"ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ಹೇಗಂದರೆ ದೇವಕುಮಾರನ ಮೇಲಣ ನಂಬಿಕೆಯಲ್ಲಿಯೇ. ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು."(ಗಲಾತ್ಯದವರಿಗೆ 2:20)
ನೂತನ ಜನ್ಮ ಹೊಂದುವಾಗ ನಮ್ಮಲ್ಲಿ ಪ್ರತಿಯೊಬ್ಬ ವಿಶ್ವಾಸಿಯ ಜೀವಿತದಲ್ಲಿ ಜರಗುವ ಕಾರ್ಯವೇನೆಂದರೆ ನಮ್ಮ ಹಳೆಯ ಪಾಪಮಯ ಸ್ವಭಾವವನ್ನು (ಮರಣವನ್ನು)ಕ್ರಿಸ್ತನ ಸ್ವಭಾವಕ್ಕೆ (ಜೀವಕ್ಕೆ) ವಿನಿಮಯ ಮಾಡಿಕೊಳ್ಳುತ್ತೇವೆ. ಕ್ರಿಸ್ತನಲ್ಲಿರುವ ರಕ್ಷಣೆಯನ್ನು ನಾವು ಹೊಂದಿಕೊಳ್ಳುವ ನೂತನ ಜನ್ಮದ ಸಮಯದಲ್ಲಿ ನಂಬಿಕೆಯ ಜೀವಿತವನ್ನು ಪಡೆದುಕೊಳ್ಳುತ್ತೇವೆ. ನಾವು ನಮ್ಮ ಹಳೆಯ ಜೀವಿತದ ತಪ್ಪುಗಳನ್ನು ಪುನರಾವರ್ತನೆ ಮಾಡದೆ ನಮ್ಮ ಹಳೆಯ ಯಜಮಾನನಾದ ಸೈತಾನನ ಪ್ರಭಾವಕ್ಕೂ ಒಳಗಾಗದೆ ನೂತನ ಜೀವಿತಕ್ಕೆ ಸಾಗುತ್ತೇವೆ.
ನಾವು ನೂತನ ಸೃಷ್ಟಿಯೇ ಆಗಿ ಪರಿಶುದ್ಧರು, ನೀತಿವಂತರು ಎಂದು ಎಣಿಸಲ್ಪಡುತ್ತೇವೆ. ನಾವು ನಮ್ಮ ಹಳೆಯ ಸ್ವಭಾವಕ್ಕೆ ಸತ್ತು ಕ್ರಿಸ್ತನಲ್ಲಿ ಜೀವಿಸುತ್ತೇವೆ. (2ಕೊರಿ 5:17)
ನಂಬಿಕೆ ವಿಶ್ವಾಸದೊಂದಿಗೆ ಪರಸ್ಪರ ವಿನಿಮಯಗೊಳ್ಳುವಂತಾದ್ದಾಗಿದ್ದು ಒಬ್ಬ ವ್ಯಕ್ತಿಯ ಅಥವಾ ಒಂದು ಗುಂಪಿನ ಜನರಲ್ಲಿರುವ ಅವರ ನಡವಳಿಕೆಗಳು ಪ್ರತಿಕ್ರಿಯೆಗಳು ಮತ್ತು ನಿರ್ಣಯ ಕೈಗೊಳ್ಳ ಬೇಕಾದ ಮನೋಭಾವಗಳು, ನಿಯಮಗಳು, ತತ್ವಗಳು, ಮೌಲ್ಯಗಳು ಮತ್ತು ಸತ್ಯಗಳ ಗುಚ್ಛವಾಗಿದೆ.ಈ ನಿಯಮಗಳೇ ಒಬ್ಬ ವ್ಯಕ್ತಿಯ ಜೀವನವನ್ನು ಆಳ್ವಿಕೆ ಮಾಡುವಂತದ್ದು. ಇದೇ ಆ ವ್ಯಕ್ತಿಯ ಜೀವನಶೈಲಿಯನ್ನು ವ್ಯಾಖ್ಯಾನಿಸುವಂತಾದ್ದಾಗಿದೆ. ಇದರಿಂದಲೇ ಆ ಒಬ್ಬ ವ್ಯಕ್ತಿಯ ಜೀವನ ಶೈಲಿಯು ಬದಲಾದರೆ ನಾವು ಆ ವ್ಯಕ್ತಿಯ ನಂಬಿಕೆಗಳು ಬದಲಾಗಿವೆ ಅಥವಾ ಮಾರ್ಪಟ್ಟಿವೆ ಎಂದು ಹೇಳಬಹುದು.
ವಿಶ್ವಾಸಿಗಳಾಗಿ ನಾವು ನಂಬಿಕೆಯ ಜೀವಿತ ಜೀವಿಸಲು ಕರೆಯಲ್ಪಟ್ಟಿದ್ದೇವೆ. ನಮ್ಮ ಜೀವನದ ಬಯಕೆಗಳು ಆಕಾಂಕ್ಷೆಗಳು, ಲಕ್ಷ್ಯಗಳು ಮತ್ತು ಏಕಾಗ್ರತೆ ಎಲ್ಲವೂ ನಮ್ಮ ಒಡೆಯನಾದ ಯೇಸುಕ್ರಿಸ್ತನಿಂದ ನಿರ್ಧರಿಸಲ್ಪಡುತ್ತವೆ. ನಾವು ಯೇಸು ಕ್ರಿಸ್ತನೆಂಬ ಒಡೆಯನ ಆಳ್ವಿಕೆಗೆ ಒಳಪಟ್ಟಿರುವುದರಂದ ನಾವಾಗಿಯೇ ನಮ್ಮ ಯಾವುದೇ ಒಪ್ಪಂದಗಳನ್ನು ಕುರಿತು ನಾವು ಯೋಜಿಸಲು ಅಥವಾ ನಿರ್ಧಾರ ತೆಗೆದುಕೊಳ್ಳಲು ನಮಗೆ ಐಷಾರಾಮಿಯಾದ ಸ್ವಾತಂತ್ರ್ಯವಿಲ್ಲ.
ಕ್ರಿಸ್ತನ ರೀತಿಯ ಜೀವಿತವನ್ನು ನಾವು ಅಂಗೀಕರಿಸಿಕೊಂಡವರಾಗಿರುವುದರಿಂದ ಅದು ನಮ್ಮನ್ನು ದೇವರ ರಾಜ್ಯದ ಸೂಚನೆಗಳು ಮತ್ತು ನಿಯಮಗಳಿಗೆ ನಮ್ಮನ್ನು ನಾವು ಸಂಪೂರ್ಣವಾಗಿ ಅಧೀನರಾಗುವ ಕಡೆಗೆ ಕರೆತಂದಿದೆ. ಕ್ರೈಸ್ತ ಧರ್ಮ ಕೇವಲ ಒಂದು ಧರ್ಮ ಎನ್ನುವುದಕ್ಕಿಂತ ಹೆಚ್ಚಾಗಿ ಅದೊಂದು ಜೀವನ ಶೈಲಿ ಎಂದು ವ್ಯಾಖ್ಯಾನಿಸಲಾಗಿದೆ. ಏಕೆಂದರೆ ಇದು ಕೇವಲ ಧಾರ್ಮಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೇ ಇಲ್ಲಿ ಜೀವಿಸುವ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡು ಸಾಗುವಂತ ಅಗತ್ಯವಿದೆ. (2ಪೇತ್ರ 1:3)
ಕ್ರೈಸ್ತರಾಗಿ ನಾವು ಒಂದು ಧರ್ಮವನ್ನು ಪಾಲನೆ ಮಾಡದೆ ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಂಬಿಕೆಯನ್ನು ಬಿಂಬಿಸುವ ಜೀವಿತವನ್ನು ಜೀವಿಸುವವರಾಗಿದ್ದೇವೆ. ಅದು ಸಾಮಾಜಿಕವಾಗಿ ಇರಬಹುದು, ನೈತಿಕವಾಗಿಯೇ ಇರಬಹುದು, ಆರ್ಥಿಕವಾಗಿರಬಹುದು ಮಾನಸಿಕವಾಗಿರಬಹುದು ಅಥವಾ ಬೌದ್ಧಿಕವಾಗಿರಬಹುದು ಇತ್ಯಾದಿ... ಕ್ರೈಸ್ತತ್ವ ಎನ್ನುವಂತದು ಕ್ರಿಸ್ತನ ಮಾದರಿಯನ್ನು ಅನುಸರಿಸುವುದಾಗಿದೆ. ಕ್ರೈಸ್ತರೆಂದರೆ ಹೇಗಿರಬೇಕು ಎಂಬುದಕ್ಕೆ ಯೇಸುಕ್ರಿಸ್ತನ ಅಪೋಸ್ತಲರೇ ಪ್ರಪ್ರಥಮವಾಗಿ ನಮಗೆ ಜೀವಂತ ಉದಾಹರಣೆಗಳು. (ಅ. ಕೃ.11:26b)
ಅವರು ತಾವು ಸ್ವೀಕರಿಸಿಕೊಂಡಿದ್ದ ಜೀವಿತವು ಅದು ನಂಬಿಕೆಯಿಂದ ಪಡೆದುಕೊಂಡಂತದ್ದು ಎಂದು ತಿಳಿದುಕೊಂಡಿದ್ದರು. ಮತ್ತು ಅವರು ವ್ಯಕ್ತಪಡಿಸುತ್ತಿದ್ದ ನಂಬಿಕೆಯ ರೀತಿಯು ಅವರ ಸ್ವಭಾವವೇ ಆಗಿಬಿಟ್ಟಿತ್ತು.
ಅಂತಿಯೋಕ್ಯದ ಜನರು ಅದನ್ನು ಗಮನಿಸಿ ಕ್ರೈಸ್ತರು ಅಂದರೆ "ಮರಿ ಕ್ರಿಸ್ತರು" ಎಂದು ಕರೆದರು.
ನೀವು ಕ್ರೈಸ್ತರಾಗಿ ಎಷ್ಟು ಕಾಲವಾಯಿತು? ನಿಮ್ಮ ಜೀವಿತದ ಯಾವೆಲ್ಲ ಕ್ಷೇತ್ರಗಳು ಈ ಒಂದು ನೂತನ ಜೀವಿತವನ್ನು ವ್ಯಕ್ತಪಡಿಸುತ್ತಿದೆ? ಅಪೋಸ್ತಲಕೃತ್ಯ6:4ರಲ್ಲಿ ಅಪೋಸ್ತಲರು ಈ ರೀತಿಯ ಜೀವನಕ್ಕೆ ಬೇಕಾದ ಅಗತ್ಯತೆಗಳನ್ನು ಹೀಗೆ ಸರಳೀಕರಿಸಿ ವಿವರಿಸಿದ್ದರು.... "ನಾವಾದರೋ ಪ್ರಾರ್ಥನೆಯನ್ನೂ ವಾಕ್ಯೋಪದೇಶವನ್ನೂ ಮಾಡುವದರಲ್ಲಿ ನಿರತರಾಗಿರುವೆವು ಎಂದು ಹೇಳಿದರು."
ನೀವು ದೇವರ ವಾಕ್ಯದಲ್ಲಿಯೂ ಮತ್ತು ಪ್ರಾರ್ಥನೆಯಲ್ಲಿಯೂ ಜೀವಿಸುವ ವ್ಯಕ್ತಿಯಾಗಿದ್ದೀರಾ? ನೀವು ನಂಬಿಕೆಯ ಜೀವಿತವನ್ನು ಜೀವಿಸುತ್ತಿದ್ದೀರಾ?
ಪ್ರಾರ್ಥನೆಗಳು
ಕರ್ತನೇ, ನನ್ನ ಆತ್ಮವನ್ನು ರಕ್ಷಿಸಿದ್ದಕ್ಕಾಗಿ ನಿನಗೆ ಸ್ತೋತ್ರ. ನಿನ್ನ ವಾಕ್ಯವನ್ನು ವ್ಯಕ್ತಪಡಿಸುವ ಮೌಲ್ಯವುಳ್ಳ ನಂಬಿಕೆಯ ಜೀವಿತವನ್ನು ಜೀವಿಸಲು ನನಗೆ ಸಹಾಯ ಮಾಡಿರಿ.
Join our WhatsApp Channel
Most Read
● ದೇವರು ಹೇಗೆ ಒದಗಿಸುತ್ತಾನೆ #1● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವುದು
ಅನಿಸಿಕೆಗಳು