english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಅಪನಂಬಿಕೆ
ಅನುದಿನದ ಮನ್ನಾ

ಅಪನಂಬಿಕೆ

Thursday, 3rd of April 2025
3 0 124
Categories : ನಂಬಿಕೆಗಳನ್ನು(Beliefs) ರೂಪಾಂತರ(transformation)
"ಅವರಿಗೆ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು; ಆದರೆ ಆ ಕಾಲದಲ್ಲಿ ಕೇಳಿದವರು ನಂಬದೆಹೋದ ಕಾರಣ ಆ ವಾಕ್ಯದಿಂದ ಅವರಿಗೆ ಪ್ರಯೋಜನವಾಗಲಿಲ್ಲ. (ಇಬ್ರಿಯ 4:2) 

ಅಪನಂಬಿಕೆಯು ನಮ್ಮ ಆತ್ಮೀಕ ಬೆಳವಣಿಗೆಗೆ ಅಡ್ಡಿಯಾಗುವ ಮತ್ತು ದೇವರ ಆಶೀರ್ವಾದಗಳ ಪೂರ್ಣತೆಯನ್ನು ಅನುಭವಿಸುವುದನ್ನು ತಡೆಯುವ ಒಂದು ಅಡ್ಡ ಗೋಡೆಯಾಗಿದೆ. "ಆತನನ್ನು ಪದೇಪದೇ ಪರೀಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾವಿುಯನ್ನು ಕರಕರೆಗೊಳಿಸಿದರು." ಎಂದು ಕೀರ್ತನೆ 78:41 ಹೇಳುತ್ತದೆ. ಅದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ದೇವರು ಎಷ್ಟು ಶಕ್ತಿಶಾಲಿಯಾಗಿದ್ದರೂ ಮತ್ತು  ಆತನಿಗೆ ನಮ್ಮನ್ನು ಆಶೀರ್ವದಿಸುವ ಬಯಕೆಯಿದ್ದರೂ, ನಾವು ಆತನ ಕೈ ಮತ್ತು ಶಕ್ತಿಯನ್ನು ನಮ್ಮ ಜೀವನದಲ್ಲಿ ಮಿತಿಗೊಳಿಸಬಹುದು. ಹೇಗೆ? ಅಪನಂಬಿಕೆಯ ಮೂಲಕ.

ನಾವು ದೇವರ ವಾಗ್ದಾನಗಳನ್ನು ಅನುಮಾನಿಸಿದಾಗ, ಆತನು ನಮ್ಮ ಜೀವನದಲ್ಲಿ ಏನು ಮಾಡಬಹುದೊ ಅದನ್ನು ನಾವು ಮಿತಿಗೊಳಿಸುವವರಾಗುತ್ತೇವೆ. ನಾವು ಅನುಮಾನ ಮತ್ತು ಸಂದೇಹದ ಮೂಲಕ  ಕೆಡವಲಾಸಾಧ್ಯವಾದ  ಅಡ್ಡಗೋಡೆಗಳನ್ನು ನಿರ್ಮಿಸುತ್ತೇವೆ. ಸತ್ಯವೇದದ ಇಬ್ರಿಯ 11:6  ಹೇಳುತ್ತದೆ, "ಆದರೆ ನಂಬಿಕೆಯಿಲ್ಲದೆ, ಆತನನ್ನು ಮೆಚ್ಚಿಸುವುದು ಅಸಾಧ್ಯ, ಏಕೆಂದರೆ ದೇವರ ಬಳಿಗೆ ಬರುವವನು ಆತನು ಇದ್ದಾನೆ ಮತ್ತು ಆತನನ್ನು ಶ್ರದ್ಧೆಯಿಂದ ಹುಡುಕುವವರಿಗೆ ಪ್ರತಿಫಲ ನೀಡುವವನು ಎಂದು ನಂಬಬೇಕು." ಬೇರೆ ರೀತಿಯಲ್ಲಿ ಹೇಳುವುದಾದರೆ, ದೇವರಲ್ಲಿ  ಮತ್ತು ಆತನ ವಾಕ್ಯದಲ್ಲಿ ನಂಬಿಕೆಯಿಲ್ಲದೆ, ನಾವು ಆತನ ಕೈಯನ್ನು  ಮತ್ತು  ಆತನ  ಬಯಕೆಗಳನ್ನು ನಮ್ಮ ಜೀವನದಲ್ಲಿ ಮಿತಿಗೊಳಿಸುತ್ತೇವೆ.

ದೇವರು ತನ್ನ ಮಾರ್ಗವನ್ನು ಯಾರ ಮೇಲೂ ಬಲವಂತವಾಗಿ ಹೇರುವುದಿಲ್ಲ, ಆದರೆ ನಾವೆಲ್ಲರೂ ನಂಬಿಕೆಯ ಮೂಲಕ ದೇವರ ಆಶೀರ್ವಾದಗಳ ಹೊಸ ಆಯಾಮಗಳಿಗೆ ಹೆಜ್ಜೆ ಹಾಕುವವರಾಗಿದ್ದೇವೆ. ನಮಗಿರುವ ಒಳ್ಳೆಯ ಸುದ್ದಿ ಏನೆಂದರೆ ದೇವರ ಕೃಪೆಯಿಂದ ನಾವು ಅದನ್ನು ಮಾಡಬಹುದು. 

#1: ಅಪನಂಬಿಕೆಯ ಗೋಡೆಯನ್ನು ಕೆಡವಲು ಅತ್ಯಂತ ಶಕ್ತಿಶಾಲಿ ಮಾರ್ಗವೆಂದರೆ ದೇವರ ವಾಕ್ಯವನ್ನು ಧ್ಯಾನಿಸುವುದು. "ಆದ್ದರಿಂದ ನಂಬಿಕೆಯು ಕೇಳುವುದರಿಂದ ಬರುತ್ತದೆ, ಮತ್ತು ಕೇಳುವಿಕೆಯು ದೇವರ ವಾಕ್ಯದಿಂದ ಬರುತ್ತದೆ" ಎಂದು ಸತ್ಯವೇದದ ರೋಮ 10:17 ರಲ್ಲಿ ಹೇಳುತ್ತದೆ,  ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡುವ ಮೂಲಕ ದೇವರಲ್ಲಿ ನಮ್ಮ ನಂಬಿಕೆಯನ್ನು ನಿರ್ಮಿಸಿಕೊಳ್ಳಬೇಕಾದ ಜವಾಬ್ದಾರಿ ನಮಗಿದೆ. ಆಗ ನಾವು  ನಂಬಿಕೆಯ ಕತ್ತಿಯಿಂದ ನಮ್ಮ ಅಪನಂಬಿಕೆಯನ್ನು ಕತ್ತರಿಸುತ್ತೇವೆ  ಮತ್ತು ನಂಬಿಕೆಯು ದೇವರ ವಾಕ್ಯದ ಮೇಲೆ ನಿರ್ಮಿಸಲ್ಪಡುತ್ತೇವೆ  


#2: ಅಪನಂಬಿಕೆಯ ಗೋಡೆಯನ್ನು ಕೆಡವಲು ಇನ್ನೊಂದು ಮಾರ್ಗವೆಂದರೆ ಪ್ರಾರ್ಥನೆ. ಮಾರ್ಕ 9:23 ರಲ್ಲಿ, ಯೇಸು, "ನಂಬುವವನಿಗೆ ಎಲ್ಲವೂ ಸಾಧ್ಯ" ಎಂದು ಹೇಳಿದನು. ನಾವು ಪ್ರಾರ್ಥಿಸುವಾಗ, ದೇವರ ಮೇಲಿನ ನಮ್ಮ ಅವಲಂಬನೆಯನ್ನು ನಾವು ಒಪ್ಪಿಕೊಳ್ಳುವವರಾಗುತ್ತೇವೆ ಮತ್ತು ಆತನ ಶಕ್ತಿಯಲ್ಲಿ ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುತ್ತೇವೆ. ದೇವರಲ್ಲಿ  ಪ್ರಾರ್ಥಿಸುವುದು ಎಂದರೆ ಯುದ್ಧವನ್ನು ದೇವರಿಗೆ ಒಪ್ಪಿಸುವುದು ಎಂದರ್ಥ, ಆಗ ಆತನ ಪ್ರಬಲವಾದ ಕೈ ನಮ್ಮನ್ನು ರಕ್ಷಿಸುತ್ತದೆ. 

#3: ಆತ್ಮದಲ್ಲಿ ಪ್ರಾರ್ಥಿಸುವುದು ನಿಮ್ಮ ನಂಬಿಕೆಯನ್ನು ಬೆಳೆಸಿಕೊಳ್ಳುವ ಇನ್ನೊಂದು ಮಾರ್ಗವಾಗಿದೆ." ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ  ಇರ್ರಿ.. " ಎಂದು  ಸತ್ಯವೇದದ ಯೂದ 20 ಹೇಳುತ್ತದೆ. ನೀವು ಆತ್ಮನಲ್ಲಿ ಪ್ರಾರ್ಥಿಸುವಾಗ ನಿಮ್ಮ ನಂಬಿಕೆಯು ಬೆಳೆಯುತ್ತಾ ಹೋಗುತ್ತದೆ.

#4: ನಾವು ಪ್ರಬುದ್ಧರಾದ  ಆತ್ಮಭರಿತ ಕ್ರೈಸ್ತರೊಂದಿಗೆ ಸುತ್ತುವರೆದಿರುವ ಮೂಲಕವೂ ಅಪನಂಬಿಕೆಯ ಗೋಡೆಯನ್ನು ಕೆಡವಬಹುದು. "ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ."ಎಂದು ಇಬ್ರಿಯ 10:24-25 ಹೇಳುತ್ತದೆ. 

ನೀವು ಯಾರೊಂದಿಗೆ ಸಹವಾಸದಲ್ಲಿದ್ದೀರಿ ? ನಿಮ್ಮ ಹತ್ತಿರದ ಸ್ನೇಹಿತರು ಯಾರು? ನೀವು ಮುಂದೆ ಯಾರಾಗುತ್ತೀರಿ ಎಂಬುದಕ್ಕೆ ನಿಮ್ಮ ಒಡನಾಡಿಗಳು ಅತ್ಯಗತ್ಯ. ಆದ್ದರಿಂದ, ದೈವಿಕ ಸಹವಾಸವನ್ನು ಇಟ್ಟುಕೊಳ್ಳಿ. ಯಾವಾಗಲೂ ಚರ್ಚ್ ಸೇವೆಗಳಿಗೆ ಹಾಜರಾಗಿ ಮತ್ತು ನಿಮ್ಮ ಸುತ್ತಲೂ ನಂಬಿಕೆಯ ಬೆಂಕಿಯನ್ನು ಅನುಮತಿಸಿ. 

ಅಪನಂಬಿಕೆಯ ಗೋಡೆಯನ್ನು ಕೆಡವಬೇಕೆಂದರೆ ನಮ್ಮ ಕಡೆಯಿಂದ ಪ್ರಜ್ಞಾಪೂರ್ವಕವಾದ  ಪ್ರಯತ್ನದ ಅಗತ್ಯವಿದೆ.

Bible Reading: 1Samuel 8-9
ಪ್ರಾರ್ಥನೆಗಳು
ಪರಲೋಕದಲ್ಲಿರುವ ತಂದೆಯೇ , ನಿಮ್ಮ ವಾಕ್ಯದ ಸತ್ಯಕ್ಕಾಗಿ ಯೇಸುನಾಮದಲ್ಲಿ ನಿಮಗೆ ಸ್ತೋತ್ರ . ನನ್ನ ಜೀವಿತವನ್ನು  ನಿನ್ನ  ಹೆಜ್ಜೆಜಾಡಿನಲ್ಲಿ ಹಿಂಬಾಲಿಸಲು ಮತ್ತು ಹೊಂದಿಸಿಕೊಳ್ಳಲು ನೀನು ನನಗೆ ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿನ್ನಲ್ಲಿ ನನ್ನ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆಯೂ  ನಿನ್ನ ವಾಕ್ಯವನ್ನು ಯಾವಾಗಲೂ ಅಧ್ಯಯನ ಮಾಡುವಂತೆಯೂ  ನಿನ್ನ ಕೃಪೆಯನ್ನು ಅನುಗ್ರಹಿಸಬೇಕೆಂದು  ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ವಾಕ್ಯದ ಸತ್ಯವು ನನ್ನ ಆತ್ಮವನ್ನು ಭೇದಿಸುವಂತೆ ನಾನು ನನ್ನ ಹೃದಯವನ್ನು ತೆರೆದು ಕೊಡುತ್ತೇನೆ. ಇಂದಿನಿಂದ ನನ್ನ ನಂಬಿಕೆ ವಿಫಲವಾಗದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಜೀವನದಲ್ಲಿ ಇರುವ ಅಪನಂಬಿಕೆಯ ಪ್ರತಿಯೊಂದು ಗೋಡೆಯೂ ಯೇಸುನಾಮದಲ್ಲಿ  ಇಂದು ಮುರಿದುಹೋಗಲಿ. ಆಮೆನ್.

Join our WhatsApp Channel


Most Read
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -3
● ನಿಮ್ಮ ಅನುಭವವನ್ನು ವ್ಯರ್ಥ ಮಾಡಿಕೊಳ್ಳಬೇಡಿರಿ
● ಇತರರಿಗೆ ಸೇವೆ ಸಲ್ಲಿಸುವ ಮೂಲಕ ನಾವು ಅನುಭವಿಸುವ ಆಶೀರ್ವಾದಗಳು 
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ
● ಸ್ನೇಹ ವಿನಂತಿ: ಪ್ರಾರ್ಥನಾಪೂರ್ವಕವಾಗಿ ಆಯ್ಕೆಮಾಡಿ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್