ಅನುದಿನದ ಮನ್ನಾ
1
1
97
ಶ್ರೇಷ್ಠ ಸಂತತಿ
Friday, 12th of September 2025
Categories :
ಶಿಷ್ಯತ್ವ (Discipleship)
ಸೇವೆ (Serving)
".. ಯೆಹೋವನು - ನೂನನ ಮಗನಾದ ಯೆಹೋಶುವನು ಆತ್ಮವರ ಸಂಪನ್ನನು; ಅವನನ್ನು ಮಹಾಯಾಜಕನಾದ ಎಲ್ಲಾಜಾರನ ಮತ್ತು ಸಮೂಹದವರೆಲ್ಲರ ಮುಂದೆ ನಿಲ್ಲಿಸಿ ಅವನ ಮೇಲೆ ಕೈಯಿಟ್ಟು ಅವರ ಎದುರಿನಲ್ಲೇ ಅಧಿಕಾರವನ್ನು ಕೊಡಬೇಕು. (ಅರಣ್ಯಕಾಂಡ 27:18-19)
ಈಗ ಮೋಶೆಯು ತನ್ನ ನಾಯಕತ್ವದ ಅಂತ್ಯವನ್ನು ಸಮೀಪಿಸುತ್ತಿದ್ದನು. ಇಸ್ರಾಯೇಲ್ ಮಕ್ಕಳು ವಾಗ್ದತ್ತ ದೇಶದ ಗಡಿಯನ್ನು ತಲುಪಿದ್ದು ಮೋಶೆಯ ಅವಿಧೇಯತೆಯಿಂದಾಗಿ, ಕರ್ತನು ಅವನಿಗೆ ಕಾನನ್ ಗೆ ಪ್ರವೇಶಿಸಲು ಬಿಟ್ಟಿರಲಿಲ್ಲ.ಇದರಿಂದಾಗಿ ಯೆಹೋಶುವನಿಗೆ ತನ್ನ ನಾಯಕತ್ವದ ವರ್ಗಾವಣೆಯನ್ನು ಸೂಚಿಸಲು ದೇವರು ಮೋಶೆಗೆ ತನ್ನ ಕೈಗಳನ್ನು ಸಾರ್ವಜನಿಕವಾಗಿ ಯಹೋಶುವನ ಮೇಲೆ ಇಡುವಂತೆ ಸೂಚಿಸಿದನು.
ಅಲ್ಲದೆ, ಹೊಸ ಒಡಂಬಡಿಕೆಯಲ್ಲಿಯೂ, ಸಭಾಧ್ಯಕ್ಷನನ್ನು ಆಯ್ಕೆ ಮಾಡುವಾಗ (ಆ. ಕೃ 6:6), ಅವರು ಅಪೊಸ್ತಲರಿಂದ ಪ್ರತಿಷ್ಠಾಪಿಸಲ್ಪಟ್ಟರು, ಅಪೋಸ್ತಲರು ಪ್ರಾರ್ಥಿಸಿ ಅವರ ತಲೆಯ ಮೇಲೆ ಕೈಗಳನ್ನು ಇಟ್ಟು ಹಸ್ತಾರ್ಪಣೆ ಮಾಡಿ ಕಳುಹಿಸಿಕೊಟ್ಟರು.
ಹಳೆಯ ಮತ್ತು ಹೊಸ ಒಡಂಬಡಿಕೆಯಲ್ಲಿರುವ ಪರಿಕಲ್ಪನೆ ಒಂದೇ ಆಗಿದ್ದು; ಪವಿತ್ರಾತ್ಮನು ಈ ಮನುಷ್ಯರಲ್ಲಿ ಈಗಾಗಲೇ ಕಾರ್ಯ ಮಾಡುತ್ತಿದ್ದು ಮಾನವ ಹಸ್ತಾರ್ಪಣೆ ಮೂಲಕ ದೇವರ ಹಸ್ತವು ಈಗಾಗಲೇ ಅವರ ಮೇಲೆ ಇದೆ ಎಂಬ ಅಂಶಕ್ಕೆ ಇದು ಸಾಕ್ಷಿಯಾಗಿದೆ. ಅಪೊಸ್ತಲ ಪೇತ್ರನು ನಮ್ಮನ್ನು ಪ್ರೋತ್ಸಾಹಿಸುತ್ತಾ, "ಆದ್ದರಿಂದ ದೇವರು ತಕ್ಕ ಸಮಯದಲ್ಲಿ ನಿಮ್ಮನ್ನು ಮೇಲಕ್ಕೆತ್ತುವಂತೆ ಆತನ ಬಲವಾದಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ" (1 ಪೇತ್ರ 5:6). ಎಂದು ಬರೆಯುತ್ತಾನೆ. ಇಲ್ಲಿ ವಿನಮ್ರತೆ ಎಂಬ ಗ್ರೀಕ್ ಪದದ ಅರ್ಥ ದೀನ ಸೇವಕನ ಮನೋಭಾವವನ್ನು ಹೊಂದಿರುವುದು. ಎಂಬುದಾಗಿದೆ.
ಯೆಹೋಶುವನು ವರ್ಷಗಳ ಕಾಲ ಮೋಶೆಗೆ ಸಣ್ಣ ಸಣ್ಣ ವಿಷಯಗಳಲ್ಲಿಯೂ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸುವ ಮೂಲಕ ದೇವರ ಸೇವೆ ಮಾಡಿದನು, ಆದರಿಂದ ನಂತರ ಸರಿಯಾದ ಸಮಯದಲ್ಲಿ, ಅವನು ದೊಡ್ಡ ವಿಷಯಗಳಲ್ಲಿ ಕರ್ತನ ಸೇವೆ ಮಾಡಲು ಸಿದ್ಧನಾದನು.
ಎಲೀಷನ ವಿಷಯದಲ್ಲೂ ಇದೇ ಆಗಿತ್ತು, ಅವನು ಸಣ್ಣ ವಿಷಯಗಳಲ್ಲಿ ಬಲಿಷ್ಠ ಪ್ರವಾದಿಯಾದ ಎಲೀಯನಿಗೆ ಸೇವೆ ಸಲ್ಲಿಸಿದನು. ಎಲೀಷನನ್ನು ಹೆಚ್ಚಾಗಿ "ಎಲೀಯನ ಕೈಗಳಿಗೆ ನೀರನ್ನು ಕೊಡುವವನು" ಎಂದು ಕರೆಯಲಾಗುತಿತ್ತು. (2 ಅರಸುಗಳು 3:11) ಇದುವೇ ಅವನ ಏಕೈಕ ಅರ್ಹತೆಗಳಾಗಿದ್ದವು. ಅವನು ಯಾವುದೇ ಬಿರುದು ಇಲ್ಲದೆಯೂ ಸೇವೆ ಸಲ್ಲಿಸಿದನು.
ಇಂದು, ಕೆಲವು ಜನರು ಗೌರವಿಸಲ್ಪಡದಿದ್ದಾಗ ಅಥವಾ ವೇದಿಕೆಯಲ್ಲಿ ಉಲ್ಲೇಖಿಸಲ್ಪಡದಿದ್ದಾಗ ಮನನೊಂದುಕೊಳ್ಳುತ್ತಾರೆ. ಸಾರ್ವಜನಿಕವಾಗಿ ಗುರುತಿಸಲ್ಪಡದಿದ್ದರೆ ಅವರು ಚರ್ಚ್ ಅಥವಾ ಸೇವೆಗಳಿಗೆ ಹಾಜರಾಗುವುದನ್ನು ಸಹ ನಿಲ್ಲಿಸುತ್ತಾರೆ. ಎಲೀಷನು ದೇವರ ಬಲಿಷ್ಠ ಮನುಷ್ಯನಾದನು, ಆದರೆ ಅವನು ಸೇವಕನಾಗಿ ತನ್ನ ತರಬೇತಿಯನ್ನು ಪಡೆದನು!
ನಿಜವಾದ ಆತ್ಮೀಕ ನಾಯಕರು ರೂಪುಗೊಳ್ಳುವ ಏಕೈಕ ಮಾರ್ಗ ಇದು. ಇದು ಇತರರಿಗೆ ಸೇವೆ ಸಲ್ಲಿಸುವ ಮೂಲಕ ಮತ್ತು ನಾವು ಸೇವೆ ಸಲ್ಲಿಸುವವರಿಂದ ಕಲಿಯುವ ಮೂಲಕ ವಿನಮ್ರತೆಯನ್ನು ಒಳಗೊಂಡಿರುತ್ತದೆ. ಯಾರೋ ಒಬ್ಬರು ಹೀಗೆ ಹೇಳಿದ್ದಾರೆ, "ನಾವು ನಾಯಕತ್ವಕ್ಕೆ ಅಧೀನರಾದಾಗ ಮಾತ್ರ ನಾಯಕರಾಗಲು ಸಿದ್ಧರಾಗಬಹುದು."ಎಂದು.
ನಮ್ಮ ಕರ್ತವ್ಯಗಳಲ್ಲಿ ದೊಡ್ಡದು ಅಥವಾ ಸಣ್ಣದು ಎನ್ನುವುದು ಮುಖ್ಯವಲ್ಲ, ಆದರೆ ನಮ್ಮ ಹೃದಯಗಳಲ್ಲಿ ವಿಧೇಯ ಮನೋಭಾವವೇ ಮುಖ್ಯ. ನೀವು ಮುಂದಿನ ಹಂತಕ್ಕೆ ಹೋಗಲು ಬಯಸುವಿರಾ? ನಂತರ ನಿಮ್ಮ ನೀರಿನ ಕೊಡವನ್ನು ಸಿದ್ಧಪಡಿಸಿಕೊಂಡು ಸಾಲಿನಲ್ಲಿರಿ; ಆಗ ನೀವು ಮುಂದಿನ ಎಲೀಷ, ಮುಂದಿನ ಯೆಹೋಶುವನಾಗಿರಬಹುದು!
Bible Reading: Ezekiel 31-32
ಅರಿಕೆಗಳು
ದೇವರು ತಕ್ಕ ಸಮಯದಲ್ಲಿ ನನ್ನನ್ನು ಉನ್ನತೀಕರಿಸುವಂತೆ ನಾನು ಆತನ ಬಲವಾದ ಕೈಗಳ ಕೆಳಗೆ ಯೇಸುನಾಮದಲ್ಲಿ ನನ್ನನ್ನು ತಗ್ಗಿಸಿಕೊಳ್ಳುತ್ತೇನೆ. ಆಮೆನ್.
Join our WhatsApp Channel

Most Read
● ದೇವರ ವಾಕ್ಯದಲ್ಲಿರುವ ನಂಬಿಗಸ್ಥಿಕೆ● ನಾನು ಧೈರ್ಯಗೆಡುವುದಿಲ್ಲ.
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
● ಪಂಚಾಶತ್ತಾಮ ದಿನಕ್ಕಾಗಿ ಕಾಯುವುದು. ವರ್ಗಗಳು : ಪಂಚ ಶತ್ತಾಮ ದಿನ.
● ಭವ್ಯಭವನದ ಹಿಂದಿರುವ ಮನುಷ್ಯ
● ದೇವರು ಹೇಗೆ ಒದಗಿಸುತ್ತಾನೆ #4
● ಸಮರುವಿಕೆಯ ಕಾಲ- 3
ಅನಿಸಿಕೆಗಳು