ಅನುದಿನದ ಮನ್ನಾ
ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
Thursday, 18th of April 2024
2
1
254
Categories :
ಉದ್ಯೋಗ ಸ್ಥಳ(Workplace)
ಒಬ್ಬ ದೊಡ್ಡ ದೇವಸೇವಕರು ಒಮ್ಮೆ ಹೀಗೆ ಹೇಳಿದ್ದಾರೆ "ನೀವು ಯಾವುದನ್ನು ಗೌರವಿಸುತ್ತಿರೋ ಅದು ನಿಮ್ಮ ಬಳಿಗೆ ಬರುತ್ತದೆ.ನೀವು ಯಾವುದನ್ನು ಅಗೌರವಿಸುತ್ತೀರೋ ಅದು ನಿಮ್ಮ ಬಳಿಯಿಂದ ದೂರಾಗುತ್ತದೆ" ಎಂದು
"ದಾಸರಾಗಿ ಮತ್ತೊಬ್ಬರ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಎಲ್ಲಾ ಮಾನಕ್ಕೂ ಯೋಗ್ಯರೆಂದೆಣಿಸಲಿ; ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದೆ ಉಂಟಾದೀತು.2ಯಾರಿಗಾದರೂ ಕ್ರಿಸ್ತನನ್ನು ನಂಬುವವರಾದ ಯಜಮಾನರಿದ್ದರೆ ಅವರು ಆ ಯಜಮಾನರನ್ನು ಸಹೋದರರೆಂದು ಉದಾಸೀನಮಾಡದೆ ತಮ್ಮ ಸೇವೆಯ ಫಲವನ್ನು ಹೊಂದುವವರು ನಂಬುವವರೂ ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಹೆಚ್ಚಾದ ಸಂತೋಷದಿಂದಲೇ ಸೇವೆಮಾಡಬೇಕು. ಈ ಉಪದೇಶವನ್ನು ಮಾಡಿ ಅವರನ್ನು ಎಚ್ಚರಿಸು." ಎಂದು 1 ತಿಮೊಥೆಯನಿಗೆ 6:1-2 ರಲ್ಲಿ ಸತ್ಯವೇದವು ನಮ್ಮನ್ನು ಎಚ್ಚರಿಸುತ್ತದೆ.
ಈಗ ಇದರರ್ಥ ನೀವು ಎಲ್ಲರಿಗೂ ಕಾಲಕಸ ವಾಗಿರಬೇಕೆಂದಲ್ಲ ಆದರೂ ನಮ್ಮಲ್ಲಿ ಬಹುತೇಕರು (ಕ್ರೈಸ್ತರು) (ಹೃದಯಾಳದಿಂದ) ತಮ್ಮ ಮೇಲಿನವರಿಗೆ ಮರ್ಯಾದೆಯನ್ನು ಕೊಡುವುದಿಲ್ಲ ಎಂಬುದು ಬಿಚ್ಚಿಟ್ಟ ರಹಸ್ಯವಾಗಿದೆ.
ಒಂದು ಸರಳವಾದ ನಗೆಯಿಂದಲೂ ಅಥವಾ ಶುಭ ಮುಂಜಾನೆ ಎಂದು ಹೇಳುವ ಮೂಲಕ ಅಭಿನಂದಿಸುವುದು ಇಷ್ಟಾದರೂ ಸಾಕು. ಆದರೂ ನಾವು ಕಹಿತನದಿಂದಲೂ ನೋವುಂಡವರಂತೆಯೂ ನಡೆಯುತ್ತೇವೆ. ಇದು ನಮ್ಮ ಉದ್ಯೋಗ ಸ್ಥಳದಲ್ಲಿ ದೇವರು ನಮಗಾಗಿ ಇಟ್ಟಿರುವ ಯೋಜನೆಯನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. (ಯೆರೆಮಿಯಾ 29:11). ನಿಮ್ಮ ಯಜಮಾನರು ಯಾರೇ ಆಗಿರಲಿ, ಅವರ ಸ್ವಭಾವ ಎಂತೆದ್ದೇ ಆಗಿರಲಿ,ಅವರ ಗುಣ ಎಂತದ್ದೇ ಆಗಿರಲಿ ನೀವು ಕೊಡುವಂತಹ ಯಥಾರ್ತವಾದ ಗೌರವವು ನಿಮ್ಮ ಹಾಗೂ ನಿಮ್ಮ ಯಜಮಾನರ ನಡುವೆ ಒಂದು ವಿಶ್ವಾಸದ ಪರಿಸರವನ್ನು ಸೃಷ್ಟಿಸುತ್ತದೆ.
ಎಷ್ಟೋ ಪ್ರಕರಣಗಳಲ್ಲಿ ನೀವು ಗೌರವ ತೋರಿಸದೊಡನೆಯೇ ಅದೇ ಗೌರವವನ್ನು ಅವರು ಸಹ ಆಗಲೇ ನಿಮಗೆ ಕೊಟ್ಟುಬಿಡುವುದಿಲ್ಲ ಎಂಬುದನ್ನು ನೀವೀಗ ಅರ್ಥ ಮಾಡಿಕೊಳ್ಳಿ. ಇದಕ್ಕೆ ಕೆಲ ಸಮಯ ಹಿಡಿಯುತ್ತದೆ. ಆದ್ದರಿಂದ ದೇವರ ವಾಕ್ಯದ ಮೇಲೆ ಆಧಾರಗೊಳ್ಳಿ ಕರ್ತನು ನಿಮ್ಮನ್ನು ಸನ್ಮಾನಿಸುವವನು. ನೆನಪಿಡಿ. "ದೇವರು ದೀನರಿಗೆ ಕೃಪೆಯನ್ನು ತೋರಿಸುವವನಾಗಿದ್ದಾನೆ" (ಯಾಕೋಬ 4:6)
ಅರಿಕೆಗಳು
ನನ್ನ ಉದ್ಧಾರವು ಪೂರ್ವದಿಂದಲೂ ಪಶ್ಚಿಮದಿಂದಲೂ ಅಥವಾ ದಕ್ಷಿಣದಿಂದಲೂ ಬರುವುದಿಲ್ಲ ಆದರೆ ಯೇಸು ನಾಮದಲ್ಲಿ ಕರ್ತನಾದ ನಿನ್ನಿಂದಲೇ ಬರುತ್ತದೆ. ಅದಕ್ಕಾಗಿ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ ಕರ್ತನೇ, ಆಮೇನ್.
Join our WhatsApp Channel
Most Read
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದೇವರ ಆಲಯದಲ್ಲಿರುವ ಸ್ತಂಭಗಳು
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ಕ್ರಿಸ್ತನ ರಾಯಭಾರಿಗಳು
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು