ಅನುದಿನದ ಮನ್ನಾ
1
1
105
ಅವರ ದೈವಿಕ ದುರಸ್ತಿ ಅಂಗಡಿ
Monday, 28th of April 2025
Categories :
ರೂಪಾಂತರ(transformation)
"ಆ ದಿನದಲ್ಲಿ ನಾನು ದಾವೀದನ ಬಿದ್ದು ಹೋಗಿರುವ ಗುಡಿಸಲನ್ನು ಎತ್ತಿ ಅದರ ಕಂಡಿಗಳನ್ನು ಮುಚ್ಚುವೆನು;"(ಆಮೋಸ 9:11)
"ದಿ ರಿಪೇರ್ ಶಾಪ್ "ಎಂಬುದು 2017 ರಲ್ಲಿ ಪ್ರಥಮ ಪ್ರದರ್ಶನವಾದಾಗಿನಿಂದ ಲಕ್ಷಾಂತರ ಜನರ ಹೃದಯಗಳನ್ನು ವಶಪಡಿಸಿಕೊಂಡ ದೂರದರ್ಶನ ಕಾರ್ಯಕ್ರಮವಾಗಿದೆ. (ನಾನು ಸಹ ಯೂಟ್ಯೂಬ್ ನಲ್ಲಿ ಕೆಲವು ಸಂಚಿಕೆಗಳನ್ನು ನೋಡಿದ್ದೇನೆ). ಈ ಕಾರ್ಯಕ್ರಮದ ಸರಳ ಸ್ವರೂಪವು ಜನರ ಅಮೂಲ್ಯ ಆಸ್ತಿಗಳನ್ನು ಮತ್ತೆ ಜೀವಂತಗೊಳಿಸಲು ಕೆಲಸ ಮಾಡುವ ಪರಿಣಿತ ಪುನಃಸ್ಥಾಪಕರ ತಂಡವನ್ನು ಒಳಗೊಂಡಿತ್ತು.
ಹಳೆಯ ಆಟಿಕೆಗಳು ಮತ್ತು ಗಡಿಯಾರಗಳಿಂದ ಹಿಡಿದು ಪ್ರಾಚೀನ ಪೀಠೋಪಕರಣಗಳು ಮತ್ತು ವರ್ಣಚಿತ್ರಗಳವರೆಗೆ, ಪ್ರದರ್ಶನದಲ್ಲಿರುವ ಕುಶಲಕರ್ಮಿಗಳು ಮತ್ತು ಮಹಿಳೆಯರು ಪ್ರತಿಯೊಂದು ವಸ್ತುವನ್ನು ಅದರ ಮೂಲ ಸೌಂದರ್ಯಕ್ಕೆ ಪುನಃಸ್ಥಾಪಿಸುವ ಕಾರ್ಯಕ್ಕೆ ಹೆಚ್ಚು ಕಾಳಜಿ ನೀಡುತ್ತಿದ್ದರು.
ಇತರ ಪುನಃಸ್ಥಾಪನೆ ಪ್ರದರ್ಶನಗಳಿಗಿಂತ "ದಿ ರಿಪೇರ್ ಶಾಪ್" ಕಾರ್ಯಕ್ರಮದ ವಿಶೇಷತೆ ಯಾವುದಾಗಿತ್ತೆಂದರೆ ಅದು ಜನರು ತರುವ ವಸ್ತುಗಳೊಂದಿಗೆ ಆ ಜನರು ಹೊಂದಿರುವ ಭಾವನಾತ್ಮಕ ಸಂಪರ್ಕಕ್ಕೆ ಮಾನ್ಯತೆ ನೀಡುವುದಾಗಿತ್ತು. ಕಾರಣ ಈ ವಸ್ತುಗಳಲ್ಲಿ ಹಲವು ಕುಟುಂಬದ ಚರಾಸ್ತಿ ಅಥವಾ ತಲತಲಾಂತರದಿಂದ ರವಾನಿಸಲ್ಪಟ್ಟ ಪ್ರೀತಿಪಾತ್ರವಾದ ಆಸ್ತಿಗಳಾಗಿದ್ದವು . ಈ ವಸ್ತುಗಳನ್ನು ಪುನಃಸ್ಥಾಪಿಸಿದಾಗ, ಭೌತಿಕ ವಸ್ತುವಿಗೆ ಹೊಸ ಜೀವವನ್ನು ನೀಡುವುದು ಮಾತ್ರವಲ್ಲದೇ ಅವುಗಳಿಗೆ ಅಂಟಿಕೊಂಡಿರುವ ನೆನಪುಗಳು ಮತ್ತು ಭಾವನೆಗಳಿಗೂ ಸಹ ಜೀವ ತುಂಬುವುದಾಗಿತ್ತು.
ತಮ್ಮ ವಸ್ತುಗಳು ಪುನಃಸ್ಥಾಪಿತವಾಗುವುದನ್ನು ನೋಡುವಾಗ ಅದರ ಮಾಲೀಕರ ಪ್ರತಿಕ್ರಿಯೆಗಳನ್ನು ನೋಡುವಂತದ್ದು ನಿಜಕ್ಕೂ ನೋಡಲು ಸಂತೋಷ ಕೊಡುತ್ತದೆ. ಆಸ್ತಿಗಳನ್ನು ಅವುಗಳ ಹಿಂದಿನ ವೈಭವಕ್ಕೆ ಪುನಃಸ್ಥಾಪಿಸಲಾಗುವಾಗ ಕೆಲವರು ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡು ಭಾವನಾತ್ಮಕವಾಗಿ ಅಳುತ್ತಾರೆ ಮತ್ತು ಇತರರು ತಮ್ಮ ಅಮೂಲ್ಯವಾದ ಸಂಗತಿಗಳನ್ನು ನೋಡಿ ತುಂಬಾ ಸಂತೋಷಪಡುತ್ತಾರೆ.
"ದಿ ರಿಪೇರ್ ಶಾಪ್" ಇಂಗ್ಲೆಂಡ್ ಮತ್ತು ಪ್ರಪಂಚದಾದ್ಯಂತ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದ್ದು ಅದು ಏಕೆ ಎಂದು ನೋಡುವಂತದ್ದು ಬಹು ಸುಲಭ. ಯಾಕೆಂದರೆ ಇದು ಅಮೂಲ್ಯವಾದ ಆಸ್ತಿಗಳ ಮೌಲ್ಯ ಮತ್ತು ಹಳೆಯ ವಸ್ತುಗಳಿಗೆ ಹೊಸ ಜೀವ ತುಂಬುವ ಪುನಃಸ್ಥಾಪನೆಯ ಶಕ್ತಿಯನ್ನು ನೆನಪಿಸುವ ಪ್ರದರ್ಶನವಾಗಿದೆ.
ಪುನಃಸ್ಥಾಪನೆ ಎಂದರೆ ಯಾವುದನ್ನಾದರೂ ಅದರ ಮೂಲ ಪೂರ್ಣಸ್ಥಿತಿ ಮತ್ತು ಸಂಪೂರ್ಣತೆಗೆ ಮರಳಿ ತರುವುದಾಗಿದೆ. ಅದೇ ರೀತಿಯಲ್ಲಿ, ನಮ್ಮ ಸ್ವಯಾರ್ಜಿತ ಪಾಪ ಮತ್ತು ಇತರರ ಕ್ರಿಯೆಗಳಿಂದ ಹೃದಯ ಮುರಿದ ವ್ಯಕ್ತಿಗಳಾಗಿರುವ ನಮ್ಮನ್ನು ಪುನಃಸ್ಥಾಪಿಸಲು ಯಾವಾಗಲೂ ದೇವರು ಮುಂದಾಗುತ್ತಾನೆ. ದೇವರ ಪ್ರೀತಿ ಮತ್ತು ಕೃಪೆಯ ಮೂಲಕ, ನಾವು ಸಂಪೂರ್ಣತೆಯ ಸ್ಥಿತಿಗೆ ಪುನಃಸ್ಥಾಪಿಸಲ್ಪಡಬಹುದು ಮತ್ತು ನಮ್ಮ ಗತ ಜೀವಿತದ ಗಾಯಗಳಿಂದ ಗುಣಮುಖರಾಗಬಹುದು.
ದೇವರು ಮನ ಮುರಿದ ಜನರನ್ನು ಪುನಃಸ್ಥಾಪನೆ ಮಾಡುವವನಾಗಿರುವುದರಿಂದ ನಾವು ಮನಮುರಿದುಹೋಗುವುದರ ಭಯಪಡುವ ಅಗತ್ಯವಿಲ್ಲ ಅಥವಾ ಶಾಶ್ವತವಾಗಿ ಮುರಿದ ಸ್ಥಿತಿಯಲಲ್ಲಿಯೇ ಉಳಿದುಬಿಡುವ ಅಗತ್ಯವಿಲ್ಲ ಎಂಬ ಪ್ರಬಲ ಜ್ಞಾಪನೆಯಾಗಿದೆ. ಬದಲಾಗಿ, ದೇವರು ನಮ್ಮನ್ನು ಸಂಪೂರ್ಣತೆಯ ಸ್ಥಿತಿಗೆ ಮರಳಿ ತಂದು ಹೊಸದಾದ ಭರವಸೆ ಮತ್ತು ಬಲದೊಂದಿಗೆ ಜೀವನದಲ್ಲಿ ಮುಂದುವರಿಯಲು ನಮಗೆ ಅವಕಾಶ ನೀಡುತ್ತಾನೆ ಎಂದು ನಾವು ನಂಬಿಕೆಯನ್ನು ಹೊಂದಬಹುದು.
ದೇವರು ನಮ್ಮ ಜೀವನದಲ್ಲಿ ಕಾರ್ಯ ಮಾಡಲು ಮತ್ತು ನಮ್ಮನ್ನು ಪುನಃಸ್ಥಾಪಿಸಲು ನಾವು ಅನುಮತಿಸುವಾಗ, ನಾವು ನಿಜವಾದ ಸ್ವಸ್ಥತೆಯನ್ನು ಅನುಭವಿಸಬಹುದು ಮತ್ತು ಕಷ್ಟಕರ ಸಂದರ್ಭಗಳ ನಡುವೆಯೂ ಸಮಾಧಾನವನ್ನು ಕಂಡುಕೊಳ್ಳಬಹುದು. ಹೊಸ ಒಡಂಬಡಿಕೆಯ ಉದ್ದಕ್ಕೂ, ನಾವು ಯೇಸುವನ್ನು ಅತೀತನಾದ ಪುನಃಸ್ಥಾಪಕನಾಗಿ ಸ್ವಸ್ಥ ಪಡಿಸುವವನಾಗಿ ಮತ್ತು ಜನರನ್ನು ಮತ್ತೆ ನೂತನ ಪಡಿಸುವವನಾಗಿ ನೋಡುತ್ತೇವೆ. ಆತನು ದೈಹಿಕ ಆರೋಗ್ಯ, ದೃಷ್ಟಿ ಮತ್ತು ಜೀವನವನ್ನು ಸಹ ಪುನಃಸ್ಥಾಪಿಸುತ್ತಾನೆ.
ರಕ್ತಸ್ರಾವದ ಸಮಸ್ಯೆಯಿದ್ದ ಸ್ತ್ರೀಯು ತನ್ನ ಆರೋಗ್ಯವನ್ನು ಪುನಃಸ್ಥಾಪಿಸಿಕೊಂಡಳು. ಕುರುಡನಾಗಿದ್ದ ಬಾರ್ತಿಮಾಯಾನು ತನ್ನ ದೃಷ್ಟಿಯನ್ನು ಪುನಃಸ್ಥಾಪಿಸಿಕೊಂಡನು.ನಾಯೀನ ಊರಿನ ವಿಧವೆಯು ತನ್ನ ಸತ್ತ ಮಗನನ್ನು ಪುನಃಸ್ಥಾಪಿಸಿಕೊಂಡಳು. ಪೇತ್ರನು ತನ್ನ ವ್ಯವಹಾರ ವೈಫಲ್ಯದಲ್ಲಿ ಚೇತರಿಸಿಕೊಂಡನು ಮತ್ತು ಪಟ್ಟಿಯು ಹೀಗೆ ಮುಂದುವರಿಯುತ್ತದೆ. ಆದಾಗ್ಯೂ, ಆತನಿಂದಾಗುವ ಪುನಃಸ್ಥಾಪನೆಯು ಭೌತಿಕ ಮಟ್ಟವನ್ನು ಮೀರಿದ್ದಾಗಿದೆ. ಯೇಸು ಸಂಬಂಧಗಳು, ಘನತೆ ಮತ್ತು ಉದ್ದೇಶವನ್ನೂ ಸಹ ಪುನಃಸ್ಥಾಪಿಸುವವನಾಗಿದ್ದಾನೆ.
ದೇವರು ಎಲ್ಲವನ್ನೂ ಹೊಸದಾಗಿಮಾಡುವ ಬಯಕೆಯು ಸತ್ಯವೇದದ್ಯಂತ ನಾವು ಈ ಪುನಃಸ್ಥಾಪನೆಯ ವಿಷಯವನ್ನು ನೋಡುತ್ತೇವೆ. "ಆಗ ಸಿಂಹಾಸನದ ಮೇಲೆ ಕೂತಿದ್ದವನು - ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು. ಮತ್ತು ಒಬ್ಬನು ನನಗೆ - ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು. (ಪ್ರಕಟನೆ 21:5)
ನಾವು ಕ್ರಿಸ್ತನ ಬಳಿಗೆ ಬಂದಾಗ, ನಾವು ಹೊಸ ಸೃಷ್ಟಿಯಾಗುತ್ತೇವೆ, ನಮ್ಮ ಹಿಂದಿನ ಜೀವನದ ಎಲ್ಲಾ ಹಳೆಯ ವಿಷಯಗಳು ಕಣ್ಮರೆಯಾಗುತ್ತವೆ ಮತ್ತು ಎಲ್ಲವೂ ಹೊಸದಾಗುತ್ತವೆ. (2 ಕೊರಿಂಥ 5:17).
ಈ ರೂಪಾಂತರವು ಕೇವಲ ಸೌಂದರ್ಯವರ್ಧಕವಾದ ಬದಲಾವಣೆಯಲ್ಲ, ಆದರೆ ನಾವು ಈಗ ಯಾರಾಗಿದ್ದೇವೆ ಮತ್ತು ನಾವು ಯಾರಾಗಬೇಕೆಂದು ಬಯಸುತ್ತೇವೆ ಎಂಬುದರ ಸಂಪೂರ್ಣ ಕೂಲಂಕಷ ಪರೀಕ್ಷೆಯಾಗಿದೆ. ನಮ್ಮ ಜೀವನದಲ್ಲಿ ದೇವರ ಪುನಃಸ್ಥಾಪನೆ ಕಾರ್ಯವು ಜೀವಿತಾವಧಿಯ ಪರ್ಯಂತದ ಪ್ರಕ್ರಿಯೆಯಾಗಿದ್ದು, ಅಲ್ಲಿ ನಾವು ನಿರಂತರವಾಗಿ ಆತನಲ್ಲಿ ಹೊಸಬರಾಗುತ್ತಿರುತ್ತೇವೆ.
ಆತನು ನಮ್ಮನ್ನು ನಮ್ಮ ಮೂಲ ಸ್ಥಿತಿಗೆ ಪುನಃಸ್ಥಾಪಿಸುವುದಲ್ಲದೆ, ನಮ್ಮನ್ನು ಮೊದಲಿಗಿಂತ ಉತ್ತಮಗೊಳಿಸುತ್ತಾನೆ. ಆತನ ಪುನಃಸ್ಥಾಪನೆ ಕಾರ್ಯವು ನಮ್ಮ ವೈಯಕ್ತಿಕ ಜೀವನಕ್ಕಷ್ಟೇ ಸೀಮಿತವಾಗಿರದೇ ನಮ್ಮ ಸುತ್ತಲಿನ ಪ್ರಪಂಚಕ್ಕೂ ವಿಸ್ತರಿಸುವಂತದ್ದಾಗಿರುತ್ತದೆ, ಅಲ್ಲಿ ನಾವು ಇತರರಿಗೂ ಸಹ ಪುನಃಸ್ಥಾಪನೆ ಮತ್ತು ಸ್ವಸ್ಥತೆಯ ಪ್ರತಿನಿಧಿಗಳಾಗಿರಲು ಕರೆಯಲ್ಪಟ್ಟಿದ್ದೇವೆ. ಇಂದು ನಿಮಗೆ ಪುನಃಸ್ಥಾಪನೆ
ಅಗತ್ಯವಿದೆಯೇ? ಆತನು ನಿಮ್ಮನ್ನು ತನ್ನ ದೈವಿಕ ದುರಸ್ತಿ ಅಂಗಡಿಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ನಿಮ್ಮನ್ನು ಪುನಃಸ್ಥಾಪಿಸಲಿ.
Bible Reading: 1 Kings 13-14
ಅರಿಕೆಗಳು
ತಂದೆಯೇ, ನಿನ್ನ ರಕ್ಷಣಾನಂದವನ್ನು ನಾನು ತಿರಿಗಿ ಅನುಭವಿಸುವಂತೆ ಮಾಡು; ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ಯೇಸುನಾಮದಲ್ಲಿ ನನಗೆ ಆಧಾರನಾಗು.
(ಕೀರ್ತನೆ 51:12)
Join our WhatsApp Channel

Most Read
● ಸೆರೆಯಲ್ಲಿ ದೇವರ ಸ್ತೋತ್ರ● ದೈನಂದಿನ ಮನ್ನಾ
● ದೇವರಿಗಾಗಿ ದಾಹದಿಂದಿರುವುದು
● ಹೆಚ್ಚಿನ ಹೊರೆ ಬೇಡ
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಬೀಜದಲ್ಲಿರುವ ಶಕ್ತಿ -3
● ಕರ್ತನ ಆನಂದ
ಅನಿಸಿಕೆಗಳು