ಅನುದಿನದ ಮನ್ನಾ
3
2
133
ನೀನು ಮತ್ತೊಬ್ಬ ಅಹಾಬನಾಗಬೇಡ
Tuesday, 23rd of September 2025
Categories :
ದೇವರವಾಕ್ಯ ( Word of God )
ವಂಚನೆ (Deception)
ಅರಸನು ಧರ್ಮಶಾಸ್ತ್ರದ ಪುಸ್ತಕದಲ್ಲಿದ್ದ ಮಾತುಗಳನ್ನು ಕೇಳಿದಾಗ, ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡನು. (2 ಅರಸುಗಳು 22:11)
ಅಲ್ಲಿ ದೇವಜನರು ದೇವರಿಂದ ದೂರ ಸರಿದು ವಿಗ್ರಹಾರಾಧನೆಯನ್ನು ಮಾಡುವವರಾಗಿದ್ದರು. ದೇವರ ದೇವಾಲಯವು (ದೇವರ ಮನೆ) ನಿರ್ಲಕ್ಷಿಸಲ್ಪಟ್ಟಿತು. ಅಂತಹ ಆತ್ಮೀಕ ಅಂಧಕಾರದ ಕ್ಷಣದಲ್ಲಿ, ದೇವರು ಯೋಷೀಯ ಎಂಬ ಯುವ ರಾಜನನ್ನು ಎಬ್ಬಿಸಿದನು. ಮೇಲಿನ ಪಠ್ಯದ ಹಿನ್ನೆಲೆ ಏನೆಂದರೆ, ಮಹಾಯಾಜಕನಾದ ಹಿಲ್ಕೀಯನು ದೇವಾಲಯದ ದುರಸ್ತಿ ಕಾರ್ಯವನ್ನು ನಡೆಸುತ್ತಿರುವಾಗ ದೇವಾಲಯದಲ್ಲಿ ಧರ್ಮಶಾಸ್ತ್ರದ ಪುಸ್ತಕವನ್ನು ಕಂಡುಕೊಳ್ಳುತ್ತಾನೆ. ಅವನು ಧರ್ಮಶಾಸ್ತ್ರದ ಪುಸ್ತಕವನ್ನು (ದೇವರ ಲಿಖಿತ ವಾಕ್ಯ) ಅರಸನಾದ ಯೋಷೀಯನ ಬಳಿಗೆ ತರುತ್ತಾನೆ. ಯೋಷೀಯನು ದೇವರ ವಾಕ್ಯವನ್ನು ಕೇಳಿದಾಗ, ಅವನು ತಾವುಗಳೆಲ್ಲಾ ಅಪರಾಧಿಗಳೆಂದು ನಿರ್ಣಯಿಸಿಕೊಂಡು ಪಶ್ಚಾತ್ತಾಪದ ಸಂಕೇತವಾಗಿ ತನ್ನ ಬಟ್ಟೆಗಳನ್ನು ಹರಿದುಕೊಂಡನು.
ಅದೇ ರೀತಿ, ನೀವು ವಾಕ್ಯವನ್ನು ಕೇಳಿದಾಗ, ನಿಮ್ಮ ಕಡೆಯಿಂದ ವಾಕ್ಯಕ್ಕೆ ಪ್ರತಿಕ್ರಿಯೆ ಇರಬೇಕು. ನೀವು ವಾಕ್ಯವನ್ನು ಕೇಳಿ ಏನನ್ನೂ ಮಾಡದೇ ಇರಲು ಸಾಧ್ಯವಿಲ್ಲ."ನಾನು ದೇವರ ವಾಕ್ಯವನ್ನು ನಂಬುತ್ತೇನೆ" ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ; ನೀವು ಅದರಂತೆ ಕಾರ್ಯನಿರ್ವಹಿಸಬೇಕು. "ದೆವ್ವಗಳು ಸಹ ಹಾಗೇ ನಂಬಿ ನಡುಗುತ್ತವೆ" (ಯಾಕೋಬ 2:20) ಎಂದು ಧರ್ಮಗ್ರಂಥವು ಹೇಳುತ್ತದೆ, ಆದರೆ ಅವು ಎಂದಿಗೂ ತಮ್ಮ ನಂಬಿಕೆಗೆ ಅನುಗುಣವಾಗಿ ನಡೆಯುವುದಿಲ್ಲ
"ನೀವು ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ." (ಯಾಕೋಬ 1:22)
ಒಬ್ಬ ವ್ಯಕ್ತಿಯು ವಾಕ್ಯವನ್ನು ಕೇಳಿ ಅದರಂತೆ ಮಾಡದಿದ್ದಾಗ, ಅಂತಹ ವ್ಯಕ್ತಿಯು ತನ್ನನ್ನು ತಾನೇ ಮೋಸ ಪಡಿಸಿಕೊಳ್ಳುವವನಾಗುತ್ತಾನೆ.
ಈ ಅಂತ್ಯ ಕಾಲದಲ್ಲಿ ವಂಚನೆಯೇ ನಮಗಿರುವ ಅತ್ಯಂತ ದೊಡ್ಡ ಅಪಾಯವಾಗಿದೆ. ನಾನು ಮೋಸ ಹೋಗಲು ಸಾಧ್ಯವಿಲ್ಲ ಎಂದು ಹೇಳುವ ಯಾರಾದರೂ ಈಗಾಗಲೇ ಮೋಸ ಹೋಗಿದ್ದಾರೆ. ವಂಚನೆ ಎಂದರೆ ನೀವು ಕೇಳಲು ಬಯಸುವುದನ್ನು ಮಾತ್ರ ಕೇಳಿಸಿಕೊಳ್ಳುವುದು.
ಅಹಾಬನು ಒಬ್ಬ ದುಷ್ಟ ಅರಸನಾಗಿದ್ದನು, ಅವನು ಕೇಳಲು ಬಯಸಿದ್ದನ್ನು ಪ್ರವಾದಿಸುವ ಪ್ರವಾದಿಗಳನ್ನು ಮಾತ್ರ ತನ್ನ ಸುತ್ತ ಇಟ್ಟುಕೊಂಡಿದ್ದನು.
"ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ, ಅವರಿಗೆ, “ನಾನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ, ಬೇಡವೋ?” ಎಂದು ಕೇಳಿದನು. ಅದಕ್ಕವರು, “ಹೋಗು, ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.(1 ಅರಸುಗಳು 22:6)
ಆಳವಾಗಿ ನೋಡಿದಾಗ, ಅವರು ಹೇಳುತ್ತಿರುವುದು ಸತ್ಯವಲ್ಲ ಎಂಬುದು ಅವನಿಗೆ ತಿಳಿದಿತ್ತು, ಆದರೆ ಅವನು ಇನ್ನೂ ತನಗೆ ಹಿತ ಎನಿಸುವ ಸುಳ್ಳನ್ನೇ ನಂಬಿದ್ದನು, ಏಕೆಂದರೆ ಅವನು ಈಗಾಗಲೇ ಮೋಸ ಹೋಗಿದ್ದನು. ಅವನು ದೇವರ ನಿಜವಾದ ವಾಕ್ಯವನ್ನು ಹಲವು ಬಾರಿ ಕೇಳಿದ್ದನು, ಆದರೆ ಅವನು ಅದನ್ನು ಕೇಳುತ್ತಲೇ ಇದ್ದರೂ ಅದರ ಕುರಿತು ಯಾವುದನ್ನೂ ಕೈಗೊಳ್ಳಲಿಲ್ಲ. ಹಾಗಾಗಿ ನೀನು ಇನ್ನೊಬ್ಬ ಅಹಾಬನಾಗಬೇಡ.
Bible Reading: Daniel 8-9
ಪ್ರಾರ್ಥನೆಗಳು
1.ತಂದೆಯೇ, ನಿನ್ನ ಕೃಪೆ ಮತ್ತು ವಿವೇಕದಿಂದ, ನಾನು, ನನ್ನ ಕುಟುಂಬ ಸದಸ್ಯರು, ನನ್ನ ಸಭೆ ಮತ್ತು ನನ್ನ ಕುರಿತು ಕಾಳಜಿ ವಹಿಸುವ ಎಲ್ಲರೂ ನಿನ್ನಿಂದ ಚೆನ್ನಾಗಿ ಯೇಸುನಾಮದಲ್ಲಿ ಬೋದಿಸಲ್ಪಡುತ್ತೇವೆ ಎಂಬುದಾಗಿ ಅರಿಕೆ ಮಾಡುತ್ತೇನೆ.ನಾನು ಇದಕ್ಕಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ.
2.ತಂದೆಯೇ, ಪವಿತ್ರ ಮತ್ತು ಅಪವಿತ್ರ, ಶುದ್ಧ ಮತ್ತು ಅಶುದ್ಧ ಮತ್ತು ಸತ್ಯ ಮತ್ತು ಅಸತ್ಯದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವಂತೆ ನಮಗೆ ವಿವೇಚನೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು.
3.ತಂದೆಯೇ, ನಾನು ನಿನ್ನ ವಾಕ್ಯವನ್ನು ಕೇಳುವವನಾಗಿವವನು ಮಾತ್ರವಲ್ಲದೆ, ಅದರಂತೆ ಯಾವಾಗಲೂ ನಡೆಯುವವನಾಗಿರಲು ನನಗೆ ಯೇಸುನಾಮದಲ್ಲಿ ಬಲವನ್ನು ಅನುಗ್ರಹಿಸು. ಆಮೆನ್.
Join our WhatsApp Channel

Most Read
● ಸಮರುವಿಕೆಯ ಕಾಲ- 3● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.
● ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ಕರ್ತನನ್ನು ಘನಪಡಿಸುವುದು ಹೇಗೆ?
● ಬೀಜದ ಕುರಿತ ಒಂದು ಆಘಾತಕಾರಿ ಸತ್ಯ.
● ಕರ್ತನ ಸೇವೆ ಮಾಡುವುದು ಎಂದರೇನು-I
ಅನಿಸಿಕೆಗಳು