ಅನುದಿನದ ಮನ್ನಾ
ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
Saturday, 9th of November 2024
2
1
63
Categories :
ದೇವರೊಂದಿಗೆ ಆತ್ಮೀಯತೆ (Intimacy with God)
ನಮ್ರತೆ (Humility)
"ಮನುಷ್ಯನೇ, ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೆ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?"(ಮೀಕ 6:8)
“ಯೆಹೋವ ದೇವರ ವಾಕ್ಯಕ್ಕೆ ವಿಧೇಯನಾದರೆ, ಯೆಹೋವ ದೇವರಿಗೆ ಆಗುವ ಸಂತೋಷ ದಹನಬಲಿಗಳಲ್ಲಿಯೂ ಯಜ್ಞಗಳಲ್ಲಿಯೂ ಆಗುವುದೋ? ಇಗೋ, ಯಜ್ಞಕ್ಕಿಂತ ವಿಧೇಯತೆಯು, ಟಗರುಗಳ ಕೊಬ್ಬಿಗಿಂತ ಮಾತುಕೇಳುವುದೇ ಉತ್ತಮವಾಗಿರುವುದು."(1 ಸಮುಯೇಲ 15:22)
ನಿಜ, ದೇವರಿಗೆ ಇಂತವರೇ ಅಚ್ಚುಮೆಚ್ಚು ಎನ್ನುವಂತದ್ದೆನಿಲ್ಲ , ಆದರೂ ಆತನ ಪ್ರೀತಿಯ ಮಕ್ಕಳೊಳಗೆ ಆತನ ಇಷ್ಟದ ಸಂಗತಿಗಳನ್ನು ತಮ್ಮ ನೆಚ್ಚಿನ ಸಂಗತಿಗಳನ್ನಾಗಿ ಮಾಡಿಕೊಳ್ಳಲು ತಮ್ಮನ್ನು ತಾವು ಒಪ್ಪಿಸಿಕೊಳ್ಳುವಂತಹ ತನಗೆ ಆತ್ಮೀಯರಾದವರನ್ನು ಆತನು ಹೊಂದಿದ್ದಾನೆ. ಆದ್ದರಿಂದ, ನೀವು ಆತನಿಗೆ ಇಷ್ಟ ವಾಗುವ ಸಂಗತಿಗಳನ್ನು ಮಾತ್ರ ಕಲಿಯಲು ಸಾಧ್ಯವಾದರೆ, ನೀವೂ ಸಹ ಆತನಿಗೆ ಆತ್ಮೀಯರಾಗಬಹುದು. ಪ್ರವಾದಿಯಾದ ಮೀಕನು ಇಲ್ಲಿ ನಮಗೆ ದೇವರು ಇಷ್ಟ ಪಡುವ ವಿಷಯಗಳ ಸುಳಿವನ್ನು ನೀಡುತ್ತಾನೆ: ಅದುವೇ ನ್ಯಾಯ, ಕರುಣೆ ಮತ್ತು ನಮ್ರತೆ.
ನ್ಯಾಯ: ಮೋಶೆಯ ಧರ್ಮಶಾಸ್ತ್ರವು ಎಲ್ಲಾ ಜನರಿಗೆ, ವಿಶೇಷವಾಗಿ ಸಮಾಜದಲ್ಲಿ ದುರ್ಬಲ ಹಾಗೂ ಶಕ್ತಿಹೀನ ಜನರಿಗೆ ನ್ಯಾಯ ಮತ್ತು ಸಮಾನತೆಯನ್ನು ಖಾತರಿಪಡಿಸುವ ನಿಬಂಧನೆಗಳಿಂದ ತುಂಬಿತ್ತು . ನಮ್ಮ ದೇವರು ನ್ಯಾಯವಂತನು ಮತ್ತು ಆತನ ಮಕ್ಕಳಲ್ಲಿ ಆತನಿಗೆ ಆಪ್ತರಾದವರೂ ಸಹ ಇದಕ್ಕೆ ಹೊರತಾಗಿಲ್ಲ.
ಕರುಣೆ: ಕರುಣೆ ಎಂಬುದು ನಮ್ಮ ಕಾಲದಲ್ಲಿ ಅಪರೂಪವಾಗಿರುವ ಸರಕಾಗಿಬಿಟ್ಟಿದೆ. ಕರುಣೆಯನ್ನು ತೋರಿಸುವುದಕ್ಕಿಂತಲೂ ಇತರರನ್ನು ಕುರಿತು ನ್ಯಾಯತೀರ್ಪು ಮಾಡುವಂತದ್ದು ತುಂಬಾ ಸುಲಭವಾದ ಕಾರ್ಯವಾಗಿಬಿಟ್ಟಿದೆ. ತೀರ್ಪನ್ನು ನೀಡುವಾಗ ದೂರದಿಂದಲೇ ನೀಡಬಹುದು, ಆದರೆ ಕರುಣೆ ತೋರಿಸಬೇಕಾದರೆ ನಾವು ವೈಯಕ್ತಿಕವಾಗಿ ಸಾಮಿಪ್ಯಾದಲ್ಲಿಯೇ ತೊಡಗಿಸಿಕೊಳ್ಳಬೇಕಾಗುತ್ತದೆ. ನೀವು ಕರುಣೆಯನ್ನು ತೋರಿಸುವವರಾದರೆ ಅದು ನಿಮ್ಮ ಬಳಿಗೇ ತಿರುಗಿ ಬರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಕರ್ತನಾದ ಯೇಸು ಹೇಳಿದ್ದೇನೆಂದರೆ , "ಕರುಣೆ ತೋರುವವರು ಧನ್ಯರು, ಅವರು ಕರುಣೆಯನ್ನು ಹೊಂದುತ್ತಾರೆ " ಎಂಬುದೇ (ಮತ್ತಾಯ 5:7). ನಮ್ಮ ಅರಸನು ಕರುಣಾಮಯಿಯಾಗಿರುವುದರಿಂದ ಆತನ ಆತ್ಮೀಯರು ಸಹ ಕರುಣಾಮಯಿಗಳೇ.
ನಮ್ರತೆ: ನಮ್ರತೆಯು ಆತನ ಉಪಸ್ಥಿತಿಯಲ್ಲಿ ಸ್ಥಿರವಾಗಿ ನಿಲ್ಲಲು ಇರುವ ಪ್ರಮುಖ ಕೀಲಿಯಾಗಿದೆ. ಕರ್ತನಾದ ಯೇಸು ಹೇಳಿದ್ದೇನೆಂದರೆ , "ಆತ್ಮದಲ್ಲಿ ಬಡವರಾದವರು ಧನ್ಯರು, ಪರಲೋಕ ರಾಜ್ಯವು ಅವರದು." (ಮತ್ತಾಯ 5:3). ನಮ್ರತೆಯು "ಆತ್ಮದಲ್ಲಿ ಬಡವರಾಗಿರುವುದು" ಎಂಬುದಕ್ಕೆ ಇರುವ ಪರ್ಯಾಯ ಪದವಾಗಿದೆ. ನಾವು ಎಷ್ಟು ಅಗತ್ಯವುಳ್ಳವರು ಎಂಬುದು ನಮಗೇ ಹೆಚ್ಚು ಹೆಚ್ಚು ತಿಳಿದಂತೆ ಹೆಚ್ಚು ಹೆಚ್ಚಾಗಿ ಕರ್ತನ ಮೇಲೆ ಅವಲಂಬಿತರಾಗುವುದನ್ನು ಕಲಿಯುತ್ತೇವೆ. ನೀವು ದೇವರ ಆಪ್ತರಲ್ಲಿ ಒಬ್ಬರಾಗಲು ಬಯಸುತ್ತೀರಾ? ಹಾಗಿದ್ದಲ್ಲಿ ನ್ಯಾಯ, ಕರುಣೆ ಮತ್ತು ನಮ್ರತೆ ಎನ್ನುವಂತ ಆತನ ನೆಚ್ಚಿನ ವಿಷಯಗಳೊಂದಿಗೆ ಪ್ರೀತಿಯನ್ನು ಬೆಳೆಸಿಕೊಳ್ಳಿರಿ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೀವು ಇಷ್ಟಪಡುವ ವಿಷಯಗಳನ್ನೇ ನಾನೂ ಸಹ ಇಷ್ಟಪಡುವಂತೆ ನನಗೆ ಸಹಾಯ ಮಾಡು. ನ್ಯಾಯಯುತವಾಗಿಯೂ, ಕರುಣಾಮಯಿಯಾಗಿಯೂ ಮತ್ತು ವಿನಮ್ರವಾಗಿಯೂ ಇರಲು ನನಗೆ ಯೇಸುನಾಮದಲ್ಲಿ ಕಲಿಸು. ಆಮೆನ್.
Join our WhatsApp Channel
Most Read
● ಕ್ರಿಸ್ತನ ರಾಯಭಾರಿಗಳು● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ದ್ವಾರ ಪಾಲಕರು / ಕೋವರ ಕಾಯುವವರು
● ಕನಸು ಕಾಣುವ ಧೈರ್ಯ
● ಕೊಡುವ ಕೃಪೆ -3
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
ಅನಿಸಿಕೆಗಳು