ಅತ್ಯತ್ತಮ ಮತ್ತು ಪ್ರತಿಭಾವಂತರು ಎಂದು ಎನಿಸಿಕೊಂಡವರೂ ಸಹ ವಿಫಲರಾಗಬಹುದು. ಆದರೆ ನಿಮ್ಮ ಮತ್ತು ನನ್ನಂತಹ ಮಾಮೂಲು ಜನರು ಕೂಡ ದೇವರು ನಮಗಾಗಿ ಯೋಜಿಸಿರುವ ಎಲ್ಲ ಸಂಗತಿಗಳನ್ನು ಪ್ರವೇಶಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಇದು ಸತ್ಯವಾದದ್ದು ಮತ್ತು ಇದರಲ್ಲಿರುವ ರಹಸ್ಯವೆಂದರೆ ಅದು ಸ್ಥಿರತೆಯಾಗಿದೆ.
#1: ಸ್ಥಿರತೆ ಎಂಬುದು ನಿಮ್ಮಲ್ಲಿರುವ ನಂಬಿಕೆಯನ್ನು ಸಾಬೀತುಪಡಿಸುತ್ತದೆ.
ನೀವು ಬೆಳಿಗ್ಗೆ ಎದ್ದಾಗ, ನಿಮಗೆ ಇಷ್ಟವಿಲ್ಲದಿದ್ದರೂ ಸಂದರ್ಭಗಳು ಅನುಕೂಲಕರವಾಗಿರಲಿ ಅಥವಾ ಇಲ್ಲದಿರಲಿ, ಪ್ರಾರ್ಥನೆ ಮಾಡುವಂಥದ್ದು ಮತ್ತು ದಿನವಿಡೀ ಸತ್ಯವೇದವನ್ನು ಓದುವಂತದ್ದು ಅದು ನಿಮಗೆ ನಂಬಿಕೆ ಇದೆ ಎಂದೂ, ನೀವು ಸಂದರ್ಭಗಳಿಗಾಗಲೀ ಅಥವಾ ಭಾವನೆಗಳಿಗಾಗಲೀ ಮಣಿಯದವರು ಎಂಬುದನ್ನು ಸಾಬೀತುಪಡಿಸುತ್ತದೆ. ನೀವು ನಿಮ್ಮ ಜೀವಿತದಲ್ಲಿ ಒಂದು ಪ್ರಗತಿಯನ್ನು ನೋಡಬೇಕಾಗಿದ್ದರೆ ಸ್ಥಿರತೆ ಎಂಬುದು ನಿಮಗೆ ಅಗತ್ಯವಾಗಿ ಬೇಕಾದ ನಿರ್ಣಾಯಕ ಅಂಶವಾಗಿದೆ. "ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳದೇ ಇರೋಣ. ಏಕೆಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು."(ಗಲಾತ್ಯ 6:9)
#2: ಸ್ಥಿರತೆಯು ನೀವು ಸಾಧಿಸಿದ್ದನ್ನು ಕಾದುಕೊಳ್ಳುತ್ತದೆ.
ನೀವು ಸಾಧಿಸಿದನ್ನು ನೀವು ಕಾದುಕೊಳ್ಳುವವರಾಗಿರಬೇಕು. ಅದು ಅಭಿಷೇಕವಾಗಲಿ, ವ್ಯವಹಾರವಾಗಲಿ ಅಥವಾ ಸಂಬಂಧಗಳಾಗಲಿ; ಸ್ಥಿರತೆಯು ನೀವು ಸಾಧಿಸಿದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪ್ರಮುಖ ಅಂಶವಾಗಿದೆ.
"ಆದ್ದರಿಂದ, ನನ್ನ ಸಹೋದರರೇ, ಸ್ಥಿರಚಿತ್ತರಾಗಿಯೂ, ನಿಶ್ಚಲರಾಗಿರಿ. ಯಾಕೆಂದರೆ ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವುದಿಲ್ಲ. ಅದನ್ನು ತಿಳಿದು ಕರ್ತನ ಕೆಲಸವನ್ನು ಸದಾ ಅತ್ಯಾಸಕ್ತಿಯಿಂದಲೂ ಮತ್ತು ನಿರಂತರ ಶ್ರದ್ಧೆಯುಳ್ಳವರಾಗಿಯೂ ಮಾಡುವವರಾಗಿರಿ."(1 ಕೊರಿಂಥ15:58)
ಹೊಸದಾದ ಸಂಗತಿಗಳು ಯಾವಾಗಲೂ ನಮ್ಮನ್ನು ಪ್ರಚೋದಿಸುತ್ತವೆ, ಆದರೆ ನಾವು ಸಾಕಷ್ಟು ಜಾಗರೂಕರಾಗಿರದಿದ್ದರೆ ಈ ಹೊಸ ವಿಷಯಗಳು ನಮ್ಮ ಗಮನವನ್ನು ಕಸಿದುಕೊಳ್ಳಬಹುದು. ಅತ್ಯಾಕರ್ಷಕವಾದುದನ್ನು ಬಿಟ್ಟು ನೀವು ಸ್ಥಿರತೆಯನ್ನು ಕಾಪಾಡಿಕೊಳ್ಳುವುದನ್ನು ಆಯ್ಕೆಮಾಡಿಕೊಳ್ಳುವಾಗ ನಿಮ್ಮ ಬೇರುಗಳು ಆಳವಾಗಿ ಬಲವಾಗಿ ಬೆಳೆಯುವಂತೆ ಅದು ಮಾಡುತ್ತದೆ.
#3: ಸ್ಥಿರತೆಯು ಫಲಪ್ರದತೆಯನ್ನು ತರುತ್ತದೆ.
"ಯಾರು ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ, ಧರ್ಮನಿಂದಕರೊಡನೆ ಕುಳಿತುಕೊಳ್ಳದೆ, ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುತ್ತಾ, ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು ಎಷ್ಟೋ ಧನ್ಯನು. ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ ಅವನಿರುವನು. ಅಂಥ ಮರವು ಸೂಕ್ತಕಾಲದಲ್ಲಿ ಫಲಕೊಡುತ್ತದಲ್ಲಾ. ಅದರ ಎಲೆ ಬಾಡುವುದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು."(ಕೀರ್ತನೆಗಳು 1:1-3)
ಸತ್ಯವೇದವು ಧನ್ಯನಾದ ವ್ಯಕ್ತಿಯ ಬಗ್ಗೆ ಇಲ್ಲಿ ಹೇಳುತ್ತಿದೆ . "ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುತ್ತಾ, ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು.." ಎಂಬ ವಾಕ್ಯಗಳನ್ನು ಗಮನಿಸಿ - ಅದುವೇ ಸ್ಥಿರತೆ.
ಸ್ಥಿರತೆಯ ಜೀವನವು ತಕ್ಕ ಕಾಲದಲ್ಲಿ ಫಲವನ್ನು ತರುತ್ತದೆ.
ಈ ರೀತಿಯ ಆತ್ಮೀಕ ಶಿಸ್ತಿನ ಜೊತೆಗೆ ಬರುವ ಒಂದು ಪ್ರಯೋಜನವೆಂದರೆ ಅದು ಜೀವನದ ಇತರ ಕ್ಷೇತ್ರಗಳಲ್ಲಿಯೂ ಕಾರ್ಯಮಾಡುವಂತಾದ್ದಾಗಿದೆ.
"ಆ ದೃಢ ನಿಷ್ಠೆಯು ನಿಮ್ಮಲ್ಲಿ ಪೂರ್ಣ ಕ್ರಿಯೆಯನ್ನು ಉಂಟುಮಾಡಿದಾಗ, ಆಗ ನೀವು ಪರಿಪಕ್ವತೆಗೆ ಬಂದವರೂ ಪರಿಪೂರ್ಣರೂ ಯಾವ ಕೊರತೆಯೂ ಇಲ್ಲದವರೂ ಆಗಿರುವಿರಿ." (ಯಾಕೋಬನು1:4)
ಪ್ರಾರ್ಥನೆಗಳು
ನನ್ನ ಪ್ರಗತಿಗೆ ಅಡ್ಡಿಯಾಗುವ ಪ್ರತಿಯೊಂದು ಶಕ್ತಿಯನ್ನು ಯೇಸುನಾಮದಲ್ಲಿ ನಿರ್ಮೂಲ ಮಾಡುತ್ತೇನೆ. (ಇದನ್ನು ಪದೇ ಪದೇ ಹೇಳುತ್ತಿರಿ)
Join our WhatsApp Channel
Most Read
● ಆರಾಧನೆಗೆ ಬೇಕಾದ ಇಂಧನ● ದೇವರ ವಾಕ್ಯದಲ್ಲಿರುವ ನಂಬಿಗಸ್ಥಿಕೆ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
● ದೇವರ ಕೃಪೆಯನ್ನು ಸೇದುವುದು
● ವಾಕ್ಯದಿಂದ ಬೆಳಕು ಬರುತ್ತದೆ
ಅನಿಸಿಕೆಗಳು