ಅನುದಿನದ ಮನ್ನಾ
ಕೆಂಪು ದೀಪದ ಎಚ್ಚರಿಕೆ ಗಂಟೆ
Friday, 14th of June 2024
3
3
283
Categories :
ಸಮೃದ್ಧಿ (Prosperity)
"ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಸಕಲಾತಿ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು ಪ್ರತಿದಿನವೂ ವೈಭವದೊಡನೆ ಸುಖಸಂತೋಷಪಡುತ್ತಿದ್ದನು. ಅವನ ಮನೇ ಬಾಗಿಲಲ್ಲಿ ಲಾಜರನೆಂಬ ಒಬ್ಬ ಭಿಕ್ಷಗಾರನು ಬಿದ್ದುಕೊಂಡಿದ್ದನು. ಇವನು ಮೈತುಂಬಾ ಹುಣ್ಣೆದ್ದವನು; ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು; ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುವವು.
ಹೀಗಿರುವಲ್ಲಿ ಸ್ವಲ್ಪ ಕಾಲದ ಮೇಲೆ ಆ ಭಿಕ್ಷಗಾರನು ಸತ್ತನು; ದೇವದೂತರು ಅವನನ್ನು ತೆಗೆದುಕೊಂಡುಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಆ ಐಶ್ವರ್ಯವಂತನು ಸಹ ಸತ್ತನು; ಅವನಿಗೆ ಉತ್ತರಕ್ರಿಯೆಗಳು ಆದವು.ಅವನು ಪಾತಾಳದೊಳಗೆ ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಇವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿ - ತಂದೆಯೇ, ಅಬ್ರಹಾಮನೇ, ನನ್ನ ಮೇಲೆ ದಯವಿಟ್ಟು ಲಾಜರನನ್ನು ಕಳುಹಿಸು; ಅವನು ತನ್ನ ತುದಿಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ; ಈ ಉರಿಯಲ್ಲಿ ಸಂಕಟಪಡುತ್ತೇನೆ ಎಂದು ಕೂಗಿ ಹೇಳಿದನು.
25ಆದರೆ ಅಬ್ರಹಾಮನು - ಕಂದಾ, ನೀನು ಆಶಿಸಿದ ಸುಖವನ್ನು ನಿನ್ನ ಜೀವಮಾನದಲ್ಲಿ ಹೊಂದಿದಿ; ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ."(ಲೂಕ 16:19-25)
ಶ್ರೀಮಂತರಾಗಿರುವುದು ಅಥವಾ ಆರ್ಥಿಕವಾಗಿ ಸುಭದ್ರವಾಗಿರುವುದರಲ್ಲಿ ತಪ್ಪೇನಿಲ್ಲ. ವಾಸ್ತವ ವಿಷಯವೇನೆಂದರೆ "ಕರ್ತನು ತನ್ನ ಸೇವಕನ ಸಮೃದ್ಧಿಯಲ್ಲಿ ಸಂತೋಷವನಾಗಿದ್ದಾನೆ" ಎಂದು ದೇವರ ವಾಕ್ಯ ಹೇಳುತ್ತದೆ. (ಕೀರ್ತನೆ 35:27b). ಆದರೆ ಇಲ್ಲಿ ಸಮಸ್ಯೆ ಏನೆಂದರೆ ಜನರು ದೇವರ ಮೇಲೆ ಎಲ್ಲದಕ್ಕೂ ಅವಲಂಬಿತರಾಗದೇ ಆತನ ಜನರ ಮತ್ತು ಅವರ ಅಗತ್ಯಗಳ ಬಗ್ಗೆ ಅಸಡ್ಡೆ ತೋರಿ ತಮ್ಮ ಸ್ವಂತ ಜೀವನವನ್ನು ಮಾತ್ರ ಜೀವಿಸುವಂತದ್ದಾಗಿದೆ. ನಮ್ಮ ಇಂದಿನ ವಾಕ್ಯಧ್ಯಾನದಲ್ಲಿ ನಾವು ಓದಿದಂತೆ ಐಶ್ವರ್ಯವಂತನು ಅವನು ಐಶ್ವರ್ಯವಂತನಾಗಿದ್ದಕ್ಕೆ (ಇಂದು ಅನೇಕರು ತಪ್ಪಾಗಿ ಬೋದಿಸುವ ಪ್ರಕಾರ) ಅವನು ಶಿಕ್ಷೆಗೆ ಗುರಿಯಾಗಲಿಲ್ಲ. ಆದರೆ ಅವನು ಬಡಪಾಯಿಯಾದ ಲಾಜರಸನಿಗೆ ಸಹಾಯ ಮಾಡಬಹುದಾದರೂ ತನ್ನ ಸಹಾಯ ಹಸ್ತವನ್ನು ಚಾಚದೆ ಹೋದದ್ದಕ್ಕಾಗಿ ಪಾತಾಳಕ್ಕೆ ದೊಬ್ಬಲ್ಪಟ್ಟನು.
ಲೌಕಿಕ ವಸ್ತುಗಳನ್ನು ಪ್ರೀತಿ ಮಾಡುವಂತಹ ಒಬ್ಬ ಮನುಷ್ಯನಿದ್ದನು. ಅವನು ತಾನು ಸಂಗ್ರಹಿಸಬಹುದಾದ ಎಲ್ಲ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದನು. ಆದರೆ ಒಂದು ದಿನ ಮನುಷ್ಯನು ಸತ್ತನು. ಮರಣೋತ್ತರ ಪರೀಕ್ಷೆ ನಡೆಸುವಾಗ ಆ ದೇಹದಲ್ಲಿ ಹೃದಯವಿಲ್ಲದಿರುವುದು ಪತ್ತೆಯಾಯಿತು. ಅವನ ಸ್ವಭಾವವನ್ನು ಅರಿತವರಾಗಿದ್ದ ಅವನ ಸ್ನೇಹಿತರು ಓಡಿ ಹೋಗಿ ಅವನ ಖಜಾನೆ ಕೋಣೆಯನ್ನು ಹುಡುಕಿದರು. ಅವರು ಅಂದುಕೊಂಡಂತೆ ಅವನು ಒಟ್ಟುಗೂಡಿಸಿದ್ದ ಎಲ್ಲಾ ವಸ್ತುಗಳ ಮಧ್ಯೆ ಅವನ ರಕ್ತ ಸಿಕ್ತವಾದ ಹೃದಯ ಸಿಕ್ಕಿತು.
ಈ ಕಥೆಯ ನೀತಿ ಪಾಠ : ನಿಮ್ಮ ಗಂಟೆಲ್ಲಿದೆಯೋ ನಿಮ್ಮ ಹೃದಯವೂ ಅಲ್ಲೇ ಇರುತ್ತದೆ. ಈ ಮೇಲಿನ ಕಾಲ್ಪನಿಕ ಕಥೆಯಲ್ಲಿ ಹೇಳುವುದಂತದ್ದೆಲ್ಲಾ ಲೌಕಿಕ ಸಂಪತ್ತಿನ ಮೇಲೆ ಮನಸ್ಸಿಡುವುದರ ಕುರಿತದ್ದಾಗಿದೆ. ಈ ಭೂಲೋಕದ ಎಲ್ಲಾ ಸಂಪತ್ತನ್ನು ನೋಡುವಾಗ "ಇದನ್ನು ನೀವು ತೆಗೆದುಕೊಂಡು ಹೋಗಲಾಗುವುದಿಲ್ಲ" ಎಂಬ ದೃಷ್ಟಿಕೋನದಲ್ಲಿ ನೋಡಬೇಕು. ದೇವರು ಮತ್ತು ದೇವರ ವಾಕ್ಯವಿಲ್ಲದ ಸಂಪತ್ತು ನಿತ್ಯತ್ವದ ಬೆಳಕಿನಲ್ಲಿ ನೋಡಿದಾಗ ಬಹಳ ಅಪಾಯಕಾರಿಯಾದದ್ದು.
ಪ್ರಾರ್ಥನೆಗಳು
Father, teach me to use my prosperity for Your Glory. In Jesus' Name. Amen
Join our WhatsApp Channel
Most Read
● ನಂಬಿಕೆ ಎಂದರೇನು ?● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ದೈವೀಕ ಶಿಸ್ತಿನ ಸ್ವರೂಪ: 2
● ದ್ವಾರ ಪಾಲಕರು / ಕೋವರ ಕಾಯುವವರು
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಸಾಧನೆಯ ಪರೀಕ್ಷೆ.
ಅನಿಸಿಕೆಗಳು