english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಸಂತೃಪ್ತಿಯ ಭರವಸೆ
ಅನುದಿನದ ಮನ್ನಾ

ಸಂತೃಪ್ತಿಯ ಭರವಸೆ

Saturday, 31st of August 2024
1 1 549
Categories : ತೃಪ್ತಿ (Contentment) ಶಿಷ್ಯತ್ವ (Discipleship)
" ಯೇಸು ಆಕೆಗೆ - ಈ ನೀರನ್ನು ಕುಡಿಯುವವರೆಲ್ಲರಿಗೆ ತಿರಿಗಿ ನೀರಡಿಕೆಯಾಗುವದು;ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವದು ಎಂದು ಹೇಳಿದನು. ಆ ಹೆಂಗಸು - ಅಯ್ಯಾ, ನನಗೆ ಆ ನೀರನ್ನು ಕೊಡು; ಕೊಟ್ಟರೆ ಇನ್ನು ಮೇಲೆ ನನಗೆ ನೀರಡಿಕೆಯಾಗಲಿಕ್ಕಿಲ್ಲ; ನೀರು ಸೇದುವದಕ್ಕೆ ಇಷ್ಟು ದೂರ ಬರಬೇಕಾದದ್ದೂ ಇರುವದಿಲ್ಲ ಅನ್ನಲು ಯೇಸು ಅವಳಿಗೆ - ಹೋಗಿ ನಿನ್ನ ಗಂಡನನ್ನು ಇಲ್ಲಿಗೆ ಕರಕೊಂಡು ಬಾ ಎಂದು ಹೇಳಿದನು. ಅದಕ್ಕೆ ಆ ಹೆಂಗಸು - ನನಗೆ ಗಂಡನಿಲ್ಲ ಅಂದಳು. ಯೇಸು ಆಕೆಗೆ - ನನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯಾದ ಮಾತು; ನಿನಗೆ ಐದುಮಂದಿ ಗಂಡಂದಿರಿದ್ದರು, ಈಗ ಇರುವವನು ನಿನಗೆ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ ಅಂದನು."(ಯೋಹಾನ 4:13-18)

ಇಂದು ಮಾಧ್ಯಮಗಳು ನಮ್ಮ ಮೇಲೆ ಅಕ್ಷರಶಃ  ಕೂಗಾಡುತ್ತವೆ. ಇತ್ತೀಚೆಗೆ ಬಂದಂತಹ ಹೊಸ ಹೊಸ ಸ್ಮಾರ್ಟ್ ಫೋನ್ ಗಳು, ಹೊಸ ಕಾರು, ವಯಸ್ಸನ್ನು ಮರೆಮಾಚುವ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಬಳಸಬೇಕೆಂದು ನಮ್ಮ ಗಮನವನ್ನು ಸೆಳೆಯಲು ಪೈಪೋಟಿ ನಡೆಸುತ್ತವೆ.ಇವುಗಳನ್ನು ಬಳಸುವುದರಿಂದ ಮಾತ್ರವೇ ನಾವು  ಖುಷಿಯಾಗಿರುತ್ತೇವೆ ಎಂದು ಅವು ಹೇಳುತ್ತವೆ. ಈ ಎಲ್ಲಾ ಸಂಗತಿಗಳಲ್ಲಿರುವ ಅಸಲಿ ಸತ್ಯವೆಂದರೆ ಇವುಗಳಿಂದ ಮನುಷ್ಯರಿಗೆ ಯಾವುದೇ ಸಂತೃಪ್ತಿ ಸಿಗುವುದಿಲ್ಲ.

" ಯಾವ ಒಬ್ಬ ವ್ಯಕ್ತಿಗೆ ಇರುವ ಸ್ವಲ್ಪದರಲ್ಲಿ ಸಂತೃಪ್ತಿ ಇರುವುದಿಲ್ಲವೋ ಅವರಿಗೆ ಎಷ್ಟು ಇದ್ದರೂ ಸಾಲುವುದೇ ಇಲ್ಲ" ಎಂದು ಒಬ್ಬರು ಒಮ್ಮೆ ಹೇಳಿದ್ದಾರೆ.


 ಮೇಲೆ ನಾವು ಓದಿದಂತಹ ಸತ್ಯವೇದದ ವಾಕ್ಯ ಭಾಗದಲ್ಲಿ ಐದು ಜನ ಗಂಡಂದಿರನ್ನು ಹೊಂದಿದ್ದ ಸ್ತ್ರೀಯು ಈಗ ಮತ್ತೊಬ್ಬ ಪುರುಷನೊಂದಿಗೆ ವಾಸಿಸುತ್ತಿದ್ದಳು ಎಂದು ಸತ್ಯವೇದವು ಹೇಳುತ್ತದೆ. ಆ ಸ್ತ್ರೀಯು ಯಾವುದೋ ಅಸಂತೃಪ್ತಿಯ ಕಾರಣದಿಂದ ನಡೆಸಲ್ಪಟ್ಟವಳಾಗಿ ಕಾಣುತ್ತಾಳೆ. ಹಾಗೂ ಯಾವುದೋ ಸಂತೃಪ್ತಿಗಾಗಿ  ಮತ್ತು ಸಂತೋಷಕ್ಕಾಗಿ ಹುಡುಕಾಡುವವಳಾಗಿ ಕಾಣುತ್ತಾಳೆ. ಅದರಿಂದಲೇ ಅವಳು ಒಬ್ಬನನ್ನು ಬಿಟ್ಟು ಇನ್ನೊಬ್ಬ ಗಂಡನ ಬಳಿಗೆ ಹೋಗುತ್ತಿದ್ದರೂ ಅವಳಿಗೆ ತೃಪ್ತಿಇಲ್ಲ ಎಂಬುದಂತು ಸ್ಪಷ್ಟವಾಗಿದೆ.

ನಿಜವಾದ ಕೊರತೆಯನ್ನು ಪ್ರವಾದನ ರೂಪದಲ್ಲಿ ಗುರುತಿಸಿ ಅವಳಿಗೆ ಬೇಕಾದದ್ದು ಮತ್ತೊಬ್ಬ ಹೊಸ ಗಂಡನಲ್ಲ (ಅಥವಾ ಇನ್ನೊಬ್ಬ ಪುರುಷನಲ್ಲ) ಆದರೆ ಒಂದು ನೂತನ ಜೀವಿತ  ಎಂದೂ, ತಾನೇ ಆ ನೂತನ ಜೀವದ ಮೂಲವೆಂದು ಯೇಸು ಅವಳಿಗೆ ಹೇಳಿದನು.

ಈ ಸ್ತ್ರೀ ರೀತಿಯಲ್ಲಿ ನಮ್ಮಲ್ಲೂ  ಅನೇಕರು ಹೊಸ ಹೊಸ ಅನುಭವವನ್ನು ಹುಡುಕುತ್ತಾ ಅಲೆದಾಡುವವರಾಗಿದ್ದೇವೆ. ಮುಂದೆ ಸಿಗುವ ಸಂಬಂಧ, ಮುಂದೆ ಸಿಗಬಹುದಾದ ಕೆಲಸ, ಮುಂದೆ ಹೋಗುವಂತಹ ಮನೆ, ಇತ್ತೀಚಿನ ಸ್ಮಾರ್ಟ್ ಫೋನ್ ಗಳು ನಾವು ಅತಿಯಾಗಿ ಬಯಸುವ ಸಂತೃಪ್ತಿಯನ್ನು ಮತ್ತು  ಸಂತೋಷವನ್ನು ನೀಡುತ್ತವೆ ಎಂದು ಅತ್ಯಂತ ಕಾಳಜಿಯಿಂದ ಅವುಗಳನ್ನು ಬೆನ್ನಟ್ಟುತ್ತೇವೆ. ಆದರೆ ನಿಜವಾದ ಸಂತೃಪ್ತಿಯು ವಸ್ತುಗಳಲ್ಲೊ ಅಥವಾ ಜನರಲ್ಲಿಯೋ ಸಿಗುವುದಿಲ್ಲ. ಅದು ಎಂದಿಗೂ ಅಂತ್ಯವಾಗದ ದೇವರೊಟ್ಟಿಗಿನ ಸಂಬಂಧದಿಂದ ಮಾತ್ರ ದೊರೆಯುವಂತದ್ದಾಗಿದೆ.ನಾವು ಸಂಪತ್ತನ್ನು ಕೂಡಿಡುವುದನ್ನು ದೇವರು ಎಂದಿಗೂ ಖಂಡಿಸುವುದಿಲ್ಲ.
ನಾವು ಉದ್ದಾರವಾಗಬೇಕೆಂಬುದೇ ಆತನ ಬಯಕೆಯಾಗಿದೆ. ಆದರೆ ಸಂಪತ್ತಿನ ನಿಜವಾದ ಉದ್ದೇಶವನ್ನು ನಾವು ಅರಿಯದೇ ಹೋದರೆ ಅದು ನಮ್ಮನ್ನು ಆತನಿಂದ ಸಂಪೂರ್ಣವಾಗಿ ಬೇರ್ಪಡಿಸುತ್ತದೆ ಎಂಬ ಅರಿವು ನಮಗೆ ಇರಬೇಕೆಂದು ಆತನು ಬಯಸುತ್ತಾನೆ. 

ಹಣದ ವ್ಯಾಮೋಹವು ಎಂದಿಗೂ ನಮಗೆ ಸಂತೃಪ್ತಿಯನ್ನು ನೀಡಲಾರದು. ಆದರೆ ಕರ್ತನನ್ನು ಪ್ರೀತಿಸುವುದು ಖಂಡಿತವಾಗಿಯೂ ಮಾನವ ಪರಿಭಾಷೆಯಲ್ಲಿ ಹೇಳಲು ಅಶಕ್ತವಾದ ಸಂತೃಪ್ತಿಯನ್ನು ತಂದುಕೊಡುತ್ತದೆ.

 ಅನೇಕ ಬಾರಿ ನಮ್ಮಲ್ಲಿ ಅತೃಪ್ತಿಯು ನಮಗೆ ಇನ್ನೂ ಬೇಕಾಗಿದೆ  ಎನ್ನುವ ಅಂಶದಿಂದ ಉದ್ಭವಿಸುವುದಿಲ್ಲ. ಆದರೆ ನಮ್ಮಲ್ಲಿ ಬೇರೆಯವರಲ್ಲಿ ಇರುವುದಕ್ಕಿಂತ ಹೆಚ್ಚಿಗೆ ಇಲ್ಲವಲ್ಲ ಎಂದೆ ಅದು ಉದ್ಭವಿಸುತ್ತದೆ.ಈ ಸ್ಪರ್ಧಾತ್ಮಕ ಮನೋಭಾವವೇ ನಮ್ಮ ಅತೃಪ್ತಿಗೆ ಮೂಲಕಾರಣವಾಗಿದೆ. ಇದನ್ನು ಹೋಗಲಾಡಿಸಬೇಕೆಂದರೆ ನಾವು ನಿರಂತರವಾಗಿ ಕರ್ತನಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

ಅತ್ಯುತ್ತಮವಾಗಿರುವ ಮತ್ತು ಇತ್ತೀಚೆಗೆ ಬಂದಂತಹ ವಸ್ತುಗಳನ್ನು ಕೊಂಡುಕೊಳ್ಳುವಂತಹ ಪಡೆದುಕೊಳ್ಳುವಂತಹ ಓಟವು ನಮ್ಮನ್ನು ಖಂಡಿತವಾಗಿ ಖಿನ್ನತೆಗೆ ತಳ್ಳುತ್ತದೆ.
ಯಾವಾಗಲು ನಮಗೆ ಏನು ಬೇಕು ಅದು ನಮಗೆ ತಿಳಿದಿದೆ ಎಂದೇ ನಾವು ಭಾವಿಸುತ್ತೇವೆ. ಆದರೆ ಸತ್ಯವೇನೆಂದರೆ ನಮಗೆ ಏನು ಅಗತ್ಯವಿದೆಯೂ ಅದು ದೇವರಿಗೆ ಇನ್ನೂ ಚೆನ್ನಾಗಿ ತಿಳಿದಿದೆ.ದೇವರನ್ನು ಬಿಟ್ಟು ಉಳಿದ ಯಾವುದೂ ಸಹ ನಮ್ಮನ್ನು ಸಂತೃಪ್ತಿ ಪಡಿಸುವುದಿಲ್ಲ ಎಂಬ ಅರಿವು ನಮಗೆ ಉಂಟಾಗುವವರೆಗೂ ನಾವು ನಿರಂತರವಾಗಿ ಭಯದ ಮತ್ತು  ಅತೃಪ್ತಿಯ ಭಾವನೆಗಳಲ್ಲೇ ತೊಳಲಾಡುತ್ತಿರುತ್ತೇವೆ.

 "ಅವರು ಯೆಹೋವನ ಕೃಪೆಗೋಸ್ಕರವೂ ಆತನು ಮಾನವರಿಗಾಗಿ ನಡಿಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ. 

 ಆತನು ಬಾಯಾರಿದವರ ಆಶೆಯನ್ನು ಪೂರೈಸಿ ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸುತ್ತಾನೆ."(ಕೀರ್ತನೆಗಳು 107:8-9)

ನೀವು ಅನುದಿನ ಏನು ಮಾಡಬೇಕೆಂಬುದು ಇಲ್ಲಿದೆ. ಸುಮಧುರವಾದ ಆರಾಧನೆ ಗೀತೆಗಳನ್ನು ಹಾಕಿರಿ. ಕರ್ತನೊಂದಿಗೆ  ನಿಮ್ಮ ಅಮೂಲ್ಯವಾದ ಸಮಯವನ್ನು ಕಳೆಯಿರಿ. ಇದುವೇ ನೀವು ಮಾಡಬೇಕಾದ ಮೊದಲ ಕಾರ್ಯ ನಿಮ್ಮೆಲ್ಲ ಬಯಕೆಗಳನ್ನು ಪವಿತ್ರ ಮಾಡಬೇಕೆಂದು ಆತನಲ್ಲಿ ಬೇಡಿಕೊಳ್ಳಿರಿ. ಆಗ ನಿಮ್ಮ ಪ್ರಾಣವು ಆತನ ಸಮಾಧಾನದಿಂದಲೂ ಪ್ರಸನ್ನತೆಯಿಂದಲೂ ಸಂತುಷ್ಟವಾಗುತ್ತದೆ. ನಿಮ್ಮ ಬಳಿ ಇರುವ ಸ್ಮಾರ್ಟ್ ಫೋನನ್ನು ಯಾವಾಗಲೂ ಸತ್ಯವೇದ ವಾಕ್ಯಗಳನ್ನು ಓದುವುದಕ್ಕಾಗಿ ಬಳಸಿಕೊಳ್ಳಿರಿ.

ನೀವು ಕರ್ತನೊಂದಿಗೆ ಆಳವಾದ ಬಾಂಧವ್ಯ ಹೊಂದುತ್ತಾ ಹೋದಂತೆ ನಿಮ್ಮಲ್ಲಿ ಸಂತೃಪ್ತಿಯ ಭರವಸೆಯು ಹೆಚ್ಚುತ್ತಾ ಹೋಗುತ್ತದೆ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಾನು ನಿನ್ನಿಂದಲೇ ಕೇವಲ ನಿನ್ನಿಂದ ಮಾತ್ರವೇ ಸಂಪೂರ್ಣವಾಗಿ ತುಂಬಲ್ಪಡಬೇಕೆಂದು ಬಯಸುತ್ತೇನೆ. ಬಾಯಾರಿದ ಜಿಂಕೆಯು ನೀರನ್ನು ಹುಡುಕುವ ಹಾಗೆ ನನ್ನ ಆತ್ಮವು ಚೈತನ್ಯ ಸ್ವರೂಪನಾದ ನಿನ್ನನ್ನು ಬಯಸುತ್ತದೆ.
ನಾನು ತುಂಬಿ ಹೊರಸೂಸುವ ಹಾಗೆ ನನ್ನನ್ನು ತುಂಬಿಸು. ಕರ್ತನೇ ನೀನೇ ನನ್ನ ಕುರುಬನು ನಾನು ಎಂದಿಗೂ ಕೊರತೆ ಪಡೆನು.ನೀನು ನನ್ನನ್ನು ಆಕಾಶದ ಇಬ್ಬನಿಯಿಂದಲೂ ಭೂಮಿಯ ಸರ್ವ ಸಂಪತ್ತಿನಿಂದಲೂ ಸಂತೃಪ್ತಿಗೊಳಿಸು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.


Join our WhatsApp Channel


Most Read
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
● ನಿಮ್ಮ ಮೇರೆಯಲ್ಲಿಯೇ ಇರಿ
●  ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್