ಲೂಕ 17 ರಲ್ಲಿ, ಯೇಸು ನೋಹನ ದಿನಗಳು ಮತ್ತು ಆತನ ಎರಡನೇ ಆಗಮನದ ದಿನಗಳ ನಡುವಿನ ಸ್ಪಷ್ಟ ಹೋಲಿಕೆಯನ್ನು ಮಾಡುತ್ತಾನೆ. ಲೋಕವು, ಆತನು ವಿವರಿಸುವಂತೆ, ಅದರ ನಿಯಮಿತವಾಗಿ ಲಯವಾಗುವುದರಲ್ಲೇ ಮುಂದುವರಿಯುತ್ತದೆ: ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆಯಾಗುತ್ತಾ ಮತ್ತು ತಮ್ಮ ದೈನಂದಿನ ಜೀವನವನ್ನು ನಡೆಸುತ್ತಾ ಮುಂಬರುವ ದೈವಿಕ ತೀರ್ಪು ಕುರಿತು ಮರೆತುಹೋಗುವಂತೆ ತೋರುತ್ತಿರುತ್ತದೆ. ಇದು ಲೋಕದಲ್ಲಿಯೇ ಮುಳುಗಿ ಹೋಗಿ, ಗಹನವಾದ ಸಂಗತಿಯನ್ನು ಕಳೆದುಕೊಂಡಿರುವ ಸಮಾಜದ ಚಿತ್ರವನ್ನು ಚಿತ್ರಿಸುತ್ತದೆ.
"ನೋಹನ ದಿನಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿನಗಳಲ್ಲಿಯೂ ನಡೆಯುವುದು " (ಲೂಕ 17:26)
ನೋಹನ ದಿನಗಳು ಕೇವಲ ಅವರ ದಿನಚರಿಯಿಂದಲ್ಲ, ಆದರೆ ಬರಲಿರುವ ಪ್ರವಾಹದ ಎಚ್ಚರಿಕೆ ಸೂಚನೆಗಳಿಗೂ ಸ್ಪಷ್ಟವಾದ ನಿರ್ಲಕ್ಷ್ಯ ತೋರಿದ ಪ್ರಕ್ರಿಯೆಯಿಂದ ಗುರುತಿಸಲ್ಪಟ್ಟವು. ಪಶ್ಚಾತ್ತಾಪಪಡಬೇಕೆಂದು ನೋಹನು ನೀಡುತ್ತಿದ್ದ ನಿರಂತರ ಕರೆಗಳ ಹೊರತಾಗಿಯೂ, ಲೋಕವು ತನ್ನ ಹಾದಿಯನ್ನೇ ಮುಂದುವರೆಸುತ್ತಾ ತಮ್ಮ ಆಸೆಗಳು, ಮಹತ್ವಾಕಾಂಕ್ಷೆಗಳು ಮತ್ತು ಗೊಂದಲಗಳಿಂದ ತುಂಬಿಹೋಗಿದ್ದರು.
ಅದೇ ರೀತಿ, 2 ಪೇತ್ರ 3:2-4 ರಲ್ಲಿ, ಕಡೆಯ ದಿನಗಳಲ್ಲಿ ಜನರು ತಮ್ಮದೇ ಆದ ಆಸೆಪಾಶ ಗಳಿಂದ ಪ್ರೇರೇಪಿಸಲ್ಪಟ್ಟು, ಕರ್ತನಾದ ಯೇಸುವಿನ ಮರಳುವಿಕೆಯ ಕಲ್ಪನೆಯನ್ನು ಅಪಹಾಸ್ಯದಿಂದ ಪ್ರಶ್ನಿಸುವವರಾಗುತ್ತಾರೆ ಎಂದು ದೇವದೂಷಣೆ ಮಾಡುವವರ ಕುರಿತು ನಮಗೆ ಎಚ್ಚರಿಕೆ ನೀಡಲಾಗಿದೆ. (2 ಪೇತ್ರ 3:3-4)
ಈ ಶಾಸ್ತ್ರದ ವಾಕ್ಯಗಳೆಲ್ಲ ನಮಗೆ ಸಕಾಲಿಕ ಜ್ಞಾಪನೆಗಳಾಗಿ ಕಾರ್ಯನಿರ್ವಹಿಸುತ್ತವೆ. ನೋಹನ ಕಾಲದಲ್ಲಿ (ಆದಿಕಾಂಡ 6:11) ವ್ಯಾಪಕವಾದ ಹಿಂಸೆ ಮತ್ತು ನೈತಿಕ ಅವನತಿ ಇದ್ದಂತೆಯೇ, ಇಂದು ನಮ್ಮ ಲೋಕವು ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿದೆ. ಆದರೂ, ಇದರ ಮಧ್ಯೆ ನಮಗೆ ನಿರೀಕ್ಷೆಯೂ ಇದೆ. ಅಪೊಸ್ತಲ ಪೌಲನು ಥೆಸಲೋನಿಕದವರಿಗೆ ಬರೆದ ಪತ್ರದಲ್ಲಿ, ವಿಶ್ವಾಸಿಗಳು ಬೆಳಕಿನ ಮಕ್ಕಳಾಗಿ, ಜಾಗರೂಕರಾಗಿ ಮತ್ತು ಸ್ವಸ್ಥಚಿತ್ತರಾಗಿ, ಕರ್ತನ ಬರುವಿಕೆಗೆ ಯಾವಾಗಲೂ ಸಿದ್ಧರಾಗಿರಬೇಕೆಂದು ಪ್ರೋತ್ಸಾಹಿಸುತ್ತಾನೆ.
"ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ, ಯಾಕೆಂದರೆ ನೀವು ಕತ್ತಲೆಯಲ್ಲಿರುವವರಲ್ಲ. ನೀವೆಲ್ಲರೂ ‘ಬೆಳಕಿನ ಮಕ್ಕಳು’ ಹಾಗೂ ‘ಹಗಲಿನ ಮಕ್ಕಳು’ ಆಗಿದ್ದೀರಷ್ಟೆ, ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ." (1 ಥೆಸಲೊನೀಕ 5:4-5)
ವಿಶ್ವಾಸಿಗಳಾಗಿ, ನಾವು ಭಯದಿಂದ ನಡೆಸಲ್ಪಡದೆ, ನಮ್ಮ ಉದ್ದೇಶ ಮತ್ತು ಧ್ಯೇಯದ ಆಳವಾದ ತಿಳುವಳಿಕೆಯಿಂದ ತುರ್ತು ಪ್ರಜ್ಞೆಯಿಂದ ಜೀವಿಸಬೇಕೆಂದು ಕರೆಯಲ್ಪಟ್ಟಿದ್ದೇವೆ. ನಾವು ಕ್ರಿಸ್ತನ ರಾಯಭಾರಿಗಳಾಗಿದ್ದು, ಆತನ ಪ್ರೀತಿ, ನಿರೀಕ್ಷೆ ಮತ್ತು ರಕ್ಷಣೆಯ ಸಂದೇಶವನ್ನು ಹರಡುವ ಕಾರ್ಯವನ್ನು ಹೊಂದಿದ್ದೇವೆ. ಯೇಸುವಿನ ಸನ್ನಿಹಿತವಾದ ಆಗಮನವು ನಮ್ಮನ್ನು ಭಯದಿಂದ ನಿಷ್ಕ್ರಿಯೆಗೆ ತಳ್ಳಬಾರದು ಬದಲಾಗಿ ನಮ್ಮನ್ನು ಕಾರ್ಯನಡೆಸುವವರಂತೆ ಮಾಡಬೇಕು.
ಮತ್ತಾಯನ ಪುಸ್ತಕದಲ್ಲಿ, ದೇವರನ್ನು ಪ್ರೀತಿಸಬೇಕು ಮತ್ತು ನಮ್ಮ ನೆರೆಹೊರೆಯವರನ್ನು ಪ್ರೀತಿಸಬೇಕು ಎನ್ನುವುದೇ ಅತ್ಯಂತ ದೊಡ್ಡ ಆಜ್ಞೆ ಎಂದು ಯೇಸು ನಮಗೆ ನೆನಪಿಸುತ್ತಾನೆ. ಹಾಗೆ ಮಾಡುವುದರಿಂದ, ನಾವು ಆತನ ಬೆಳಕಿನ ದಾರಿದೀಪಗಳಾಗಿ, ಅನುಮಾನ, ಅಪಹಾಸ್ಯ ಮತ್ತು ಸ್ವಾರ್ಥ ವೆಂಬ ಅಂಧಕಾರತೆಯನ್ನು ಹತ್ತಿಕ್ಕುವವರಾಗುತ್ತೇವೆ.
"ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ - ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ". (ಮತ್ತಾಯ 22:37-39)
ಈ ಅನಿಶ್ಚಿತೆಯ ಕಾಲದಲ್ಲಿ, ನೋಹನ ದಿನದ ಜನರಿದ್ದಂತೆ ಎಚ್ಚರವಿಲ್ಲದ ಮತ್ತು ಸಿದ್ಧರಾಗಿರದ ಜನರಂತೆ ನಾವಿರಬಾರದು. ಬದಲಾಗಿ, ನಾವು ಜಾಗರೂಕರಾಗಿದ್ದು, ನಮ್ಮ ಬೆಳಕನ್ನು ಪ್ರಕಾಶಮಾನವಾಗಿ ಬೆಳಗಿಸೋಣ, ಪ್ರತಿದಿನ ಒಂದು ಉದ್ದೇಶದೊಂದಿಗೆ ಬದುಕೋಣ ಮತ್ತು ನಮ್ಮ ರಕ್ಷಕ - ಕರ್ತನಾದ ಯೇಸು ಕ್ರಿಸ್ತನ ಮರಳುವಿಕೆಯನ್ನು ಸ್ವೀಕರಿಸಲು ಯಾವಾಗಲೂ ಸಿದ್ಧರಾಗಿರೋಣ.
Bible Reading: Luke 22-23
ಪ್ರಾರ್ಥನೆಗಳು
ತಂದೆಯೇ, ಸಮಯಗಳನ್ನು ಗ್ರಹಿಸಲು ನಮಗೆ ಜ್ಞಾನವನ್ನು, ನಮ್ಮ ನಂಬಿಕೆಯಲ್ಲಿ ದೃಢವಾಗಿ ನಿಲ್ಲಲು ಧೈರ್ಯವನ್ನು ಮತ್ತು ಅಗತ್ಯವಿರುವ ಲೋಕದವರೊಡನೆ ನಿಮ್ಮ ಸಂದೇಶವನ್ನು ಹಂಚಿಕೊಳ್ಳುವ ಪ್ರೀತಿಯನ್ನು ನಮಗೆ ಅನುಗ್ರಹಿಸು. ನಾವು ಯಾವಾಗಲೂ ಸಿದ್ಧರಾಗಿದ್ದು, ನಿಮ್ಮ ಸನ್ನಿಹಿತ ಮರಳುವಿಕೆಯ ಬೆಳಕಿನಲ್ಲಿ ಯೇಸುನಾಮದಲ್ಲಿ ಪ್ರತಿದಿನ ಜೀವಿಸುವಂತಾಗಲಿ ಆಮೆನ್!
Join our WhatsApp Channel
Most Read
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಅತಿ ದೀರ್ಘವಾದ ರಾತ್ರಿಯ ನಂತರವಾಗುವ ಸೂರ್ಯೋದಯ
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -5
● ಪ್ರಾರ್ಥನಾ ಹೀನತೆ ಎಂಬ ಪಾಪ
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ಕ್ಷಮಿಸದಿರುವುದು
ಅನಿಸಿಕೆಗಳು
