ಜೀವನದಲ್ಲಿ ಸಾಧಿಸಲು ಯೋಗ್ಯವಾದ ಪ್ರತಿಯೊಂದು ಗುರಿಯು -ಆ ಕನಸನ್ನು ಪೂರೈಸಲು ಬೇಕಾದ ಸಿದ್ಧತೆಯ ಯೋಜನೆ ಮತ್ತು ಅವಶ್ಯಕತೆಗಳನ್ನು ಹೊಂದಿಸುವುದರಿಂದ ಆರಂಭವಾಗುತ್ತದೆ. ಅಂತಯೇ ದೇವರ ಬಲವು ನಿಮ್ಮ ಮೂಲಕ ಹರಿದು ಬರಲು ಅಥವಾ ನಿಮ್ಮ ಪರವಾಗಿ ಕಾರ್ಯ ಮಾಡಬೇಕೆಂದು ನೀವು ಬಯಸುವುದಾದರೆ ಆತನ ವಾಕ್ಯವು ಅದರ ಕುರಿತು ಏನನ್ನು ಹೇಳುತ್ತದೆ ಎಂಬುದನ್ನು ಕಲಿತುಕೊಳ್ಳಬೇಕು.
"ಇದ್ದದೇ ಇರುವದು, ನಡೆದದ್ದೇ ನಡೆಯುವದು, ಲೋಕದಲ್ಲಿ ಹೊಸದೇನೂ ಇಲ್ಲ."(ಪ್ರಸಂಗಿ 1:9)
ಅಂಥಹ ಅದ್ಭುತ ಸೂಚಕ ಕಾರ್ಯಗಳನ್ನು ಮಾಡಲು ನಮಗೆ ಪರಿಪೂರ್ಣವಾದ ಮಾದರಿಯಾದ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಜ್ಜೆ ಜಾಡಿದೆ. ಅದೇ ರೀತಿಯ ಹೆಜ್ಜೆ ಜಾಡನ್ನೇ ಅಪೋಸ್ತಲರು ಹಿಡಿಯ ಬೇಕಾಯಿತು. ಅದ್ಭುತ ಕರ್ತನಾದ ಯೇಸು ಕ್ರಿಸ್ತನಿಂದ ಅದ್ಭುತಗಳನ್ನು ಹೊಂದಿಕೊಳ್ಳಲು -ಅದ್ಭುತಗಳನ್ನು ಕಾರ್ಯಗತ ಮಾಡಲು ನಾವು ಸಹ ಇದೇ ರೀತಿಯ ಹೆಜ್ಜೆ ಜಾಡನ್ನು ಹಿಡಿಯಬೇಕು.
ದೇವರು ನಮಗೆ ಅನುಗ್ರಹಿಸಿರುವ ಅಧಿಕಾರವನ್ನು ಅರ್ಥ ಮಾಡಿಕೊಂಡು ಅದನ್ನು ಬಳಸುವುದೇ ನಿಮ್ಮ ಜೀವಿತದಲ್ಲಿ ನೀವು ಅದ್ಭುತಗಳು ಬಿಡುಗಡೆಯಾಗುವುದನ್ನು ನೋಡುವ ಕೀಲಿಕೈ ಆಗಿದೆ.
.
"ಒಂದಾನೊಂದು ದಿವಸ ಪೇತ್ರ ಯೋಹಾನರು ಮಧ್ಯಾಹ್ನದ ಮೇಲೆ ಮೂರು ಘಂಟೆಗೆ ನಡೆಯ ತಕ್ಕ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋಗುತ್ತಿರಲು ಹುಟ್ಟುಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಯಾರೋ ಹೊತ್ತುಕೊಂಡು ಬಂದರು. ದೇವಾಲಯದೊಳಕ್ಕೆ ಹೋಗುವವರಿಂದ ಭಿಕ್ಷೆಬೇಡುವದಕ್ಕಾಗಿ ಅವನನ್ನು ದೇವಾಲಯದ ಸುಂದರದ್ವಾರವೆಂಬ ಬಾಗಿಲಿನಲ್ಲಿ ದಿನಾಲು ಕೂಡ್ರಿಸುತ್ತಿದ್ದರು.
ಅವನು ದೇವಾಲಯದೊಳಕ್ಕೆ ಹೋಗುತ್ತಿರುವ ಪೇತ್ರ ಯೋಹಾನರನ್ನು ಕಂಡು ಭಿಕ್ಷಾಕೊಡಬೇಕು ಎಂದು ಕೇಳಲು [ಪೇತ್ರ ಯೋಹಾನರಿಬ್ಬರೂ ಅವನನ್ನು ದೃಷ್ಟಿಸಿ ನೋಡಿದರು. ಪೇತ್ರನು - ನಮ್ಮನ್ನು ನೋಡು ಅಂದನು.
ಅವನು ಅವರಿಂದ ಏನಾದರೂ ದೊರಕೀತೆಂದು ನಿರೀಕ್ಷಿಸಿ ಅವರನ್ನು ಲಕ್ಷ್ಯವಿಟ್ಟು ನೋಡಿದನು. ಆಗ ಪೇತ್ರನು - ಬೆಳ್ಳಿಬಂಗಾರವಂತೂ ನನ್ನಲ್ಲಿಲ್ಲ, ನನ್ನಲ್ಲಿರುವದನ್ನು ನಿನಗೆ ಕೊಡುತ್ತೇನೆ. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲೇ ಎದ್ದು ನಡೆದಾಡು ಎಂದು ಹೇಳಿ ಅವನ ಬಲಗೈಹಿಡಿದು ಎತ್ತಿದನು. ಆ ಕ್ಷಣವೇ ಅವನ ಕಾಲುಗಳಿಗೂ ಹರಡುಗಳಿಗೂ ಬಲಬಂತು; ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ ಹಾರುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು."
(ಅಪೊಸ್ತಲರ ಕೃತ್ಯಗಳು 3:1-8)
ಪೇತ್ರನು ಆ ಮನುಷ್ಯನಿಗಾಗಿ ಪ್ರಾರ್ಥಿಸಲಿಲ್ಲ ಎಂಬುದನ್ನು ನೀವಿಲ್ಲಿ ಗಮನಿಸಿರಿ. ಪೇತ್ರನು ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮಾಡಿದ ಕಾರ್ಯದ ಪ್ರಕಟಣೆಯನ್ನು ಹೊಂದಿ ಕಾರ್ಯಾಚರಣೆಗೆ ನಡೆಸಿದನು. ಪೇತ್ರನೋ ಕರ್ತನು ಶಿಲುಬೆಯ ಮೇಲೆ ಆತನು ಮಾಡಬೇಕಾದ ಆತನ ಕಾರ್ಯವನ್ನು ಮಾಡಿ ಮುಗಿಸಿದ್ದಾನೆ ಮತ್ತು ಆ ಶಕ್ತಿಯನ್ನು ತನ್ನಲ್ಲಿ ಇಟ್ಟಿದ್ದಾನೆ ಎಂಬುದನ್ನು ದೃಢವಾಗಿ ನಂಬಿದನು. ಈಗ ಆ ಬಲವನ್ನು ಬಿಡುಗಡೆಗೊಳಿಸಬೇಕಾದದ್ದು ತನ್ನ ಜವಾಬ್ದಾರಿ ಎಂದು ಅರಿತುಕೊಂಡು ಅದರಂತೆ ಪೇತ್ರನು ಮಾಡಿದನು.
ಒಂದು ದೊಡ್ಡ ಟ್ರಕ್ ನ ಮುಂದೆ ಒಬ್ಬ ನರಪೇತಲ ಪೊಲೀಸ್ ಪೇದೆ ನಿಂತು "ನಿಲ್ಲಿಸು" ಎಂದರೆ ಆ ದೊಡ್ಡ ಟ್ರಕ್ ನಿಲ್ಲುತ್ತದೆ. ಆ ಟ್ರಕ್ ಅನ್ನು ಅವನು ತನ್ನ ಸ್ವಂತ ದೇಹ ಬಲದಿಂದ ನಿಲ್ಲಿಸಿದನೇ? ಇಲ್ಲ! ಅವನು ಅವನ ಕೈಗೆ ಕೊಟ್ಟಿರುವ ಅಧಿಕಾರದ- ಆ ಅಧಿಕಾರದ ಬಲದಲ್ಲಿ ಅದನ್ನು ಮಾಡಿದನು.
ಮನುಷ್ಯರಿಂದ ಮನುಷ್ಯರಿಗೆ ಕೆಲವು ಅಧಿಕಾರ ಕೊಡಲ್ಪಡುತ್ತದೆ ಅವುಗಳನ್ನು "ಪ್ರಾಕೃತ ಅಧಿಕಾರ" ಎಂದು ಕರೆಯುತ್ತಾರೆ. ಕರ್ತನು ತನ್ನ ಶಿಷ್ಯರಿಗೆ (ನನಗೆ ಮತ್ತು ನಿಮಗೆ) ಕೆಲವು ಅಧಿಕಾರ ಕೊಟ್ಟಿದ್ದಾನೆ. ಅದನ್ನು "ಆತ್ಮಿಕ ಅಧಿಕಾರ" ಎಂದು ಕರೆಯುತ್ತಾರೆ. ಪ್ರಾಕೃತವಾಗಲೀ ಆತ್ಮಿಕವಾಗಲೀ ಅಧಿಕಾರದ ತತ್ವ ಒಂದೇ ಆಗಿರುತ್ತದೆ. ಯಾರಾದರೊಬ್ಬರು ಆ ಅಧಿಕಾರವನ್ನು ಅನುಗ್ರಹಿಸಬೇಕು.
ಆದ್ದರಿಂದಲೇ ಸತ್ಯವೇದವು "ಸೈತಾನನ್ನು ಎದುರಿಸಿ ಅವನು ಓಡಿಹೋಗುವನು" ಎಂದು ಹೇಳಿರುವಂತದ್ದು. ಹಾಗೆಂದ ಮಾತ್ರಕ್ಕೆ ಸೈತಾನನಿಗಿಂತ ನೀವು ಬಲಶಾಲಿಗಳು ಎಂದಲ್ಲ. ಆದರೆ ಕ್ರಿಸ್ತನವಾಕ್ಯವು ನಿಮ್ಮೊಳಗೆ ಸಂವೃದ್ಧಿಯಾಗಿರುವುದರಿಂದಲೇ (ಕೊಲಸ್ಸೆ 3:16)
"ಆತನು ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿ ಅಧಿಕಾರಗಳನ್ನು ಕೊಟ್ಟು ದೇವರ ರಾಜ್ಯದ ವಿಷಯವನ್ನು ಸಾರುವದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವದಕ್ಕೂ ಅವರನ್ನು ಕಳುಹಿಸಿದನು."(ಲೂಕ 9:1-2 )
ಕರ್ತನಾದ ಯೇಸುವು ತನ್ನ ಶಿಷ್ಯರಿಗೆ ಅಧಿಕಾರವನ್ನು ಬಲವನ್ನು ಅನುಗ್ರಹಿಸಿದನು ಎಂಬುದನ್ನು ಇಲ್ಲಿ ಗಮನಿಸಿರಿ. ಶಿಷ್ಯರು ಎಂದರೆ ಯಾರು? ಶಿಷ್ಯರೆಂದರೆ ತನ್ನ ಗುರುವಿನ ಬೋಧನೆಗಳನ್ನು ಸರಳವಾಗಿ ಸ್ವೀಕರಿಸಿ ಅದನ್ನು ಪಾಲಿಸುವವರೇ ಶಿಷ್ಯರು. ಹಾಗಾಗಿ ಈ ಅಧಿಕಾರವನ್ನು ಪಡೆದುಕೊಳ್ಳಲು ನೀವು ಕರ್ತನಾದ ಯೇಸುಕ್ರಿಸ್ತನ ಶಿಷ್ಯರಾಗಬೇಕು.
ಯೊಹಾನ 8:31ರ ಪ್ರಕಾರ "ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ - ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು....." ಎಂದಿದ್ದಾನೆ. ಈ ಒಂದು ದೇವರ ವಾಕ್ಯವು ನಮಗೆ ಸ್ಪಷ್ಟವಾಗಿ ಹೇಳುವುದೇನೆಂದರೆ, ಆ ಅಧಿಕಾರ ಮತ್ತು ಬಲವು ಕೇವಲ ಆ 12 ಮಂದಿ ಶಿಷ್ಯರುಗಳಿಗೆ ಮಾತ್ರವಲ್ಲ ಆತನನ್ನು ನಂಬಿ ಆತನ ವಾಕ್ಯದಂತೆ ನಡೆಯುವರೆಲ್ಲರಿಗಾಗಿಯೂ ಇದೆ ಎಂಬುದೇ.
"ನಾನು ಇನ್ನು ಮುಂದೆ ದೇವರ ವಾಕ್ಯವನ್ನು ಓದಲು ಮತ್ತು ಧ್ಯಾನಿಸಲು ಮುಂದಾಗುವೆನು. ಏನೇ ಆದರೂ ಅದನ್ನು ಕಾರ್ಯ ರೂಪದಲ್ಲಿ ಬರುವಂತೆ ಕಾರ್ಯ ಮಾಡುವೆನು." ಎಂದು ಇಂದು ಮನಪೂರ್ವಕವಾದ ಒಂದು ಆಯ್ಕೆ ಮಾಡಿರಿ: ನೀವು ಹೀಗೆ ಮಾಡುವುದಾದರೆ ದೇವರು ಅನುಗ್ರಹಿಸುವ ಅಧಿಕಾರದಲ್ಲಿ ಬೆಳೆಯುವುದನ್ನು ನೀವು ಕಾಣುವಿರಿ.
ಪ್ರಾರ್ಥನೆಗಳು
ನನಗೆ ಮತ್ತು ನನ್ನ ಕುಟುಂಬದ ವಿರುದ್ಧವಾಗಿ ಏಳುವಂತ ಪ್ರತಿಯೊಂದು ಅಂಧಕಾರ ಬಲಗಳ ಮೇಲೆ ಯೇಸು ನಾಮದಲ್ಲಿ ಅಜ್ಞಾಪಿಸುತ್ತೇನೆ. (ಬಿಡುಗಡೆ ಎನಿಸುವವರೆಗೂ ಇದನ್ನು ಹೇಳುತ್ತಲೇ ಇರಿ)
Join our WhatsApp Channel
Most Read
● ಪರಿಣಾಮಕಾರಿಯಾದ 40 ದಿನಗಳ ಉಪವಾಸ ಮತ್ತು ಪ್ರಾರ್ಥನೆಗೆ ಮಾರ್ಗಸೂಚಿಗಳು● ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
● ದೇವರ ಕೃಪೆಯನ್ನು ಸೇದುವುದು
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಆತನ ನೀತಿಯ ವಸ್ತ್ರದಿಂದ ಭೂಷಿತರಾಗುವುದು
● ಹಣಕಾಸಿನ ಅದ್ಭುತ ಬಿಡುಗಡೆ.
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
ಅನಿಸಿಕೆಗಳು