ಅನುದಿನದ ಮನ್ನಾ
ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
Sunday, 27th of October 2024
1
0
9
Categories :
ಅಂತಿಮ ಸಮಯ (End Time)
ಪ್ರವಾದನ ವಾಕ್ಯ (Prophetic word)
ಒಂದು ದಿನ ಯೇಸು ಎಣ್ಣೆ ಮರದ ಗುಡ್ಡದ ಮೇಲೆ ಕುಳಿತಿದ್ದಾಗ, ಆತನ ಶಿಷ್ಯರು ಆತನ ಬಳಿಗೆ ವೈಯಕ್ತಿಕವಾಗಿ ಬಂದು ಅಂತ್ಯಕಾಲದ ಸೂಚನೆಗಳ ಕುರಿತು ಕೇಳಿದರು. ಕರ್ತನಾದ ಯೇಸು ಆಗ ನಮಗೆ ಏಳು ಮಹತ್ವಪೂರ್ಣವಾದ ಪ್ರವಾದನಾ ಸೂಚನೆಗಳನ್ನು ಕೊಟ್ಟನು, ಅದು ಈ ಲೋಕದ ಕಡೆಯ ಗಳಿಗೆಯಲ್ಲಿ ನಡೆಯುವಂತಾದ್ದಾಗಿದೆ .
"ಯೇಸು ಅವರಿಗೆ ಉತ್ತರವಾಗಿ ಹೇಳಿದ್ದೇನೆಂದರೆ, “ಯಾರೊಬ್ಬರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದಿರಿ. ಏಕೆಂದರೆ, ನನ್ನ ಹೆಸರಿನಲ್ಲಿ ಅನೇಕರು ಬಂದು, ‘ನಾನು ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು."(ಮತ್ತಾ 24:4-5)
ಅಂತ್ಯಕಾಲದಲ್ಲಿ ಅನೇಕರು ಮೋಸಹೋಗುತ್ತಾರೆ ಎಂದು ಸತ್ಯವೇದವು ನಮಗೆ ಸ್ಪಷ್ಟವಾಗಿ ಹೇಳುತ್ತದೆ. ಒಬ್ಬ ವ್ಯಕ್ತಿಯು ಮೋಸಗೊಳ್ಳುವ ಒಂದು ವಿಧಾನವೆಂದರೆ ಅವರು ಕೇಳಬೇಕಾದದ್ದನ್ನು ಕೇಳುವ ಬದಲು ಅವರು ಕೇಳಲು ಬಯಸಿದ್ದನ್ನು ಕೇಳಲು ಹೋಗುವಂತಾದ್ದಾಗಿದೆ. ಅಂತಹ ಜನರು ದೇವರ ವಾಕ್ಯವನ್ನು ಸ್ವತಃ ಓದಲು ಅಥವಾ ಅಧ್ಯಯನ ಮಾಡುವ ಕುರಿತು ಎಂದಿಗೂ ಯೋಚಿಸುವುದಿಲ್ಲ ಎಂದು ಇಷ್ಟು ವರ್ಷಗಳಲ್ಲಿ, ನಾನು ಕಂಡುಕೊಂಡಿದ್ದೇನೆ. ಅಲ್ಲದೆ, ಅವರು ನಿಜವಾಗಿಯೂ ಯಾವುದೇ ಮಾರ್ಗದರ್ಶಕರ ಕೈ ಕೆಳಗೆ ತಮ್ಮನ್ನು ಒಗ್ಗಿಸಿಕೊಳ್ಳುವುದೂ ಇಲ್ಲ. ಅವರು ತಮಗೆ ಯಾವುದು ಅನುಕೂಲ ಅನಿಸುತ್ತದೋ ಅದನ್ನು ಮಾತ್ರವೇ ಮಾಡುತ್ತಾರೆ.
ಈ ಜನರು ದೇವರ ವಾಕ್ಯವನ್ನು ಸ್ವತಃ ಅಧ್ಯಯನ ಮಾಡಿ ಕಲಿಯದೇ ದೇವರವಾಕ್ಯವನ್ನು ಕಲಿತುಕೊಳ್ಳಲು ಇತರರ ಮೇಲೆಯೇ ಅವಲಂಬಿತರಾಗಿರುತ್ತಾರೆ. ಜನರ ಈ ಸ್ವಭಾವವು ತಮ್ಮ ಲಾಭಕ್ಕಾಗಿ ದೇವರ ವಾಕ್ಯವನ್ನು ತಿರುಚುವಂತ ಅನೇಕ ಮೋಸಗಾರರನ್ನು ಹುಟ್ಟುಹಾಕುವಂತೆ ಮಾಡುತ್ತದೆ. ಈ ಜನರು ಇಂತಹ ಬೋದಕರುಗಳ ವೈಯಕ್ತಿಕ ಜೀವನದಲ್ಲಿ ಪ್ರದರ್ಶಿತವಾಗುವ ಪವಿತ್ರಾತ್ಮನ ಫಲಗಳ ಮೂಲಕ ಆ ಬೋದಕರು ಎಂತವರು ಎಂದು ಗುರುತಿಸುವ ಬದಲು ಆ ಬೋದಕರ ಉನ್ನತ ಪದನಾಮಗಳನ್ನು ಮತ್ತು ಹೊಳೆಯುವ ಅವರ ಜೀವನಶೈಲಿಯನ್ನು ನೋಡಿ ಮರುಳಾಗಿ ಅವರ ಸುವಾರ್ತೆಯನ್ನು ಅನುಸರಿಸುವುದನ್ನು ನಾನು ನೋಡಿದ್ದೇನೆ
"ನೀವು ಮೋಸಹೋಗದಂತೆ ಎಚ್ಚರಿಕೆಯಿಂದಿರ್ರಿ " ಎಂದು ಯೇಸು ಸ್ಪಷ್ಟವಾಗಿ ಎಚ್ಚರಿಸಿದ್ದಾನೆ. ಆದ್ದರಿಂದ, "ನನ್ನನ್ನು ಯಾವುದೇ ವ್ಯಕ್ತಿಯು ದಾರಿತಪ್ಪಿಸಲು ಅಥವಾ ಮೋಸಗೊಳಿಸಲು ಸಾಧ್ಯವಿಲ್ಲ" ಎಂದು ಯೋಚಿಸುವಂತದ್ದು ಮೂರ್ಖತನ ಮತ್ತು ಅಪಾಯಕಾರಿಯಾದ ಸಂಗತಿಯಾಗಿದೆ. ದೇವರ ಪರಿಪೂರ್ಣ ಸೃಷ್ಟಿಯಾಗಿದ್ದ ಮತ್ತು ಪರಿಪೂರ್ಣ ವಾತಾವರಣದಲ್ಲಿ ವಾಸಿಸುತ್ತಿದ್ದ ಹವ್ವಳನ್ನೇ ಮೋಸಗೊಳಿಸಲು ಸೈತಾನನಿಗೆ ಸಾಧ್ಯವಾಯಿತು. ಆದ್ದರಿಂದ, ಈ ಅಂತ್ಯಕಾಲದಲ್ಲಿ ನಾವು ಬಹಳ ಜಾಗರೂಕರಾಗಿರಬೇಕು.
ಪ್ರಾಯೋಗಿಕವಾಗಿ , ನಿಮ್ಮಲ್ಲಿ ನೀವೇ ಈ ಪ್ರಬಲವಾದ ಪ್ರಶ್ನೆಗಳನ್ನು ಕೇಳಿಕೊಳ್ಳಿ:
ಬೋದಿಸುತ್ತಿರುವ ವ್ಯಕ್ತಿಯು ಯೇಸುವಿನ ಹೆಸರನ್ನು ಘನ ಪಡಿಸುತ್ತಿದ್ದಾನೋ ಅಥವಾ ತನ್ನನ್ನು ತಾನೇ ಪ್ರಚಾರ ಮಾಡಿಕೊಳ್ಳುತ್ತಿದ್ದಾನೋ?
ಆ ವ್ಯಕ್ತಿಯು ಬೋದಿಸುವ ಮತ್ತು ಉಪದೇಶಿಸುವ ವಿಚಾರಗಳು ದೇವರ ವಾಕ್ಯವೊ ?
ಕೊನೆಯದಾಗಿ, ಆ ವ್ಯಕ್ತಿಯ ವೈಯಕ್ತಿಕ ಜೀವನ (ವೇದಿಕೆಯ ಮೇಲಿನ ಜೀವನವಲ್ಲ) ದೇವರ ವಾಕ್ಯಕ್ಕೆ ಅನುಗುಣವಾಗಿದೆಯೇ?
ಪ್ರಾರ್ಥನೆಗಳು
ತಂದೆಯೇ, ನಿಮ್ಮ ಆತ್ಮನ ಬಲದಲ್ಲಿ ನಾನು ಕಾರ್ಯನಿರ್ವಹಿಸಲು ಅಗತ್ಯವಿರುವ ಧೈರ್ಯವನ್ನು ನನಗೆ ಅನುಗ್ರಹಿಸು. ಅಲ್ಲದೆ, ಶತ್ರುಗಳ ಸುಳ್ಳನ್ನು ಕಂಡುಹಿಡಿದುಕೊಂಡು ಅದನ್ನು ಬಿಟ್ಟು ನಿಮ್ಮ ವಾಕ್ಯದಲ್ಲಿನ ಸತ್ಯಗಳನ್ನು ಮಾತ್ರವೇ ನೆನಪಿಟ್ಟುಕೊಳ್ಳಲು ನನಗೆ ಅನುಗ್ರಹವನ್ನು ಯೇಸುನಾಮದಲ್ಲಿ ಅನುಗ್ರಹಿಸು.
Join our WhatsApp Channel
Most Read
● ಪುರುಷರು ಏಕೆ ಪತನಗೊಳ್ಳುವರು -1● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
ಅನಿಸಿಕೆಗಳು