english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಪರಿಶೋಧನೆಯ ಸಮಯದಲ್ಲಿ ನಂಬಿಕೆ
ಅನುದಿನದ ಮನ್ನಾ

ಪರಿಶೋಧನೆಯ ಸಮಯದಲ್ಲಿ ನಂಬಿಕೆ

Monday, 27th of May 2024
3 1 586
Categories : ನಂಬಿಕೆ (Faith)
"ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ."(ಯಾಕೋಬನು‬ ‭1:4‬)

ನೀವು ಜೀವನದಲ್ಲಿ ಪರಿಶೋಧನೆಗಳ ಮಡುವಿನಲ್ಲಿ ಸಿಲುಕಿ ಸೋತು ಹೋಗಿದ್ದೀರಾ? ಮಾನವನ ಜೀವಿತದಲ್ಲಿ ಈ ಪರಿಶೋಧನೆಗಳು ಮತ್ತು ಉಪದ್ರವಗಳ ಅನುಭವಗಳೇ ಇಲ್ಲದಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಬಯಸುತ್ತಿದ್ದೀರಾ? ನಿಮ್ಮ ಜೀವಿತದಲ್ಲಿ ಎದುರಾಗುತ್ತಿರುವ ಅಸಂಖ್ಯಾತವಾದ ಸಂಕಟಗಳ ಬಿರುಗಾಳಿಯಿಂದಾಗಿ ನಿಮ್ಮ ನಂಬಿಕೆಯನ್ನೇ ನೀವು ಪ್ರಶ್ನಿಸುತ್ತಿದ್ದೀರಾ? ಈ ಸಂಕಷ್ಟಗಳ ಸಮಯಗಳಿಂದಾಗಿ ನಿಮ್ಮ ಜೀವಿತಕ್ಕಾಗಿ ಇರುವ ದೇವರ ಉದ್ದೇಶಗಳನ್ನು ನೆರವೇರಿಸಲು ಪವಿತ್ರಾತ್ಮನೆಂಬ ಇಂಧನದ ಕೊರತೆಯನ್ನು ಅನುಭವಿಸುತ್ತಿದ್ದೀರಾ? ಸ್ವಲ್ಪ ತಡೆಯಿರಿ, ಇವೆಲ್ಲವೂ ನಿಮ್ಮ ನಂಬಿಕೆಯ ಪರೀಕ್ಷೆಯಾಗಿವೆ!

ಯುಗಯುಗಗಳಿಂದಲೂ ದೇವರಿಂದ ಉಪಯೋಗಿಸಲ್ಪಟ್ಟ ಹಲವಾರು ದೇವ ಮನಷ್ಯರನ್ನು ಈ ಒಂದು ಪರಿಶೋಧನೆಯ ಪುಟಕ್ಕೆ ಹಾಕಿಯೇ ಅವರನ್ನು ದೇವರ ಸೇವೆಗಾಗಿ ಸಿದ್ಧಪಡಿಸಲಾಯಿತು ಹಾಗೂ ಸಜ್ಜುಗೊಳಿಸಲಾಯಿತು. ನಂಬಿಕೆಗೆ ಮೂಲ ಪಿತೃ ಎಂದು ಎನಿಸಿಕೊಂಡ ಅಬ್ರಹಾಮನು ದೇವರೊಂದಿಗೆ ನಡೆಯಲು ಸಾಕಷ್ಟು ಪರೀಕ್ಷೆಗಳನ್ನು ಉಪದ್ರವಗಳನ್ನು ಎದುರಿಸಿದನು. ಪ್ರತಿಯೊಂದು ನಂಬಿಕೆಯ ಪರೀಕ್ಷೆಯು ಅದರದೇ ಆದ ಹೋರಾಟಗಳು, ಅದರದೇ ಆದ ತ್ಯಾಗ ಪೂರ್ವಕ ಕ್ರಿಯೆಗಳು ಅದರದ್ದೇ ಆದ ಪ್ರಶ್ನೆಗಳೊಂದಿಗೆ ಅವನಿಗೆ ಎದುರಾದವು. ಆಗ ಅಬ್ರಹಾಮನು ತನ್ನ ಹೆಂಡತಿಯಾದ ಸಾರಳನ್ನು "ನಾವೇಕೆ ಈ ಎಲ್ಲಾ ಸಂಗತಿಗಳನ್ನು ಎದುರಿಸಬೇಕು" ಎಂದು ಕೇಳಿದ್ದರೆ ಆ ಚಿತ್ರಣವನ್ನು ಒಮ್ಮೆ ನೆನೆಸಿಕೊಂಡು ನೋಡಿರಿ.

ದೇವರು ಅಬ್ರಹಾಮನನ್ನು ಅವರ ತಂದೆಯ ಮನೆಯನ್ನು ಬಿಟ್ಟು ಅಪರಿಚಿತವಾದ ಪ್ರದೇಶಕ್ಕೆ ಬರಲು ಹೇಳಿದಾಗ ದೇವರು ಅವನಿಗೆ ವಾಗ್ದಾನ ಮಾಡಲ್ಪಟ್ಟಂತೆ ಒಬ್ಬ ಮಗನನ್ನು ಪಡೆಯಲು ಅಬ್ರಾಹಾಮನಿಗೆ 25 ವರ್ಷಗಳು ಹಿಡಿದವು. ಆದರೆ ಅವನಿಗಿದ್ದ ಆ ಒಬ್ಬನೇ ಒಬ್ಬ ಮಗನನ್ನು ದೇವರು ಯಜ್ಞವನ್ನಾಗಿ ಅರ್ಪಿಸಲು ಹೇಳಿದಾಗ, ಅಬ್ಬಾ! ಅಬ್ರಾಹಾಮನಿಗೆ ಭರಸಿಡಿಲೇ ಹೊಡೆದ ಹಾಗಾಯಿತು.
ಅಬ್ರಹಾಮನಿಗೆ ಈ ಪ್ರಕ್ರಿಯೆಯು ಆನಂದ ಕರವಾಗಿತ್ತು ಎಂದು ನೀವು ಎಣಿಸುತ್ತೀರಾ? ಖಂಡಿತ ಇಲ್ಲ! ಅವನು ಆನಂದಿಸಲಿಲ್ಲ. ಆದರೆ ನಂಬಿಕೆಯೂ, ತಾಳ್ಮೆಯೂ ಮತ್ತು ದೇವರ ಮೇಲಿನ ಅವನ ವಿಶ್ವಾಸವು ಅವನಲ್ಲಿ ರೂಪುಗೊಳ್ಳಲು ಅವನು ಈ ಹಂತವನ್ನು ಹಾದು ಹೋಗಲೇಬೇಕಿತ್ತು. ನಂಬಿಕೆಯ ಮೂಲ ಪಿತೃವಾದ ಅಬ್ರಹಾಮನಿಗೆ ದೇವರಿಂದ ಒದಗಿ ಬಂದ ಪ್ರತಿಯೊಂದು ಪರಿಶೋಧನೆಗಳು ಅವನಿಂದ ಮುಂದೆ ಉಂಟಾಗಲಿರುವ ಜನಾಂಗಗಳಿಗೆ ಉಂಟಾಗಬೇಕಿದ್ದ ದೇವರ ವಾಗ್ದಾನಗಳ ಜನ್ಮಕ್ಕೆ ಬಹು ಮುಖ್ಯ ಅಂಶವಾಗಿತ್ತು.

"ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಬೇಕು."(ಇಬ್ರಿಯರಿಗೆ‬ ‭10:36‬ )

ಸಂತೋಷಕ್ಕೆ ಮುನ್ನ ನೋವು ಎನ್ನುವ ಪರಿಕಲ್ಪನೆಯು ಹೆಚ್ಚು ಕಡಿಮೆ ಜೀವನದ ಎಲ್ಲಾ ಆಯಾಮಕ್ಕೂ ಅನ್ವಯಿಸುವ ವಿದ್ಯಮಾನವಾಗಿದೆ. ಯಾವುದೇ ಅಮೂಲ್ಯವಾದದನ್ನು ಪಡೆದುಕೊಳ್ಳಲು ಅದಕ್ಕಾಗಿ ತಾಳ್ಮೆಯಿಂದ ಕಾಯುವ ಪ್ರಕ್ರಿಯೆಯಲ್ಲಿ ಅದಕ್ಕೆ ಬೆಲೆ ಕಟ್ಟಬೇಕಾದ ನೋವುಗಳನ್ನು ಲೆಕ್ಕಿಸದೆ ಕಾಯಲೇಬೇಕು. ಪ್ರಸವ ಸಮಯದಲ್ಲಿ ಮಗುವನ್ನು ಹಡೆಯುವ ಮುನ್ನ ನೋವಿನ ಸರಣಿಯನ್ನು ತಾಯಿಯಾದವಳು ಅನುಭವಿಸುತ್ತಾಳೆ. ಆದರೆ ಆ ಮಗುವನ್ನು ಹಡೆದ ತಕ್ಷಣವೇ ಆನಂದವು ಅವಳು ಅನುಭವಿಸಿದ ನೋವುಗಳನೆಲ್ಲ ನುಂಗಿ ಹಾಕುತ್ತದೆ. ದೇವರೊಂದಿಗೆ ನಡೆಯುವ ಪ್ರಕ್ರಿಯೆಯೂ ಇದೇ ತತ್ವವನ್ನು ಹೊಂದಿದೆ.ಈ ಪ್ರಸವ ವೇದನೆಯನ್ನು ಸಹಿಸಿಕೊಳ್ಳುವುದರಿಂದಲೇ ನಾವು ವಾಗ್ದಾನಗಳ ಮೇಲೆ ಭರವಸೆಯಿಂದ ಇರಬಹುದು (1ಪೇತ್ರ 1:9 ಓದಿರಿ )

ಪ್ರಿಯರಾದವರೇ, ದೇವರೊಂದಿಗೆ ನಡೆಯುವಂತದು ನಮ್ಮಲ್ಲಿ ನಂಬಿಕೆಯನ್ನು ಕಟ್ಟುತ್ತದೆ. ಇದರಿಂದಾಗಿ ಜೀವನದಲ್ಲಿ ಎದುರಾಗುವ ಸಂಕಟಗಳ ಮೇಲೆ ವಿಜಯ ಸಾಧಿಸುವುದರ ಮೂಲಕ ಮಾತ್ರ ದೇವರು ನಮಗಾಗಿ ಇಟ್ಟಿರುವ ವಾಗ್ದಾನಗಳ ಪ್ರದೇಶವನ್ನು ನಾವು ತಲುಪುತ್ತೇವೆ
ಇಂದು ನೀವು ನಿಮ್ಮ ಶಾಂತಿ, ಸಂತೋಷ, ಪ್ರೀತಿ, ಸಮೃದ್ಧಿ ಮದುವೆ, ಪುನಸ್ತಾಪನೆ, ಆರೋಗ್ಯ, ಸಂಪತ್ತು ಇತ್ಯಾದಿಗಳಲ್ಲಿ ಎದುರಿಸುತ್ತಿರುವ ಪರಿಶೋಧನೆಗಳಿಂದಾಗಿ ದೇವರ ವಾಗ್ದಾನಗಳನ್ನೇ ಸಂದೇಹ ಪಡಲು ಆರಂಭಿಸಿದ್ದೀರಾ?
ಪ್ರತಿಯೊಂದು ಪರಿಶೋಧನೆ ಮತ್ತು ಶೋಧನೆಗಳು ಸಂತೋಷಕ್ಕೆ ಕಾರಣವಾಗಿವೆ ಎಂದು ಸತ್ಯವೇದ ಹೇಳುತ್ತದೆ! ನಿಮಗೆ ಇದು ವಿಚಿತ್ರ ಎಂದು ಎನಿಸುತ್ತಿದೆಯೇ?

ಯಾಕೋಬ 1:1-2ಓದಿ ನೋಡಿರಿ.‭‭
"ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು; ಸ್ವಾವಿುಯು ತನ್ನನ್ನು ಪ್ರೀತಿಸುವವರಿಗೆ ಇದನ್ನು ವಾಗ್ದಾನಮಾಡಿದ್ದಾನೆ."(ಯಾಕೋಬನು‬ ‭1:12‬)

ಕಡೆಯದಾಗಿ ಹೇಳುವುದೇನೆಂದರೆ, ನಿಮಗಿರುವ ಉಪದ್ರವಗಳಲ್ಲಿ ಉಲ್ಲಾಸದಿಂದ ಇರುವುದನ್ನು ಕಲಿಯಿರಿ. ಇದು ನೀವು ವಿಜಯದ ಮಾರ್ಗದಲ್ಲಿ ಇದ್ದೀರಿ ಎಂಬುದಕ್ಕೆ ಸೂಚನೆಯಾಗಿದೆ. ಪರಿಶೋಧನೆ ಇಲ್ಲದೆ- ಜಯಮಾಲೆ ಇಲ್ಲ! ಎಂಬುದನ್ನು ನೆನಪಿಡಿರಿ.

ಪ್ರಾರ್ಥನೆಗಳು
ತಂದೆಯೇ, ನನ್ನ ಜೀವಿತದಲ್ಲಿ ನಂಬಿಕೆ ಮತ್ತು ತಾಳ್ಮೆಯ ವಿಚಾರದಲ್ಲಿ ನೀನು ಮಾಡುವ ಕಾರ್ಯಕ್ಕಾಗಿ ನಿನಗೆ ಸ್ತೋತ್ರ. ನಾನು ಪರಿಪೂರ್ಣವಾಗುವಂತೆಯೂ, ಪ್ರತಿಯೊಂದು ಸಮಯದಲ್ಲಿಯೂನಿನ್ನ ಮೇಲೆಯೇ ಭರವಸದಿಂದ ಇರುವಂತೆಯೂ ನನಗೆ ಸಹಾಯ ಮಾಡು ಮತ್ತು ನಿನ್ನ ವಾಗ್ದಾನದ ಹೊರತು ಮತ್ತೆ ಏನನ್ನೂ ಅಪೇಕ್ಷಿಸದಂತೆ ಸಹಾಯ ಮಾಡು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.


Join our WhatsApp Channel


Most Read
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ವಾಕ್ಯದಲ್ಲಿರುವ ಜ್ಞಾನ
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
● ಪುರುಷರು ಏಕೆ ಪತನಗೊಳ್ಳುವರು -4
● ಆತನಿಗೆ ಯಾವುದೇ ಮಿತಿಯಿಲ್ಲ.
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್