english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ
ಅನುದಿನದ ಮನ್ನಾ

ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ

Wednesday, 25th of September 2024
3 1 526
Categories : ಗಾಸಿಪ್ (Gossip) ದೇವರೊಂದಿಗೆ ಆತ್ಮೀಯತೆ (Intimacy with God)
"ತುಂಟನು ಜಗಳ ಬಿತ್ತುತ್ತಾನೆ; ಚಾಡಿಕೋರನು ವಿುತ್ರರನ್ನು ಅಗಲಿಸುತ್ತಾನೆ."(ಜ್ಞಾನೋಕ್ತಿಗಳು 16:28)

ನಾವು ಹೊಸದಾಗಿ ಯಾರೊಟ್ಟಿಗಾದರೂ  ಬಾಂಧವ್ಯವನ್ನು ಬೆಳೆಸಿಕೊಳ್ಳುವಾಗ ಚಾಡಿ ಮಾತುಗಳು ಎಂಬ ವಿಚಾರವನ್ನು ಗಮನದಲಿಟ್ಟುಕೊಂಡಿರಬೇಕು.

ಚಾಡಿಮಾತು ಬಾಂಧವ್ಯಗಳಿಗೆ ಏಕೆ ಹಾನಿಕಾರಕ?
ದೇವರ ವಾಕ್ಯವು ಹೇಳುವಂತೆ ಚಾಡಿ ಮಾತು ಉತ್ತಮ ಸ್ನೇಹಿತರನ್ನು ಬೇರ್ಪಡಿಸಬಹುದು ಚಾಡಿ ಮಾತು ಸಂಬಂಧಗಳನ್ನು ವಿಭಜಿಸುತ್ತದೆ. ಅವು ವ್ಯಕ್ತಿಗಳ ನಡುವಿನ ನಂಬಿಕೆಯನ್ನು ನಾಶಪಡಿಸುತ್ತದೆ ಮತ್ತು ಚಾಡಿ ಮಾತುಗಳು ಬಹುದಿನಗಳವರೆಗೂ  ನೋವನ್ನು ಮನಸ್ಸಿನಲ್ಲಿ ಉಳಿಸಿಬಿಡುವಂತದ್ದಾಗಿದೆ.

ಒಂದು ವಿಷಯವನ್ನು ನೆನಪಿಡಿರಿ.ನಿಮ್ಮ ಬಳಿ ಬಂದು ಬೇರೆಯವರ  ಕುರಿತು ಚಾಡಿ ಹೇಳುವವರು ನಿಮ್ಮ ಕುರಿತು ಖಂಡಿತವಾಗಿ ಇನ್ನೊಬ್ಬರ ಬಳಿ ಚಾಡಿ ಹೇಳೇ ಹೇಳುತ್ತಾರೆ. ಈ ಚಾಡಿ ಮಾತುಗಳು ಸ್ನೇಹಿತರನ್ನು ಅಗಲಿಸುತ್ತದೆ, (ಜ್ಞಾನೋಕ್ತಿ 16:28). ನಾವು ಸಂಬಂಧಗಳನ್ನು ಗೌರವಿಸುವವರಾಗೋಣವೇ ಹೊರತು ಎಂದಿಗೂ ಈ ಚಾಡಿಹೇಳುವ ಸಾಂಕ್ರಾಮಿಕ ಕಾಯಿಲೆ ಬಲೆಗೆ ಸಿಲುಕದೆ ಇರೋಣ

ಒಂದು ಸತ್ಯ ವಿಚಾರವೆಂದರೆ ಚಾಡಿ ಹೇಳುವವರು ಯಾವಾಗಲೂ ನಿಮಗೆ ಹತ್ತಿರವಾದವರ ತಪ್ಪುಗಳನ್ನು/ ಕೊರತೆಗಳನ್ನು ಕುರಿತು ನಿಮ್ಮ ಬಳಿ ಹೇಳುತ್ತಾ ನಿಮಗೆ ಹತ್ತಿರವಾಗಲು ಬಯಸುತ್ತಾರೆ. ಆದರೆ ನಿಮಗೆ ಹತ್ತಿರವಾದವರ ಕುರಿತು ತಪ್ಪಾಗಿ ಹೇಳುವಾಗ ನೀವು ಅದನ್ನು ಸಹಿಸಲಾರರಿರಿ ಎಂದು ಅವರಿಗೆ ಹೇಳುತ್ತಾ  ಅಂತವರಿಗೆ ಒಂದು ಸೀಮಾ ರೇಖೆಯನ್ನು ಹಾಕಿರಿ. ಇತರ ಸಹೋದ್ಯೋಗಿಗಳು ಅಥವಾ ಇತರ ಸ್ನೇಹಿತರ ಕುರಿತು ಚಾಡಿ ಹೇಳುವುದರಿಂದಲೇ ಯಾರಿಗಾದರೂ ಯಾರೊಂದಿಗಾದರೂ  ಸಂಪರ್ಕ ಸಾಧಿಸಲು ಸುಲಭವಾಗಿ ಎಂದು  ಕಾಣುತ್ತದೆ. ಆದರೂ ಅದು ಭದ್ರವಾದ ವಿಶ್ವಾಸಾರ್ಹವಾದ ಸಂಬಂಧಗಳನ್ನು ನಿರ್ಮಿಸಿಕೊಳ್ಳಲು  ಉತ್ತಮವಾದ ಮಾರ್ಗವಲ್ಲ. ವಾಸ್ತವವಾಗಿ ಯಾರಾದರೂ ರಸಭರಿತವಾದ ಚಾಡಿ ಮಾತುಗಳನ್ನು ಆಡುವವರೊಂದಿಗೆ ಇರಲು ಇಷ್ಟಪಡುತ್ತಾರೆ ಎಂದರೆ ಅಂತಹ ವ್ಯಕ್ತಿಗಳನ್ನು ನಂಬುವ ವಿಚಾರದಲ್ಲಿ ನೀವು ಜಾಗರೂಕರಾಗಿರ್ರಿ.

ನೀವು ಹೊಸಬರನ್ನು ಭೇಟಿಯಾದಾಗ ಯಾವುದಾದರೂ ಚಾಡಿ ವಿಷಯ ಬಂದರೆ ಆ ಸಂವಾದವನ್ನು ಬೇರೆ ವಿಷಯಕ್ಕೆ ತಿರುಗಿಸಲು ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದರೆ ಅವರಿಗೆ ಪ್ರೀತಿಯಿಂದ ನೇರವಾಗಿ ಸ್ಪಷ್ಟವಾಗಿ ಈ ರೀತಿ ಮಾತನಾಡುವುದು ನಿಮಗೆ ಇಷ್ಟವಾಗುತ್ತಿಲ್ಲ ಎಂದು ಹೇಳಿ ಆ ಮಾತಿಗೊಂದು ಎಲ್ಲೆಯನ್ನು ಏರ್ಪಡಿಸಿರಿ. ಚಾಡಿ ಹೇಳುವಂತ ಗುಣವನ್ನು  ದೇವರು ನಿಮಗಾಗಿ ರೂಪಿಸಲಿಲ್ಲ. ಪ್ರತಿಯೊಬ್ಬರ ಅಪರಿಪೂರ್ಣತೆಯನ್ನು ಬೆಟ್ಟು ಮಾಡಿ ಎಲ್ಲರಿಗೂ ತೋರಿಸಲೆಂದು, ಮತ್ತೊಬ್ಬರ ಕುರಿತು ತೀರ್ಪು ಮಾಡಲೆಂದು ನಮ್ಮನ್ನು ಆತನು ಉಂಟುಮಾಡಲಿಲ್ಲ. ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಮತ್ತೊಬ್ಬರನ್ನು ನಮ್ಮಂತೆಯೇ ಪ್ರೀತಿಸಬೇಕೆಂದು ಸತ್ಯವೇದವು ಪದೇ ಪದೇ ಹೇಳುತ್ತಲೇ ಇರುತ್ತದೆ. ವಾಕ್ ಸ್ವಾತಂತ್ರ್ಯ ಎಂದರೆ ಬಾಯಿಗೆ ಬಂದಂತೆ ಮಾತನಾಡಬಹುದು ಎಂಬ ಅರ್ಥವಲ್ಲ.

ಪ್ರಿಯರೇ ಪವಿತ್ರಾತ್ಮನು ನಾವು ಸ್ವಾತಂತ್ರ್ಯದಲ್ಲಿ ಜೀವಿಸಬೇಕೆಂದು ಕರೆದಿದ್ದಾನೆ. ಆದರೆ ಆ ಅದ್ಭುತ ಸ್ವಾತಂತ್ರ್ಯವನ್ನು ಯಾರನ್ನೋ ಕೆಳಗೆ ನೂಕಲು ಅವಕಾಶವನ್ನಾಗಿ ಬಳಸಿಕೊಳ್ಳಬೇಡಿರಿ.ಸ್ವಾತಂತ್ರ್ಯವೆಂದರೆ ನಮ್ಮ ಸ್ವಾರ್ಥದಿಂದ ಮುಕ್ತರಾಗಿ ಪ್ರೀತಿಯಿಂದ ಪರಸ್ಪರ ಸೇವೆ ಮಾಡುವಂಥದ್ದು ಆಗಿದೆ. ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ನಾವು ಪ್ರೀತಿಯನ್ನು ವ್ಯಕ್ತಪಡಿಸಬೇಕು (ಗಲಾತ್ಯ 5:13)
ಪ್ರಾರ್ಥನೆಗಳು
ಕರ್ತನೇ, ನನ್ನ ಬಾಯಿಗೆ ಕಾವಲಿರಿಸು. ನನ್ನ ತುಟಿಗಳೆಂಬ ಕದಗಳನ್ನು ಕಾಪಾಡು.
 ತಂದೆಯೇ ಯೇಸು ನಾಮದಲ್ಲಿ ಚಾಡಿ ಮಾತುಗಳಿಂದ ನನ್ನನ್ನು ಬಿಡಿಸು. ಆಮೆನ್.


Join our WhatsApp Channel


Most Read
● ಗೌರವಿಸುವ ಜೀವಿತ ಜೀವಿಸಿ
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು.
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್