನ ತಂದೆಯ ಬಳಿಗೆ ಹೋದನು. ಅಲ್ಲಿದ್ದಾಗ ಅವನು ಫಕ್ಕನೆ - ಅಪ್ಪಾ, ನನ್ನ ತಲೆ, ನನ್ನ ತಲೆ ಎಂದು ಕೂಗಲು ತಂದೆಯು ಒಬ್ಬ ಸೇವಕನನ್ನು ಕರೆದು ಅವನಿಗೆ - ಇವನನ್ನು ತಾಯಿಯ ಹತ್ತಿರ ತೆಗೆದುಕೊಂಡು ಹೋಗು ಎಂದು ಆಜ್ಞಾಪಿಸಿದನು. [20] ಸೇವಕನು ಹುಡುಗನನ್ನು ಅವನ ತಾಯಿಗೆ ತಂದೊಪ್ಪಿಸಿದನು. ಹುಡುಗನು ಮಧ್ಯಾಹ್ನದವರೆಗೂ ತಾಯಿಯ ತೊಡೆಯ ಮೇಲೆಯೇ ಇದ್ದುಕೊಂಡು ಅನಂತರ ಸತ್ತನು."(2 ಅರಸುಗಳು 4:17-20 )
ಈ ಹಾದಿಯಲ್ಲಿರುವ ಹುಡುಗ ಯಾವುದೇ ಭೌತಿಕ ಕಾರಣವಿಲ್ಲದೆ ಸಾವನ್ನಪ್ಪಿದ್ದನು ಇದು ಅವನ ತಲೆ ಮತ್ತು ಆರೋಗ್ಯದ ಮೇಲೆ ಆದಂತಹ ಆತ್ಮೀಕ ದಾಳಿಯಾಗಿತ್ತು. ಹಳೆಯ ಒಡಂಬಡಿಕೆಯಲ್ಲಿ, ಸೈತಾನನ ಕಾರ್ಯಾಚರಣೆಗಳು ಕಂಡುಬಂದಿವೆ ಆದರೆ ಅವುಗಳನ್ನು ಅರ್ಥಮಾಡಿಕೊಳ್ಳಲಾಗಿಲ್ಲ. ಹೊಸ ಒಡಂಬಡಿಕೆಯಲ್ಲಿ, ಕ್ರಿಸ್ತನು ಅಂಧಕಾರದ ಗುಪ್ತಕಾರ್ಯಗಳನ್ನೆಲ್ಲಾ ಬಯಲಿಗೆಳೆದು ಅವುಗಳ ಮೇಲೆ ನಮಗೆ ಅಧಿಕಾರಕೊಟ್ಟನು (ಲೂಕ 10:19).
ಆತ್ಮೀಕ ಬಾಣಗಳು ಪ್ರತಿದಿನ ಹಾರಿ ಬರುತ್ತಲೇ ಇರುತ್ತವೆ ಇದರಿಂದಾಗಿ ದೇವರ ಸಹಾಯವಿಲ್ಲದ ಜನರು ಯಾವಾಗ ಬೇಕಾದರೂ ಇವುಗಳಿಗೆ ಬಲಿಯಾಗಬಹುದು. ಆದರೆ
"ನೀವು ರಾತ್ರಿಯ ಭಯಕ್ಕೆ ಅಥವಾ ಹಗಲಿನಲ್ಲಿ ಹಾರುವ ಬಾಣಕ್ಕೆ ಹೆದರಬಾರದು." (ಕೀರ್ತನೆ 91:5)
ಆತ್ಮೀಕ ಸಂಗತಿಗಳು ಭೌತಿಕ ಸಂಗತಿಯನ್ನು ನಿಯಂತ್ರಿಸುತ್ತವೆ. ಮತ್ತು ಭೌತಿಕ ಕ್ಷೇತ್ರದಲ್ಲಿ ಏನಾದರೂ ಸಂಭವಿಸುವ ಮೊದಲು, ಅದನ್ನು ಆತ್ಮೀಕ ಕ್ಷೇತ್ರದಲ್ಲಿ ತೀರ್ಮಾನ ಮಾಡಿ ಅದನ್ನು ಕಾರ್ಯಗತಗೊಳಿಸಬೇಕು. ಆಗ ಸಾವಿನ ದಾಳಿಯಿಂದ ಬದುಕುಳಿಯಲು ಇದು ಬಲವನ್ನು ಹೊಂದಿಕೊಳ್ಳುತ್ತದೆ.
ದಾವೀದನು ಅರಸನಾದ ಸೌಲನು ಒಡ್ಡಿದ ಅನೇಕ ಸಾವಿನ ಬಲೆಗಳಿಂದ ತಪ್ಪಿಸಿಕೊಂಡನು, ಆದರೆ ಹೆಬೇಲನು ಮುಗ್ಧನಾಗಿದ್ದನು ಹಾಗಾಗಿ ಕಾಯಿನನಿಂದ ಕೊಲ್ಲಲ್ಪಟ್ಟನು. (1 ಸಮುವೇಲ 18:11-12; ಆದಿಕಾಂಡಾ 4:8).
ಅಮಾಯಕರು ಶಕ್ತಿಹೀನರಾದಾಗ ಮತ್ತು ಅಜ್ಞಾನಿಗಳಾದಾಗ ಮರಣ ಹೊಂದಬಹುದು. ಇಂದು, ನಮ್ಮನ್ನು ಕೊಲ್ಲಲು ವಿನ್ಯಾಸಗೊಳಿಸಲಾದ ಪ್ರತಿಯೊಂದು ದುಷ್ಟನ ಯೋಜನೆಗಳು ನಿಷ್ಪಲವಾಗಬೇಕೆಂದು ನಾವು ಪ್ರಾರ್ಥಿಸುತ್ತೇವೆ ಮತ್ತು ಅವುಗಳನ್ನು ನಾಶಪಡಿಸಲಿದ್ದೇವೆ. ನೀವು ಸಾಯುವುದಿಲ್ಲ: ಬದಲಾಗಿ ದೇವರು ನಿಮಗಾಗಿ ಇಟ್ಟಿರುವ ಯೋಜನೆಗಳನ್ನು ಪೂರೈಸುತ್ತೇರಿ ಎಂದು ನಾನು ನಿಮ್ಮ ಜೀವನದ ಬಗ್ಗೆ ಯೇಸುನಾಮದಲ್ಲಿ ಪ್ರವಾದನೆ ನುಡಿಯುತ್ತೇನೆ . ಯೇಸು ನಾಮದಲ್ಲಿ ನಿಮ್ಮ ಜೀವನದಲ್ಲಿ ಯಾವುದೂ ಸಹ ಸಾಯುವುದಿಲ್ಲ.
Bible Reading Plan : Matthew 13 -18
ಪ್ರಾರ್ಥನೆಗಳು
1. ನನ್ನ ತಂದೆಯೇ, ನನ್ನ ಸೃಷ್ಟಿಕರ್ತನೇ, ನೀನು ನನಗೆ ನೀಡಿದ ಈ ಜೀವನಕ್ಕಾಗಿ ನಾನು ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಸ್ತುತಿಸುತ್ತೇನೆ, ಕರ್ತನೇ ನಿನ್ನನ್ನು ಆರಾಧಿಸುತ್ತೇನೆ. (ಕೀರ್ತನೆ 103:1-5, 1 ಥೆಸಲೊನೀಕ 5:18)
2. ತಂದೆಯೇ, ನಿನ್ನ ಮಾರ್ಗಗಳಲ್ಲಿ ನಡೆಯಲು ಮತ್ತು ನಿನ್ನ ನಿಯಮಗಳನ್ನು ಕೈಕೊಳ್ಳಲು ನನ್ನ ಕುಟುಂಬ ಸದಸ್ಯರಿಗೆ ಮತ್ತು ನನಗೆ ಅನುಗ್ರಹವನ್ನು ಕೊಡು. ವಾಸಿಸುವ ಈ ದೇಶದಲ್ಲಿ ದಯವಿಟ್ಟು ಯೇಸು ನಾಮದಲ್ಲಿ ನಮ್ಮ ದಿನಗಳನ್ನು ವಿಸ್ತರಿಸು. (ಧರ್ಮೋಪದೇಶಕಾಂಡ 5:33, ಕೀರ್ತನೆ 91:16)
3. ಯೆಹೋವ ಎಬಿನೇಜರೆ , ನನ್ನ ಕುಟುಂಬದ ಸದಸ್ಯರಿಗೆ ಮತ್ತು ನನಗೂ ನನ್ನ ಜೀವನದ ಎಲ್ಲಾ ದಿನಗಳಲ್ಲಿ ನಿನಗೆ ಭಯಪಟ್ಟು ನಡೆದುಕೊಳ್ಳುವ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು . (ಜ್ಞಾನೋಕ್ತಿ 9:10, ಕೀರ್ತನೆ 128:1)
4. ನನ್ನ ಕುಟುಂಬ ಸದಸ್ಯರನ್ನು ಮತ್ತು ನನ್ನನ್ನು ಕೊಲ್ಲಲು ಯೋಜಿಸಿರುವ ಪ್ರತಿಯೊಂದು ಕಾಯಿಲೆ ಮತ್ತು ರೋಗಗಳು ಯೇಸುನಾಮದಲ್ಲಿ ನಾಶವಾಗಲಿ . (ಯೆಶಾಯ 54:17, ವಿಮೋಚನಾ ಕಾಂಡ 15:26)
5. ಅಕಾಲಿಕವಾಗಿ ನನ್ನನ್ನು ಕೊಲ್ಲಲು ವಿನ್ಯಾಸಗೊಳಿಸಲಾದ ನನ್ನ ದೇಹದಲ್ಲಿ ನೆಡಲಾದ ಯಾವುದೇ ದುಷ್ಟತನವುದುರಾತ್ಮನ ಸಂಗತಿಗಳು ಪವಿತ್ರಾತ್ಮದ ಬೆಂಕಿಯಿಂದ ನಾಶವಾಗಲಿ . (ಮತ್ತಾಯ 15:13, ಯೆಶಾಯ 10:27)
6. ನನ್ನ ಜೀವನವನ್ನು ಮತ್ತು ನನ್ನ ಕುಟುಂಬ ಸದಸ್ಯರ ಜೀವವನ್ನೂ ಮೊಟಕುಗೊಳಿಸಬಹುದಾದ ಪ್ರತಿಯೊಂದು ದುಷ್ಟ ಒಡಂಬಡಿಕೆಗಳು ಮತ್ತು ಶಾಪಗಳು , ಯೇಸುವಿನ ರಕ್ತದಿಂದ, ಯೇಸುನಾಮದಲ್ಲಿ ನಾಶವಾಗಲಿ. (ಗಲಾತ್ಯ 3:13, ಕೊಲೊಸ್ಸೆ 2:14)
7. ರಾತ್ರಿಯಲ್ಲಿ ನಡೆಯುವ ಮರಣವು ಮತ್ತು ವ್ಯಾದಿಗಳ ಯಾವುದೇ ಬಾಣವು ನನ್ನನಾಗಲೀ ಮತ್ತು ನನ್ನ ಪ್ರೀತಿಪಾತ್ರರನ್ನಾಗಲೀ ಯೇಸುವಿನ ಹೆಸರಿನಲ್ಲಿ ಎಂದಿಗೂ ತಾಕುವುದಿಲ್ಲ . (ಕೀರ್ತನೆ 91:5-6, ಯೆಶಾಯ 54:17)
8. ನಾನು ಸಾಯುವುದಿಲ್ಲ ಆದರೆ ಯೇಸುವಿನ ಹೆಸರಿನಲ್ಲಿ ವಾಸಿಸುವ ದೇಶದಲ್ಲಿ ದೇವರ ಮಹಿಮೆಯನ್ನು ಸಾರಲು ಬದುಕುತ್ತೇನೆ. (ಕೀರ್ತನೆ 118:17, ಯೋಹಾನ 10:10)
9. ನನ್ನ ಜೀವನದಲ್ಲಿ ಸತ್ತ ಯಾವುದೇ ಸದ್ಗುಣವನ್ನು ದೇವರ ಪುನರುತ್ಥಾನ ಶಕ್ತಿಯೇ,ಯೇಸುನಾಮದಲ್ಲಿ ನನ್ನಲ್ಲಿ ಜೀವಂತಗೊಳಿಸು (ರೋಮ 8:11, ಯೋಹಾನ 11:25-26)
10. ನಾನು ನನ್ನ ಜೀವನದಲ್ಲಿ ಸತ್ತಂತ ಮತ್ತು ಹತಾಶೆಯ ಸನ್ನಿವೇಶಗಳ ಮೇಲೆ ಯೇಸುನಾಮದಲ್ಲಿ ಜೀವವನ್ನು ನುಡಿಯುತ್ತೇನೆ (ನಿಮ್ಮ ಹಣಕಾಸು, ಮಕ್ಕಳು, ವ್ಯವಹಾರ, ಇತ್ಯಾದಿಗಳ ಬಗ್ಗೆ ಮಾತನಾಡಿ). (ಯೆಹೆಜ್ಕೆಲಾ 37:4-6, ರೋಮ 4:17)
11. ನಿಮ್ಮ ಪ್ರಾರ್ಥನೆಗಳಿಗೆ ಉತ್ತರ ನೀಡುವ ದೇವರಿಗೆ ಸ್ತೋತ್ರ ಮಾಡಿರಿ . (ಗುಣಮಟ್ಟದ ಸಮಯವನ್ನು ಇಲ್ಲಿ ಕಳೆಯಿರಿ)
Join our WhatsApp Channel
Most Read
● ನಿತ್ಯತ್ವದ ಮನಃಸ್ಥಿತಿಯಲ್ಲಿ ಬದುಕುವುದು.● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ದೈವಿಕ ಅನುಕ್ರಮ - 1
● ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಜೀವಬಾದ್ಯರ ಪುಸ್ತಕ
● ಸಮರುವಿಕೆಯ ಕಾಲ - 2
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
ಅನಿಸಿಕೆಗಳು