ಅನುದಿನದ ಮನ್ನಾ
ಸ್ಥಿರತೆಯಲ್ಲಿರುವ ಶಕ್ತಿ
Wednesday, 2nd of October 2024
3
1
144
Categories :
ಶಿಷ್ಯತ್ವ (Discipleship)
"ಅದರಂತೆಯೇ ರೂತಳು ಅತ್ತೆಯ ಮನೆಯಲ್ಲಿದ್ದುಕೊಂಡು ಜವೆಗೋದಿಯ ಮತ್ತು ಗೋದಿಯ ಸುಗ್ಗಿ ತೀರುವವರೆಗೆ ಬೋವಜನ ಹೆಣ್ಣಾಳುಗಳ ಸಂಗಡಲೇ ಹೋಗಿ ಹಕ್ಕಲಾಯುತ್ತಿದ್ದಳು."(ರೂತಳು 2:23)
ಜವೆ ಗೋದಿ ಮತ್ತು ಗೋಧಿಯ ಕೊಯ್ಲ ಕಾಲ ಮುಗಿಯುವವರೆಗೂ ರೂತಳು ಪ್ರತಿದಿನ ತಪ್ಪದೆ ಹೊಲಗಳಲ್ಲಿ ಹಕ್ಕಲಾಯುತ್ತಿದ್ದಳು. ಅದು ಆಕೆಯ ಅತ್ತೆಗೆ ಆಕೆ ಸಹಕಾರ ನೀಡಲು ಮಾಡುತ್ತಿದ್ದ ಕಾರ್ಯವಾಗಿತ್ತು. ಇದು ಕೇವಲ ದಿನಚರಿಯಾಗಿದ್ದಾಗಲೂ ಅವಳು ಆ ಕೆಲಸವನ್ನು ಬಿಡದೆ ಸ್ಥಿರ ಚಿತ್ತದಿಂದ ಮಾಡುತ್ತಿದ್ದಳು.
ಯಾವುದಾದರೂ ಕೆಲಸವನ್ನು ನಿರಂತರವಾಗಿ ಮಾಡುವಂಥದ್ದು ದೊಡ್ಡ ನಂಬಿಕೆಯಿಂದಾಗುವ ಚಮತ್ಕಾರದಂತೆ ರೋಮಾಂಚನಕಾರಿಯಾದ ಕಾರ್ಯವಲ್ಲ. ಆದರೆ ಅದಕ್ಕೆ ಸಿಗುವ ಪ್ರತಿಫಲವೂ ಅದರಷ್ಟೇ ಮಹತ್ತರವಾಗಿರುತ್ತದೆ. ರೂತಳು ಬೋವಜನ ಹೊಲದಲ್ಲಿ ಸಾಕಷ್ಟು ಸಮಯಗಳಿಂದ ಕೊಯ್ಲು ಮಾಡುತ್ತಿದ್ದಳು. ಅವಳ ಜೊತೆ ಕೆಲಸ ಮಾಡುತ್ತಿದ್ದವರಿಗೆ ರೂತಳ ಹೆಸರು ತಿಳಿದಿತ್ತು. ಅಂತಹ ಕೆಲಸಗಾರರ ಗುಂಪಿನಿಂದಲೇ ಬೊವಜನು ರೂತಳನ್ನು ಆರಿಸಿಕೊಂಡನು.
"ಯಾವಾಗಲೂ ನ್ಯಾಯವನ್ನು ಕಾಪಾಡುವವರು ನೀತಿಯನ್ನು ಪಾಲಿಸುವವವರೂ ಧನ್ಯರು "(ಕೀರ್ತನೆಗಳು 106:3)
ಇಲ್ಲಿರುವ ಪದಗಳನ್ನು ಗಮನಿಸಿ "ಯಾವಾಗಲೂ" ಎಂದರೆ ಅದು ಸ್ಥಿರತೆ ಕುರಿತು ಮಾತನಾಡುತ್ತದೆ. ಸ್ಥಿರತೆಯಿಂದ ಕೂಡಿದ ನಡವಳಿಕೆಯು ದೇವರ ಆಶೀರ್ವಾದವನ್ನು ತಂದುಕೊಡುವುದಷ್ಟೇ ಅಲ್ಲದೆ ಮನುಷ್ಯರ ದಯೆಯನ್ನೂ ಆಕರ್ಷಿಸುತ್ತದೆ.
ರೂತಳ ಶಿಸ್ತು ಬೋವಜನೊಂದಿಗಿನ ಮತ್ತು ದೇವರೊಂದಿಗಿನ ಸಂಬಂಧದಲ್ಲಿ ವ್ಯತ್ಯಾಸ ಮೂಡಿಸಿತು. ಇದೇ ಸತ್ಯವೂ ನಮಗೂ ಅನ್ವಯಿಸುತ್ತದೆ.
ಯಾರೋ ಒಬ್ಬರು ಸರಿಯಾಗಿಯೇ ಹೇಳಿದ್ದಾರೆ. ಅದೇನೆಂದರೆ "ಯಾವುದಾದರೂ ಘಟನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತದ್ದು ಒಳ್ಳೆಯದೇ. ಆದರೆ ಅದರ ನಿರಂತರ ಪ್ರಕ್ರಿಯೆಯು ನಮ್ಮ ಜೀವಿತದ ಎಲ್ಲಾ ಆಯಾಮದಲ್ಲೂ ಬದಲಾವಣೆ ಮಾಡುತ್ತದೆ". ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ನಾವು ನಿಜವಾಗಿ ನಮ್ಮ ಜೀವಿತದಲ್ಲಿ ನೈಜವಾದ ಪ್ರಗತಿಯನ್ನು ನೋಡಬೇಕೆಂದರೆ ನಾವೀಗ ಏನನ್ನು ಮಾಡುತ್ತಿದ್ದೇವೆಯೋ ಆ ಕಾರ್ಯಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು.
ನಾವು ಒಂದು ಕೆಲಸವನ್ನು ನಿರಂತರವಾಗಿ ಮಾಡುತ್ತಿರುವಾಗ ಅವು ಅಭ್ಯಾಸಗಳಾಗಿ ರೂಪಿಸಲ್ಪಡುತ್ತದೆ. ದಿನೇ ದಿನೇ ಅದು ನಮ್ಮ ಸ್ವಭಾವವೇ ಆಗಿಬಿಡುತ್ತದೆ. ಆಟೋಮಿಕ್ ಪುಸ್ತಕದ ಲೇಖಕರಾದ ಜೇಮ್ಸ್ ಕ್ಲಿಯರ್ ರವರು " ನಾವು ನಮ್ಮ ಗುರಿಗಳ ಮಟ್ಟಕ್ಕೆ ನಾವು ಏರಲಾರೆವು: ನಮ್ಮ ವ್ಯವಸ್ಥೆಯ ಮಟ್ಟಕ್ಕೆ ಬೀಳುವವರಾಗಿದ್ದೇವೆ" ಎಂದು ಬರೆಯುತ್ತಾರೆ. ನಮ್ಮ ಅಭ್ಯಾಸಗಳು -ನಮ್ಮ ಶಿಸ್ತು ಮಾತ್ರವೇ ನಮ್ಮ ಜೀವಿತವನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತವೆ.
"ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು."(ಗಲಾತ್ಯದವರಿಗೆ 6:9). ಬೆಳೆಯು ಸುಮ್ಮನೆ ಏಕಾಏಕಿ ಬರುವುದಿಲ್ಲ ನಿರಂತರವಾದ ಬೀಜ ಬಿತ್ತನೆಯಿಂದಲೇ ಉಂಟಾಗುವಂತದ್ದು.
ಸ್ಥಿರತೆ ಎಂಬುದು ಉತ್ಸಾಹ ಹಾಗೂ ಅಭ್ಯಾಸಗಳನ್ನು ಜೊತೆಗೂಡಿಸುವ ಅಂಟಾಗಿದೆ. ಸ್ಥಿರತೆ ಇದ್ದರೆ ಇಷ್ಟವಿಲ್ಲದಿರುವಾಗಲೂ ಕಾರ್ಯ ಮಾಡಿಯೇ ತೀರುತ್ತೇವೆ. ಆದರೆ ಉತ್ಸಾಹ ಕುಂದಿ ಹೋದಾಗ ಕಾರ್ಯಗಳನ್ನು ಮುಂದೂಡುತ್ತಾ ಹೋಗುತ್ತೇವೆ. "ಸೋಮಾರಿಯ ಆಶೆಯು ವ್ಯರ್ಥ, ಉದ್ಯೋಗಿಯ ಆತ್ಮಕ್ಕೆ ಪುಷ್ಟಿ. " ಎಂದು ಜ್ಞಾನೋ 13:4 ನಮಗೆ ನೆನಪಿಸುತ್ತದೆ. ಶ್ರದ್ದೆಯಿಂದ, ನಿರಂತರವಾಗಿ ಕೆಲಸ ಮಾಡುವಂತದ್ದು ಫಲದಾಯಕವಾದದ್ದು.
" ನನ್ನಲ್ಲಿ ಯಾವ ಒಂದು ನಡವಳಿಕೆಯಲ್ಲಿ ಸ್ಥಿರತೆಯನ್ನು ನಾನು ಬೆಳೆಸಿಕೊಳ್ಳಬೇಕಾಗಿದೆ? " ಎಂದು ನಿಮ್ಮನ್ನು ನೀವೇ ಇಂದು ಪ್ರಶ್ನಿಸಿಕೊಳ್ಳಿ.
ಪ್ರಾರ್ಥನೆಗಳು
ತಂದೆಯೇ, ನೀನು ಯಾವಾಗಲೂ ನಿನ್ನ ವಾಗ್ದಾನವನ್ನು ಕಾಯ್ದು ಕೊಳ್ಳುವವನಾಗಿರುವುದಕ್ಕಾಗಿ ನಿನಗೆ ಸ್ತೋತ್ರ. ನಾನೂ ಕೂಡ ನನ್ನನ್ನು ಮುನ್ನಡಿಸುವ ನಿನ್ನ ವಾಕ್ಯಗಳನ್ನು ಕೈಗೊಂಡು ನಡೆಯುವಂತೆ ಯೇಸುನಾಮದಲ್ಲಿ ಸಹಾಯ ಮಾಡು. ಆಮೆನ್
Join our WhatsApp Channel
Most Read
● ಶ್ರೇಷ್ಠತೆಯ ಬೆನ್ನಟ್ಟುವಿಕೆ.● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ನಂಬಿಕೆಯ ಜೀವಿತ
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ದೈವಿಕ ಅನುಕ್ರಮ - 1
ಅನಿಸಿಕೆಗಳು