english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೈನಂದಿನ ಮನ್ನಾ
ಅನುದಿನದ ಮನ್ನಾ

ದೈನಂದಿನ ಮನ್ನಾ

Monday, 7th of July 2025
3 0 27
Categories : ಆಶೀರ್ವಾದ ( Blessing)
"ಆಗ ಯೆಹೋವನು ತನ್ನೊಳಗೆ - ನಾನು ಮಾಡಬೇಕೆಂದಿರುವ ಕಾರ್ಯವನ್ನು ಅಬ್ರಹಾಮನಿಗೆ ಮರೆಮಾಡುವದು ಸರಿಯೋ? ಅವನಿಂದ ಬಲಿಷ್ಠವಾದ ಮಹಾಜನಾಂಗವು ಹುಟ್ಟಬೇಕಲ್ಲಾ; ಅವನ ಮೂಲಕ ಭೂವಿುಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವದಲ್ಲಾ;  ಅವನು ತನ್ನ ಪುತ್ರಪೌತ್ರರಿಗೆ - ನೀವು ನ್ಯಾಯನೀತಿಗಳನ್ನು ನಡಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸುವಂತೆ ಅವನನ್ನು ನಾನು ಆದುಕೊಂಡೆನಲ್ಲಾ; ಅವನು ಹೀಗೆ ಮಾಡುವದರಿಂದ ಯೆಹೋವನಾದ ನನ್ನ ವಾಗ್ದಾನವು ನೆರವೇರುವದು ಅಂದುಕೊಂಡನು.” (ಆದಿಕಾಂಡ 18:17-19) 

ಜೋನಾಥನ್ ಎಡ್ವರ್ಡ್ಸ್ ಅವರ  "ಕೋಪಗೊಂಡ ದೇವರ ಕೈಯಲ್ಲಿ ಪಾಪಿಗಳು" ಎನ್ನುವ ಕ್ಲಾಸಿಕ್ ಧರ್ಮೋಪದೇಶ ಜನರಲ್ಲಿ ಎಷ್ಟು ಮಾನಸಾಂತರ ಮಾಡುತ್ತಿತ್ತು ಎಂದರೆ ಅವರ ಉಪದೇಶದ ಕೇಳುತ್ತ ಕುಳಿತ ಜನರು ಅರುಚುತ್ತಿದ್ದರು ಮತ್ತು ಪಶ್ಚಾತ್ತಾಪದಿಂದ ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದರಂತೆ ಎಂದು ನನಗೆ ತಿಳಿದುಬಂತು. ಕೆಲವರು ನರಕದ ಜ್ವಾಲೆಗಳು ತಮ್ಮ ಪಾದಗಳನ್ನು ಸುಡುವುದನ್ನು ಅನುಭವಿಸುತ್ತಿದ್ದೇವೆ ಎಂದು ಕೂಗಡುತ್ತಿದ್ರಂತೆ. 

ಆದರೂ, ಜೋನಾಥನ್ ಎಡ್ವರ್ಡ್ಸ್ ತಮ್ಮ ವೈಯಕ್ತಿಕ ಜೀವನದಲ್ಲಿ, ತುಂಬಾ ಪ್ರೀತಿಯ, ಕರುಣಾಳು ವ್ಯಕ್ತಿಯಾಗಿದ್ದು, ಅವರು ತಮ್ಮ ಕುಟುಂಬದೊಂದಿಗೆ ಗುಣಮಟ್ಟದ ವೈಯಕ್ತಿಕ ಸಮಯವನ್ನು ಕಳೆಯುವುದರಲ್ಲಿ ಆನಂದಿಸುತ್ತಿದ್ದರು. ಎಡ್ವರ್ಡ್ಸ್ ಹನ್ನೊಂದು ಮಕ್ಕಳನ್ನು ಹೊಂದಿದ್ದು ಅವರು ಪ್ರತಿದಿನ ತಮ್ಮ ಮಕ್ಕಳ ಮೇಲೆ ಆಶೀರ್ವಾದವನ್ನು ಕುರಿತು ಮಾತನಾಡುವುದನ್ನು ಇಷ್ಟಪಡುತ್ತಿದ್ದರು.

ಜೊನಾಥನ್ ಎಡ್ವರ್ಡ್ಸ್ ಅವರ ವಂಶಸ್ಥರು ಈಗ ಹೇಗಿದ್ದಾರೆ ಎಂದು ಪತ್ತೆಹಚ್ಚಲು ಒಂದು ಅಧ್ಯಯನವನ್ನು ನಡೆಸಲಾಗಿ ಅವರ ಮಕ್ಕಳಲ್ಲಿ ಬಹುತೇಕರು ಲೇಖಕರು, ಪ್ರಾಧ್ಯಾಪಕರು, ವಕೀಲರು, ಸುವಾರ್ತೆಯ ಸೇವಕರು ಮತ್ತು ಕೆಲವರು ಯುನೈಟೆಡ್ ಸ್ಟೇಟ್ಸ್ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಕಂಡುಬಂದಿದೆ. ಇಬ್ರಿಯ 7:8-10 ನಮಗೆ ಒಂದು ಪ್ರಮುಖ ತತ್ವವನ್ನು ಹೇಳುತ್ತದೆ, ಒಬ್ಬ ತಂದೆ ತನ್ನ ಮಕ್ಕಳು ಜನಿಸುವ ವರ್ಷಗಳ ಮೊದಲು ತೆಗೆದುಕೊಂಡ  ಕ್ರಮಗಳ ಆಧಾರದ ಮೇಲೆ ಆ ಮಕ್ಕಳ ಮೇಲೆ ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು. 

ಅಪೊಸ್ತಲ ಪೌಲನು ಅಬ್ರಹಾಮನ ಕುರಿತು ಮತ್ತು ಯೆರುಸಲೆಮಿನ ಪ್ರಥಮ ಅರಸನೂ ಮತ್ತು ಯಾಜಕನಾದನೂ ಆದ ಮೆಲ್ಕಿಜೆದೆಕ್ ಕುರಿತು ಬರೆದಿದ್ದಾನೆ. ಲೇವಿ ಇನ್ನೂ ಹುಟ್ಟುವ ಮೊದಲೇ ಲೇವಿಯು ಅಬ್ರಹಾಮನ ಗರ್ಭದಲ್ಲಿ ತತ್ವ ರೂಪವಾಗಿದ್ದು ದಶಮಾಂಶಗಳನ್ನು ಪಾವತಿಸುತ್ತಿದ್ದನೆಂದು ಅಪೊಸ್ತಲ ಪೌಲನು ಉಲ್ಲೇಖಿಸಿದ್ದಾನೆ, ಅದರ ಕುರಿತು ನಾವು ನಿಜವಾಗಿಯೂ ಯೋಚಿಸಬೇಕಾಗಿದೆ.

 ನಾನು ಪ್ರತಿಯೊಬ್ಬ ಪೋಷಕರನ್ನು ಬೇಡಿಕೊಳ್ಳುವುದೇನೆಂದರೆ ನೀವು ಮಲಗುವ ಮೊದಲು, ನಿಮ್ಮ ಮಕ್ಕಳ ಮೇಲೆ ನಿಮ್ಮ ಕೈಗಳನ್ನು ಇಟ್ಟು ಅವರ ಮೇಲೆ ಆಶೀರ್ವಾದ ಮಾಡಿ (ಅವರು ಒಂದು ಅಥವಾ ಐವತ್ತು ವರ್ಷ ವಯಸ್ಸಿನವರಾಗಿದ್ದರೂ ಪರವಾಗಿಲ್ಲ). ಗರ್ಭಿಣಿಯರೇ, ದಿನವಿಡೀ ಸಾಧ್ಯವಾದಷ್ಟು ಬಾರಿ ನಿಮ್ಮ ಹೊಟ್ಟೆಯ ಮೇಲೆ ನಿಮ್ಮ ಕೈಗಳನ್ನು ಇರಿಸಿ ಮತ್ತು ನಿಮ್ಮ ಮಗುವಿನ ಮೇಲೆ ಆಶೀರ್ವಾದ ಮಾಡಿ. ಮಗುವನ್ನು ಹಂಬಲಿಸುತ್ತಿರುವವರು ಸಹ, ನಿಮ್ಮ ಹೊಟ್ಟೆಯ ಮೇಲೆ ಕೈಗಳನ್ನು ಇಟ್ಟು, "ನನ್ನ ಮಗು ನನಗೆ ಮತ್ತು ನನ್ನ ಸುತ್ತಮುತ್ತಲಿನವರಿಗೆ ಆಶೀರ್ವಾದಕರ ವಾಗಿರುತ್ತದೆ" ಎಂದು ಹೇಳುತ್ತಿರಿ. 

ನಿಮ್ಮ ಮಕ್ಕಳು ದೊಡ್ಡವರಾದಾಗ ನಿಮ್ಮ ಕುಟುಂಬದಲ್ಲಿನ ಪ್ರತಿಯೊಬ್ಬ ಸದಸ್ಯರು ಯಾರೂ ಇದುವರೆಗೆ ತಲುಪದ ಉನ್ನತ ಮಟ್ಟವನ್ನು ಸಾಧಿಸುತ್ತಾರೆ ಎಂದು ನಾನು ಪ್ರವಾದನೆ ನುಡಿಯುತ್ತೇನೆ.

 ನನ್ನ ಮತ್ತು ನನ್ನ ಕುಟುಂಬದ ಮೇಲೆ ಕರ್ತನ ಆಶೀರ್ವಾದವಿರುವುದ್ದರಿಂದ ನನ್ನ ಕೈ ಕೆಲಸವು ಆಶೀರ್ವದಿಸಲ್ಪಟ್ಟಿದೆ ಮತ್ತು ಕರ್ತನಿಗೆ ಮಹಿಮೆ ಮತ್ತು ಗೌರವವನ್ನು ತರುತ್ತದೆ. ಆಮೆನ್.

Bible Reading: Psalms 97-104
ಅರಿಕೆಗಳು
ನನ್ನ ಮತ್ತು ನನ್ನ ಕುಟುಂಬದ ಮೇಲೆ ಕರ್ತನ ಆಶೀರ್ವಾದವಿರುವುದ್ದರಿಂದ ನನ್ನ ಕೈ ಕೆಲಸವು ಆಶೀರ್ವದಿಸಲ್ಪಟ್ಟಿದೆ ಮತ್ತು ಕರ್ತನಿಗೆ ಮಹಿಮೆ ಮತ್ತು ಗೌರವವನ್ನು ತರುತ್ತದೆ. ಆಮೆನ್.


Join our WhatsApp Channel


Most Read
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಆತನಿಗೆ ಯಾವುದೇ ಮಿತಿಯಿಲ್ಲ.
● ದೇವರ ಆಲಯದಲ್ಲಿರುವ ಸ್ತಂಭಗಳು
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಅಪನಂಬಿಕೆ
● ಏಳು ಪಟ್ಟು ಆಶೀರ್ವಾದ
● ನಮ್ಮನ್ನಲ್ಲ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್