ಅನುದಿನದ ಮನ್ನಾ
ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
Friday, 12th of April 2024
3
3
253
Categories :
ನಂಬಿಕೆಗಳನ್ನು(Beliefs)
ಬಹುತೇಕ ಎಲ್ಲರೂ ಸಹ ನೂತನ ವರ್ಷವನ್ನು ನೂತನ ನಿರ್ಣಯಗಳ ಮೂಲಕ ನೂತನ ಗುರಿಗಳನ್ನು ಇಟ್ಟುಕೊಂಡು ಆರಂಭಿಸಿರುತ್ತಾರೆ. ನೂತನ ನಿರ್ಣಯಗಳು- ಗುರಿಗಳನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅದಾಗಿಯೋ ಎಷ್ಟೋ ಇಂಥ ನಿರ್ಣಯಗಳು- ಗುರಿಗಳು ಅವುಗಳ ಅಂತಿಮ ಗೆರೆಯನ್ನು ಮುಟ್ಟುವುದೇ ಇಲ್ಲ. ಮತ್ತೊಂದು ವಾಸ್ತವವೆಂದರೆ ಬಹುತೇಕ ಎಲ್ಲರೂ ಸಹ ಒಳ್ಳೆಯ ಹಾಗೂ ಧನಾತ್ಮಕವಾದ ನಿರ್ಣಯಗಳನ್ನೇ -ಗುರಿಗಳನ್ನೇ ಸಂಕಲ್ಪಿಸಿರುತ್ತಾರೆ.
ಆದರೂ ನಿಮ್ಮನ್ನು ನೀವು ಸಂಕಲ್ಪಿಸಿಕೊಂಡ ನಿರ್ಣಯಗಳನ್ನು- ಗುರಿಗಳನ್ನು ನೆರವೇರಿಸಲು ಆಗದಂತೆ ಅಡ್ಡಿಪಡಿಸುತ್ತಿರುವ ಸಂಗತಿ ಏನೆಂಬುದು ನಿಮಗೆ ಗೊತ್ತೇ?
ಅದು ನಿಮ್ಮ ನಂಬಿಕೆಗಳು.ಈ ನಂಬಿಕೆಗಳೆಂದರೇನು? ನೀವು ಸ್ವತಃ ಆಂತರ್ಯದಲ್ಲಿ ನಿಮಗೆ ನೀವು ಏನನ್ನು ಹೇಳಿಕೊಳ್ಳುತ್ತಿರೋ ಅದುವೇ ಆಗಿದೆ. ನೀವು ಜಗತ್ತನ್ನು ಹೇಗೆ ನೋಡುತ್ತಿದ್ದೀರಿ ನಿಮ್ಮ ಅಭಿಪ್ರಾಯಗಳೇನು ಎಂಬುದರ ವಿಚಾರದಲ್ಲಿ ಇದು ಮಹತ್ತರ ಪಾತ್ರವನ್ನು ವಹಿಸುತ್ತದೆ.
ನಿಮ್ಮನ್ನು ಸೀಮಿತಗೊಳಿಸುವ ನಂಬಿಕೆಗಳಾವುವು?
ಒಬ್ಬರು ಇದುವೇ ಸತ್ಯ ಎಂದು ಅಂದುಕೊಳ್ಳುವ ಆದರೆ ದೇವರ ವಾಕ್ಯದ ಆಧಾರವಲ್ಲದ ಆಲೋಚನೆಗಳು ಅಭಿಪ್ರಾಯಗಳೇ ಸೀಮಿತಗೊಳಿಸುವ ನಂಬಿಕೆಗಳಾಗಿವೆ.
ಸೀಮಿತಗೊಳಿಸುವ ನಂಬಿಕೆಗಳು ಭೂತಕಾಲದಲ್ಲಿ ನಡೆದ ಘಟನೆಗಳಿಂದ ಉಂಟಾದ ನಂಬಿಕೆಗಳಾಗಿವೆ.ಇವೆಲ್ಲವೂ ನಿಮ್ಮ ಜೀವಿತದಲ್ಲಿ ಜರಗಿದ ನಿರ್ದಿಷ್ಟ ಘಟನೆಗಳಿಂದಾಗಿ ಉಂಟಾದ ವೈಫಲ್ಯತೆ, ನಿಮಗಾದ ನೋವು, ಅವಮಾನ ಮತ್ತು ಈಗ ಅದರಿಂದ ಅನುಭವಿಸುತ್ತಿರುವ ಕಷ್ಟಗಳಿಂದ ಉಂಟಾದ ನಂಬಿಕೆಗಳಾಗಿವೆ.
ಯೇಸು ಸ್ವಾಮಿಯು "ನಾನೇ ಮಾರ್ಗ ನಾನೇ ಸತ್ಯ ಮತ್ತು ನಾನೇ ಜೀವ" ಎಂದು ಹೇಳಿದ್ದಾನೆ. (ಯೋಹಾನ14:6) ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನೀವು ಯೇಸು ಸ್ವಾಮಿಯ ಬೋಧನೆಗಳ ಮೇಲೆ ನಿಮ್ಮ ನಂಬಿಕೆಗಳನ್ನು ಆಧಾರ ಮಾಡಿಕೊಂಡಾಗ ನೀವು ಸಂಕಲ್ಪಿಸಿದ ನಿರ್ಣಯಗಳನ್ನು ಗುರಿಗಳನ್ನು ನೀವು ಸಾಧಿಸಲು ಅದು ಅಲೌಕಿಕವಾದ ಬಲವನ್ನು ನಿಮಗೆ ತಂದುಕೊಡುತ್ತದೆ.
"ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಆ ಸತ್ಯವು ನಿಮ್ಮನ್ನು ಬಿಡುಗಡೆಗೊಳಿಸುವುದು" (ಯೋಹಾನ 8:32) ಎಂದೂ ಸಹ ಯೇಸುಸ್ವಾಮಿಯು ಹೇಳಿದ್ದಾನೆ. ಸತ್ಯವನ್ನು ತಿಳಿದುಕೊಳ್ಳುವಂಥದ್ದು ನೀವು ಏನನ್ನು ಮಾಡಲು ನಿಮಗೆ ಬಿಡುಗಡೆ ಕೊಡುತ್ತದೆ? ಮತ್ತೆ, ನೀವು ಕೈಗೊಂಡ ನಿರ್ಣಯಗಳನ್ನು ಪ್ರಾಯೋಗಿಕವಾಗಿ ಅಸ್ತಿತ್ವಕ್ಕೆ ತರಲು ಮತ್ತು ನೀವು ಅಂದುಕೊಂಡಂತಹ ಗುರಿ ಸಾಧಿಸಲು ಅದು ನಿಮ್ಮನ್ನು ಬಲಪಡಿಸುತ್ತದೆ.
ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಜೀವನದಲ್ಲಿ ಒಂದು ಹಂತದಲ್ಲಿ ಬಹಳಷ್ಟು ಸಂಗತಿಗಳು ದೇವರ ಕರೆಯ ಹಾದಿಯಲ್ಲಿ ನನಗೆ ವಿರುದ್ಧವಾಗಿ ನಿಂತಿದ್ದವು.
ಇದು ನಾನು ಆತನ ವಾಕ್ಯದ ಕಡೆಗೆ ತಿರುಗಿಕೊಂಡಾಗ ಆದದ್ದು! ನನಗೆ ದೇವರು "ನಮ್ಮ ಹೃದಯದ ಇಷ್ಟಾರ್ಥಗಳನ್ನೆಲ್ಲ ಒದಗಿಸುತ್ತಾನೆ" (ಕೀರ್ತನೆ 37:4) ಮತ್ತು "ಹೇಳಲಾಗದಂತಹ ಅತಿಶಯಆನಂದವನ್ನು ಅನುಗ್ರಹಿಸುತ್ತಾನೆ" (1ಪೇತ್ರ1:8) ಮತ್ತು "ಆತನು ನನಗಾಗಿ ಮಾಡಿರುವ ಯೋಜನೆಗಳೆಲ್ಲಾ ನನ್ನ ಮೇಲಿಗಾಗಿಯೇ" (ಯೆರೇಮಿಯ 29:11)ಎಂಬ ವಾಕ್ಯಗಳು ನನ್ನ ತಪ್ಪಾದ ನಂಬಿಕೆಗಳಿಗೆ ಸವಾಲನ್ನು ಒಡ್ಡಿತ್ತು. ಯಾವುದೇ ಬದಲಾವಣೆಯಾಗಲೀ ರಾತ್ರೋರಾತ್ರಿ ಆಗಿಬಿಡುವುದಿಲ್ಲ. ಆದರೆ ನಾನು ಆತನ ವಾಕ್ಯಗಳನ್ನು ಬಾಯರಿಕೆ ಮಾಡುತ್ತಲೇ ಬಂದೆನು. ನಾನು ಪ್ರಗತಿಯಲ್ಲಿರುವ ಕಾರ್ಯದಂತಿದ್ದೆ ಮತ್ತು ಹಾಗೆಯೇ ನಾನು ಪ್ರಗತಿ ಹೊಂದುತ್ತಾ ಬಂದೆ.ನಿಮ್ಮ ಜೀವಿತವೂ ಸಹ ಹೀಗೆಯೇ.
ಅರಿಕೆಗಳು
ನಾನು ನನ್ನ ಎಲ್ಲಾ ಜ್ಞಾನ ಮತ್ತು ಆತ್ಮಿಕ ತಿಳುವಳಿಕೆಯಲ್ಲಿ ನನ್ನ ಜೀವಿತಕ್ಕಾಗಿ ದೇವರ ಚಿತ್ತದ ಜ್ಞಾನದಿಂದಲೇ ತುಂಬಿಸಲ್ಪಟ್ಟಿದ್ದೇನೆ ಮತ್ತು ನನ್ನ ಎಲ್ಲಾ ಮಾರ್ಗದಲ್ಲೂ ಕರ್ತನನ್ನೇ ಮೆಚ್ಚಿಸಲು ಯೋಗ್ಯವಾಗಿ ನಡೆಯುತ್ತೇನೆ.
Join our WhatsApp Channel
Most Read
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ದೇವರು ಹೇಗೆ ಒದಗಿಸುತ್ತಾನೆ #3
● ಆರಾಧನೆಗೆ ಬೇಕಾದ ಇಂಧನ
● ಯಾಬೇಚನ ಪ್ರಾರ್ಥನೆ
● ಯಜಮಾನನ ಬಯಕೆ
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
ಅನಿಸಿಕೆಗಳು