ಅನುದಿನದ ಮನ್ನಾ
ವಾಕ್ಯದಲ್ಲಿರುವ ಜ್ಞಾನ
Saturday, 4th of January 2025
3
2
71
Categories :
ದೇವರವಾಕ್ಯ ( Word of God )
"ನೀವು ಈ ವಾಕ್ಯಗಳನ್ನು ಕೈಕೊಂಡು ಅನುಸರಿಸಿರಿ. ನೀವು ಅನುಸರಿಸಿ ನಡೆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ, ವಿವೇಕಿಗಳೂ ಎಂದು ತಿಳಿಯುವರು. ಅವರು ಈ ಆಜ್ಞೆಗಳ ವಿಷಯದಲ್ಲಿ ವರ್ತಮಾನವನ್ನು ಕೇಳಿ, “ಈ ದೊಡ್ಡ ಜನಾಂಗವು ಜ್ಞಾನವಿವೇಕವುಳ್ಳ ಜನಾಂಗ” ಎಂದು ಹೇಳುವರು.
(ಧರ್ಮೋಪದೇಶಕಾಂಡ 4:6)
ದೇವರವಾಕ್ಯಗಳನ್ನು ಅಭ್ಯಾಸ ಮಾಡುವುದರಿಂದ ನಾವು ಜ್ಞಾನದಲ್ಲಿಯೂ ಮತ್ತು ತಿಳುವಳಿಕೆಯಲ್ಲಿಯೂ ಬೆಳೆಯುವಂತೆ ಮಾಡುತ್ತದೆ ಎಂಬುದನ್ನು ಮೇಲಿನ ವಾಕ್ಯಭಾಗದಿಂದ ನಾವು ನೋಡುತ್ತೇವೆ: ನಾವು ವಾಕ್ಯವನ್ನು ಅಭ್ಯಾಸ ಮಾಡುವುದು ನಮ್ಮ ಸುತ್ತಲಿನ ಜನರ ಮೇಲೆ ಪ್ರಭಾವ ಬೀರುವಂತೆ ಮಾಡುತ್ತದೆ.
"ಅವರು ಈ ಆಜ್ಞೆಗಳ ವಿಷಯದಲ್ಲಿ ವರ್ತಮಾನವನ್ನು ಕೇಳಿ, "ಈ ದೊಡ್ಡ ಜನಾಂಗವು ಜ್ಞಾನವಿವೇಕವುಳ್ಳ ಜನಾಂಗ” ಎಂದು ಹೇಳುವರು. (ಧರ್ಮೋಪದೇಶಕಾಂಡ 4:6)
ಕೀರ್ತನೆ 119:98 ರಲ್ಲಿ
"ನಿನ್ನ ಆಜ್ಞೆಗಳು ಯಾವಾಗಲೂ ನನ್ನೊಂದಿಗೆ ಇರುವುದರಿಂದ ಅವು ನನ್ನನ್ನು ನನ್ನ ಶತ್ರುಗಳಿಗಿಂತ ಜ್ಞಾನಿಯಾಗಿ ಮಾಡಿವೆ". ಎಂದು ಕೀರ್ತನೆಗಾರನು ಬರೆದಿದ್ದಾನೆ
ನಮ್ಮ ಆತ್ಮಗಳ ಶತ್ರು ದೊಡ್ಡ ಶತ್ರು- ಸೈತಾನನು . ದೇವರ ವಾಕ್ಯದಿಂದ ಬರುವ ವಿವೇಕವು ನಿಮ್ಮನ್ನು ಸೈತಾನನಿಗಿಂತ ಮೈಲುಗಳಷ್ಟು ಮುಂದಿಡುತ್ತದೆ. ಶತ್ರು ವಾಕ್ಯವನ್ನು ತಿಳಿದಿರಬಹುದು ಮತ್ತು ವಾಕ್ಯವನ್ನು ಉಲ್ಲೇಖಿಸಬಹುದು, ಆದರೆ ಅವನಿಗೆ ಆ ವಾಕ್ಯದ ತಿಳುವಳಿಕೆಯನ್ನು ಹೊಂದಲಾರನು. ಅದು ಅವನಿಗೆ ಮರೆಯಾಗಿದೆ. ಉದಾಹರಣೆಗೆ: ಸೈತಾನನು ತಿಳಿದಿದ್ದರೆ, ಅವನು ಎಂದಿಗೂ ಯೇಸುವನ್ನು ಶಿಲುಬೆಗೇರಿಸುತ್ತಿರಲಿಲ್ಲ. (1 ಕೊರಿಂಥ 2:8)
"ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ, ಸದಾಕಾಲವೂ ಅವೇ ನನಗಿವೆ. [99] ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ, ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ."(ಕೀರ್ತನೆ 119:98-99)
ದೇವರ ವಾಕ್ಯದ ಜ್ಞಾನವು ಈ ಪ್ರಪಂಚದ ಅನೇಕ ಶೈಕ್ಷಣಿಕ ಪದವಿಗಳನ್ನು ಹೊಂದಿದ ಶಿಕ್ಷಕರಿಗಿಂತಲೂ ನಮ್ಮನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ. ಇನ್ನೂ ವಯಸ್ಸು ಎನ್ನುವುದೂ ಸಹ ಜ್ಞಾನವನ್ನೂ ಅಳೆಯುವ ಅಳತೆಗೋಲಾಗಲು ಸಾಧ್ಯವಿಲ್ಲ. ಜ್ಞಾನವು ವಯಸ್ಸಿನ ಹಿರಿತನವನ್ನು ಮೀರಿದ್ದಾಗಿದೆ.
ನಿಜವಾದ ಜ್ಞಾನ ಎನ್ನುವಂಥದ್ದು ಈ ಲೋಕದಿಂದ ಕ್ರೋಡಿಕರಿಸಿಕೊಂಡ ಜ್ಞಾನವನ್ನು ಮೀರಿದ್ದಾಗಿದೆ.
ಜ್ಞಾನವು ಮೌಲ್ಯವುಳ್ಳದ್ದು, ಆದರೆ ಜೀವನವನ್ನು ಬದಲಾಯಿಸ ಬಲ್ಲಂತೆ ನಮ್ಮ ಜೀವನಕ್ಕೆ ಆ ಜ್ಞಾನವನ್ನು ಹೇಗೆ ಅನ್ವಯಿಸಿ ಕೊಳ್ಳಬೇಕು - ಎಂಬುದೇ ನಿಜವಾದ ವಿವೇಕವಾಗಿದೆ.
ದಯಮಾಡಿ ನಿಮ್ಮ ಸುತ್ತಲೂ ಒಮ್ಮೆ ನೋಡಿ, ನೀವು ನೋಡುವ ಜ್ಞಾನಿಗಳು ಮತ್ತು ವಿದ್ಯಾವಂತರು ಎಂದು ಎನಿಸಿಕೊಳ್ಳುವವರೆಲ್ಲರೂ ನಿಜವಾದ ಜ್ಞಾನಿಗಳಾಗಿರುವುದಿಲ್ಲ. ಮತ್ತು ನೀವು ಅವರ ಜೀವನದ ಫಲಿತಾಂಶ ನೋಡುವಾಗ ಅವರ ಮಸ್ತಕ ಜ್ಞಾನವು ಜೀವನಕ್ಕೆ ಬೇಕಾದ ವಿವೇಕಯುತ ನಿರ್ಧಾರಗಳನ್ನು ಅವರಿಗೆ ಖಾತರಿಯನ್ನು ಕೊಡುವುದಿಲ್ಲ ಎಂಬುದನ್ನು ಎಂದು ಅರಿತುಕೊಳ್ಳುವಿರಿ.
ಅಪೊಸ್ತಲ ಪೌಲನು "ಕ್ರಿಸ್ತ ಯೇಸು ದೇವರ ಕಡೆಯಿಂದ ನಮಗೆ ಜ್ಞಾನವೂ,.....ಆಗಿದ್ದಾನೆ."ಎಂದು 1 ಕೊರಿ 1:30ರಲ್ಲಿ ಬರೆಯುತ್ತಾನೆ.
ಪೌಲನು ಮೂಲಭೂತವಾಗಿ " ದೇವರವಾಕ್ಯವೇ ನಮ್ಮ ಜ್ಞಾನವಾಗಿದೆ. ಜ್ಞಾನವೇ ಪ್ರಧಾನ ವಿಷಯವಾಗಿದೆ;" ಎಂದು ಹೇಳುತ್ತಿದ್ದಾನೆ.
ಆದುದರಿಂದ "ಜ್ಞಾನವನ್ನು ಪಡೆಯಬೇಕೆಂಬುದೇ ಜ್ಞಾನಬೋಧೆಯ ಪ್ರಥಮಪಾಠ, ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ.
ಜ್ಞಾನವೆಂಬಾಕೆಯು ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು, ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು.
ಆಕೆಯು ನಿನ್ನ ತಲೆಗೆ ಅಂದದ ಪುಷ್ಪಮಾಲೆಯನ್ನು ಇಟ್ಟು, ಸುಂದರ ಕಿರೀಟವನ್ನು ನಿನಗೆ ಒಪ್ಪಿಸುವಳು.”(ಜ್ಞಾನೋ 4:7-9 )
ನಿಮಗೆ ಈ ಜ್ಞಾನ ಬೇಕಾದರೆ, ನೀವು ಅದರ ಹಿಂದೆ ಬೀಳಬೇಕು. ದೇವರು ಒಂದು ನಿರ್ದಿಷ್ಟ ಮಟ್ಟದ ಜ್ಞಾನವನ್ನು ಪ್ರತಿಯೊಬ್ಬರಿಗೂ ನೀಡಿದ್ದಾನೆ. ಆದರೆ ನೀವು ಹೆಚ್ಚಿನ ಜ್ಞಾನವನ್ನು ಬಯಸಿದರೆ, ನೀವು ಅದನ್ನು ಪಡೆಯಲು ಸಂಕಲ್ಪ ಮಾಡಬೇಕು. ಇದು ಒಂದು ಬಾರಿ ಮಾಡಿ ಬಿಡುವ ಪ್ರಕ್ರಿಯೆಯಲ್ಲ; ಇದು ದೇವರ ವಾಕ್ಯದಲ್ಲಿ ಜ್ಞಾನವನ್ನು ಹುಡುಕುವ ದಿನನಿತ್ಯದ ಪ್ರಕ್ರಿಯೆಯಾಗಿದೆ.
Bible Reading : Genesis 12 -15
ಪ್ರಾರ್ಥನೆಗಳು
1. ತಂದೆಯೇ, ದಯವಿಟ್ಟು ನನ್ನನ್ನು ಕರುಣಿಸು; ನನ್ನನ್ನು ಕ್ಷಮಿಸಿ, ಮತ್ತು ಎಲ್ಲಾ ಅಪರಾಧಗಳಿಂದ ಯೇಸುನಾಮದಲ್ಲಿ ನನ್ನನ್ನು ಶುದ್ಧೀಕರಿಸಿ,
2. ನೀವು ಏನನ್ನಾದರೂ ಅನುಭವಿಸುವವರೆಗೆ "ಯೇಸುವಿನ ರಕ್ತ " ಎಂದು ಹೇಳುತ್ತಿರಿ.
3. ಯೇಸುವಿನ ರಕ್ತವು ಯೇಸುನಾಮದಲ್ಲಿ ನನ್ನೆಲ್ಲ ತಲಾ ತಲಾಂತರ ಮಾಲಿನ್ಯದಿಂದ ನನ್ನನ್ನು ಶುದ್ಧೀಕರಿಸುತ್ತದೆ.
4. ಯೇಸುವಿನ ರಕ್ತವು ಕನಸಿನಲ್ಲಿನ ಎಲ್ಲಾ ಮಾಲಿನ್ಯದಿಂದ ಯೇಸುನಾಮದಲ್ಲಿ ನನ್ನನ್ನು ಶುದ್ಧೀಕರಿಸುತ್ತದೆ.
5. ನನ್ನ ಆತ್ಮ, ಪ್ರಾಣ ಮತ್ತು ದೇಹವನ್ನು ಅಪವಿತ್ರಗೊಳಿಸಲು ಪ್ರಯತ್ನಿಸುವ ಎಲ್ಲಾ ಬಲಗಳು ಯೇಸುನಾಮದಲ್ಲಿ ನಿರ್ಮೂಲವಾಗಲಿ.
6. ತಂದೆಯೇ, ದಯಮಾಡಿ ನೀತಿಯನ್ನು ಪ್ರೀತಿಸುವ ಮತ್ತು ಅಧರ್ಮವನ್ನು ಆಸಕ್ತಿಯಿಂದ ದ್ವೇಷಿಸುವಂತ ಕೃಪೆಯನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸು; ದಯಮಾಡಿ, ನನ್ನ ಸುತ್ತಲಿನವರಿಗಿಂತಲೂ ಹೆಚ್ಚಾಗಿ, ನನಗೆ ಆನಂದ ತೈಲದಿಂದ ನನ್ನನ್ನು ಅಭಿಷೇಕಿಸಿ.
7. ತಂದೆಯೇ, ದಯಮಾಡಿ , ನಿನ್ನ ವಾಕ್ಯದಲ್ಲಿ ನನ್ನ ಹೆಜ್ಜೆಗಳನ್ನು ಆದೇಶಿಸಿ ನಡೆಸು ಮತ್ತು ಯಾವುದೇ ಅನ್ಯಾಯವು ಯೇಸುನಾಮದಲ್ಲಿ ಆಳದಿರಲಿ.
8. ತಂದೆಯೇ, ನನ್ನ ಹೃದಯದಲ್ಲಿನ ಪ್ರತಿ ಯೊಂದು ಹೋರಾಟವನ್ನು ನಿನ್ನಾತ್ಮವು ನಿನ್ನ ಬೆಂಕಿಯಿಂದ ಸುಟ್ಟು ಬೂದಿ ಮಾಡಲಿ .
9. ನೀವು ಬಿಡುಗಡೆಯನ್ನು ಅನುಭವಿಸುವವರೆಗೆ "ಪವಿತ್ರಾತ್ಮದ ಅಗ್ನಿ " ಎಂದು ಹೇಳುತ್ತಿರಿ.
10. ತಂದೆಯೇ, ನಿನ್ನ ವಾಕ್ಯದ ವಿರುದ್ಧ ನನ್ನ ಹೃದಯವನ್ನು ಎಂದಿಗೂ ಕಠಿಣಗೊಳಿಸಿಕೊಳ್ಳದಂತೆ ಯೇಸುವಿನ ಹೆಸರಿನಲ್ಲಿ ನನಗೆ ಅನುಗ್ರಹವನ್ನು ನೀಡು
11. ಕ್ರಿಸ್ತನು ನನಗೆ ದೇವರಿಂದ ದೊರೆತ ಜ್ಞಾನವಾಗಿದ್ದಾನೆ. (ಇದನ್ನು ದಿನವಿಡೀ ಹೇಳುತ್ತಿರಿ)
Join our WhatsApp Channel
Most Read
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ನೆಪ ಹೇಳುವ ಕಲೆ
● ಯೇಸುವನ್ನು ನೋಡುವ ಬಯಕೆ
ಅನಿಸಿಕೆಗಳು