ಅನುದಿನದ ಮನ್ನಾ
2
0
93
ಕ್ರಿಸ್ತನಲ್ಲಿ ನಿಮ್ಮ ದೈವಿಕ ಗಮ್ಯಸ್ಥಾನವನ್ನು ಪ್ರವೇಶಿಸುವುದು
Wednesday, 2nd of July 2025
Categories :
ಕರೆಯುತ್ತಿದೆ ( Calling)
ನನ್ನ ಜೀವನದಲ್ಲಿ ನಾನು ಇರಬೇಕೆಂದು ದೇವರು ಬಯಸಿದ ಸ್ಥಳದಲ್ಲಿ ನಾನು ಇಲ್ಲದ ಸಮಯವಿತ್ತು. ಆದ್ದರಿಂದ, ಕರ್ತನು ತನ್ನ ಕರುಣೆಯಿಂದ ನನ್ನ ಸುತ್ತಲೂ ಕೆಲವು ಘಟನೆಗಳನ್ನು ಸಂಘಟಿಸಿ ನನ್ನ ಜೀವನದಲ್ಲಿ ದೈವಿಕ ಛೇದಕ( devine divider) ಎಂದು ಕರೆಯಲ್ಪಡುವ ಸ್ಥಳಕ್ಕೆ ನನ್ನನ್ನು ಕರೆತಂದನು.
ದೇವರು ನನ್ನಲ್ಲಿದ್ದ ಎಲ್ಲಾ ವರಗಳು, ಕೌಶಲ್ಯಗಳು ಮತ್ತು ಉತ್ಸಾಹವನ್ನು ನಾನು ಏನಾಗಬೇಕೆಂದು ಆತನು ಉದ್ದೇಶಿಸಿದ್ದನೋ ಅದರಲ್ಲಿ ವಿಲೀನಗೊಳಿಸಲು ತಂದ ಹಂತ ಇದಾಗಿತ್ತು. ಇದನ್ನು ಓದುವ ನಿಮ್ಮಲ್ಲಿ ಹೆಚ್ಚಿನವರು ನಿಮ್ಮ ಸುತ್ತಲೂ ನಡೆಯುತ್ತಿರುವ ವಿಷಯಗಳಿಂದ ಮುಳುಗಿ ಹೋಗಿರ ಬಹುದು ಆದರೆ ಕರ್ತನನ್ನು ನಂಬಿರಿ, ಆತನು ನಿಮ್ಮ ದೈವಿಕ ಗಮ್ಯಸ್ಥಾನಕ್ಕಾಗಿ ನಿಮ್ಮನ್ನು ಸಿದ್ಧಪಡಿಸುತ್ತಿದ್ದಾನೆ.
"ನಮ್ಮ ಜೀವನದ ಪ್ರತಿಯೊಂದು ವಿವರವು ನಮ್ಮ ಜೀವನದಲ್ಲಿ ಒಳ್ಳೆಯದನ್ನು ತರುವ ದೇವರ ಪರಿಪೂರ್ಣ ಯೋಜನೆಗೆ ಹೊಂದಿಕೊಳ್ಳ ಬೇಕೆಂದು ನಿರಂತರವಾಗಿ ಒಟ್ಟಿಗೆ ಹೆಣೆಯಲ್ಪಟ್ಟಿದೆ, ಏಕೆಂದರೆ ನಾವು ಆತನಿಗೆ ಪ್ರಿಯರಾಗಿದ್ದೇವೆ, ಆತನ ಉದ್ದೇಶಿತ ಕರೆಯನ್ನು ಪೂರೈಸಲು ಕರೆಯಲ್ಪಟ್ಟಿದ್ದೇವೆ" . (ರೋಮನ್ನರು 8:28 TPT)
ಈ ಮೇಲಿನ ದೇವರವಾಕ್ಯವು ಏನ್ನನ್ನು ಹೇಳಲು ಹೊರಟಿದೆ ಎಂಬುದನ್ನು ನೋಡೋಣ ಹಾಗಾದರೆ"ನಾನು ನನ್ನ ದೈವಿಕ ಛೇದಕ ಸ್ಥಳಕ್ಕೆ ಪ್ರವೇಶಿಸಲು ನಾನು ಏನು ಮಾಡಬೇಕು?" ಎನ್ನುವ ಒಂದು ಪ್ರಶ್ನೆಯನ್ನು ನಮ್ಮಲ್ಲಿ ಇದು ಹುಟ್ಟು ಹಾಕುತ್ತದೆ ಇದಕ್ಕೆ ಉತ್ತರ ಇಲ್ಲಿದೆ. " ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ. " (1 ಕೊರಿಂಥ 10:31 TPT)
ನಿಮ್ಮ ದಿನನಿತ್ಯದ ಜವಾಬ್ದಾರಿಗಳ ಕರ್ತವ್ಯಗಳನ್ನು ನೀವು ಪೂರೈಸುವಾಗ ಮತ್ತು ಜೀವನದ ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಹ ಆತನಿಗೆ ಸಲ್ಲಬೇಕಾದ ಮಹಿಮೆ ಮತ್ತು ಗೌರವವನ್ನು ನೀಡುವಾಗ, ನೀವು ನಿಜವಾಗಿಯೂ ನಿಮ್ಮ ದಿನಚರಿಯಲ್ಲಿ ಕರ್ತನನ್ನು ಒಳಗೊಳ್ಳುತ್ತಿದ್ದೀರಿ. ಈ ಸಮಯದಲ್ಲಿ ಸ್ವಾಭಾವಿಕವಾದದ್ದು ಅಲೌಕಿಕವಾಗುತ್ತದೆ.
ಎರಡನೆಯದಾಗಿ, ನಿಮ್ಮ ದೇವರು ನೀಡಿದ ಕರೆಯನ್ನು ನೀವು ಪೂರೈಸಲು ಬಯಸಿದರೆ, ನೀವು ನಿಮ್ಮ ವೃತ್ತಿಜೀವನದ ಕುರಿತು ನಿರ್ದೇಶನವನ್ನು ಹುಡುಕುತ್ತಿರಲಿ, ಯಾರನ್ನು ಮದುವೆಯಾಗಬೇಕು ಅಥವಾ ಎಲ್ಲಿ ವಾಸಿಸಬೇಕು ಈ ಎಲ್ಲಾ ವಿಚಾರಗಳಲ್ಲೂ ನೀವು ದಾರಿಯುದ್ದಕ್ಕೂ ವಿವೇಕಯುತ ಆಯ್ಕೆಗಳನ್ನು ಮಾಡಬೇಕಾಗುತ್ತದೆ.
ಸತ್ಯವೇದ ಹೇಳುತ್ತದೆ, 'ಪೂರ್ಣಹೃದಯದಿಂದ ಯೆಹೋವ ದೇವರಲ್ಲಿ ಭರವಸೆ ಇಡು ನಿನ್ನ ಸ್ವಂತ ಬುದ್ಧಿಯ ಮೇಲೆಯೇ ಆಧಾರಗೊಳ್ಳಬೇಡ. ನಿನ್ನ ಎಲ್ಲಾ ಮಾರ್ಗಗಳಲ್ಲಿ ದೇವರಿಗೆ ಅಧೀನವಾಗಿರು. ಆಗ ದೇವರು ನಿನ್ನ ಮಾರ್ಗಗಳನ್ನು ಸರಾಗ ಮಾಡುವರು." (ಜ್ಞಾನೋಕ್ತಿ 3:5-6).
ನೀವು ಈ ತತ್ವಗಳನ್ನು ಅನುಸರಿಸುವಾಗ, ದೇವರು ನಿಮ್ಮನ್ನು ಎಲ್ಲಿ ಇರಬೇಕೆಂದು ಬಯಸುತ್ತಾನೋ ಅಲ್ಲಿ ನೀವು ಶೀಘ್ರದಲ್ಲೇ ಇರುತ್ತೀರಿ ಎಂದು ನಾನು ನಂಬುತ್ತೇನೆ. ನಿರೀಕ್ಷಿಸಿ! ನೀವು ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಆತನ ಒಳ್ಳೆಯತನದ ಕುರಿತು ಸಾಕ್ಷಿ ಹೇಳಲಿದ್ದೀರಿ.
Bible Reading: Psalms 64-69
ಅರಿಕೆಗಳು
ನನ್ನ ಹೆಜ್ಜೆಗಳೆಲ್ಲ ಕರ್ತನಿಂದ ದೈವಿಕವಾಗಿ ಆದೇಶಿಸಲ್ಪಟ್ಟಿವೆ. ಕ್ರಿಸ್ತನಲ್ಲಿ ನನ್ನ ದೇವರು ನೀಡಿದ ಕರೆಯನ್ನು ನಾನು ಯೇಸುನಾಮದಲ್ಲಿ ಪೂರೈಸುತ್ತೇನೆ. ಆಮೆನ್.
Join our WhatsApp Channel

Most Read
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #2
● ಕರ್ತನಾದ ಯೇಸುಕ್ರಿಸ್ತನನ್ನು ಅನುಕರಣೆ ಮಾಡುವುದು ಹೇಗೆ
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
ಅನಿಸಿಕೆಗಳು