ಅನುದಿನದ ಮನ್ನಾ
ಹೋಲಿಕೆಯ ಬಲೆ
Saturday, 19th of October 2024
1
0
247
Categories :
ಮಾನಸಿಕ ಆರೋಗ್ಯ (Mental Health)
" ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ. ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡಬಹುದೇ ಹೊರತು ಮತ್ತೊಬ್ಬನೊಂದಿಗೆ ಹೋಲಿಸಿಕೊಂಡು ಹೆಚ್ಚಳಪಡಬೇಕಾಗಿರುವುದಿಲ್ಲ."(ಗಲಾ 6:4)
ಇಂದಿನ ಸಮಾಜದಲ್ಲಿ ಹೋಲಿಕೆಯ ಬಲೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿದೆ. ಸಾಮಾಜಿಕ ಮಾಧ್ಯಮ, ವೃತ್ತಿ ಸಾಧನೆಗಳೂ, ವೈಯಕ್ತಿಕ ಸಂಬಂಧಗಳೂ ಸಹ ನಮ್ಮಲ್ಲಿನ ಅತೃಪ್ತಿಯ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಬಹುದು. ನಾವು ನಿರಂತರವಾಗಿ ನಮ್ಮ ಜೀವಿತವನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತಲೇ ಇರುತ್ತೇವೆ. ಅದು ಸ್ನೇಹಿತರ ಯಶಸ್ಸು, ಬೇರೊಬ್ಬರ ನೋಟ ಅಥವಾ ನಾವು ಆನ್ಲೈನ್ ನಲ್ಲಿ ನೋಡುವ ಇತರ ಜನರ ಸಾಧನೆ ಇತ್ಯಾದಿಗಳಲ್ಲಿಯೇ ಆಗಿರಬಹುದು. ಹೀಗೆ ನಾವು ಹೋಲಿಸಿಕೊಳ್ಳುವಾಗ ಸಾಮಾನ್ಯವಾಗಿ, ನಾವು ಆ ಮಟ್ಟದಲ್ಲಿಲ್ಲ ಅಥವಾ ಅವರಿಗಿಂತ ಹಿಂದಿದ್ದೇವೆ ಎಂದು ಅಂದುಕೊಳ್ಳುತ್ತೇವೆ. ಆದರೆ ಹೋಲಿಕೆಮಾಡಿ ಕೊಳ್ಳುವಂತದ್ದು ನಾವು ದೇವರು ನಮಗಾಗಿ ನೀಡಿರುವ ನಮ್ಮ ವೈಯಕ್ತಿಕ ಗುರುತು ಮತ್ತು ಉದ್ದೇಶವನ್ನು ಅಪ್ಪಿಕೊಳ್ಳುವುದನ್ನು ತಪ್ಪಿಸಲು ಸೈತಾನ ಉಪಯೋಗಿಸುವ ಅಪಾಯಕಾರಿ ಸಾಧನವಾಗಿದೆ.
ಹೋಲಿಕೆ ಎಂಬುದು ಇತರರ ಜೀವನವನ್ನು ಹಾನಿಕಾರಕವಲ್ಲದ ಹಾಗೆ ಇಣುಕಿ ನೋಡುವ ಸಂಗತಿಯಾಗಿದೆ. ಆದರೆ ಅದು ನಮ್ಮ ನೈಜ ಜೀವನವನ್ನು ವಿರೂಪಗೊಳಿಸಬಲ್ಲದು. ನಮ್ಮೊಳಗಿರುವ ಸಂತೋಷವನ್ನು ಕಸಿದುಕೊಂಡು ನಮ್ಮನ್ನು ಹತಾಶೆ ಮತ್ತು ಕಹಿಯಾದ ಹಾದಿಯಲ್ಲಿ ನಡೆಸಬಲ್ಲದು. ದೇವರು ನಮ್ಮ ಜೀವಿತದಲ್ಲಿ ಏನೆಲ್ಲಾ ಮಾಡುತ್ತಿದ್ದಾನೆ ಎಂಬುದರಲ್ಲಿ ನಾವು ತೃಪ್ತರಾಗುವ ಬದಲು ಇತರರ ಜೀವನದಲ್ಲಿ ಆತನು ಏನೆಲ್ಲಾ ಮಾಡುತ್ತಿದ್ದಾನೆ ಎನ್ನುವ ಕುರಿತೇ ನಾವು ಚಿಂತಿಸುವಂತೆ ಮಾಡುತ್ತದೆ. ಆದರೆ "ನಾವು ನಮಗೆ ನೇಮಿಸಿದ ಓಟವನ್ನು ಚಲಾಯಿಸಲು ಕರೆಯಲ್ಪಟ್ಟಿದ್ದೇವೆಯೇ ಹೊರತು ಬೇರೆಯವರಿಗೆ ನೇಮಿಸಿದ ಓಟವನ್ನಲ್ಲ" ಎಂದು ಸತ್ಯವೇದ ಸ್ಪಷ್ಟವಾಗಿ ಹೇಳುತ್ತದೆ.
ದೇವರ ಸೇವಕರಾಗಿ ಹೆಸರುಗೊಂಡವರು ಸಹ ಈ ಹೋಲಿಕೆಯ ಬಲೆಗೆ ಬಿದ್ದಿದ್ದರು. ಸತ್ಯವೇದಲ್ಲಿರುವ ಅತ್ಯಂತ ಬಲವಾದ ಪ್ರವಾದಿಗಳಲ್ಲಿ ಒಬ್ಬನಾದ ಎಲಿಯನನ್ನು ತೆಗೆದುಕೊಳ್ಳಿರಿ: ದೇವರು ತನ್ನ ಮೂಲಕ ಆಶ್ಚರ್ಯಕರವಾದ ಅದ್ಭುತಗಳನ್ನು ಮಾಡುವುದನ್ನು ಅವನು ನೋಡಿದ್ದನು. ಆದರೂ 1 ಅರಸು 19 :4ರಲ್ಲಿ ಅವನು ಬಲಹೀನನಾಗಿ ಬಳಲಿ ಹೋಗುವ ಸಮಯದಲ್ಲಿ" ನಾನು ನನ್ನ ಪೂರ್ವಜರರಿಗಿಂತ ನಾನು ಉತ್ತಮನಲ್ಲ" ಎಂದು ಮೊರೆಯಿಡುತ್ತಾನೆ. ದೇವರು ಅವನ ಮೂಲಕ ಮಾಡಿದ ಎಲ್ಲಾ ನಂಬಲಾಗದಂತಹ ಸಂಗತಿಗಳ ಹೊರತಾಗಿಯೂ ಎಲೀಯನ ಗಮನವು ಹೋಲಿಕೆ ಮಾಡುವಲ್ಲಿಗೆ ಧಾವಿಸಿತು. ಬಹುಶಃ ಅವನು ನಿರುತ್ಸಾಹದಲ್ಲಿದ್ದಾಗ ಅವನ ಎದುರು ನಿಂತ ಜನರನ್ನು ನೋಡಿ ತನ್ನ ಸ್ವಂತ ಪ್ರಯತ್ನಗಳು ಸಾಗುವುದಿಲ್ಲ ಎಂದು ತನ್ನಲ್ಲಿ ತಾನೇ ತೀರ್ಮಾನಿಸಿಕೊಂಡು ತಾನೊಬ್ಬ ನಿಷ್ಪಯೋಜಕನೆಂದು ಭಾವಿಸಿದನು.
ಎಲಿಯನು ಮಾಡಿಕೊಳ್ಳುತ್ತಿದ್ದ ಹೋಲಿಕೆಯು ದೇವರು ಅವನ ಜೀವಿತದಲ್ಲಿ ಏನೆಲ್ಲ ಮಾಡುತ್ತಿದ್ದಾನೆ ಎಂಬ ಕಾರ್ಯಗಳನ್ನೇ ವಿರೂಪಗೊಳಿಸಿತು. ದೇವರು ಅವನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳು ಮತ್ತು ನೀಡಿದ ವಿಜಯಗಳ ಮೇಲೆ ಅವನ ದೃಷ್ಟಿಯನ್ನು ಕೇಂದ್ರೀಕರಿಸುವ ಬದಲು ಅಸಮರ್ಪಕವಾದ ಭಾವನೆಗಳಲ್ಲಿ ಅವನು ಮುಳುಗಿ ಹೋದನು. ನಮ್ಮಲ್ಲಿ ಪ್ರತಿಯೊಬ್ಬರಿಗೂ ಆತನು ಇಟ್ಟಿರುವ ವಿಶಿಷ್ಟ ಉದ್ದೇಶದ ಹಾಗೆಯೇ, ತನ್ನ ಜೀವಿತದಲ್ಲಿ ದೇವರು ಇಟ್ಟಿರುವ ವಿಶಿಷ್ಟ ಉದ್ದೇಶವನ್ನು ಎಲಿಯನು ಮರೆತು ಹೋದನು. ದೇವರು ಎಂದಿಗೂ ಅವನ ಪೂರ್ವಜರೊಡನೆ ಅವನನ್ನು ಹೋಲಿಸಿಕೊಂಡು ನೋಡಲು ಹೇಳಲಿಲ್ಲ. ಆದರೆ ದೇವರು ಎಲಿಯನನ್ನು ನಿರ್ದಿಷ್ಟವಾದ ತನ್ನ ಸೇವಾ ಕಾರ್ಯವನ್ನು ಮಾಡಲೆಂದೇ ಕರೆದಿದ್ದನು. ಎಲಿಯನ ಹಾಗೆ ನಾವು ಸಹ ಸಾಮಾನ್ಯವಾಗಿ ದೇವರು ನಮಗಾಗಿ ಇಟ್ಟಿರುವ ನಿರ್ದಿಷ್ಟವಾದ ವಿಶಿಷ್ಟವಾದ ದರ್ಶನವನ್ನು ಇತರರೊಂದಿಗೆ ಹೋಲಿಸಿಕೊಳ್ಳುವಾಗ ಕಳೆದುಕೊಳ್ಳುತ್ತೇವೆ.
ಹೋಲಿಸಿಕೊಳ್ಳುವಂಥದ್ದು ಅಪಾಯಕಾರಿಯಾದ ಸಂಗತಿಯಾಗಿದೆ. ಏಕೆಂದರೆ ಅದು ತಪ್ಪಾದ ಅಭಿಪ್ರಾಯವನ್ನು ಉಂಟುಮಾಡುವಂತದ್ದಾಗಿದೆ. ಇದು ಇತರರಿಗೆ ಸಿಕ್ಕಿರುವ ಆಶೀರ್ವಾದಗಳು ನಮಗೆ ಸಿಕ್ಕಿರುವುದಕ್ಕಿಂತಲೂ ಉತ್ತಮವಾದದ್ದು ಮತ್ತು ಹೆಚ್ಚು ಮೌಲ್ಯವುಳ್ಳದ್ದು ಎಂದು ನಮ್ಮ ಮನಸ್ಸಿನಲಿ ಮೂಡಿಸುತ್ತದೆ. ಇದು ನಾವು ಕಾಳಜಿ ವಹಿಸಬೇಕಾದ ಜನರ ಕುರಿತೆ ಅಸೂಯೆ ಪಡುವಂತೆ ಅಸಮಾಧಾನ ಗೊಳ್ಳುವಂತೆ ಮಾಡುತ್ತದೆ.ಆದರೆ ಗಲಾತ್ಯ6-4 ನಾವು ನಮ್ಮನ್ನು ಪರಿಶೋಧಿಸಿಕೊಳ್ಳಲು ದೇವರು ನಮಗಾಗಿ ಇಟ್ಟಿರುವ ಓಟದ ಮೇಲೆ ಲಕ್ಷ್ಯ ವಿಡುವಂತೆ ನಮಗೆ ನೆನಪಿಸುತ್ತದೆ. ನಾವು ನಮ್ಮ ಜೀವನ ಯಾನವನ್ನು ಇತರರೊಂದಿಗೆ ಹೋಲಿಸಿ ನೋಡದೆ ದೇವರು ನಮ್ಮ ಜೀವನದಲ್ಲಿ ಮಾಡುತ್ತಿರುವ ಕಾರ್ಯಗಳನ್ನೆಲ್ಲ ನೋಡುವಾಗ ನಾವು ಕೃತಜ್ಞತಾ ಸ್ತೋತ್ರ ಸಲ್ಲಿಸುವವರಾಗುತ್ತೇವೆ ಮತ್ತು ಆ ಕಾರ್ಯಗಳಲ್ಲಿ ಹೆಮ್ಮೆಪಡುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಪ್ರತ್ಯೇಕವಾದ ಹಾದಿಯಲ್ಲಿದ್ದೇವೆ ಮತ್ತು ನಮ್ಮ ಜೀವನಕ್ಕಾಗಿ ದೇವರ ಸಮಯ ಮತ್ತು ಯೋಜನೆಗಳು ಪರಿಪೂರ್ಣವಾಗಿದೆ.
ಸತ್ಯವೇನೆಂದರೆ ದೇವರು ಎಂದಿಗೂ ತಪ್ಪು ಮಾಡುವವನಲ್ಲ. ಆತನು ನಿಮ್ಮ ಜೀವಿತಕಾಗಿ ಒಂದು ನಿರ್ದಿಷ್ಟ ಯೋಜನೆಯನ್ನು ಉದ್ದೇಶವನ್ನು ಹೊಂದಿದ್ದಾನೆ. ಅದು ಇತರರಿಗಿಂತ ಭಿನ್ನವಾದದಾಗಿರುತ್ತದೆ. ನಿಮ್ಮ ಪ್ರಯಾಣಕ್ಕಾಗಿ ರೂಪಿಸಿರುವ ವರಗಳು, ಅನುಭವಗಳು ಮತ್ತು ಅವಕಾಶಗಳೊಂದಿಗೆ ಆತನು ಅದನ್ನು ಸಜ್ಜುಗೊಳಿಸಿದ್ದಾನೆ. ನೀವು ನಿಮ್ಮ ಜೀವಿತವನ್ನು ಇತರರೊಂದಿಗೆ ಹೋಲಿಸಿಕೊಂಡು ಸಮಯವನ್ನು ವ್ಯರ್ಥ ಗೊಳಿಸಿಕೊಳ್ಳುವ ಬದಲು ದೇವರು ನಿಮ್ಮ ಮುಂದೆ ಇಟ್ಟಿರುವ ಆಶೀರ್ವಾದಗಳನ್ನು ಮತ್ತು ಅವಕಾಶಗಳನ್ನು ಬಳಸಿಕೊಳ್ಳುವತ್ತಾ ಗಮನಹರಿಸಿರಿ. ಆತನು ಈಗಾಗಲೇ ನಿಮಗೆ ಕೊಟ್ಟಿರುವ ಜಯವನ್ನು ಸಂಭ್ರಮಿಸಿ ಮತ್ತು ನಿಮಗಾಗಿ ಆತನ ಯೋಚನೆಗಳು ನಿಖರವಾಗಿ ತೆರೆಯಲ್ಪಡುತ್ತಿದೆ ಎಂಬುದನ್ನು ನಂಬಿರಿ.
ನೀವು ಯಾವ ಯಾವ ಕ್ಷೇತ್ರಗಳಲ್ಲಿ ಈ ಹೋಲಿಕೆಯ ಬಲೆಯಲ್ಲಿ ಬಿದ್ದು ಹೋಗಿದ್ದೀರಿ ಎಂಬುದನ್ನು ಅರಿತುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿರಿ. ಬೇರೊಬ್ಬರನ್ನು ಹೋಲಿಸಿಕೊಂಡು ನಿಮ್ಮ ಜೀವಿತವನ್ನು ನಿರಂತರವಾಗಿ ಅಳೆಯುತ್ತಿದ್ದೀರಾ? ನಿಮ್ಮ ಪ್ರಯಾಣವು ಅವರ ಪ್ರಯಾಣಕ್ಕಿಂತ ಭಿನ್ನವಾಗಿ ಕಾಣುವುದರಿಂದ ನೀವು ನಿರುತ್ಸಾಹಗೊಂಡಿದ್ದೀರಾ? ನಿಮಗಾಗಿ ದೇವರು ಒಂದು ಯೋಜನೆಯನ್ನು ಸಂಪೂರ್ಣವಾಗಿ ಈಗಾಗಲೇ ರಚಿಸಿದ್ದಾಗಿದೆ ಎಂಬುದನ್ನು ನೀವು ನೆನಪಿಡಿ. ಆತನು ನಿಮ್ಮ ಅಗತ್ಯಗಳನ್ನು, ನಿಮ್ಮ ಬಯಕೆಗಳನ್ನು ಮತ್ತು ನಿಮ್ಮ ಕನಸುಗಳನ್ನು ತಿಳಿದಿದ್ದಾನೆ ಮತ್ತು ಆತನು ನಿಮ್ಮ ಹಿತಕ್ಕಾಗಿಯೇ ಎಲ್ಲಾ ಕಾರ್ಯಗಳನ್ನು ಒಳ್ಳೆಯದಕ್ಕಾಗಿಯೇ ಮಾಡುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳಿರಿ. ( ರೋಮ 8:28)
ನಿಮ್ಮನ್ನು ನೀವು ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ನಿಗ್ರಹಿಸಲು ಒಂದು ಪ್ರತಿಜ್ಞೆ ಮಾಡಿರಿ. ಗಲಾತ್ಯ6-4 ನಿಮ್ಮನ್ನು ಉತ್ತೇಜಿಸುವಂತೆ ಇದರೊಂದಿಗೆ ಹೋಲಿಸಿಕೊಳ್ಳುವುದಕ್ಕೆ ಬದಲಾಗಿ ನಿಮಗೆ ನಿಮ್ಮನ್ನೇ ಹೋಲಿಸಿಕೊಳ್ಳುವುದರ ಮೇಲೆ ನೀವು ಲಕ್ಷ ವಿಡಿರಿ. ನಿಮ್ಮ ಅನನ್ಯ ಮಾರ್ಗವನ್ನು ಪ್ರಶಂಶಿಸಿಕೊ ಳ್ಳುವಂತೆ ಸಹಾಯ ಮಾಡಲು ದೇವರಲ್ಲಿ ಬೇಡಿಕೊಳ್ಳಿ. ಆತನು ನಿಮ್ಮಲ್ಲಿ ಈ ಒಳ್ಳೆಯ ಕೆಲಸವನ್ನು ಆರಂಭಿಸಿ ಅದನ್ನು ನಡೆಸಿಕೊಂಡು ಯೇಸುಕ್ರಿಸ್ತನು ಬರುವ ದಿನದೊಳಗಾಗಿ ಪೂರ್ಣತೆಗೆ ತರವಷ್ಟು ನಂಬಿಗಸ್ತನಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಿರಿ. (ಫಿಲಿಪ್ಪಿ 1:6)
ಈ ವಾರದಲ್ಲಿ ಪ್ರತಿದಿನವೂ ನಿಮ್ಮ ಸ್ವಂತ ಜೀವನ ಯಾನದಲ್ಲಿ ನೀವು ಕೃತಜ್ಞತೆ ಸಲ್ಲಿಸಬೇಕಾಗಿರುವ ಒಂದು ವಿಷಯವನ್ನು ಬರೆಯಿರಿ. ಆ ಆಶೀರ್ವಾದವು ಎಷ್ಟೇ ದೊಡ್ಡದಾಗಿರಲಿ ಅಥವಾ ಎಷ್ಟೇ ಚಿಕ್ಕದಾಗಿರಲಿ ನಿಮ್ಮ ಜೀವನದಲ್ಲಿ ದೇವರು ಹೇಗೆಲ್ಲ ಕಾರ್ಯ ಮಾಡಿದ್ದಾನೆ ಎಂಬುದನ್ನು ಪರಿಶೋಧಿಸಿ. ನೀವು ನಿಮ್ಮ ಮಾರ್ಗಕ್ಕಾಗಿ ಸ್ತೋತ್ರ ಸಲ್ಲಿಸುವದನ್ನು ಅಭ್ಯಾಸ ಮಾಡಿಕೊಳ್ಳುವಾಗ ದೇವರು ನಿಮಗಾಗಿ ನಿರ್ದಿಷ್ಟವಾಗಿ ಏನು ಮಾಡುತ್ತಿದ್ದಾನೆ ಎಂಬುದರ ಸೌಂದರ್ಯವನ್ನು ನೀವು ಗಮನಿಸಲು ಆರಂಭಿಸುತ್ತೀರಿ.
ಪ್ರಾರ್ಥನೆಗಳು
ತಂದೆಯೇ, ಹೋಲಿಕೆಯ ಬಲೆಯಿಂದ ನನ್ನನ್ನು ಬಿಡುಗಡೆ ಮಾಡಿ. ನನ್ನ ಜೀವಿತಕ್ಕಾಗಿ ನೀನು ಇಟ್ಟಿರುವ ನಿನ್ನ ಅನನ್ಯ ಯೋಜನೆಯ ಮೇಲೆ ನಂಬಿಕೆ ಇಡುವಂತೆಯೂ ಮತ್ತು ನೀನು ನನಗೆ ಅನುಭವಿಸಿರುವ ಆಶೀರ್ವಾದಗಳನ್ನು ಸಂಭ್ರಮಿಸಲು ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿ. ನೀವು ನನ್ನ ಪ್ರಯಾಣಕ್ಕೆ ನನ್ನನ್ನು ಸಜ್ಜುಗೊಳಿಸಿದ್ದೀರಿ ಮತ್ತು ನಿಮ್ಮ ಸಮಯ ಪರಿಪೂರ್ಣವಾದದ್ದು ಎಂಬುದನ್ನು ಪ್ರತಿದಿನ ನನಗೆ ಯೇಸು ನಾಮದಲ್ಲಿ ನೆನಪಿಸಿ. ಆಮೆನ್.
Join our WhatsApp Channel
Most Read
● ಪ್ರಾರ್ಥನಾ ಹೀನತೆ ಎಂಬ ಪಾಪ● ನಂಬಿಕೆ- ನಿರೀಕ್ಷೆ -ಪ್ರೀತಿ
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ನಂಬಿಕೆ ಎಂದರೇನು ?
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ಬದಲಾಗಲು ಇರುವ ತೊಡಕುಗಳು.
● ಅಂತಿಮ ಸುತ್ತನ್ನೂ ಗೆಲ್ಲುವುದು
ಅನಿಸಿಕೆಗಳು