ಅನುದಿನದ ಮನ್ನಾ
2
1
100
ಸರಿಯಾದವುಗಳನ್ನು ಶೋಧಿಸಿ ಅವುಗಳನ್ನೇ ಹಿಬಾಲಿಸುವುದು.
Monday, 10th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಜನರಿಗೆ - ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ ಎಂದು ಹೇಳಿ ಒಂದು ಸಾಮ್ಯವನ್ನು ಹೇಳಿದನು " (ಲೂಕ 12:15)
ನಾವು ತ್ವರಿತವಾಗಿ ಎಲ್ಲವನ್ನೂ ಪಡೆದುಕೊಳ್ಳುವಂತ ಜಗತ್ತಿನಲ್ಲಿ ವಾಸಿಸುತ್ತೇವೆ. ಇಂದಿನ ಯೌವ್ವನಸ್ತರು ಒಬ್ಬನನ್ನು ಮನುಷ್ಯನನ್ನಾಗಿ ಮಾಡುವ ಪ್ರಕ್ರಿಯೆಯನ್ನು ಅನುಸರಿಸದೆ ತಕ್ಷಣವೇ ಎಲ್ಲವನ್ನೂ ಹೊಂದಲು ಬಯಸುವವರಾಗಿದ್ದಾರೆ. ಅವರು ಆನ್‌ಲೈನ್‌ನಲ್ಲಿ ನೋಡುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಗಂಟೆಗಳ ಕಾಲ ಸಮಯ ಕಳೆಯುತ್ತಾರೆ. ತಮ್ಮ ಸೆಲೆಬ್ರಿಟಿಗಳು ಆನ್‌ಲೈನ್‌ನಲ್ಲಿ ಪ್ರದರ್ಶಿಸುವ ಆಭರಣಗಳು, ಕಾರುಗಳು, ಗ್ಯಾಜೆಟ್‌ಗಳು ಅಥವಾ ಬಟ್ಟೆಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಅವರು ತಮ್ಮನ್ನು ತಾವು ವಿಫಲರಾದವರೆಂದು ಅಂದುಕೊಳ್ಳುತ್ತಾರೆ. ಆದ್ದರಿಂದ, ಅವರು ಜನರ ಗಮನ ಸೆಳೆಯಲು ಸಾಧ್ಯವಿರುವ ಎಲ್ಲ ಸಂಗತಿಗಳನ್ನು ಮಾಡಲು ಸಿದ್ದರಾಗಿರುತ್ತಾರೆ. ಹಣ, ಖ್ಯಾತಿ ಮತ್ತು ಭಯವು ಹುಚ್ಚುತನದ ಕೆಲಸಗಳನ್ನು ಮಾಡುವಂತೆ ಜನರನ್ನು ಪ್ರೇರೇಪಿಸುವಂತದ್ದಾಗಿದೆ.
ಜನರು ಇಂದು ಮಾನವ ಇತಿಹಾಸದಲ್ಲಿ "ಶಾರೀರಿಕ ದುರಿಚ್ಚೆ " ಎಂದು ಕರೆಯಲ್ಪಡುವ ಮತ್ತೊಂದು ಪ್ರೇರಕದೊಂದಿಗೆ ದುಃಖದ ಪರಂಪರೆಯನ್ನೇ ಹಂಚಿಕೊಳ್ಳುವವರಾಗಿದ್ದಾರೆ. ಅನೇಕರು ತಾವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ನಿಮಿಷ ಗಮನ ಸೆಳೆಯಲು ಇನ್ನೊಬ್ಬ ವ್ಯಕ್ತಿಯ ಹಾಸಿಗೆಯಲ್ಲಿ ಕ್ಷಣಿಕ ಸುಖವನ್ನು ಪಡೆಯುವ ಮೂಲಕ ತಮ್ಮ ಹೆಸರು ಮತ್ತು ಪ್ರತಿಷ್ಠೆಯನ್ನೇ ಕಳೆದುಕೊಳ್ಳುತ್ತಾರೆ. ಅವರು ತಮ್ಮ ಜೀವನಕ್ಕಾಗಿ ದೇವರು ಹೊಂದಿರುವ ವಿನ್ಯಾಸಕ್ಕೆ ಹೊಂದಿಕೆಯಾಗದ ತಪ್ಪಾದ ಸಂಗತಿಗಳನ್ನು ಹಿಂಬಾಲಿಸುವರಾಗಿದ್ದಾರೆ. ನೀವು ಅಂತವರಲ್ಲಿ ಒಬ್ಬರಾಗಿದ್ದೀರಾ? ನಿಮ್ಮನ್ನು ನೀವು ಸಂತೋಷಪಡಿಸಲು ತಪ್ಪಾದ ದಿಕ್ಕಿನಲ್ಲಿ ಓಡುತ್ತಿದ್ದೀರಾ? ನೀವು ಈಗಾಗಲೇ ಸಾಧನೆಯ ದಡವನ್ನು ಸೇರಿಬಿಟ್ಟಿದ್ದೀರಿ ಎಂದು ನಿಮ್ಮ ಸ್ನೇಹಿತರಿಗೆ ಬಿಂಬಿಸುವ ಸುಳ್ಳು ಜೀವನವನ್ನು ನಡೆಸುತ್ತಿದ್ದೀರಾ? ಶಾಶ್ವತ ಮೌಲ್ಯವಿಲ್ಲದ ಯಾವ ಸಂಗತಿಗಳಿಗಾಗಿ ನಿಮ್ಮ ಘನತೆ ಮತ್ತು ಗೌರವವನ್ನು ಕಳೆದುಕೊಂಡಿದ್ದೀರಾ? ನಮ್ಮ ಹೆಜ್ಜೆಗಳನ್ನು ಸಿಂಹಾವಲೋಕನ ಮಾಡಲು ಅದನ್ನು ಸರಿ ದಾರಿಗೆ ಹಿಂದಿರಿಗಿಸಿಕೊಳ್ಳಲು ಇದುವೇ ಸುಸಮಯ.
ಈಗ, ನೀವು ಉತ್ಕೃಷ್ಟತೆಯನ್ನು ಹುಡುಕಬಾರದು ಅಥವಾ ಜೀವನದಲ್ಲಿ ಒಳ್ಳೆಯ ವಿಷಯಗಳನ್ನು ಬಯಸಬಾರದು ಎಂದು ನಾನು ಹೇಳುತ್ತಿಲ್ಲ; ನಾನು ಹೇಳುವುದೇನೆಂದರೆ ನಿಮ್ಮ ಹೃದಯ ಎಲ್ಲಿದೆ? ಆ ದಿಕ್ಕಿನಲ್ಲಿ ಸಾಗಬೇಕೆನ್ನುವ ನಿಮ್ಮ ಉದ್ದೇಶವೇನು? ಉದಾಹರಣೆಗೆ, ಎಸ್ತರಳು ಸ್ಪರ್ಧೆಗೆ ಸೇರಿದಾಗ ಸರಿಯಾದ ಉದ್ದೇಶವನ್ನು ಹೊಂದಿದ್ದಳು. ಈ ಹನ್ನೆರಡು ತಿಂಗಳ ತ್ಯಾಗವನ್ನು ಅವಳು ತನಗಾಗಿ ಹೆಸರು ಗಳಿಸಲು ಮಾಡುತ್ತಿರಲಿಲ್ಲ. ಅವಳು ಎಂದಿಗೂ ಅರಮನೆಯಲ್ಲಿ ಸ್ಥಾನ ಪಡೆಯಬೇಕೆಂದು ಅಪೇಕ್ಷಿಸಲಿಲ್ಲ, ಇತರ ಸ್ತ್ರೀಯರ ಮಧ್ಯೆ ತಾನು ತನ್ನ ತಲೆಯನ್ನು ಎತ್ತಬಹುದು ಅಥವಾ ಹೆಮ್ಮೆಪಡಬಹುದು ಎನ್ನುವ ಇರಾದೆ ಅವಳಿಗಿರಲಿಲ್ಲ. ಬದಲಾಗಿ ಆಕೆಯ ಉದ್ದೇಶವು ಪವಿತ್ರವಾದದ್ದೂ ಮತ್ತು ಶುದ್ಧವಾದದ್ದೂ ಆಗಿತ್ತು. ತನ್ನ ಜನರನ್ನು ರಕ್ಷಿಸುವ ಮನಸ್ಸು ಅವಳಲ್ಲಿತ್ತು. ಆ ದೇಶದಲ್ಲಿ ಸೆರೆಯಲ್ಲಿದ್ದ ತನ್ನ ಜನರಿಗೆ ಧ್ವನಿಯಾಗಬೇಕೆಂದು ಅವಳು ಬಯಸಿದ್ದಳು. ಅವಳ ಉದ್ದೇಶದಲ್ಲಿ ಸ್ವಾರ್ಥತೆ ಇರಲಿಲ್ಲ. ಇದೆಲ್ಲವೂ ದೇವರಾರಾಜ್ಯಕ್ಕನುಸಾರವಾಗಿತ್ತು.
ಮತ್ತೊಂದೆಡೆ, ಯಾಕೋಬನು ತನ್ನ ಊಟವನ್ನು ಕೊಟ್ಟನು. "ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿ ಗುಗ್ಗರಿಯನ್ನೂ ಕೊಟ್ಟನು. ಏಸಾವನು ತಿಂದು ಕುಡಿದು ಎದ್ದುಹೋದನು. ಹೀಗೆ ಅವನು ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿದನು. (ಆದಿಕಾಂಡ 25:34). ಎಂದು ಸತ್ಯವೇದ ಹೇಳುತ್ತದೆ. ಏಸಾವನು ತನ್ನ ಚೊಚ್ಚಲುತನದ ಹಕ್ಕನ್ನು ಒಂದು ಬಟ್ಟಲು ಸೂಪ್‌ಗಾಗಿ ಮಾರಿಕೊಂಡನು.
ಏಸಾವನು ಶಾಶ್ವತವಾದ ಆಶೀರ್ವಾದಕ್ಕಿಂತ ತಾತ್ಕಾಲಿಕ ಆನಂದವನ್ನು ಆರಿಸಿಕೊಂಡ ಸತ್ಯವೇದದಲ್ಲಿನ ಒಬ್ಬ ವ್ಯಕ್ತಿಯಾಗಿದ್ದಾನೆ. ಕ್ಷಣಿಕ ಲಾಭಕ್ಕಾಗಿ ನೀವು ಎಂದಾದರೂ ನಿಜವಾಗಿಯೂ ಅಮೂಲ್ಯವಾದದ್ದನ್ನು ನೀಡಿದ್ದೀರಾ? ಚೊಚ್ಚಲುತನದ ಹಕ್ಕನ್ನು ಹೊಂದಿರುವುದು ಎಂದರೆ "ಮೊದಲು ಹುಟ್ಟಿದ ಮಗನಾಗಿ, ತಂದೆಯ ಸ್ವಾಸ್ತ್ಯದಲ್ಲಿ ಎರಡು ಪಟ್ಟು ಆಸ್ತಿ - ಆಶೀರ್ವಾದವೂ ಅವನಿಗೆ ಸಿಗಬೇಕಿತ್ತು ," "ಅವನು ಕುಟುಂಬದ ಯಾಜಕನಾಗಿರಬೇಕಿತ್ತು " ಮತ್ತು "ಅವನು ತನ್ನ ತಂದೆಯ ಮನೆಗೆ ನ್ಯಾಯಸ್ಥಾಪಕನಾಗಬೇಕಿತ್ತು ." ಏಸಾವನು ಒಂದು ಹೊತ್ತಿನ ಊಟಕ್ಕಾಗಿ ಕುಟುಂಬದಲ್ಲಿ ತನಗೆ ಸಿಗುವಂತ ಯಾಜಕಸ್ಥಾನ ಮತ್ತು ನ್ಯಾಯಾಸ್ಥಾಪಕನ ಎರಡು ಭಾಗವನ್ನು ಮಾರಿಬಿಟ್ಟನು . ಅವನು ತನ್ನ ಆಶೀರ್ವಾದವನ್ನು ತಾತ್ಸರ ಮಾಡಿದನು.
ಸತ್ಯವೇನೆಂದರೆ, ಯಾವುದು ನಿಮ್ಮನ್ನು ಮೆಚ್ಚಿಸುತ್ತದೆಯೋ ಅದು ನಿಮ್ಮನ್ನು ಆಕರ್ಷಿಸುತ್ತದೆ. ನೀವು ಯಾವುದನ್ನು ಅನುಸರಿಸುತ್ತೀರೋ ಅದು ನಿಮ್ಮ ಉದ್ದೇಶವಾಗುತ್ತದೆ. ನೀವು ಯಾವುದನ್ನು ಹಿಂಬಾಲಿಸುತ್ತಿದ್ದೀರಿ - ರಾಜನನ್ನೋ ಅಥವಾ ದೇವರರಾಜ್ಯವನ್ನೋ? ಯೋಹಾನ ಅಧ್ಯಾಯ 4 ರಲ್ಲಿ, ಯೇಸು ಬಹು ದೂರ ನಡೆದು, ಬಳಲಿ, ಹಸಿದಿದ್ದನು, ಆದ್ದರಿಂದ ಆತನು ಬಾವಿಯ ಬಳಿ ಕೂತು ತನ್ನ ಶಿಷ್ಯರನ್ನು ಆಹಾರಕ್ಕಾಗಿ ಕಳುಹಿಸಿದನು. ಆ ಸಮಯದಲ್ಲಿ , ಅಲ್ಲಿ ಆತನು ಒಬ್ಬ ಸ್ತ್ರೀಯನ್ನು ಆಗ ಭೇಟಿಯಾದನು ಕೆಲವೇ ಕ್ಷಣಗಳ ನಂತರ, ಅವಳು ದೇವರ ಮಗನನ್ನು ನಂಬಿದವಳಾದಳು.
"ಅಷ್ಟರೊಳಗೆ ಶಿಷ್ಯರು - ಗುರುವೇ, ಊಟಮಾಡು ಎಂದು ಆತನನ್ನು ಬೇಡಿಕೊಂಡರು. ಆದರೆ ಆತನು ಅವರಿಗೆ - ನಿಮಗೆ ತಿಳಿಯದಂಥ ಆಹಾರವು ನನಗುಂಟು ಎಂದು ಹೇಳಲು ಶಿಷ್ಯರು - ಆತನಿಗೆ ಯಾರಾದರೂ ಊಟಕ್ಕೆ ತಂದುಕೊಟ್ಟರೋ ಏನೋ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡರು. ಯೇಸು ಅವರಿಗೆ - ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು." ಎಂದನು (ಯೋಹಾನ 4:31-34)
ಹಸಿದು ಬಳಲಿದ್ದ ಯೇಸು , ದೇವರ ರಾಜ್ಯವನ್ನು ಪ್ರಸಿದ್ದಿ ಪಡಿಸುವ ಅವಕಾಶವನ್ನು ಕಂಡಾಗ ತನ್ನ ಹಸಿವನ್ನೇ ಮರೆತನು. ಆತನು ನಿತ್ಯವಾದ ಉದ್ದೇಶವನ್ನು ಪೂರೈಸುವುದನ್ನು ನೋಡುವಾಗ ಆತನು ಆಹಾರದ ರುಚಿಯನ್ನೇ ಮರೆತನು. ಇದು ನಿಮ್ಮ ಗುರಿಯಾಗಿರಬೇಕು. ಯಾವಾಗಲೂ ದೇವರರಾಜ್ಯವನ್ನು ಮತ್ತು ನಿತ್ಯತ್ವವನ್ನು ಹುಡುಕುವಂಥದ್ದು ನಿಮ್ಮ ಅಂತಿಮ ಉದ್ದೇಶವಾಗಿರಲಿ.
Bible Reading: Leviticus 21-23
ಪ್ರಾರ್ಥನೆಗಳು
ತಂದೆಯೇ, ಇಂದು ನೀನು ಕೊಟ್ಟ ನಿಮ್ಮ ವಾಕ್ಯದ ಪ್ರಕಟಣೆಗಾಗಿ ನಿನಗೆ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ನಿನ್ನ ರಾಜ್ಯವನ್ನೇ ಯಾವಾಗಲೂ ಹುಡುಕುವಂತೆ ನನಗೆ ಯೇಸುನಾಮದಲ್ಲಿ ಸಹಾಯ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ನನ್ನ ಹೃದಯವನ್ನೂ ಮತ್ತು ನನ್ನ ಆಲೋಚನೆಯನ್ನೂ ನಾನು ನಿನಗೇ ಅರ್ಪಿಸುತ್ತೇನೆ; ಕಡೆಗೆ ನಿನ್ನ ರಾಜ್ಯದಿಂದ ವಂಚಿತಾನಾಗದಂತೆ ನನ್ನನ್ನು ಕಾಪಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel

Most Read
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ● ಆತ್ಮೀಕ ಚಾರಣ
● ಯೇಸುವನ್ನು ನೋಡುವ ಬಯಕೆ
● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ಪ್ರೀತಿಯ ಭಾಷೆ
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಆತನ ಬಲದ ಉದ್ದೇಶ.
ಅನಿಸಿಕೆಗಳು