ಆ ದಿನ ಸಂಜೆಯಾದಾಗ ಯೇಸು ತನ್ನ ಶಿಷ್ಯರಿಗೆ, “ನಾವು ಆಚೆದಡಕ್ಕೆ ( ಸರೋವರದ ಇನ್ನೊಂದು ಬದಿಗೆ )ಹೋಗೋಣ,” ಎಂದು ಹೇಳಿದನು. (ಮಾರ್ಕ 4:35)
ಮೂಲಭೂತ ಸಂದೇಶವೆಂದರೆ, ನಿಮ್ಮ ಜೀವನದಲ್ಲಿ ಪ್ರಗತಿ ಸಾಧಿಸಿ ನಿಮ್ಮನ್ನು ಮುಂದಿನ ಹಂತಕ್ಕೆ ಏರಿಸಬೇಕೆಂದು ಕರ್ತನಾದ ಯೇಸು ಬಯಸುತ್ತಾನೆ. ಇದ್ದ ಸ್ಥಳದಲ್ಲೇ ನಿಶ್ಚಲವಾಗಿರುವುದು ಒಂದು ಗುರಿಯಲ್ಲ; ಬದಲಾಗಿ, ಬೆಳವಣಿಗೆ ಹೊಂದುತ್ತಾ ಹೋಗುವುದು ಮತ್ತು ನಿರಂತರವಾಗಿ ಸುಧಾರಣೆ ಹೊಂದುವುದೇ ಇದರ ಮುಖ್ಯ ಕೀಲಿಕೈ ಆಗಿದೆ. ನೀವು ಒಬ್ಬ ಉದ್ಯಮಿಯಾಗಿರಲಿ ಅಥವಾ ಸಂಬಳ ಪಡೆಯುವ ವ್ಯಕ್ತಿಯಾಗಿರಲಿ. ನೀವು ಹೊಸ ಎತ್ತರವನ್ನು ತಲುಪಬೇಕೆಂದು ಮತ್ತು ಅದರಲ್ಲಿ ನಿಮ್ಮ ಪೂರ್ಣ ಸಾಮರ್ಥ್ಯವನ್ನು ಅನಾವರಣ ಮಾಡಬೇಕೆಂದು ದೇವರು ಬಯಸುತ್ತಾನೆ. ದೇವರೊಂದಿಗಿನ ನಿಮ್ಮ ನಡಿಯುವ ಹಾದಿಯಲ್ಲಿ ಆಳವಾಗಿ ಅಧ್ಯಯನ ಮಾಡಲು ಮತ್ತು ಎತ್ತರಕ್ಕೆ ಏರಲು ಆತನು ನಿಮ್ಮನ್ನು ಪ್ರೋತ್ಸಾಹಿಸುತ್ತಾನೆ. ಇಂದು, ಇನ್ನೊಂದು ಬದಿಯನ್ನು ಅನ್ವೇಷಿಸಲು ಮತ್ತು ಕಂಡುಕೊಳ್ಳಲು ಇರುವ ಅವಕಾಶವನ್ನು ಸ್ವೀಕರಿಸಿ.
"ನಾವು ಹೋಗೋಣ" ಎಂಬ ಯೇಸುವಿನ ಮಾತುಗಳನ್ನು ಗಮನಿಸಿ. ನೀವು ಈ ಪ್ರಯಾಣವನ್ನು ಏಕಾಂಗಿಯಾಗಿ ಕೈಗೊಳ್ಳಬೇಕೆಂದು ಆತನು ಉದ್ದೇಶಿಸಿಲ್ಲ, ಬದಲಾಗಿ ಪ್ರತಿ ಹೆಜ್ಜೆಯಲ್ಲೂ ನಿಮ್ಮೊಂದಿಗೆ ಇರಲು ಆತನು ಬಯಸುತ್ತಾನೆ. ಯೇಸು ದೂರದಿಂದ ಗಮನಿಸುವ ದೂರ ಶಿಕ್ಷಣದ ಶಿಕ್ಷಕನಲ್ಲ; ಆತನು ನಿಮ್ಮ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿ , ಮಾರ್ಗದರ್ಶನ, ಬೆಂಬಲ ಮತ್ತು ಪ್ರೀತಿಯನ್ನು ನೀಡುವವನಾಗಿದ್ದಾನೆ. ತನ್ನ ಸೈನಿಕರಿಗೆ ಯುದ್ಧ ಪಥದಲ್ಲಿ ಸೂಚನೆಯನ್ನು ಆಜ್ಞಾಪಿಸುವ ಸೇನಾಪತಿಯಂತೆ ನಿಮ್ಮ ಪಕ್ಕದಲ್ಲಿ ಆತನು ನಿಂತಿಲ್ಲ ಬದಲಾಗಿ, ಆತನು ನಿಮ್ಮ ಪಕ್ಕದಲ್ಲೇ ಇದ್ದು ನೀವು ಎದುರಿಸುವ ಪ್ರತಿಯೊಂದು ಯುದ್ಧದಲ್ಲಿ ನಿಮ್ಮೊಂದಿಗೆ ಹೋರಾಡುತ್ತಾನೆ.
ಅದೇ ರೀತಿಯಾಗಿ , ನೀವು ಸವಾಲುಗಳು ಅಥವಾ ತೊಂದರೆಗಳನ್ನು ಅನುಭವಿಸುತ್ತಿರುವ ಕುಟುಂಬದ ಭಾಗವಾಗಿದ್ದರೆ, ಯೇಸುವಿನ ಜೊತೆಗೆ ಒಟ್ಟಿಗೆ ಕೆಲಸ ಮಾಡಿ ಇನ್ನೊಂದು ಬದಿಗೆ ಸಾಗುವ ಸಮಯ ಇದಾಗಿದೆ.
ಮುಂದಿನ ಹಂತಕ್ಕೆ ಹೋಗುವ ಪ್ರಕ್ರಿಯೆ.
ಅವರು ಜನರ ಗುಂಪನ್ನು ಬಿಟ್ಟು, ಯೇಸುವನ್ನು(ತಮ್ಮ ದೋಣಿಯಲ್ಲಿಯೇ) ಇದ್ದ ಹಾಗೆಯೇ ದೋಣಿಯಲ್ಲಿ(ಜೊತೆಗೆ ) ಕರೆದುಕೊಂಡು ಹೋದರು. ಯೇಸುವಿನ ಸಂಗಡ ಬೇರೆ ದೋಣಿಗಳೂ ಇದ್ದವು."(ಮಾರ್ಕ 4:36)
ಮಾರ್ಕ 4:36 (AMPC) ದ ಭಾಗದಲ್ಲಿ, ಅವರು ಜನಸಮೂಹವನ್ನು ಬಿಟ್ಟು ತಮ್ಮ ದೋಣಿಯಲ್ಲಿ ಪ್ರಯಾಣ ಬೆಳೆಸಿದಾಗ ಯೇಸುವನ್ನು ಸಹ ತಮ್ಮೊಂದಿಗೆ ಕರೆದೊಯ್ದರು ಎಂಬುದು ಗಮನಿಸಬೇಕಾದದು. ಇತರ ದೋಣಿಗಳು ಅವರ ಪ್ರಯಾಣದಲ್ಲಿ ಯೇಸುವಿನ ಸಂಗಡ ಬಂದವು. ಇನ್ನೊಂದು ಬದಿಗೆ ಮುನ್ನಡೆಯಲು ಮತ್ತು ದೇವರು ನಿಮ್ಮ ಜೀವನದ ಮೇಲೆ ಇಟ್ಟಿರುವ ಕರೆಯನ್ನು ಪೂರೈಸಲು, ಜನಸಂದಣಿಯಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳುವುದು ಅವಶ್ಯಕ ಎಂಬ ನಿರ್ಣಾಯಕ ಜ್ಞಾಪನೆಯಾಗಿ ಇದು ಕಾರ್ಯನಿರ್ವಹಿಸುತ್ತದೆ.
ನಿಮಗಾಗಿ ದೇವರ ಉದ್ದೇಶವನ್ನು ಅಳವಡಿಸಿಕೊಳ್ಳುವುದು ಎಂದರೆ ಕೆಲವು ಸಾಮಾಜಿಕ ಸಮಾರಂಭಗಳು , ಪಾರ್ಟಿಗಳು ಅಥವಾ ತಡರಾತ್ರಿಯ ಕೂಟಗಳನ್ನು ತ್ಯಜಿಸುವುದು ಎಂದರ್ಥ.
ಬದಲಾಗಿ, ನಿಮ್ಮ ಹೃದಯದಲ್ಲಿ ಉರಿಯುತ್ತಿರುವ ಅದೇ ದೃಷ್ಟಿಕೋನ ಮತ್ತು ಉತ್ಸಾಹವನ್ನು ಹಂಚಿಕೊಳ್ಳುವ ಜನರೊಂದಿಗೆ ಒಂದುಗೂಡಿರುವುದು ಮುಖ್ಯವಾಗುತ್ತದೆ. ಯೇಸುವಿನ ಮಾರ್ಗವನ್ನು ಯಶಸ್ವಿಯಾಗಿ ಮುನ್ನಡೆಯಲು ಮತ್ತು ಅನುಸರಿಸಲು, ಕೆಲವು ಸ್ನೇಹಿತರು ಅಥವಾ ಪರಿಚಯಸ್ಥರನ್ನು ಬಿಟ್ಟು ಹೋಗುವುದು ಅತ್ಯಗತ್ಯವಾಗಬಹುದು. ಈ ಪ್ರಕ್ರಿಯೆಯು ಸವಾಲಿನ ಮತ್ತು ನೋವಿನಿಂದ ಕೂಡಿರಬಹುದು, ಆದರೆ ಇದು ನಿಮ್ಮ ವೈಯಕ್ತಿಕ ಬೆಳವಣಿಗೆ, ನಿಮ್ಮ ಕಂಪನಿ ಅಥವಾ ನಿಮ್ಮ ಸಂಸ್ಥೆಯನ್ನು ಮುಂದಿನ ಹಂತಕ್ಕೆ ಮುನ್ನಡೆಸಲು ಅಗತ್ಯವಾದ ಹೆಜ್ಜೆಯಾಗಿದೆ.
ಕಠಿಣವಾದ ಒಂದು ಸತ್ಯವೆಂದರೆ ಯೇಸುವಿನೊಂದಿಗೆ ಮುಂದುವರಿಯಲು ಮತ್ತು ಆತನು ನಿಮ್ಮೊಳಗೆ ಇಟ್ಟಿರುವ ದೃಷ್ಟಿಕೋನವನ್ನು ಅನುಸರಿಸಲು; ಕೆಲವು ಸಂಬಂಧಗಳನ್ನು ಬಿಟ್ಟುಬಿಡಬೇಕಾಗಬಹುದು. ನೀವು ಇದನ್ನು ಮಾಡಲು ವಿಫಲವಾದರೆ, ಆ ವ್ಯಕ್ತಿಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು ಅಥವಾ ನಿಮ್ಮನ್ನು ಅವರ ಮಟ್ಟಕ್ಕೆ ಎಳೆಯಬಹುದು. ಆದ್ದರಿಂದ, ನಿಮ್ಮ ಸಂಬಂಧಗಳಲ್ಲಿ ವಿವೇಚನಾಶೀಲರಾಗಿರುವುದು ಮತ್ತು ನಿಮ್ಮ ಆಧ್ಯಾತ್ಮಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಮತ್ತು ನಿಮ್ಮ ಜೀವನಕ್ಕಾಗಿ ದೇವರ ಯೋಜನೆಗೆ ಹೊಂದಿಕೆಯಾಗುವವರಿಗೆ ಆದ್ಯತೆ ನೀಡುವುದು ಬಹಳ ಮುಖ್ಯ.
ಮತ್ತು ಇದೇನೋ ಅಷ್ಟೇನೂ ನೋವಿನಿಂದ ಕೂಡಿರಲಿಲ್ಲ ಎನ್ನುವಂತೆ ಇಲ್ಲಿ ಇನ್ನೂ ಹೆಚ್ಚಿನ ವಿಷಯವಿದೆ. " ಇದ್ದಕ್ಕಿದ್ದ ಹಾಗೆ ದೊಡ್ಡ ಬಿರುಗಾಳಿಯು ರಭಸವಾಗಿ ಬೀಸಿದ್ದರಿಂದ( ಚಂಡಮಾರುತದ ಪ್ರಮಾಣದಲ್ಲಿ) ಅಲೆಗಳು ದೋಣಿಗೆ ಅಪ್ಪಳಿಸಿದವು. ಆಗ ದೋಣಿಯೊಳಗೆ ನೀರು ನುಗ್ಗಿ ಅದು ಮುಳುಗಿ ಹೋಗುವುದರಲ್ಲಿತ್ತು." (ಮಾರ್ಕ್ 4:37)
ನೀವು ನಿಮ್ಮ ಆರಾಮ ವಲಯದಿಂದ ಹೊರಬಂದು ದೇವರು ನೀವು ಎಲ್ಲಿ ಇರಬೇಕೆಂದು ಬಯಸುವ ಸ್ಥಳಕ್ಕೆ ಹೋಗಲು ನಿರ್ಧರಿಸಿದಾಗಲೆಲ್ಲಾ, ನೀವು ದಾರಿಯುದ್ದಕ್ಕೂ ಬಿರುಗಾಳಿಗಳನ್ನು ಎದುರಿಸಬೇಕಾಗುತ್ತದೆ. ನಾನು ಒಮ್ಮೆ ಒಬ್ಬ ಪೈಲಟ್‌ನೊಂದಿಗೆ ಸಂಭಾಷಣೆ ನಡೆಸಿದೆ, ಅವರು ಒಂದು ಅಂತರ್ದೃಷ್ಟಿ ಇರುವ ಒಂದು ಸನ್ನಿವೇಶವನ್ನು ಹಂಚಿಕೊಂಡರು. ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಹಾರುವ ವೇಗದ ಬಗ್ಗೆ ನಾನು ಅವರನ್ನು ಕೇಳಿದಾಗ ಅವರು ಸಾಮಾನ್ಯವಾಗಿ ಮ್ಯಾಕ್ 0.75 ರ ಸುಮಾರಿಗೆ ಹಾರುತ್ತಾರೆ ಎಂದು ಉತ್ತರಿಸಿದರು. ಅವು ಏಕೆ ವೇಗವಾಗಿ ಹಾರುವುದಿಲ್ಲ ಎಂದು ನಾನು ವಿಚಾರಿಸಿದಾಗ, ಮ್ಯಾಕ್ 0.75 ಮೀರಿ ಹೋಗುವುದರಿಂದ ವಿಮಾನವು ಶಬ್ದ ನಿಯಂತ್ರಕ ಗೋಡೆಯನ್ನು ಮುರಿಯುವುದಕ್ಕೆ ಸಮೀಪವಾಗುತ್ತದೆ ಇದರಿಂದಾಗಿ ವಿಮಾನದ ವಿರುದ್ಧ ಅಪಾರ ಗಾಳಿಯ ಒತ್ತಡವನ್ನು ಸೃಷ್ಟಿಸುತ್ತದೆ ಎಂದು ಅವರು ವಿವರಿಸಿದರು.
ಅವರು ಇನ್ನೂ ಮುಂದುವರಿದು ಕಾನ್ಕಾರ್ಡ್ ವಿಮಾನವನ್ನು ವಿವರಿಸುತ್ತಾ ಇದು ಶಬ್ದದ ವೇಗಕ್ಕಿಂತ ವೇಗವಾಗಿ ಹಾರಲೆಂದೆ ವಿನ್ಯಾಸಗೊಳಿಸಲಾಗಿದೆ. ಕಾನ್ಕಾರ್ಡ್ ಅಷ್ಟು ಹೆಚ್ಚಿನ ವೇಗವನ್ನು ತಲುಪಿದಾಗ, ಅದು ವಿಮಾನದ ಆಘಾತ ತರಂಗಗಳಿಂದ ರಚಿಸಲಾದ ಪ್ರಬಲ ಧ್ವನಿಯಾದ ಸೋನಿಕ್ ಬೂಮ್ ಅನ್ನು ಉತ್ಪಾದಿಸುತ್ತದೆ.
ಇಲ್ಲಿ ಧ್ಯಾನಿಸಬೇಕಾದ ಒಂದು ಒಳನೋಟವಿದೆ: ನೀವು "ಸಾಮಾನ್ಯ" ವೇಗದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ನಿಮ್ಮ ಸುತ್ತಲಿನವರೊಂದಿಗೆ ಸಹಬಾಳ್ವೆ ನಡೆಸುವುದು ಸುಲಭ. ಇದು ಕಾಗೆಗಳೊಂದಿಗೆ ಹಾರುವಂತೆ ಸಂತೋಷವನ್ನು ವಿನಿಮಯ ಮಾಡಿಕೊಳ್ಳುವುದು ಮತ್ತು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ರೀತಿಯದ್ದಾಗಿದೆ . ಆದಾಗ್ಯೂ, ನೀವು ಹೊಸ ಎತ್ತರವನ್ನು ತಲುಪಲು ಮತ್ತು ನಿಮ್ಮ ಪ್ರಗತಿಯನ್ನು ವೇಗಗೊಳಿಸಲು ನಿಮ್ಮನ್ನು ನೀವು ಒತ್ತಾಯಿಸುವಾಗ ಸವಾಲುಗಳು ಉದ್ಭವಿಸುತ್ತವೆ ಮತ್ತು ಬಿರುಗಾಳಿಗಳು ಎದುರಾಗುವುದನ್ನು ನೀವು ಕಂಡುಕೊಳ್ಳಬಹುದು.
ನಿಮ್ಮ ಕನಸಿನ ಮನೆಯನ್ನು ನಿರ್ಮಿಸಲು ಅಥವಾ ನಿಮ್ಮ ಜೀವನಶೈಲಿಯನ್ನು ಉನ್ನತೀಕರಿಸಲು ನೀವು ನಿರ್ಧರಿಸಿದ ಕ್ಷಣವೇ ನೀವು ಸ್ಥಳೀಯ ಅಧಿಕಾರಿಗಳು ಅಥವಾ ನೆರೆಹೊರೆಯವರಿಂದ ದೂರುಗಳನ್ನು ಕೇಳುವಂತಹ ವಿರೋಧ ಅಥವಾ ಅಡೆತಡೆಗಳನ್ನು ಎದುರಿಸಬಹುದು. ನೀವು ಮುಂದಿನ ಹಂತವನ್ನು ತಲುಪಲು ಶ್ರಮಿಸಿದಾಗ, ಬೆಳವಣಿಗೆಯೊಂದಿಗೆ ಬರುವ ಬಿರುಗಾಳಿಗಳನ್ನು ಎದುರಿಸಲು ಸಿದ್ಧರಾಗಿರಿ.
ಈ ಪರಿಕಲ್ಪನೆಯು ಜೀವನದ ವಿವಿಧ ಅಂಶಗಳಿಗೆ ಅನ್ವಯಿಸುತ್ತದೆ: ನೀವು ಅಭಿಷೇಕದಲ್ಲಿ ಬೆಳೆಯಲು ಬಯಸಿದಾಗ, ನೀವು ಬಿರುಗಾಳಿಗಳನ್ನು ಎದುರಿಸಬಹುದು.
ನೀವು ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸಿದಾಗ, ನೀವು ಬಿರುಗಾಳಿಗಳನ್ನು ಎದುರಿಸಬಹುದು.
ನೀವು ನಿಮ್ಮ ದೈಹಿಕ ಸಾಮರ್ಥ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವಾಗ, ಬಾಹ್ಯ ಅಂಶಗಳು ನಿಮ್ಮ ದೃಢನಿಶ್ಚಯವನ್ನು ಪರೀಕ್ಷಿಸಬಹುದು.
ನೀವು ಕಾಗೆಗಳೊಂದಿಗೆ ಹಾರಲು ಮತ್ತು ಮೇಕೆಗಳೊಂದಿಗೆ ನಡೆಯಲು ತೃಪ್ತರಾಗಿರುವವರೆಗೆ, ನೀವು ಎಂದಿಗೂ ಗಮನಾರ್ಹ ಸಮಸ್ಯೆಗಳನ್ನು ಅಥವಾ ವಿರೋಧವನ್ನು ಎದುರಿಸುವುದಿಲ್ಲ. ಆದಾಗ್ಯೂ, ನೀವು ಉನ್ನತೀಕರಿಸಲ್ಪಾಡುವಾಗ ಮತ್ತು ದೇವರು ನಿಮಗಾಗಿ ಇಟ್ಟಿರುವ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದಾಗ, ಬೆಳವಣಿಗೆ ಮತ್ತು ಪ್ರಗತಿಯೊಂದಿಗೆ ಬರುವ ಬಿರುಗಾಳಿಗಳನ್ನು ಎದುರಿಸಲು ಮತ್ತು ಜಯಿಸಲು ಸಿದ್ಧರಾಗಿರಿ.
Bible Reading: 1 Kings 17-18
ಅರಿಕೆಗಳು
ನನ್ನ ಮುಂದಿನ ಹಂತವು ಬರೀ ಮಾತಿಗಷ್ಟೇ ಸೀಮಿತವಾಗುವುದಿಲ್ಲ; ನಾನು ಯೇಸುನಾಮದಲ್ಲಿ ಪವಿತ್ರಾತ್ಮನ ಬೆಂಕಿಯ ಮೂಲಕ ಮುನ್ನಡೆಯುತ್ತೇನೆ. ನನ್ನ ಮುಂದಿನ ಹಂತದ ವಿರುದ್ಧ ಎದುರಾಗುವ ಪ್ರತಿಯೊಂದು ದುರಾತ್ಮ ಕಾರ್ಯಸೂಚಿಯನ್ನು ನಾನು ಯೇಸುನಾಮದಲ್ಲಿ ನಾಶಪಡಿಸುತ್ತೇನೆ.
Join our WhatsApp Channel

Most Read
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು -2● ದೇವರಿಗಾಗಿ ಮತ್ತು ದೇವರೊಂದಿಗೆ.
● ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.
● ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವುದು
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕೃತಜ್ಞತೆಯ ಪಾಠ
● ಕ್ರಿಸ್ತ ಕೇಂದ್ರಿತ ಮನೆಯನ್ನು ನಿರ್ಮಿಸುವುದು.
ಅನಿಸಿಕೆಗಳು