ಅನುದಿನದ ಮನ್ನಾ
ಬೇರಿನೊಂದಿಗೆ ವ್ಯವಹರಿಸುವುದು
Thursday, 22nd of August 2024
2
1
170
Categories :
ಬಿಡುಗಡೆ (Deliverance)
" _ಅವನ ಬುಡವು ಕೆಳಗೆ ಒಣಗುವದು, ಅವನ ರೆಂಬೆಯು ಮೇಲೆ ಬಾಡುವದು."(ಯೋಬನು 18:16)
ಒಂದು ಮರದಲ್ಲಿ ಬೇರು ಎಂಬುದು ಕಣ್ಣಿಗೆ ಕಾಣಿಸುವಂತಹ ಹಾಗೂ ಕೊಂಬೆಗಳು ಕಣ್ಣಿಗೆ ಕಾಣುವಂತಹ ಭಾಗಗಳಾಗಿವೆ.
ಅದೇ ರೀತಿ ನಿಮ್ಮ ಆತ್ಮೀಕ ಜೀವಿತದಲ್ಲೂ (ಕಣ್ಣಿಗೆ ಕಾಣದಂತ )ನೀವು ಸಮೃದ್ಧಿ ಹೊಂದದೇ ಹೋದರೆ ನೀವು ಏನೇ ಕೆಲಸ ಮಾಡಿದರೂ (ಗೋಚರ) ಅದರಲ್ಲಿ ಜೀವಂತಿಕೆ ಇರುವುದಿಲ್ಲ.
ಅನೇಕರು ಕಾಣಿಸುವ ಸಂಗತಿಗಳಿಗೆ ಹೆಚ್ಚಾಗಿ ಗಮನ ಕೊಡುವವರಾಗಿದ್ದಾರೆ- ಅದೂ ಬೇಕಾದದ್ದೇ. ಆದಾಗಿಯೂ ಸತ್ಯವೇದವು ನಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಿಗೂ ಸಂಬಂಧಿಸಿರುವಂತ ಮೂಲವನ್ನು, ಆಗರವನ್ನು ಮತ್ತು ಬೇರನ್ನು ಕುರಿತು ಅರಿತುಕೊಳ್ಳ ಬೇಕಾದ ಮಹತ್ವವನ್ನು ಕಾಣಲು ನಮಗೆ ಸಹಾಯ ಮಾಡುತ್ತದೆ.
"ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು."(ಮತ್ತಾಯ 3:10)
ಕರ್ತನಾದ ಯೇಸುಕ್ರಿಸ್ತನು ಸ್ನಾನಿಕನಾದ ಯೋಹಾನನ ಸೇವೆಯನ್ನು ಕುರಿತು ವಿವರಿಸುವಾಗ ಮರದ ಬೇರಿಗೆ ಹಾಕುವ ಕೊಡಲಿಯ ಉಪಮೇಯವನ್ನು ಹೇಳುತ್ತಾನೆ. ನಾವು ಸಮಸ್ಯೆಗಳ ಸೂಚನೆಗಳು, ಚಿಹ್ನೆಗಳ ಮೇಲೇ ಮಾತ್ರ ನಮ್ಮ ಗಮನ ಹರಿಸದೇ ಸಮಸ್ಯೆಯ ಮೂಲಕ್ಕೆ ದಾಳಿ ಇಟ್ಟು ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸುವ ಕಡೆಗೆ ಲಕ್ಷ್ಯ ಕೊಡಬೇಕು ಎಂದು ಆತನು ಬಯಸುತ್ತಾನೆ.
ಚಿಹ್ನೆಗಳು ಮತ್ತು ಲಕ್ಷಣಗಳೊಡನೆ ವ್ಯವರಿಸುವಂಥದ್ದು ನಿಮಗೆ ತಾತ್ಕಾಲಿಕವಾದ ಪರಿಹಾರವನ್ನು ನೀಡಬಹುದು. ಆದರೆ ನಾವು ಸೈತಾನನ ಸುಳ್ಳುಗಳನ್ನು ನಂಬಲು ಆರಂಭಿಸಿದಂತೆ ಆ ಸಮಸ್ಯೆಗಳು ಮತ್ತೆ ಮತ್ತೆ ನಮ್ಮ ಜೀವಿತದಲ್ಲಿ ತಲೆದೋರುತ್ತವೆ.
ಇನ್ನೊಂದು ಕಡೆ, ಸಮಸ್ಯೆಯ ಮೂಲದೊಂದಿಗೆ ವ್ಯವಹರಿಸುವಂಥದ್ದು ನೋವಿನ ಹಾಗೂ ದೀರ್ಘಕಾಲಿಕ ಪ್ರಕ್ರಿಯೆ ಎನಿಸಬಹುದು. ಆದರೆ ವಾಸ್ತವವಾಗಿ ಅದು ನಿತ್ಯವಾದ ವ್ಯತ್ಯಾಸವನ್ನು ತರುವಂತಹ ಬದಲಾವಣೆಯನ್ನು ಉಂಟುಮಾಡುವಂತವುಗಳಾಗಿವೆ.
"ಆಹಾ, ಅವರಿಗೆ ಎದುರಾಗಿ ನಿಂತ ಅಮೋರಿಯರನ್ನು ನಾನೇ ಧ್ವಂಸಮಾಡಿದೆನು; ಆ ಶತ್ರುವು ದೇವದಾರು ಮರದಷ್ಟು ಎತ್ತರವಾಗಿ ಅಲ್ಲೋನ್ ಮರದ ಹಾಗೆ ದೃಢವಾಗಿ ಇದ್ದರೂ ಮೇಲೆ ಅದರ ಫಲವನ್ನು, ಕೆಳಗೆ ಅದರ ಬುಡವನ್ನು ನಾಶಪಡಿಸಿದೆನು. " ಎಂದು ಕರ್ತನು ಹೇಳುತ್ತಾನೆ. (ಆಮೋಸ 2:9)
ನೀವು ನಿಮ್ಮ ಜೀವಿತದ ಸಮಸ್ಯೆಗಳ ಬೇರಿನೊಂದಿಗೆ ವ್ಯವಹರಿಸುವಂತೆ ದೇವರನ್ನು ಅನುಮತಿಸುವುದಾದರೆ ಅದರ ಫಲಗಳು ಸಹ ನಾಶವಾಗುತ್ತವೆ. ಆಗ ಅದು ನಿಮಗೆ ನಿತ್ಯವಾದ ಬಿಡುಗಡೆಯನ್ನು ಕೊಡುತ್ತದೆ.
ಪ್ರಾರ್ಥನೆಗಳು
1) ತಂದೆಯಾದ ದೇವರೇ ನಾನು ಹಾದು ಹೋಗುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿರುವ ಬೇರನ್ನು ಕಂಡುಕೊಳ್ಳುವಂತೆ ಯೇಸು ನಾಮದಲ್ಲಿ ನನ್ನ ಕಣ್ಣುಗಳನ್ನು ತೆರೆಮಾಡು.
2). ತಂದೆಯಾದ ದೇವರೇ ನಾನು ಹಾದು ಹೋಗುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿರುವ ಬೇರಿನೊಂದಿಗೆ ವ್ಯವಹರಿಸುವ ಬಲವನ್ನು ಮತ್ತು ಕೃಪೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು.
3) ಓ ಕರ್ತನೇ, ನನ್ನ ಜೀವನದ ಅಸ್ಥಿವಾರಕ್ಕೆ ನಿನ್ನ ಪವಿತ್ರಾತ್ಮನ ಬೆಂಕಿ ಎಂಬ ಕೊಡಲಿಯನ್ನು ಕಳುಹಿಸಿ ಅಲ್ಲಿರುವ ಎಲ್ಲ ದುಷ್ಟತ್ವವನ್ನು ಯೇಸು ನಾಮದಲ್ಲಿ ನಾಶ ಮಾಡು.
4).ನನ್ನ ಹಾಗೂ ನನ್ನ ಕುಟುಂಬದ ಸದಸ್ಯರ ಜೀವಿತದಲ್ಲಿ ಸಮಸ್ಯೆಯನ್ನು ಉಂಟು ಮಾಡುತ್ತಿರುವ ಎಲ್ಲಾ ದುಷ್ಟನ ಬೇರುಗಳು ಯೇಸು ನಾಮದಲ್ಲಿ ಪವಿತ್ರಾತ್ಮನ ಬೆಂಕಿಯ ಕೊಡಲಿಯ ಪೆಟ್ಟಿನಿಂದ ನಿರ್ಮೂಲವಾಗಲಿ.
2). ತಂದೆಯಾದ ದೇವರೇ ನಾನು ಹಾದು ಹೋಗುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿರುವ ಬೇರಿನೊಂದಿಗೆ ವ್ಯವಹರಿಸುವ ಬಲವನ್ನು ಮತ್ತು ಕೃಪೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು.
3) ಓ ಕರ್ತನೇ, ನನ್ನ ಜೀವನದ ಅಸ್ಥಿವಾರಕ್ಕೆ ನಿನ್ನ ಪವಿತ್ರಾತ್ಮನ ಬೆಂಕಿ ಎಂಬ ಕೊಡಲಿಯನ್ನು ಕಳುಹಿಸಿ ಅಲ್ಲಿರುವ ಎಲ್ಲ ದುಷ್ಟತ್ವವನ್ನು ಯೇಸು ನಾಮದಲ್ಲಿ ನಾಶ ಮಾಡು.
4).ನನ್ನ ಹಾಗೂ ನನ್ನ ಕುಟುಂಬದ ಸದಸ್ಯರ ಜೀವಿತದಲ್ಲಿ ಸಮಸ್ಯೆಯನ್ನು ಉಂಟು ಮಾಡುತ್ತಿರುವ ಎಲ್ಲಾ ದುಷ್ಟನ ಬೇರುಗಳು ಯೇಸು ನಾಮದಲ್ಲಿ ಪವಿತ್ರಾತ್ಮನ ಬೆಂಕಿಯ ಕೊಡಲಿಯ ಪೆಟ್ಟಿನಿಂದ ನಿರ್ಮೂಲವಾಗಲಿ.
Join our WhatsApp Channel
Most Read
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಯೇಸುವನ್ನು ನೋಡುವ ಬಯಕೆ
● ಹೋಲಿಕೆಯ ಬಲೆ
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ದಿನ 26:40ದಿನಗಳ ಉಪವಾಸ ಪ್ರಾರ್ಥನೆ.
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು