ಅನುದಿನದ ಮನ್ನಾ
1
1
145
ಅತಿ ದೀರ್ಘವಾದ ರಾತ್ರಿಯ ನಂತರವಾಗುವ ಸೂರ್ಯೋದಯ
Tuesday, 21st of October 2025
Categories :
ನಂಬಿಕೆ (Faith)
ರೂಪಾಂತರ(transformation)
"ನಿರಂತರ ನಿರಾಶೆಯು ನಿಮ್ಮನ್ನು ಹೃದಯವನ್ನು ಆಘಾತಗೊಳಿಸುತ್ತದೆ, ಆದರೆ ಹಠಾತ್ತಾಗಿ ಸಂಭವಿಸುವ ಒಂದು ಉತ್ತಮ ಬಿಡುಗಡೆಯು ನಿಮ್ಮ ಜೀವನವನ್ನೇ ತಿರುಗಿಸಬಹುದು." (ಜ್ಞಾನೋಕ್ತಿ 13:12 MSG)
ನಮ್ಮ ಸುತ್ತಲೂ ನಿರಾಶೆಯ ಗಾಳಿ ಬೀಸುವಾಗ, ನಮ್ಮ ಹೃದಯಗಳಲ್ಲಿ ಹಿಮಪಾತವು ಸುಲಭವಾಗಿ ನುಸುಳುತ್ತದೆ ಎಂಬುದಾಗಿ ಭಾವಿಸಬಹುದು. ಆಹ್ವಾನಿಸದ ಅತಿಥಿಯಂತೆ ನಿರಾಶೆಯು ಯಾವುದೇ ಸಮಯದಲ್ಲಿಯಾದರೂ ನಮ್ಮ ಬಾಗಿಲುಗಳನ್ನು ತಟ್ಟಬಹುದು, ನಮ್ಮ ಹೃದಯಗಳನ್ನು ಅನಾರೋಗ್ಯಕ್ಕೆ ಒಳಪಡಿಸಿ ನಮ್ಮ ಉತ್ಸಾಹವನ್ನು ಕುಗ್ಗಿಸಬಹುದು.
ಬಹುಶಃ ಅದು ಒಂದು ಶಾಶ್ವತವಾಗಿ ತಲುಪಲು ಸಾಧ್ಯವಾಗದ ಕನಸಾಗಿರಬಹುದು ಅಥವಾ ಮುಚ್ಚಿದ ಅವಕಾಶದ ಬಾಗಿಲಾಗಿರಬಹುದು. ಇದು ಉತ್ತರಸಿಗದ ಪ್ರಾರ್ಥನೆಗಳ ಪ್ರತಿಧ್ವನಿ ಅಥವಾ ಈಡೇರದ ನಿರೀಕ್ಷೆಗಳ ಕುಟುಕಾಗಿರಬಹುದು. ಇದು ಈಡೇರದ ಭರವಸೆಗಳ ಶೂನ್ಯದಲ್ಲಿ ಉಳಿಯುವ ಮೌನವಾಗಿ ಬಿಡುತ್ತದೆ. ಈ ರೀತಿಯ ಹೃದಯ ಕಾಯಿಲೆಯು ರಾತ್ರಿಗಳನ್ನು ದೀರ್ಘವೆನಿಸುವಂತೆ ಮಾಡಿ ಕತ್ತಲೆಯನ್ನೇ ದಟ್ಟವಾಗಿ ಕಾಣುವಂತೆ ಮಾಡುತ್ತದೆ.
ಆದರೆ ನೆನಪಿಡಿ, ನಮ್ಮ ಪ್ರಯಾಣವು ಕಾರ್ಗತ್ತಲ ಕಣಿವೆಯಲ್ಲಿಯೇ ಕೊನೆಗೊಳ್ಳುವುದಿಲ್ಲ. ನಿರೀಕ್ಷೆಯ ಮೂಲನಾದ ದೇವರು ನಮ್ಮ ದುಃಖಗಳನ್ನು ಮೀರಿ ನಾವು ಮೇಲೇರಿ ಹೋಗುವಂತೆ ನಮ್ಮನ್ನು ಕರೆಯುತ್ತಾನೆ, ಎಂದಿಗೂ ಬತ್ತಿಹೋಗದ ಜೀವಬುಗ್ಗೆಯಾದ ತನ್ನ ಭರವಸೆಯ ಬಾವಿಯಿಂದ ತೃಪ್ತಿಯಾಗುವಷ್ಟು ಕುಡಿಯುವಂತೆ ನಮ್ಮನ್ನು ಆಹ್ವಾನಿಸುತ್ತಾನೆ. ನಿರೀಕ್ಷೆಯ ಮೂಲನಾದ ದೇವರು ನಂಬಿಕೆಯಿಂದುಂಟಾಗುವ ಸಂತೋಷವನ್ನೂ ಮನಶ್ಶಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಿ ನೀವು ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ.(ರೋಮ 15:13)
ಭರವಸೆಯಿಲ್ಲದ ಜೀವನವು ಬೂದುಬಣ್ಣದ ಜೀವನವಾಗಿದ್ದು - ಮಂದ, ಮಂಕಾದ ಮತ್ತು ದಣಿದ ರೀತಿಯಲ್ಲಿರುತ್ತದೆ. ಆದರೆ ದೇವರು ನಮ್ಮನ್ನು ಶಾಶ್ವತ ನಿರಾಶೆಯಿಂದ ಹಾಳಾದ ಜೀವನವನ್ನು ನಡೆಸಲಿ ಎಂದು ಸೃಷ್ಟಿಸಲಿಲ್ಲ. ತನ್ನ ದೈವಿಕ ವರ್ಣಪಟಲದಲ್ಲಿರುವ ಸಂಪೂರ್ಣ ಬಣ್ಣಗಳನ್ನು ಅನುಭವಿಸಲು ಆತನು ನಮ್ಮಲ್ಲಿ ಸಂತೋಷದ ಬಣ್ಣಗಳು, ಶಾಂತಿಯ ಛಾಯೆಗಳು ಮತ್ತು ಪ್ರೀತಿಯ ವರ್ಣಗಳು ಎನ್ನುವಂತ ಜೀವ ತುಂಬಿದನು. ಅಚಲವಾದ ಭರವಸೆಯಲ್ಲಿ ಮೀಯುವ ಜೀವನವನ್ನು, ತನ್ನ ಶಾಶ್ವತ ವಾಗ್ದಾನಗಳಿಂದ ಲಂಗರು ಹಾಕಿದ ಜೀವನವನ್ನು ನಡೆಸಬೇಕೆಂದು ಆತನು ನಮ್ಮನ್ನು ಕರೆಯುತ್ತಾನೆ.
ನಮ್ಮ ಹೃದಯಗಳಲ್ಲಿ ಭರವಸೆಯು ನವೀಕರಿಸಲ್ಪಟ್ಟಾಗ, ಅದು ದೀರ್ಘ ರಾತ್ರಿಯ ನಂತರ ಕತ್ತಲೆಯನ್ನು ಮೀಟಿ ಹೋಗುವ ಸೂರ್ಯನ ಮೊದಲ ಕಿರಣಗಳಂತೆ ಇರುತ್ತದೆ. ಇದು ಒಂದು ದೈವಿಕ ಪಿಸುಮಾತು, ನಮ್ಮ ದುಃಖಗಳು ಒಂದು ರಾತ್ರಿಯವರೆಗೆ ಇರಬಹುದು, ಆದರೆ ಬೆಳಿಗ್ಗೆ ಸಂತೋಷ ಬರುತ್ತದೆ ಎಂದು ನಮಗೆ ನೆನಪಿಸುತ್ತದೆ (ಕೀರ್ತನೆ 30:5).
ಹಾಗಾದರೆ, ನಿರಾಶೆಗಳು ನಮ್ಮ ಹೃದಯಗಳನ್ನು ಅಸ್ವಸ್ಥಗೊಳಿಸುವಾಗ ನಾವು ಏನು ಮಾಡಬೇಕು? ಮತ್ತೆ ಆಶಾವಾದಿಗಳಾಗಲು ನಾವು ಹೇಗೆ ಶಕ್ತಿಯನ್ನು ಕಂಡುಕೊಳ್ಳಬಹುದು?
ಮೊದಲು, ನಿಮ್ಮ ನಿರಾಶೆಗಳನ್ನು ದೇವರಿಗೆ ಒಪ್ಪಿಸಿ. ಕರ್ತನು ನಮ್ಮ ಎಲ್ಲಾ ಆತಂಕಗಳನ್ನು ಆತನ ಮೇಲೆ ಹಾಕಲು ನಮ್ಮನ್ನು ಆಹ್ವಾನಿಸುತ್ತಾನೆ ಏಕೆಂದರೆ ಆತನು ನಮಗಾಗಿ ಕಾಳಜಿ ವಹಿಸುವವನಾಗಿದ್ದಾನೆ (1 ಪೇತ್ರ 5:7).
ಪ್ರತಿಯೊಂದು ಮುರಿದುಹೋದ ಭರವಸೆ, ಪ್ರತಿಯೊಂದು ಮುರಿದ ಕನಸು ಸಹ ಆತನ ಪ್ರೀತಿಯ ಕೈಗಳಲ್ಲಿ ಸುರಕ್ಷಿತವಾಗಿದೆ. ನೀವು ನಿಮ್ಮ ನಿರಾಶೆಗಳನ್ನು ಆತನಿಗೆ ಒಪ್ಪಿಸಿಕೊಡುವಾಗ, ನಿಮ್ಮ ಪರಲೋಕದ ತಂದೆಯು ಈಗ ನಿಮ್ಮ ಜೀವನದ ಪ್ರತಿಯೊಂದು ವಿಚಾರಗಳಲ್ಲೂ ಭಾಗಿಯಾಗಿದ್ದಾನೆಂದು ತಿಳಿದುಕೊಂಡು ನಿಮ್ಮ ಹೃದಯವು ದೈವಿಕ ಶಾಂತಿಯಿಂದ ತುಂಬುತ್ತದೆ. ನಾನು ಇದನ್ನು ಹಲವು ಬಾರಿ ಅನುಭವಿಸಿರುವುದರಿಂದ ಇದನ್ನು ನಿಮಗೆ ಹೇಳುತ್ತೇನೆ
ಎರಡನೆಯದಾಗಿ, ನಿಮ್ಮ ಆತ್ಮವನ್ನು ದೇವರ ವಾಕ್ಯದಲ್ಲಿ ಮುಳುಗಿಸಿ. ದೇವರ ವಾಕ್ಯವು ನಿತ್ಯ ನಿರೀಕ್ಷೆಯ ಮೂಲವಾಗಿದ್ದು, ದೇವರ ಬದಲಾಗದ ವಾಗ್ದಾನಗಳು ಮತ್ತು ಆತನ ದೃಢ ಪ್ರೀತಿಯಿಂದ ತುಂಬಿವೆ. " ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು. (ರೋಮನ್ನರು 15:4) ನೀವು ಪ್ರತಿದಿನ ಆತನ ವಾಕ್ಯವನ್ನು ಧ್ಯಾನಿಸುವಾಗ, ಯುಗಯುಗಗಳಿಂದ ಅಸಂಖ್ಯಾತ ಜನರನ್ನು ಪೋಷಿಸಿದ ಕಾಲಾತೀತ ಸತ್ಯಗಳಿಂದ ನಿಮ್ಮ ಆತ್ಮವು ಪುನರುಜ್ಜೀವನಗೊಳ್ಳುತ್ತದೆ.
ಕಡೆಯದಾಗಿ, ಸ್ತುತಿ ಮತ್ತು ಕೃತಜ್ಞತೆಯ ಸ್ತೋತ್ರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ. ಕಾರ್ಗತ್ತಿಲಿನ ಹೊರತಾಗಿಯೂ, ಕೃತಜ್ಞರಾಗಿರಲು ಯಾವಾಗಲೂ ಒಂದು ಕಾರಣವಿರುತ್ತದೆ. ಅಪೊಸ್ತಲ ಪೌಲನು ತನ್ನ ಅನೇಕ ಪರೀಕ್ಷೆಗಳ ನಡುವೆಯೂ, ಯಾವಾಗಲೂ ಸಂತೋಷಪಡುವಂತೆಯೂ, ಎಡೆಬಿಡದೆ ಪ್ರಾರ್ಥಿಸುವಂತೆಯೂ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ಕೃತಜ್ಞತೆ ಸಲ್ಲಿಸುವಂತೆಯೂ ವಿಶ್ವಾಸಿಗಳಿಗೆ ಉಪದೇಶಿಸಿದನು (1 ಥೆಸಲೊನೀಕ 5:16-18). ಕೃತಜ್ಞತೆಯು ನಮ್ಮ ಕೊರತೆಯಿಂದ ದೇವರ ಸಮೃದ್ಧಿಯ ಕಡೆಗೆ ನಮ್ಮ ಗಮನವನ್ನು ಬದಲಾಯಿಸುತ್ತದೆ ಮತ್ತು ಸ್ತುತಿಯು ನಮ್ಮ ಆತ್ಮಗಳನ್ನು ಹತಾಶೆಯ ಅಲೆಗಳಿಗಿಂತ ಮೇಲಕ್ಕೆತ್ತುತ್ತದೆ.
ನಿಮ್ಮ ಆತ್ಮವು ನಿರಂತರ ನಿರಾಶೆಯ ಭಾರದಿಂದ ತುಂಬಿದ್ದರೂ ಸಹ, ನೆನಪಿಡಿ, ಹಠಾತ್ ವಿರಾಮ, ದೈವಿಕ ಹಸ್ತಕ್ಷೇಪ, ಭರವಸೆಯ ಪಿಸುಮಾತು ನಿಮ್ಮ ಜೀವನವನ್ನೇ ತಿರುಗಿಸುತ್ತದೆ. ಮತ್ತು ಅದು ಕರ್ತನ ಕಡೆಗೆ ನಾವು ತಿರುಗುವುದರೊಂದಿಗೆಯೇ ಪ್ರಾರಂಭವಾಗಿ, ನಿಮ್ಮ ದಣಿದ ಆತ್ಮದಲ್ಲಿ ಹೊಸ ಭರವಸೆ ಉಸುರಿಸಲು ಆತನಿಗೇ ಅವಕಾಶ ಮಾಡಿ ಕೊಡುತ್ತದೆ.
Bible Reading: Mark 4-5
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿರಾಶೆಯ ಸಮಯದಲ್ಲಿ ನೀವೇ ನಮ್ಮ ಆಶ್ರಯ; ಎಂದಿಗೂ ವಿಫಲವಾಗದ ನಿಮ್ಮ ನಿರೀಕ್ಷೆಯನ್ನೇ ನಮ್ಮಲ್ಲಿ ಉಸುರಿಸಿ. ನಮ್ಮ ಚಿಂತಾ ಭಾರವನ್ನು ನಿಮ್ಮ ಮೇಲೆ ಹಾಕಿ ನಿಮ್ಮ ವಾಗ್ದಾನಗಳ ಕಡೆಗೆ ಒಲವು ತೋರುವಂತೆ ನಮಗೆ ಸಹಾಯ ಮಾಡಿ. ನಮ್ಮ ಶಕ್ತಿಯನ್ನು ನವೀಕರಿಸಿ ಮತ್ತು ನಿಮ್ಮಲ್ಲಿರುವ ಸಂತೋಷ, ಶಾಂತಿ ಮತ್ತು ಅಚಲ ಭರವಸೆಯಿಂದ ಯೇಸುನಾಮದಲ್ಲಿ ನಮ್ಮ ಹೃದಯಗಳನ್ನು ತುಂಬಿಸಿ. ಆಮೆನ್.
Join our WhatsApp Channel
Most Read
● ಮೋಸದ ಜಗತ್ತಿನಲ್ಲಿ ಸತ್ಯವನ್ನು ವಿವೇಚಿಸಿ ತಿಳಿಯುವುದು.● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ನಿಮ್ಮ ರೂಪಾಂತರವು ಶತ್ರುವಿಗೆ ಭಯತರುತ್ತದೆ.
● ಭಸ್ಮವಾಗುವಿಕೆಯ ( ಅತಿಯಾದ ಆಯಾಸದಿಂದಾಗುವ ದೈಹಿಕ ಬಳಲಿಕೆ ಮತ್ತು ಮಾನಸಿಕ ಖಿನ್ನತೆ) ವ್ಯಾಖ್ಯಾನ
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ
ಅನಿಸಿಕೆಗಳು
