ಅನುದಿನದ ಮನ್ನಾ
1
0
26
ಆತ್ಮ ಫಲವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದು ಹೇಗೆ -1
Sunday, 14th of September 2025
Categories :
ಆತ್ಮನ ಫಲ (Fruit of the Spirit)
ಪವಿತ್ರಾತ್ಮನ ವರಗಳನ್ನು"ಹೊಂದಿಕೊಳ್ಳಲಾಗುತ್ತದೆ" ಆದರೆ ಆತನ ಫಲಗಳನ್ನು "ಬೆಳೆಸಿಕೊಳ್ಳಬೇಕು". ಆತ್ಮನ ಫಲದ ಮೂಲಕ ನಾವು ನಮ್ಮ ಪಾಪ ಸ್ವಭಾವದ ಆಸೆಗಳನ್ನು ಜಯಿಸುತ್ತೇವೆ. ಆತ್ಮನ ಫಲವನ್ನು ಬೆಳೆಸಿಕೊಳ್ಳುವುದು ಕರ್ತನೊಂದಿಗಿನ ಸಂಬಂಧದಿಂದ ಹುಟ್ಟುವಂತದ್ದಾಗಿದೆ. ನಮ್ಮ ಜೀವನದಲ್ಲಿ ಆತ್ಮನ ಫಲವನ್ನು ಒತ್ತಾಯ ಪೂರ್ವಕವಾಗಿ ಬರಿಸುವುದು ಕೇವಲ ಶರೀರಭಾವದ ಕೆಲಸವಾಗಿದ್ದು ಅದು ನಿರಾಶಾದಾಯಕ ಅನುಭವವಾಗಿರುತ್ತದೆ.
ನಾವು ಕ್ರಿಸ್ತನಲ್ಲಿ ನೆಲೆಗೊಂಡಾಗ ಮಾತ್ರವೇ ಆತ್ಮನ ಫಲವನ್ನು ಆತ್ಮದಿಂದ ಹುಟ್ಟಿಸಬಹುದು. ಈ ಕೆಳಗಿನ ವಚನಗಳನ್ನು ಎಚ್ಚರಿಕೆಯಿಂದ ಧ್ಯಾನಿಸಿ (ನಿಮಗೆ ಸಾಧ್ಯವಾದಷ್ಟು ಬಾರಿ ಅವುಗಳನ್ನು ಓದಿ)
" ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. ನಾನು ದ್ರಾಕ್ಷೇ ಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. ಯಾವನು ನನ್ನಲ್ಲಿ ನೆಲೆಗೊಂಡಿರುವದಿಲ್ಲವೋ ಅವನು ಆ ಕೊಂಬೆಯಂತೆ ಹೊರಕ್ಕೆ ಬಿಸಾಡಲ್ಪಟ್ಟು ಒಣಗಿಹೋಗುವನು; ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುತ್ತಾರೆ, ಅವು ಸುಟ್ಟುಹೋಗುತ್ತವೆ. . (ಯೋಹಾನ 15:4-6)
ನಾವು ಕರ್ತನಿಗೆ ಶರಣಾಗತಾರಾದಾಗ ಆತ್ಮನ ಫಲವನ್ನು ಬೆಳೆಸಿಕೊಳ್ಳುವುದು ಸ್ವಾಭಾವಿಕ ಪ್ರಕ್ರಿಯೆಯಾಗುತ್ತದೆ.ಆತನೊಂದಿಗೆ ಸಮಯ ಕಳೆಯುವ ಮೂಲಕ ಮತ್ತು ಆತನೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವ ಮೂಲಕ, ಆತನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆ ಎಂಬುದನ್ನು ಮೆಚ್ಚಿಕೊಳ್ಳುವ ಮೂಲಕ ಮತ್ತು ಆತನು ಯಾರೆಂದು ಮತ್ತು ಆತನು ನಮ್ಮಲ್ಲಿ ಯಾರಾಗಬೇಕೆಂದು ಬಯಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ, ನಾವು ಯೇಸುವಿಗೆ ಶರಣಾಗಲು ಪ್ರಾರಂಭಿಸುತ್ತೇವೆ.
ಆ ಪ್ರಕ್ರಿಯೆಯು ಆತನೊಂದಿಗೆ ಐಕ್ಯತೆಯನ್ನು ಬೆಳೆಸಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ, ಅದು ನಮ್ಮಲ್ಲಿ ಆತ್ಮನ ಫಲವನ್ನು ಹುಟ್ಟಿಸುತ್ತದೆ.
"ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು;
ಜ್ಞಾನಹೀನರ ಒಡನಾಡಿ ಸಂಕಟಪಡುವನು."(ಜ್ಞಾನೋಕ್ತಿ 13:20)
ನಾನು ಹೇಳಲು ಪ್ರಯತ್ನಿಸುತ್ತಿರುವ ಅಂಶವೆಂದರೆ,
ನಾವು ಯಾರೊಂದಿಗೆ ಸುತ್ತಾಡುತ್ತೇವೆಯೋ ಅವರಂತೆ ಆಗುತ್ತೇವೆ.(ಜ್ಞಾನೋಕ್ತಿ 13:20)
ನಾನು ಹೇಳಲು ಪ್ರಯತ್ನಿಸುತ್ತಿರುವ ಅಂಶವೆಂದರೆ, ನಾವು ಯಾರೊಂದಿಗೆ ಬೆರೆಯುತ್ತೇವೆಯೋ ಅವರಂತೆ ಆಗುತ್ತೇವೆ. ಪವಿತ್ರಾತ್ಮನ ಫಲವನ್ನು ನೀಡಲು ಪವಿತ್ರಾತ್ಮನೊಂದಿಗೆ ಪ್ರತಿದಿನ ಸಹವಾಸದಲ್ಲಿರುವುದು ಅತ್ಯಗತ್ಯ.
ಯಾವುದಾದರೂ ಫಲ ನೀಡುವ ಮೊದಲು ಅದು ಬೇರೂರಬೇಕು. " ಅಳಿದುಳಿದ ಯೆಹೂದ್ಯರು ನಾಡಿನಲ್ಲಿ ಬೇರೂರಿ ನೆಲೆಗೊಳ್ಳುವರು; ಬೆಳೆದು ಅಭಿವೃದ್ಧಿಯಾಗುವರು.( ಫಲಕೊಡುವರು) ಎಂದು ಯೇಶಾಯ 37:31 ಹೇಳುತ್ತದೆ,
Bible Reading: Ezekiel 36-37
ಅರಿಕೆಗಳು
ನಾನು ನನ್ನ ಮನಸ್ಸನ್ನು ಕ್ರಿಸ್ತನು ಇರುವಂತ ಮೇಲಿನ ವಿಷಯಗಳ ಮೇಲೆ ಇಡುತ್ತೇನೆ, ಹೊರತು ಭೂಮಿಯ ವಿಷಯಗಳ ಮೇಲೆ ಅಲ್ಲ. ಪವಿತ್ರಾತ್ಮನು ನನ್ನ ಜೀವನದಲ್ಲಿ ತನ್ನ ಫಲವನ್ನು ಹುಟ್ಟಿಸುತ್ತಾನೆ. ಆದರಿಂದ ನನ್ನ ಜೀವನವು ಸಾವಿರಾರು ಜನರಿಗೆ ಆಶೀರ್ವಾದಕರವಾಗಿರುತ್ತದೆ.
Join our WhatsApp Channel

Most Read
● ಪುರಾತನ ಮಾರ್ಗಗಳನ್ನು ವಿಚಾರಿಸಿ● ದೇವರಿಗಾಗಿ ಮತ್ತು ದೇವರೊಂದಿಗೆ.
● ನಿಮ್ಮ ಅನುಭವವನ್ನು ವ್ಯರ್ಥ ಮಾಡಿಕೊಳ್ಳಬೇಡಿರಿ
● ನಿಮ್ಮ ಆತ್ಮಗಳ ಪುನಃಸ್ಥಾಪನೆ
● ಈ ಹೊಸ ವರ್ಷದ ಪ್ರತಿ ದಿನದಲ್ಲೂ ಸಂತೋಷವನ್ನು ಅನುಭವಿಸುವುದು ಹೇಗೆ?
● ಆರಾಧನೆಯ ಪರಿಮಳ
● ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು