"ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡನು; ದೇವರು ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಈ ಲೋಕದ ಅಶಕ್ತರನ್ನು, ಬಲಹೀನರನ್ನು ಆರಿಸಿಕೊಂಡನು. ದೇವರು ಈ ಲೋಕದಲ್ಲಿ ಕೀಳಾದವರನ್ನೂ ಹಾಗೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವುದಕ್ಕಾಗಿ ಗಣನೆಗೆ ಬಾರದವರನ್ನು, ನಿಂದಿಸಲ್ಪಟ್ಟವರನ್ನು ಆರಿಸಿಕೊಂಡಿದ್ದಾನೆ. ( 1 ಕೊರಿಂಥ 1:27-28)
ದೇವರು ಉದ್ದೇಶಪೂರ್ವಕವಾಗಿಯೇ ತನ್ನ ಅದ್ಭುತವಾದ ಉದ್ದೇಶಗಳನ್ನು ಸಾಧಿಸಲು ದುರ್ಬಲವಾದ ಸಂಗತಿಗಳನ್ನು ಬಳಸುತ್ತಾನೆ. .. "ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ" ಅದಕ್ಕಾಗಿಯೇ ದೇವರು ಈ ರೀತಿ ಮಾಡುತ್ತಾನೆ (1 ಕೊರಿಂಥ 1:29).
ಎಲ್ಲಾ ಘನ -ಮಹಿಮೆಯು ದೇವರಿಗೆ ಮಾತ್ರ ಸಲ್ಲತಕ್ಕದ್ದು.
ಇಸ್ಕಾರಿಯೋತ ಯೂದನು ಕರ್ತನ ಹನ್ನೆರಡು ಅಪೊಸ್ತಲರಲ್ಲಿ ಒಬ್ಬನಾಗಿದ್ದ ವ್ಯಕ್ತಿಯಾಗಿದ್ದನು. ಅವನು ದೆವ್ವಗಳನ್ನು ಬಿಡಿಸಬಲ್ಲ ಮತ್ತು ರೋಗಿಗಳನ್ನು ಗುಣಪಡಿಸಬಲ್ಲ ಅಭಿಷಿಕ್ತ ವ್ಯಕ್ತಿಯಾಗಿದ್ದನು. ಅವನು ಇತರ ಅಪೊಸ್ತಲರು ಮತ್ತು ಕರ್ತನ ಶಿಷ್ಯರೊಂದಿಗೆ ಅನೇಕ ಸೇವಾ ಪ್ರವಾಸದಲ್ಲಿ ಹೆಚ್ಚಾಗಿ ಬಳಸಲ್ಪಟ್ಟಿ ದ್ದನು . (ಮತ್ತಾಯ 10 ಓದಿ) ಆದಾಗ್ಯೂ, ಯೂದನು ಕೆಲವೊಂದು ದೌರ್ಬಲ್ಯವನ್ನು ಹೊಂದಿದ್ದನು,ಆದರೆ ಅದು ಸ್ಪಷ್ಟವಾಗಿ ಕಾಣ ಬರಲಿಲ್ಲ ಏಕೆಂದರೆ ಅವನು ಅದನ್ನು ಚೆನ್ನಾಗಿ ಮರೆಮಾಚುವ ಹಾಗೆ ಅದನ್ನು ನಿರ್ವಹಿಸುತ್ತಿದ್ದನು.
"..... ಅವನು ಕಳ್ಳನಾಗಿದ್ದನು ಮತ್ತು ಹಣದ ಚೀಲವನ್ನು ನಿರ್ವಹಿಸುವ ಕಾರ್ಯ ಅವನಿಗಿದ್ದದ್ದರಿಂದ ಅದರಲ್ಲಿ ಹಾಕಿದ್ದನ್ನು ಅವನು ತೆಗೆದುಕೊಳ್ಳುತ್ತಿದ್ದನು." ಎಂದು ಯೋಹಾನ 12: 6 ರಲ್ಲಿ, ಪವಿತ್ರಾತ್ಮನು ಅವನ ಈ ದೌರ್ಬಲ್ಯವನ್ನು ಬಹಿರಂಗಪಡಿಸುತ್ತಾನೆ.
ಅನೇಕ ಸಂದರ್ಭಗಳಲ್ಲಿ, ಕರ್ತನು ತನ್ನ ಬಳಿಗೆ ಬಂದ ಸ್ತ್ರೀ -ಪುರುಷರ ಜೀವನದ ಆಳವಾದ ರಹಸ್ಯಗಳನ್ನು ಹೇಗೆ ಬಹಿರಂಗಪಡಿಸುತ್ತಾನೆ ಎಂಬುದನ್ನೂ ಯೂದನು ನೋಡಿದ್ದನು. ಆತನ ಅದ್ಭುತ ಕೃಪೆಯಿಂದ ಪಾಪಿಗಳು ಹೇಗೆ ರಕ್ಷಿಸಲ್ಪಡು ತ್ತಿದ್ದರು ಎಂಬುದನ್ನೂ ಅವನು ನೋಡಿದ್ದನು. ಆದರೆ ಇದೆಲ್ಲವನ್ನು ತಿಳಿದಿದ್ದರೂ, ಯೂದನು ತನ್ನ ಚಾರಿತ್ರ್ಯದ ದೋಷವನ್ನು ವೈಯಕ್ತಿಕವಾಗಿ ಯೇಸುವಿನ ಬಳಿಗೆ ತೆಗೆದುಕೊಂಡು ಹೋಗಿ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಎಂದಿಗೂ ಮಾಡಲಿಲ್ಲ. ಅವನು ಬಯಸಿದ್ದರೆ ಯೂದನು ಅದನ್ನು ಹೊಂದಿಕೊಂಡು ತನ್ನ ದೌರ್ಬಲ್ಯವನ್ನು ಜಯಿಸಲು ಅನುಗ್ರಹವನ್ನು ಪಡೆಯಬಹುದಾಗಿತ್ತೆಂಬ ನಂಬಿಕೆ ನನಗೆ ಖಂಡಿತ ಇದೆ .
ಕರ್ತನಿಗೂ ಕೂಡ ಅದರ ಬಗ್ಗೆ ತಿಳಿದಿದ್ದರೂ ಯೂದನೇ ಅದನ್ನು ಒಪ್ಪಿಕೊಂಡು ಅರಿಕೆಮಾಡಬೇಕೆಂದು ಆತನು ಬಯಸಿದನು ; ಯೂದನು ಮಾರ್ಪಟಾಗಬೇಕೆಂದು ಆತನು ಬಯಸಿದನು, ಆದರೆ ಯೂದನು ಹಾಗೆ ಮಾಡಲಿಲ್ಲ, ಅದರಿಂದ ಅದೇ ವ್ಯಕ್ತಿತ್ವ ನ್ಯೂನತೆಯು ಯೂದನು ಕೇವಲ 30 ಬೆಳ್ಳಿಯ ತುಂಡುಗಳಿಗೆ - ಒಬ್ಬ ಗುಲಾಮನ ಬೆಲೆಗೆ ತನ್ನ ಒಡೆಯನನ್ನೇ ಯೂದನು ಮಾರಿಬಿಡುವಂತೆ ಮಾಡಲು ಕಾರಣವಾಯಿತು. ನೀವು ಸಂಪನ್ಮೂಲಗಳನ್ನು ಮತ್ತು ಸಂಬಂಧಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರಲ್ಲಿಯೇ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಕಾಣಬಹುದು.
ನಾವು ಎಂತಹ ದೌರ್ಬಲ್ಯತೆ ಹೊಂದಿದವರಾಗಿದ್ದೀವೆ ಎಂದು ನಮ್ಮನ್ನು ನಾವು ಗುರುತಿಸಿಕೊಂಡು ದೇವರಲ್ಲಿ ಅದನ್ನು ಒಪ್ಪಿಸಿಕೊಡುವಾಗ ಮಾತ್ರವೇ ನಾವು ಬಾಹ್ಯವಾಗಿ ಅವುಗಳನ್ನು ಹತ್ತಿಕ್ಕಲು ಸಾಧ್ಯ ಮತ್ತು ನಾವು ನಮ್ಮ ದೌರ್ಬಲ್ಯಯೊಂದಿಗೆ ಹೋರಾಡುವ ಬದಲಿಗೆ ವಿಮೋಚನೆಯನ್ನೂ , ಸ್ವಸ್ಥತೆ ಮತ್ತು ಸಾಂತ್ವನವನ್ನುಕೊಡುವಂತ ನಮ್ಮ ದೇವರ ಒದಗಿಸುವಿಕೆಯನ್ನು ಮತ್ತು ಒಳ್ಳೆಯತನವನ್ನು ನೋಡಬಹುದು. (2 ಕೊರಿಂಥ 12:9)
Bible Reading : Genesis 4 -7
ಪ್ರಾರ್ಥನೆಗಳು
1. “ನಾನು ಕರ್ತನ ಕುರಿತು ಆತನೇ ನನ್ನ ಆಶ್ರಯವೂ ನನ್ನ ಕೋಟೆಯೂ ; ನನ್ನ ದೇವರು , ನಾನು ಆತನನ್ನು ನಂಬುತ್ತೇನೆ. ನಿಶ್ಚಯವಾಗಿಯೂ ಆತನು ನನ್ನ ಕುಟುಂಬ ಸದಸ್ಯರನ್ನು ಮತ್ತು ನನ್ನನ್ನು ಬೇಟೆಗಾರನ ಪ್ರತಿಯೊಂದು ಬಲೆಯಿಂದಲೂ ಅಪಾಯಕಾರಿ ರೋಗದಿಂದ ರಕ್ಷಿಸುವನು".ಎಂದು ಹೇಳುತ್ತೇನೆ
2. ನನ್ನ ಪ್ರಾರ್ಥನೆಗಳಿಗೆ ಉತ್ತರಗಳನ್ನು ತಡೆಯುವ ಪ್ರತಿಯೊಂದು ಶಕ್ತಿಯೂ ಯೇಸುವಿನ ರಕ್ತದಿಂದ ನಿರ್ಮೂಲವಾಗಲಿ .
3. ನಾನು ನನ್ನ ಕುಟುಂಬ ಸದಸ್ಯರ ಮೇಲೂ ಮತ್ತು ನನ್ನ ಮೇಲೆಯೂ ಬಿಡುಗಡೆಯನ್ನು , ಸ್ವಸ್ಥತೆಯನ್ನು , ವಿಮೋಚನೆಯನ್ನೂ ಮತ್ತು ಪ್ರಗತಿಯನ್ನು ಯೇಸುನಾಮದಲ್ಲಿ ಘೋಷಿಸುತ್ತೇನೆ .
4. ತಂದೆಯೇ, ನನ್ನ ಬಲಹೀನತೆಯಲ್ಲಿಯೇ ನಿನ್ನ ಕೃಪೆಯು ಪರಿಪೂರ್ಣವಾಗಿದೆ ಎಂದು ನಾನು ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. (ನಿಮ್ಮ ದೌರ್ಬಲ್ಯವನ್ನು ಕರ್ತನ ಮುಂದೆ ಒಪ್ಪಿಕೊಳ್ಳಿ). ತಂದೆಯೇ, ನೀನು ನನ್ನನ್ನು ಎಂದಿಗೂ ತೊರೆಯುವುದಿಲ್ಲ ಅಥವಾ ನನ್ನನ್ನು ಕೈಬಿಡುವುದಿಲ್ಲ ಎಂದು ನಾನು ನಿನಗೆ ಯೇಸುವಿನ ಹೆಸರಿನಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ಆಮೆನ್.
Join our WhatsApp Channel
Most Read
● ಮೂರು ನಿರ್ಣಾಯಕ ಪರೀಕ್ಷೆಗಳು● ವ್ಯರ್ಥವಾದದಕ್ಕೆ ಹಣ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
● ಈ ದಿನಗಳಲ್ಲಿ ಇದನ್ನು ಮಾಡಿರ
● ನಡೆಯುವುದನ್ನು ಕಲಿಯುವುದು
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
ಅನಿಸಿಕೆಗಳು