ಅನುದಿನದ ಮನ್ನಾ
1
0
6
ನಂಬಿಕೆಯಲ್ಲಿರುವ ಸ್ವಸ್ಥತೆಯ ಶಕ್ತಿ.
Monday, 6th of October 2025
Categories :
ಆರೋಗ್ಯ ಮತ್ತು ಸ್ವಸ್ಥತೆ - Health and Healing
ಆಗ ಪೇತ್ರನು - ಬೆಳ್ಳಿಬಂಗಾರವಂತೂ ನನ್ನಲ್ಲಿಲ್ಲ, ನನ್ನಲ್ಲಿರುವದನ್ನು ನಿನಗೆ ಕೊಡುತ್ತೇನೆ. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲೇ ಎದ್ದು ನಡೆದಾಡು ಎಂದು ಹೇಳಿ..(ಅ. ಕೃ 3:6)
ಪೇತ್ರನು ಅವನಿಗೆ ಹಣವನ್ನು ನೀಡಲಿಲ್ಲ; ಅವನು ಅವನಿಗೆ ಅದಕ್ಕಿಂತ ಹೆಚ್ಚು ಮೌಲ್ಯಯುತವಾದದ್ದನ್ನು ಕೊಟ್ಟನು. ಒಂದು ಸ್ಪರ್ಶ ಮತ್ತು ಆದೇಶ ವನ್ನು ಕೊಟ್ಟಾಗ, ಆ ಕುಂಟನು ತನ್ನ ಪಾದಗಳು ಮತ್ತು ಕಣಕಾಲುಗಳು ಬಲಗೊಳ್ಳುವುದನ್ನು ಕಂಡುಕೊಂಡನು. ಅವನು ಎದ್ದುನಿಂತು ನಡೆಯಲು ಮಾತ್ರವಲ್ಲದೇ, ಜಿಗಿಯಲು ಪ್ರಾರಂಭಿಸಿದನು! ಅವನು "ನಡೆಯುತ್ತಾ, ಹಾರುತ್ತಾ, ದೇವರನ್ನು ಸ್ತುತಿಸುತ್ತಾ"ಅವನು ಪೇತ್ರ ಮತ್ತು ಯೋಹಾನರನ್ನು ದೇವಾಲಯದೊಳಗೆ ಹಿಂಬಾಲಿಸುತ್ತಾ ಪ್ರವೇಶಿಸಿದನು (ಅ.ಕೃ 3:8).
ಅದ್ಭುತ ನೋಡಲು ಆಶ್ಚರ್ಯ ಚಕಿತಾರಾಗಿ ಕೂಡಿ ಬಂದಿದ್ದ ಜನಸಮೂಹವು ಪೇತ್ರ ಮತ್ತು ಯೋಹಾನರು ತಮ್ಮ ಮಾನವ ಸಾಮರ್ಥ್ಯ ಅಥವಾ ಪವಿತ್ರತೆಯ ಮೂಲಕ ಈ ಪವಾಡವನ್ನು ಮಾಡಿದ್ದಾರೆ ಎಂಬಂತೆ ಅವರು ಆಶ್ಚರ್ಯದಿಂದ ನೋಡುವಾಗ. ಪೇತ್ರನು ಆದ ಅದ್ಭುತ ಕಾರ್ಯಕ್ಕೆ ಹಿಂದಿರುವ ಕಾರಣವನ್ನು ತ್ವರಿತವಾಗಿ ಮರುನಿರ್ದೇಶಿಸಿದನು.ಆದರೆ ಈ ಸ್ವಸ್ಥತೆಯು ಅವರ ಯಾವುದೇ ಶಕ್ತಿ ಅಥವಾ ಪವಿತ್ರತೆಯ ಪ್ರದರ್ಶನವಲ್ಲಆದರೆಅಬ್ರಹಾಂ, ಇಸಾಕ್ ಮತ್ತು ಯಾಕೋಬನ ದೇವರು, ನಮ್ಮ ಪಿತೃಗಳ ದೇವರೇ, ತನ್ನ ಸೇವಕ ಯೇಸುವನ್ನು ಮಹಿಮೆಪಡಿಸಿದ್ದಾನೆ..." ಎಂದು ಆ ಜನರು ಅರ್ಥಮಾಡಿಕೊಳ್ಳಬೇಕೆಂದು ಪೇತ್ರನು ಬಯಸಿದನು. "(ಅ.ಕೃ 3:13)
ತಂದೆ ದೇವರಿಗೂ ಮತ್ತು ಜೀವವುಳ್ಳ ಕರ್ತನಿಗೂ ಆ ಮಹಿಮೆಯು ಸಲ್ಲಿಕೆ ಆಯಿತು, ಅದು ಆ ಜನರೇ ನಿರಾಕರಿಸಿದ್ದ ಯೇಸುವಿಗೆ ಸಲ್ಲಿಕೆ ಆಯಿತು. ಪೇತ್ರನು ಯೇಸುಕ್ರಿಸ್ತನ ಮೇಲೆ ಇಡುವ ನಂಬಿಕೆಯ ಮೂಲಕ ದೊರಕುವ "ಪರಿಪೂರ್ಣ ಸ್ವಸ್ಥತೆಯನ್ನು" ಕುರಿತು ಒತ್ತಿಹೇಳಿದನು (ಅ. ಕೃ 3:16).
ಇದೆಲ್ಲವೂ ಇಂದು ನಮಗೆ ಹೇಗೆ ಅನ್ವಯಿಸುತ್ತದೆ?
1. ದೇವರ ಕೃಪೆಯು ಸಾಕಾದದ್ದು:
ಕೆಲವೊಮ್ಮೆ, ಕುಂಟನು ಆರಂಭದಲ್ಲಿ ಭಿಕ್ಷೆಯನ್ನು ಬಯಸಿದಂತೆಯೇ ನಾವು ವಸ್ತುಗಳ ಪೂರೈಕೆ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುತ್ತೇವೆ. ಆದರೆ ದೇವರು ನಮಗೆ ಇನ್ನೂ ಹೆಚ್ಚಿನದನ್ನು ನೀಡುವವನಾಗಿದ್ದು "ನನ್ನ ಕೃಪೆಯೇ ನಿನಗೆ ಸಾಕು ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣ ಸಾಧಕ ವಾಗುತ್ತದೆ(2 ಕೊರಿಂಥ 12:9) ಎಂದು ಬರೆಯಲ್ಪಟ್ಟಂತೆ ಆತನು ನಮಗೆ ಕೃಪೆಯಿಂದ ಅದನ್ನು ಅನುಗ್ರಹಿಸುತ್ತಾನೆ.
2. ಮಹಿಮೆಯ ಹಿಂದಿರುವ ಮೂಲ ಕಾರಣ ಪ್ರಕಟಿಸಿ: ಸಾಧನೆಗಳು, ಸ್ವಸ್ಥತೆ ಮತ್ತು ಪ್ರಗತಿಗಳು ನಮ್ಮ ಅರ್ಹತೆ ಅಥವಾ ಶಕ್ತಿಯ ಉತ್ಪನ್ನಗಳಲ್ಲ. ಪೇತ್ರ ಮತ್ತು ಯೋಹಾನರಂತೆ, ನಾವು ಜನರಿಗೆ ಪವಾಡಗಳ ನಿಜವಾದ ಮೂಲವನ್ನು ತೋರಿಸಬೇಕು. "ನಿಮ್ಮ ಬೆಳಕು ಮನುಷ್ಯರ ಮುಂದೆ ಪ್ರಕಾಶಿಸಲಿ, ಆಗ ಅವರು ನಿಮ್ಮ ಒಳ್ಳೆಯ ಕಾರ್ಯಗಳನ್ನು ನೋಡಿ ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುತ್ತಾರೆ" (ಮತ್ತಾಯ 5:16).
3. ನಂಬಿಕೆಯು ದೈವಿಕ ಸಾಮರ್ಥ್ಯವನ್ನು ಬಹಿರಂಗಪಡಿಸುತ್ತದೆ:
ಯೇಸುವಿನ ಹೆಸರಿನ ಮೇಲಿನ ನಂಬಿಕೆಯಿಂದಾಗಿ ಕುಂಟನು ಗುಣಮುಖನಾದನು. ನಿಮ್ಮ ಜೀವನದಲ್ಲಿ ಒಂದು ಸ್ವಸ್ಥತೆಯ ಅಥವಾ ಒಂದು ಬದಲಾವಣೆ ಅಗತ್ಯವಿರುವ ಪ್ರದೇಶಗಳಿವೆಯೇ?
ಬೈಬಲ್ ನಮಗೆ ಹೇಳುತ್ತದೆ, "ಆದ್ದರಿಂದ ನಾನು ನಿಮಗೆ ಹೇಳುತ್ತೇನೆ, ನೀವು ಪ್ರಾರ್ಥನೆಯಲ್ಲಿ ಏನು ಕೇಳಿಕೊಂಡರೂ, ಅದು ನಿಮಗೆ ಸಿಕ್ಕಿದೆ ಎಂದು ನಂಬಿರಿ, ಅದು ನಿಮಗೆ ಆಗುತ್ತದೆ" (ಮಾರ್ಕ್ 11:24).
4. ಸಾಕ್ಷಿಯಾಗಿರಿ:
ಪೇತ್ರ ಮತ್ತು ಯೋಹಾನರಂತೆ, ಕ್ರಿಸ್ತನ ಪುನರುತ್ಥಾನ ಮತ್ತು ಅದು ತರಬಹುದಾದ ರೂಪಾಂತರದ ಸಾಕ್ಷಿಗಳಾಗಿರಲು ನಾವು ಕರೆಯಲ್ಪಟ್ಟಿದ್ದೇವೆ.
"ಆದರೆ ಪವಿತ್ರಾತ್ಮವು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದಿ, ನೀವು ನನಗೆ ಸಾಕ್ಷಿಗಳಾಗಿರುತ್ತೀರಿ..." (ಅ. ಕೃ 1:8). ನೀವು ಎಲ್ಲಿದ್ದರೂ ಜನರನ್ನು ಕ್ರಿಸ್ತನ ಬಳಿಗೆ ಕರೆದೊಯ್ಯುವುದನ್ನು ಯಾವಾಗಲೂ ಒಂದು ಗುರಿಯನ್ನಾಗಿ ಮಾಡಿಕೊಳ್ಳಿ.
ಕುಂಟನ ಗಮನಾರ್ಹ ಗುಣಪಡಿಸುವಿಕೆಯು ಕೇವಲ ಒಂದು ಪವಾಡದ ಕಥೆಗಿಂತ ಹೆಚ್ಚಿನದನ್ನು ನೀಡುತ್ತದೆ; ಇದು ನಂಬಿಕೆ, ನಮ್ರತೆ ಮತ್ತು ನಮ್ಮೆಲ್ಲರಿಗೂ ಲಭ್ಯವಿರುವ ದೇವರ ಸರ್ವಶಕ್ತ ಕೃಪೆಯ ಮಾದರಿಯನ್ನು ಒದಗಿಸುತ್ತದೆ. ಹಾಗಾಗಿ ನಂಬಿಕೆಯಿಂದ ಹೆಜ್ಜೆ ಹಾಕೋಣ, ದೇವರಿಗೆ ಮಹಿಮೆಯನ್ನು ನೀಡೋಣ ಮತ್ತು ಆತನ ಅದ್ಭುತ ಶಕ್ತಿಗೆ ಜೀವಂತ ಸಾಕ್ಷಿಯಾಗೋಣ.
Bible Reading: Zechariah 5-9
ಪ್ರಾರ್ಥನೆಗಳು
ತಂದೆಯೇ, ನಮ್ಮನ್ನಲ್ಲ, ನಿನ್ನ ಮಹಿಮೆಯನ್ನೇ ಪ್ರಕಟ ಪಡಿಸುವಂತ ನಂಬಿಕೆಯ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡಿ. ಇತರರು ಯೇಸುನಾಮವನ್ನು ನಂಬಿ ಸ್ವಸ್ಥ ರಾಗುವಂತೆ ನಾವು ನಿನ್ನ ಬಲಪ್ರದರ್ಶನದ ಪಾತ್ರೆಗಳಾಗುವಂತೆ ಯೇಸುನಾಮದಲ್ಲಿ ಮಾಡಿ.ಆಮೆನ್.
Join our WhatsApp Channel

Most Read
● ಕ್ರಿಸ್ತನಂತೆ ಆಗುವುದು● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಯಜ್ಞವೇದಿಯ ಮೇಲೆ ಬೆಂಕಿಯನ್ನು ಪಡೆಯುವುದು ಹೇಗೆ?
● ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
● ದೋಷರೋಪದ ವರ್ಗಾವಣೆ
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
● ಅಗಾಪೆ ಪ್ರೀತಿಯಲ್ಲಿ ಬೆಳೆಯುವುದು
ಅನಿಸಿಕೆಗಳು