english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಆಂತರ್ಯದಲ್ಲಿ ಹುದುಗಿರುವ ನಿಧಿ
ಅನುದಿನದ ಮನ್ನಾ

ಆಂತರ್ಯದಲ್ಲಿ ಹುದುಗಿರುವ ನಿಧಿ

Wednesday, 29th of October 2025
1 1 127
Categories : ಆತ್ಮಿಕ ಯುದ್ಧ (Spiritual warfare) ಉದ್ದೇಶಗಳು (purpose) ನಂಬಿಕೆ (Faith)
ನಮ್ಮ ಆತ್ಮೀಕ ಪ್ರಯಾಣದ ಒಂದು ಹಂತದಲ್ಲಿ, ನಾವೆಲ್ಲರೂ ಕಾಣದ ಒಂದು ಯುದ್ಧದ ಭಾರವನ್ನು ಅನುಭವಿಸಿದ್ದೇವೆ -ಅದು ನಮ್ಮ ಮಾಂಸ ಮತ್ತು ಮೂಳೆಗಳನ್ನು ಗುರಿಯಾಗಿಸಿಕೊಂಡಂದ್ದಲ್ಲ , ಆದರೆ ನಮ್ಮ ಆತ್ಮಗಳನ್ನು ಗುರಿಯಾಗಿಸುವ ಆತ್ಮೀಕ ಯುದ್ಧವಾಗಿರುತ್ತದೆ. ನೀವು ಯಾಕೀಗೆ ಅಂತಹ ದಾಳಿಗೆ ತುತ್ತಾದಿರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಸತ್ಯ ಸರಳವಾದರೂ ಗಹನವಾಗಿದೆ: ನಿಮ್ಮೊಳಗೆ ಅಮೂಲ್ಯವಾದದ್ದೇನೂ ಇಲ್ಲದಿದ್ದರೆ ಸೈತಾನನು ನಿಮ್ಮ ಮೇಲೆ ಇಷ್ಟು ಕಠಿಣವಾಗಿ ದಾಳಿ ಮಾಡುತ್ತಿರಲಿಲ್ಲ. ಕಳ್ಳರು ಖಾಲಿ ಮನೆಗಳಿಗೆ ನುಗ್ಗಿ ಸಮಯವನ್ನು ವ್ಯರ್ಥ ಮಾಡಿಕೊಳ್ಳುವುದಿಲ್ಲ, ಹಾಗೆಯೇ ಶತ್ರುಗಳು ಹೆಚ್ಚಿನ ಸಾಮರ್ಥ್ಯ ಅಥವಾ ಉದ್ದೇಶವನ್ನು ಹೊಂದಿರದ ಜನರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. 

"ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ, ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ." (ಎಫೆಸ 6:12)

 ಪ್ರತಿಯೊಬ್ಬ ವಿಶ್ವಾಸಿಯ ಹೃದಯದಲ್ಲಿ ದೈವಿಕ ನಿಧಿ ಇದೆ -ಅದುವೇ ದೇವರು ನೀಡಿದ ವರಗಳು, ಉದ್ದೇಶ ಮತ್ತು ಸಾಮರ್ಥ್ಯ. ದೇವರು ನೀಡಿದ ಉದ್ದೇಶದಲ್ಲಿ ನಡೆಯುವ ವಿಶ್ವಾಸಿಯ ಬಲವೇನೇಂಬುದನ್ನು ಶತ್ರು ತಿಳಿದಿರುವುದ್ದರಿಂದ, ಅವರು ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪುವ ಮೊದಲೇ ಅವರನ್ನು ತಡೆಯುವ ಮತ್ತು ನಾಶಮಾಡುವ ಪ್ರಯತ್ನ ನಡೆಸುತ್ತಾನೆ. 

ಮೋಶೆಯ ಕಥೆಯನ್ನೇ ಪರಿಗಣಿಸಿ. ಅವನ ಹುಟ್ಟಿನಿಂದಲೇ, ಅವನ ಜೀವವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯಿತು. ಇಸ್ರೇಲೀಯರ ಸಂಖ್ಯೆ ಹೆಚ್ಚುತ್ತಿದೆ ಎಂದು ಭಯಪಟ್ಟು ಫರೋಹನು ಇಬ್ರಿಯ ಗಂಡು ಮಕ್ಕಳನ್ನೆಲ್ಲಾ ಕೊಲ್ಲಲು ಆದೇಶಿಸಿದ್ದನು. ಆದರೆ ದೇವರು ಮೋಶೆಗಾಗಿ ಒಂದು ಯೋಜನೆಯನ್ನು ಹೊಂದಿದ್ದನು, ಆ ಉದ್ದೇಶವು ಎಷ್ಟು ಮಹತ್ವದ್ದಾಗಿತ್ತೆಂದರೆ ಶತ್ರುಗಳು ಆರಂಭದಿಂದಲೇ ಅದನ್ನು ತಡೆಯಲು ಪ್ರಯತ್ನಿಸಿದರು. 

ಆದರೆ ಮೋಶೆಯು, ಎಲ್ಲಾ ಪ್ರತಿಕೂಲ ಪರಿಸ್ಥಿತಿಯ ವಿರುದ್ಧವಾಗಿ, ರಕ್ಷಿಸಲ್ಪಟ್ಟದ್ದು ಮಾತ್ರವಲ್ಲದೆ, ಫರೋಹನ ಅರಮನೆಯಲ್ಲಿ ಬೆಳೆದು ನಂತರ ತನ್ನ ಜನರನ್ನು ಬಿಡುಗಡೆಯತ್ತ ಕೊಂಡೊಯ್ದನು.

“ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆ ತಿಳಿದಿದ್ದೆನು; ನೀನು ಉದರದಿಂದ ಬರುವುದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು.(ಯೆರೆಮೀಯ 1:5)

ಮೋಶೆಯಂತೆಯೇ, ನೀವು ರೂಪುಗೊಳ್ಳುವ ಮೊದಲೇ ದೇವರಿಗೆ ನೀವು ಯಾರೆಂಬುದು ಗೊತ್ತುಂಟು. ನಿಮ್ಮೊಳಗಿನ ಸಾಮರ್ಥ್ಯವು ಅಪಾರವಾಗಿದೆ. ಆದರೆ ಇದನ್ನು ಗುರುತಿಸುವುದು ಯುದ್ಧದ ಅರ್ಧ ಭಾಗ ಮಾತ್ರ. ಉಳಿದ ಅರ್ಧವು ನಿಮ್ಮನ್ನು ನಿಮ್ಮ ಉದ್ದೇಶದಿಂದ ಹಳಿತಪ್ಪಿಸಲು ಪ್ರಯತ್ನಿಸುವ ಈ ಅನಿವಾರ್ಯ ಆತ್ಮೀಕ ಯುದ್ಧಕ್ಕೆ ಸಿದ್ಧತೆ ನಡೆಸುವುದಾಗಿದೆ. 

ಹಾಗಾದರೆ, ನೀವು  ದೃಢವಾಗಿ ನಿಂತು ಒಳಗಿನ ನಿಧಿಯನ್ನು  ರಕ್ಷಿಸಿಕೊಳ್ಳುವುದು ಹೇಗೆ?

 1. ದೇವರು ಅನುಗ್ರಹಿಸುವ ಪೂರ್ಣ ರಕ್ಷಾಕವಚದಿಂದ ನಿಮ್ಮನ್ನು ಸಜ್ಜುಗೊಳಿಸಿಕೊಳ್ಳಿ:

 "ನೀವು ಸೈತಾನನ ಕುತಂತ್ರಗಳ ವಿರುದ್ಧ ನಿಮ್ಮ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ದೇವರು ಅನುಗ್ರಹಿಸುವ ಸರ್ವಾಂಗ ರಕ್ಷಾಕವಚವನ್ನು ಧರಿಸಿಕೊಳ್ಳಿ." - ಎಫೆಸ 6:11. ಇದರಲ್ಲಿ ಸತ್ಯ, ನೀತಿ, ಸಮಾಧಾನದ ಸುವಾರ್ತೆ, ನಂಬಿಕೆ, ರಕ್ಷಣೆ ಮತ್ತು ದೇವರ ವಾಕ್ಯಗಳು ಒಳಗೊಂಡಿವೆ. ಪ್ರತಿಯೊಂದು ತುಣುಕು ನಮ್ಮನ್ನು ರಕ್ಷಿಸಲು ಮತ್ತು ಸಬಲೀಕರಣಗೊಳಿಸಲು ಸಹಾಯ ಮಾಡುತ್ತದೆ. 

2. ವಾಕ್ಯದಲ್ಲಿ ಬೇರೂರಿ: 
ಬೈಬಲ್ ಕೇವಲ ಒಂದು ಪುಸ್ತಕವಲ್ಲ; ಅದು ನಿಮ್ಮ ಆಯುಧ. ಯೇಸು ಅರಣ್ಯದಲ್ಲಿ ಸೈತಾನನ ಪ್ರಲೋಭನೆಗಳನ್ನು "ಇದು ಬರೆಯಲ್ಪಟ್ಟಿದೆ..." ಎಂಬ ದೇವರವಾಕ್ಯದಿಂದ ಹೋರಾಡಿದನು. ವಾಕ್ಯದಲ್ಲಿ ಚೆನ್ನಾಗಿ ಪರಿಣತಿ ಹೊಂದಿರುವುದರಿಂದ ಶತ್ರುವಿನ ಸುಳ್ಳುಗಳನ್ನು ಎದುರಿಸಲು ನಿಮಗೆ ಅದು ಅವಕಾಶ ನೀಡುತ್ತದೆ. ಸತ್ಯ. 

3. ಪ್ರಾರ್ಥನಾಶೀಲ ಜೀವನವನ್ನು ಬೆಳೆಸಿಕೊಳ್ಳಿ: 
ಸೈನಿಕನು ಬೇಸ್‌ನೊಂದಿಗೆ ಸಂವಹನವನ್ನು ನಿರ್ವಹಿಸುವಂತೆಯೇ, ನಾವು ದೇವರೊಂದಿಗೆ ನಮ್ಮ ಸಂವಹನವನ್ನು ಕಾಪಾಡಿಕೊಳ್ಳಬೇಕು. ಪೌಲನು "ಎಡೆಬಿಡದೆ ಪ್ರಾರ್ಥಿಸು" ಎಂದು ಸಲಹೆ ನೀಡುತ್ತಾನೆ. (1 ಥೆಸಲೊನೀಕ 5:17). ಪ್ರತಿಯೊಂದು ಸನ್ನಿವೇಶದಲ್ಲೂ, ಪ್ರಾರ್ಥನೆಯ ಮೂಲಕ ದೇವರ ಕಡೆಗೆ ತಿರುಗಿಕೊಳ್ಳಿ. ಇದು ಕಮಾಂಡರ್-ಇನ್-ಚೀಫ್‌ ಜೊತೆಗೆ ಸಾಧಿಸಲಿರುವ ನಮ್ಮ ನೇರ ಮಾರ್ಗವಾಗಿದೆ.

4. ನೀತಿವಂತರ ಜೊತೆ ಸಹವಾಸದಲ್ಲಿರಿ: 
ನಿಮ್ಮ ಉನ್ನತಿಗೇರಿಸುವ ಬಯಕೆಯಿರುವ, ಸಲಹೆ ನೀಡುವ ಮತ್ತು ಪ್ರಾರ್ಥಿಸುವವರೊಂದಿಗೆ ಸಹವಾಸ ಮಾಡಿ. "ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುವಂತೆ, ಒಬ್ಬ ವ್ಯಕ್ತಿಯು ಇನ್ನೊಬ್ಬನನ್ನು ಹರಿತಗೊಳಿಸುತ್ತಾನೆ." (ಜ್ಞಾನೋಕ್ತಿ 27:17).

 ಯುದ್ಧದ ಸಮಯದಲ್ಲಿ, ನಿಮ್ಮ ಬೆನ್ನ ಹಿಂದೆ ನಿಲ್ಲುವಂತ ಒಂದು ತಂಡವನ್ನು ಹೊಂದಿರುವುದು ಅಮೂಲ್ಯವಾದುದು.

"ಮಣ್ಣಿನ ಮಡಿಕೆಯಂತಿರುವ ನಮ್ಮಲ್ಲಿ ಈ ನಿಕ್ಷೇಪವನ್ನು ಇಡಲ್ಪಟ್ಟಿರುವುದರಿಂದ ಇಂತಹ ಮಹಾಶಕ್ತಿಯು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂಬುದು ಸ್ಪಷ್ಟವಾಗಿದೆ. ." (2 ಕೊರಿಂಥ 4:7) 

ಈ ಯುದ್ಧಗಳ ಮಧ್ಯೆದಲ್ಲೂ, ನೀವು ದಾಳಿಗೆ ಒಳಗಾಗಿದ್ದೀರಿ ಎಂಬ ಅಂಶವೇ ನಿಮ್ಮೊಳಗೆ ನಿಧಿ ಇದೆ ಎಂಬುದರ ದೃಢೀಕರಣವಾಗಿದೆ ಎಂಬುದನ್ನು ನೆನಪಿಡಿ. ಪ್ರತಿಯೊಂದು ಪರೀಕ್ಷೆ ಮತ್ತು ಪ್ರಲೋಭನೆಯು ದೇವರ ರಾಜ್ಯದಲ್ಲಿ ನಿಮ್ಮ ಮೌಲ್ಯದ ಖಾತ್ರಿಪಡಿಸುವಂತದ್ದಾಗಿದೆ. ಶತ್ರು ಎಂದಿಗೂ ಖಾಲಿ ಪಾತ್ರೆಗಳ ಮೇಲೆ ತನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ. 

Bible Reading: Luke 5-6
ಪ್ರಾರ್ಥನೆಗಳು
ಪರಲೋಕದಲ್ಲಿರುವ ಪ್ರೀತಿಯುಳ್ಳ ತಂದೆಯೇ, ನಮ್ಮಲ್ಲಿ ನಿಮ್ಮ ದೈವಿಕ ಕಿಡಿಯನ್ನು ಹೊತ್ತಿಸಿ. ಜೀವನದ ಎಲ್ಲ ಯುದ್ಧಗಳ ನಡುವೆಯೂ, ನೀವು ನಮ್ಮೊಳಗೆ ಹುಡುಗಿಸಿಟ್ಟಿರುವ ನಿಧಿಯನ್ನು ನಾವು ಗುರುತಿಸಿಕೊಳ್ಳುವಂತಾಗಲಿ. ನಾವು ಮಾಡುವ ಎಲ್ಲದರಲ್ಲೂ ನಿಮ್ಮ ಪ್ರೀತಿ ಮತ್ತು ಉದ್ದೇಶವನ್ನು ಪ್ರತಿಬಿಂಬಿಸುವಂತೆ ನಮಗೆ ಯೇಸುನಾಮದಲ್ಲಿ ಸಹಾಯ ಮಾಡಿ. ಆಮೆನ್.

Join our WhatsApp Channel


Most Read
● ಸಮರುವಿಕೆಯ ಕಾಲ - 2
●  ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪ್ರಾರ್ಥನೆಯಿಲ್ಲದಿರುವುದು ದೇವದೂತರ ಚಟುವಟಿಕೆಗೆ ಅಡ್ಡಿಯಾಗುತ್ತದೆ
● ಗೌರವ ಮತ್ತು ಮೌಲ್ಯ
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ತಡೆಗಳನ್ನೊಡ್ಡುವ ಗೋಡೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್