ಅನುದಿನದ ಮನ್ನಾ
ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
Tuesday, 2nd of April 2024
0
0
303
Categories :
ಶಿಷ್ಯತ್ವ (Discipleship)
ನಿಯಮಿತವಾಗಿ ಸಹ -ವಿಶ್ವಾಸಿಗಳ ಗುಂಪಿಗೆ ಸಭೆಯಾಗಿ ಕೂಡಿಬರುವಂತದ್ದು ಕ್ರಿಸ್ತನ ಅನುಯಾಯಿಯಾಗಿ ಒಬ್ಬ ಕ್ರೈಸ್ತನಿಗೆ ಬಹಳ ಪ್ರಾಮುಖ್ಯವಾದ ಕಾರ್ಯ. ಸಭೆಗೆ ನಿಯಮಿತವಾಗಿ ಹೋಗದಿರುವಂಥದ್ದು ದೇವರ ವಾಕ್ಯವು ಏನು ಹೇಳುತ್ತದೆಯೋ ಅದನ್ನು ನಿರ್ಲಕ್ಷಿಸುವ ಕಾರ್ಯವಾಗಿದೆ.ಆದಾಗಿಯೂ ಭಾನುವಾರ ಬೆಳಗ್ಗೆ ಆರಾಧನೆಗಾಗಿ ನಿಗದಿತ ಸಮಯಕ್ಕೆ ಕೂಡಿಬರುವಂತದ್ದು ನಮ್ಮೆಲ್ಲರಿಗೂ ಒಂದು ಸವಾಲೇ ಸರಿ.
"ನನಗೆ ನಿಜವಾಗಿಯೂ ನಿಗದಿತ ಸಮಯಕ್ಕೆ ಸರಿಯಾಗಿ ಸಭೆಗೆ ಹೋಗುವ ಬಯಕೆ ಇದೆ. ಆದರೆ ಮುಂಚಿತವಾಗಿ ಕೈಗೊಂಡ ಕಾರ್ಯಗಳನ್ನು ಮುಗಿಸುವಂಥದ್ದು ನಿಜಕ್ಕೂ ಒಂದು ಹೋರಾಟವಾಗಿ ಬಿಟ್ಟಿದೆ." ಈ ಪದಗಳನ್ನು ನೀವೂ ಹಾಡುತ್ತಿದ್ದರೆ, ಅದು ನಿಮ್ಮನ್ನು ಬೇಸರಕ್ಕೆ ನೂಕದಿರಲಿ. ಯಾಕೆಂದರೆ ಅದೇ ದೋಣಿಯಲ್ಲಿಯೇ ನಿಮ್ಮಂತಹ ಅನೇಕರು ಇಂದು ಇದ್ದಾರೆ.
ನಾನಿಲ್ಲಿ ಹಲವಾರು ವರ್ಷಗಳಿಂದ ನಿಗದಿತ ಸಮಯಕ್ಕೆ ಸಭೆಗೆ ಹೋಗಲು ನನಗೆ ಸಹಕಾರಿಯಾದ ಉಚಿತ ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
(ಮತ್ತೊಮ್ಮೆ ಹೇಳುತ್ತಿದ್ದೇನೆ, ಇದರ ಮೂಲಕ ನಾನು ನಿಮ್ಮನ್ನು ನಿಂದಿಸುತ್ತಿಲ್ಲ ಬದಲಾಗಿ ದೇವರೊಂದಿಗೆ ನೀವು ಸರಿಯಾಗಿ ನಡೆಯಲು ಪ್ರೋತ್ಸಾಹಿಸುತ್ತಿದ್ದೇನೆ).
1.ನೀವು ಮಲಗುವ ವೇಳೆಯಲ್ಲಿ ಬದಲಾವಣೆ ಮಾಡಿಕೊಳ್ಳಿರಿ.
ಅನೇಕರಿಗೆ ಭಾನುವಾರದ ದಿನ ಹಾಸಿಗೆ ಬಿಟ್ಟು ಎದ್ದೇಳುವುದು ಎಂದರೆ ಬಹಳ ಕಷ್ಟಕರವಾದ ವಿಷಯ. ದೇವರು ನಿಮಗಾಗಿ ಕೊಟ್ಟ "ವಿಶ್ರಾಂತಿ ದಿನ"ವೂ ನಿಮ್ಮ "ನಿದ್ರೆ ದಿನ"ವಾಗಿ ಮಾರ್ಪಡದಿರಲಿ.ಇದೇ ರೀತಿಯ ಧ್ವನಿಯು ನಿಮಗೆ ಪ್ರತಿದ್ವನಿಸುತ್ತಿದ್ದರೆ ನನ್ನ ಜೀವಿತದಲ್ಲಿ ಕಾರ್ಯ ಮಾಡಿದ ಒಂದು ಧ್ವನಿಯನ್ನು ನಿಮಗೆ ಸಲಹೆಯನ್ನಾಗಿ ನೀಡಲು ನಾನು ಬಯಸುತ್ತೇನೆ. ಶನಿವಾರದ ರಾತ್ರಿ ತುಸು ಬೇಗ ಮಲಗಲು ಹೋಗಬೇಕು. ನಿಮಗೆ ಬೆಳಗ್ಗೆ ಬೇಗ ಏಳುವುದರಿಂದ ಸರಿಯಾಗಿ ನಿದ್ರೆಯಾಗಿಲ್ಲ ಎನಿಸುತ್ತಿದ್ದರೆ, ಸಭೆ ಮುಗಿಸಿಕೊಂಡು ಬಂದು ಮಧ್ಯಾಹ್ನ ಒಂದು ಕಿರು ನಿದ್ರೆ ಮಾಡುವುದು ನಿಜಕ್ಕೂ ನಿಮಗೆ ಸಹಕಾರಿಯಾಗುತ್ತದೆ. ಸತ್ಯವೇನಂದರೆ ತ್ಯಾಗವಿಲ್ಲದೆ ಯಾವ ಅದ್ಭುತವು ದೊರೆಯುವುದಿಲ್ಲ.
"ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು."(ಮಾರ್ಕ 1:35)
ನಾವು ಈ ದಿನ ನೋಡುತ್ತಿರುವ ಅನೇಕ ಹೆಸರುವಾಸಿಯಾಗಿರುವಂತಹ ವ್ಯಕ್ತಿಗಳೂ ಸಹ ಇಂದು ತಾವೇರಿರುವ ಸ್ಥಾನಕ್ಕೆ ಬರಲು ಬಹಳಷ್ಟು ತ್ಯಾಗ ಮಾಡಿರುತ್ತಾರೆ. ನಿಮ್ಮ ವಿಷಯದಲ್ಲಿ ಇದು ನಿದ್ರೆಯ ಸಮಯವನ್ನು ಹೊಂದಿಕೊಳ್ಳುವುದಷ್ಟೇ ಆಗಿದೆ
2.ನಿಮ್ಮ ಇಂಟರ್ನೆಟ್ ವೈಫೈಗಳನ್ನು ಸ್ಥಗಿತಗೊಳಿಸಿ.
ನೀವು ಇದನ್ನು ಈ ರೀತಿ ನೋಡಿದಾಗ ನೀವು ಹೀಗೆ ಹೇಳಬಹುದು.."ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, [24] ಆದರೆ ಎಲ್ಲವೂ ಭಕ್ತಿಯನ್ನು ಬೆಳಿಸುವದಿಲ್ಲ."(1ಕೊರಿಂಥದವರಿಗೆ 10:23-24)
ಇವೆಲ್ಲವೂ ಚಿಕ್ಕ ಮಕ್ಕಳಿಗೆ ಹೇಳೋ ಹಾಗಿದೆ ಎನಿಸಬಹುದು. ಆದರೆ ಇಂಟರ್ನೆಟ್ ವೈಫೈ ಅನ್ನು ಸ್ಥಗಿತಗೊಳಿಸಿ ಮಲಗಲು ಹೋಗಿ ನೋಡಿರಿ! ನಿಮಗೂ ನನ್ನ ಹಾಗೆ ಮಕ್ಕಳಿದ್ದರೆ ನಿಮಗೆ ನಾನು ಏನು ಹೇಳುತ್ತಿದ್ದೇನೆ ಅದು ಗೊತ್ತಾಗುತ್ತದೆ. ಮಕ್ಕಳು ಯಾವಾಗಲೂ ಶನಿವಾರದ ರಾತ್ರಿಯಲ್ಲಿ ಬಹಳ ಹೊತ್ತು ಸಾಮಾಜಿಕ ಜಾಲತಾಣಗಳನ್ನು ನೋಡುವುದರಲ್ಲಿಯೇ ಬಹಳ ಸಮಯ ಕಳೆಯುತ್ತಿರುತ್ತಾರೆ. ಮೊದಮೊದಲು ಇದನ್ನು ವಿರೋಧಿಸುತ್ತಾರೆ. ಆದರೆ ಶನಿವಾರ ರಾತ್ರಿಯಲ್ಲಿ ಒಳ್ಳೆಯ ನಿದ್ರೆ ಮಾಡಿ ಭಾನುವಾರ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋದಾಗ ಅವರ ವಿರೋಧವೆಲ್ಲಾ ಸ್ತುತಿ ಸ್ತೋತ್ರ ವಾಗಿ ಮಾರ್ಪಡುತ್ತದೆ.
3.ಭಾನುವಾರ ಸಭೆಗೆ ಹಾಕಿಕೊಳ್ಳುವ ಬಟ್ಟೆಗಳನ್ನು ಶನಿವಾರದ ರಾತ್ರಿಯಲ್ಲಿಯೇ ಆಯ್ಕೆ ಮಾಡಿ ಐರನ್ ಮಾಡಿಡಿ.
ಇದೊಂದು ನಿಜಕ್ಕೂ ದೊಡ್ಡ ಅಡೆತಡೆಯಾಗಿದ್ದು ನೀವು ಈ ಕಾರ್ಯವನ್ನು ಮಾಡಿ ಮುಗಿಸಿದರೆ ನೀವು ಅದೆಷ್ಟೋ ಸಮಯವನ್ನು ಭಾನುವಾರ ಬೆಳಗ್ಗೆ ಉಳಿಸುವವರಾಗಿರುತ್ತೀರಿ. ಮುಖ್ಯವಾಗಿ ನಿಮಗೆ ಕುಟುಂಬ (ಚಿಕ್ಕ ಮಕ್ಕಳು) ಇದ್ದಾಗ. ಶನಿವಾರ ರಾತ್ರಿಯೇ ಭಾನುವಾರಕ್ಕೆ ಬೇಕಾದ ಬಟ್ಟೆಗಳನ್ನು ಆಯ್ಕೆ ಮಾಡಿ ಐರನ್ ಮಾಡಿ ಸಿದ್ಧ ಮಾಡಿಟ್ಟುಕೊಂಡಿದ್ದರೆ ಮತ್ತು ಶೂ,ಸಾಕ್ಸ್ ಗಳನ್ನು ಮಾಸ್ಕ್ ಗಳನ್ನು ಇತ್ಯಾದಿ.. ಹೊಂದಿಸಿಕೊಂಡು ಇಟ್ಟುಕೊಂಡಿದ್ದರೆ ಇದು ಮರುದಿನ ಬೆಳಗ್ಗೆ ಆಗುವಂತಹ ಅನವಶ್ಯಕ ಗಡಿಬಿಡಿಯನ್ನು ತಪ್ಪಿಸುತ್ತದೆ.
"ಸಭೆಗೆ ಹೋಗುವಂತದ್ದು ಒಂದು ಸಂಪ್ರದಾಯವಲ್ಲ ಅದೊಂದು ನಮಗೆ ದೊರೆತ ಸೌಭಾಗ್ಯ". ಯೇಸು ಕ್ರಿಸ್ತನ ಮರಣ ಮತ್ತು ಪುನರುತ್ಥಾನದಿಂದ ನಮಗೆ ದೊರೆತ ರಕ್ಷಣೆಯೇ ಇಂದು ನಮಗೆ ದೇವರೊಂದಿಗೂ ದೇವರ ಜನರೊಂದಿಗೆ ಅನ್ಯೋನ್ಯತೆಯನ್ನು ತಂದುಕೊಟ್ಟಿದೆ. ಆತನನ್ನು ಹಿಂಬಾಲಿಸುತ್ತಿರುವವರ ಜೊತೆಗೆ ಸಮಯ ಕಳೆಯಲು ಸಹ ಇದು ಅವಕಾಶ ಮಾಡಿಕೊಟ್ಟಿದೆ. ಈ ಒಂದು ಮನಃಸ್ಥಿತಿಯನ್ನು ಕಾಯ್ದುಕೊಂಡು ಪ್ರತಿ ಭಾನುವಾರ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗಲು ಸಿದ್ದರಾಗಿರಿ.
ನಿಮ್ಮ ಯಾವ ಯಾವ ತಂತ್ರೋಪಾಯಗಳು ಭಾನುವಾರ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಸೇರಲು ನಿಮಗೆ ಸಹಾಯ ಮಾಡುತ್ತಿದೆ?. ದಯಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ಬರೆದು ಹಂಚಿಕೊಳ್ಳಿ.
ಪ್ರಾರ್ಥನೆಗಳು
ವರಪ್ರದನಾದ ಪವಿತ್ರಾತ್ಮ ದೇವರೇ ನಾನು ಬದಲಾವಣೆ ಹೊಂದಲು ಬೇಕಾಗಿರುವ ಈ ಸಂದೇಶವನ್ನು ನಾನು ಹೊಂದಿಕೊಳ್ಳಲು ನನ್ನ ಮನೋ - ನೇತ್ರಗಳನ್ನು ತೆರೆ ಮಾಡಿರಿ. ನನಗೂ ಮತ್ತು ನನ್ನ ಕುಟುಂಬಕ್ಕೂ ನಿಗದಿತ ಸಮಯಕ್ಕೆ ಸರಿಯಾಗಿ ಸಭೆಗೆ ಹೋಗಲು ಸಹಾಯ ಮಾಡಿರಿ. ನಾನು ಕೇವಲ ನನ್ನ ಬಾಯ ಮಾತುಗಳಿಂದ ಮಾತ್ರ ನಿಮ್ಮನ್ನು ಸನ್ಮಾನಿಸದೆ ನನ್ನ ಕಾರ್ಯಗಳಿಂದಲೂ ನಿಮ್ಮನ್ನು ಸನ್ಮಾನಿಸುತ್ತೇನೆ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. ತಂದೆಯೇ ಆಮೆನ್.
Join our WhatsApp Channel
Most Read
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II● ಕಟ್ಟಬೇಕಾದ ಬೆಲೆ
● ಸಮಾಧಾನದ ಮೂಲ :ಕರ್ತನಾದ ಯೇಸು
● ದೇವರಿಗೇ ಪ್ರಥಮ ಸ್ಥಾನ ನೀಡುವುದು #2.
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರು ಹೇಗೆ ಒದಗಿಸುತ್ತಾನೆ #1
● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I
ಅನಿಸಿಕೆಗಳು