ಅನುದಿನದ ಮನ್ನಾ
1
0
90
ಇತರರಿಗೆ ದಾರಿ ತೋರಿಸುವುದು
Sunday, 2nd of November 2025
Categories :
ಜವಾಬ್ದಾರಿ (Responsibility)
ನಂಬಿಕೆ (Faith)
ನಾವು ವಾಸಿಸುತ್ತಿರುವ ವೇಗದ ಜಗತ್ತಿನಲ್ಲಿ, ಅಭಿಪ್ರಾಯಗಳನ್ನು ಉದಾರವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳ ಉದಯವು ಎಲ್ಲಾ ವಿಷಯಗಳ ಬಗ್ಗೆ, ಅದು ಎಷ್ಟೇ ಕ್ಷುಲ್ಲಕವಾಗಿರಲೀ ಅಥವಾ ಮಹತ್ವದ್ದಾಗಿರಲಿ, ಆಲೋಚನೆಗಳು, ದೃಷ್ಟಿಕೋನಗಳು ಮತ್ತು ತೀರ್ಪುಗಳನ್ನು ಎಲ್ಲವನ್ನು ಹಂಚಿಕೊಳ್ಳುವುದನ್ನು ಎಂದಿಗಿಂತಲೂ ಇಂದು ಅದು ಸುಲಭಗೊಳಿಸಿದೆ. ಆದಾಗ್ಯೂ, ಪದಗಳು ಪ್ರಭಾವಶಾಲಿಯಾಗಿದ್ದರೂ, "ಕ್ರಿಯೆಗಳು ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ" ಎಂಬ ಮಾತಿನಲ್ಲಿ ಒಂದು ಆಳವಾದ ಸತ್ಯವಿದೆ.
ಅಪೊಸ್ತಲ ಪೌಲನು ತೀತನಿಗೆ ಬರೆದ ಪತ್ರದಲ್ಲಿ ಈ ಕಲ್ಪನೆಯನ್ನು ಪರಿಪೂರ್ಣವಾಗಿ ಹೊರತಂದನು. "ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಸತ್ಯವೂ ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ ಸುಬುದ್ಧಿಯೂ ಇರಬೇಕು; ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ ನಾಚಿಕೊಳ್ಳುವರು." ಎಂದು
ಅವನು ಬರೆಯುತ್ತಾನೆ.(ತೀತ 2:7-8). ಇಲ್ಲಿ, ಅಪೊಸ್ತಲ ಪೌಲನು ವಿಶ್ವಾಸಿಗಳು ಒಳ್ಳೆಯ ಮಾತುಗಳನ್ನು ಮಾತನಾಡುವಂತೆ ಪ್ರೋತ್ಸಾಹಿಸುತ್ತಿಲ್ಲ; ಅವುಗಳನ್ನು ಜೀವಂತಗೊಳಿಸಬೇಕಾದ ಮಹತ್ವವನ್ನು ಒತ್ತಿ ಹೇಳುತ್ತಿದ್ದಾನೆ.
ಇದರ ಬಗ್ಗೆ ಯೋಚಿಸಿ. ಯಾರಾದರೂ ಹೇಳಿದ್ದರಿಂದಲ್ಲದೆ ಅವರು ಮಾಡಿದ ಕಾರ್ಯಗಳಿಂದ ನೀವು ಎಷ್ಟು ಬಾರಿ ಪ್ರೇರಿತರಾಗಿದ್ದೀರಿ? ಮಾತುಗಳನ್ನು ಮರೆತುಬಿಡಬಹುದು, ಆದರೆ ಕ್ರಿಯೆಗಳು? ಅವು ನೆನಪಿನಲ್ಲಿ ಒಂದು ಸ್ಥಾನವನ್ನು ಪಡೆಯುತ್ತವೆ, ಕೆಲವೊಮ್ಮೆ ಜೀವನದ ಪಥವನ್ನೇ ಬದಲಾಯಿಸುತ್ತವೆ.
ಕರ್ತನಾದ ಯೇಸು ಸ್ವತಃ ಇದನ್ನು ಅರ್ಥಮಾಡಿಕೊಂಡಿದ್ದನು. ಆತನ ಸೇವೆಯು ಕೇವಲ ಉಪದೇಶವಾಗಿರಲಿಲ್ಲ; ಅದು ಕ್ರಿಯೆಯ ಕುರಿತದ್ದಾಗಿತ್ತು. ಆತನು ಸ್ವಸ್ಥ ಪಡಿಸಿದನು, ಸೇವೆ ಮಾಡಿದನು ಮತ್ತು ಪ್ರೀತಿಸಿದನು. ಯೋಹಾನನ ಸುವಾರ್ತೆಯಲ್ಲಿ, ಕರ್ತನಾದ ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವಂತದ್ದು, ಅತ್ಯಂತ ನಮ್ರತೆಯ ಕ್ರಿಯೆಯಾಗಿದ್ದು,ಅದು ಸೇವಕ ನಾಯಕತ್ವವನ್ನು ಪ್ರದರ್ಶಿಸುತ್ತದೆ.ನಂತರ ಆತನು "ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ". ಎಂದು ಹೇಳುತ್ತಾನೆ, (ಯೋಹಾನ 13:15).
ನಾವು ಆಡಿದ ಮಾತಿನಂತೆ ನಡೆಯುವಾಗ, ಇತರರು ಅನುಸರಿಸಬೇಕಾದ ಹಾದಿಯಲ್ಲಿ ನಾವು ಬೆಳಕನ್ನು ಬೆಳಗಿಸುತ್ತೇವೆ. ಇದರರ್ಥ ನಾವು ಎಡವಿ ಬೀಳುವುದಿಲ್ಲ ಅಥವಾ ತಪ್ಪುಗಳನ್ನೇ ಮಾಡುವುದಿಲ್ಲ ಎಂದಲ್ಲ. ಇದರರ್ಥ ನಮ್ಮ ಒಟ್ಟಾರೆ ಪ್ರಯಾಣ, ದೇವರ ಮಾರ್ಗದಲ್ಲಿ ನಡೆಯಲು ನಮ್ಮಲ್ಲಿರುವ ಸಮರ್ಪಣೆ, ಇತರರಿಗೆ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ.
ಹಳೆಯ ಒಡಂಬಡಿಕೆಯಲ್ಲಿ, ಬ್ಯಾಬಿಲೋನ್‌ಗೆ ಸೆರೆಯಾಳುಗಳಾಗಿ ಕರೆದೊಯ್ಯಲ್ಪಟ್ಟ ಯೌವ್ವನಸ್ತನಾದ ದಾನಿಯೇಲನ ಕಥೆಯನ್ನು ನಾವು ಕಾಣುತ್ತೇವೆ. ವಿದೇಶಿ ದೇಶ ಮತ್ತು ಅದರ ವಿಚಿತ್ರ ಪದ್ಧತಿಗಳ ಹೊರತಾಗಿಯೂ, ದಾನಿಯೇಲನು ತನ್ನ ನಂಬಿಕೆಯಲ್ಲಿ ದೃಢವಾಗಿ ನಿಂತನು. ಅವನು ರಾಜಮನೆತನದ ಆಹಾರ ಮತ್ತು ದ್ರಾಕ್ಷಾರಸದಿಂದ ತನ್ನನ್ನು ತಾನು ಅಪವಿತ್ರಗೊಳಿಸಿಕೊಳ್ಳದಿರಲು ನಿರ್ಧರಿಸಿದನು. ಈ ನಂಬಿಕೆಯ ಕ್ರಿಯೆಯು ಕೇವಲ ಅವನ ಪ್ರಯೋಜನಕಾರಿಯಾದದ್ದು ಮಾತ್ರವಲ್ಲದೆ; ಅವನು ಸೇವೆ ಸಲ್ಲಿಸಿದ ದೇವರ ಕುರಿತು ಬ್ಯಾಬಿಲೋನಿಯನ್ನರಿಗೆ ಸಾಕ್ಷಿಯಾಗಿತ್ತು. ಯಾವುದೇ ಧರ್ಮೋಪದೇಶಕ್ಕಿಂತ ಜೋರಾಗಿ ಮಾತನಾಡಿದ್ದು ಅವನ ಮೌನ, ದೃಢವಾದ ಬದ್ಧತೆಯಾಗಿತ್ತು. ಅವನ ಜೀವನವು ಜ್ಞಾನೋಕ್ತಿ 22:1 ರ "ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ, ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ." ಎನ್ನುವುದರ ಸಾರಾಂಶವಾಗಿತ್ತು.
ಅಭಿಪ್ರಾಯಗಳ ಜಗತ್ತಿನಲ್ಲಿ, ನಮ್ಮ ಜೀವಿತವೇ ಮಾತನಾಡಲಿ. ಅದು ಕ್ರಿಸ್ತನ ಪ್ರೀತಿ, ಕೃಪೆ ಮತ್ತು ಕರುಣೆಯನ್ನು ಪ್ರತಿಧ್ವನಿಸಲಿ. ಇತರರು ನಮ್ಮ ನಂಬಿಕೆಯನ್ನು ಪ್ರಶ್ನಿಸಿದಾಗ ಅಥವಾ ನಮ್ಮ ವಿಶ್ವಾಸಕ್ಕೆ ಆಧಾರ ಏನೆಂದು ಪ್ರಶ್ನಿಸಿದಾಗ, ಅವರು ನಮ್ಮ ನಡತೆಯಲ್ಲಿ ದೋಷವನ್ನು ಕಂಡುಕೊಳ್ಳದಿರಲಿ. ನಮ್ಮ ಜೀವನವು ಎಷ್ಟು ಪ್ರಭಾವಶಾಲಿಯಾಗಿರಬೇಕು ಎಂದರೆ ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರೂ ಸಹ ನಮ್ಮ ಸಮಗ್ರತೆಯನ್ನು ಗೌರವಿಸದೆ ಇರಲು ಸಾಧ್ಯವಾಗದಿರಬೇಕು.
ಇದಲ್ಲದೆ, ವಿಶ್ವಾಸಿಗಳಾಗಿ, ನಾವು ಕ್ರಿಸ್ತೀಯ ಜೀವನದ ಉತ್ತಮ ಉದಾಹರಣೆಗಳಾಗಿರಲು ವಿಫಲವಾದರೆ, ನಾವು ಇತರರಿಗೆ ಅವರ ಅಪನಂಬಿಕೆಯನ್ನು ಕ್ಷಮಿಸಲು ಅವಕಾಶವನ್ನು ನೀಡುತ್ತೇವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಪೌಲನು ರೋಮನ್ನರು 2:24 ರಲ್ಲಿ , “ನಿಮ್ಮ ದೆಸೆಯಿಂದ ಅನ್ಯಜನರ ಮಧ್ಯದಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆಂದು” ಬರೆದಿದೆಯಲ್ಲಾ." ಎಂದು ಬರೆದಂತೆ ನಮ್ಮ ಕ್ರಿಯೆಗಳು ಅಥವಾ ಅದರ ಕೊರತೆಯು ಜನರನ್ನು ದೇವರ ಕಡೆಗೆ ಸೆಳೆಯಬಹುದು ಅಥವಾ ದೂರ ತಳ್ಳಬಹುದು ಎಂಬುದಕ್ಕೆ ಇದು ಪ್ರಬಲವಾದ ಜ್ಞಾಪನೆಯಾಗಿದೆ.
ಹಾಗಾದರೆ, ನಮ್ಮ ನಂಬಿಕೆಯನ್ನು ಹಂಚಿಕೊಳ್ಳುವುದಷ್ಟೇ ಅಲ್ಲ; ಅದನ್ನು ಪ್ರದರ್ಶಿಸೋಣ. ಎಲ್ಲಾ ಮನುಷ್ಯರಿಂದ ತಿಳಿದುಕೊಂಡು ಓದಲ್ಪಡುವ ಜೀವಂತ ಪತ್ರಿಕೆಗಳಾಗೋಣ (2 ಕೊರಿಂಥ 3:2). ನಮ್ಮ ಸುತ್ತಲಿನ ಲೋಕವು ಬದಲಾಗಬಹುದು, ಆದರೆ ನಾವು ದೃಢವಾಗಿ ಉಳಿದು ಕೊಳ್ಳೋಣ, ಒಳ್ಳೆಯ ಕಾರ್ಯಗಳ ಮಾದರಿಯನ್ನು ಹೊಂದಿಸೋಣ ಮತ್ತು ಬೆಳಕನ್ನು ಹುಡುಕುವವರಿಗೆ ದೀಪಸ್ತಂಭಗಳಾಗಿ ಪರಿಣಮಿಸೋಣ.
Bible Reading: Luke 12 - 13
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಾವು ಮಾಡುವ ಎಲ್ಲದರಲ್ಲೂ ನಿಮ್ಮ ಪ್ರೀತಿ ಮತ್ತು ಕೃಪೆಯನ್ನು ಪ್ರತಿಬಿಂಬಿಸುತ್ತಾ ಮಾದರಿಯಾಗಿ ಬದುಕಲು ನಮಗೆ ಅಧಿಕಾರ ನೀಡು. ನಮ್ಮ ಜೀವನವು ಇತರರನ್ನು ನಿಮ್ಮ ಹತ್ತಿರಕ್ಕೆ ಕರೆದೊಯ್ಯಲಿ, ನಮ್ಮ ಕಾರ್ಯಗಳು ನಿಮ್ಮ ಹೆಸರನ್ನು ಯೇಸುನಾಮದಲ್ಲಿ ಮಹಿಮೆಪಡಿಸಲಿ. ಆಮೆನ್
Join our WhatsApp Channel
Most Read
● ದೇವರು ಒದಗಿಸುವನು● ನೀವು ಆತ್ಮಿಕವಾಗಿ ಸದೃಢರಾಗಿದ್ದೀರಾ?
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ವಾಕ್ಯದಲ್ಲಿರುವ ಜ್ಞಾನ
● ಒಂದು ಜನಾಂಗವನ್ನು ಉಳಿಸಿದ ಕಾಯುವಿಕೆ
● ದೇವರ 7 ಆತ್ಮಗಳು: ಕರ್ತನ ಭಯದ ಆತ್ಮ
● ಅವರ ದೈವಿಕ ದುರಸ್ತಿ ಅಂಗಡಿ
ಅನಿಸಿಕೆಗಳು
