ಅನುದಿನದ ಮನ್ನಾ
ಸಹವಾಸದಲ್ಲಿರುವ ಅಭಿಷೇಕ
Monday, 9th of September 2024
2
1
257
Categories :
ಸಹವಾಸ (Association)
ಶಾಲೆಯಲ್ಲಿ ಕಲಿತ ಒಂದು ಹಳೆಯ ಮಾತಿದೆ "ಗರಿಗಳಿರುವ ಹಕ್ಕಿಗಳೆಲ್ಲಾ ಒಟ್ಟಿಗೆ ಕೂಡುತ್ತವೆ." ಆ ಮಾತು ಇಂದಿಗೂ ಸತ್ಯವೆನಿಸುತ್ತದೆ. ಜನರು ಯಾವಾಗಲೂ ತಮಗಿರುವಂತಹ ಅದೇ ಮನಃಸ್ಥಿತಿ ಪರಿಸ್ಥಿತಿ ಇರುವಂತಹ ಜನರೊಂದಿಗೆ ಸೇರುವಂತದ್ದನ್ನು ನಾನು ಸಾಮಾನ್ಯವಾಗಿ ನೋಡಿದ್ದೇನೆ.
ಅಂಥವರು ಯಾವುದೇ ಬೋಧನೆಯನ್ನೇ ಆಗಲೀ ಪ್ರವಾದನೆಯ ಮಾತನ್ನಾಗಲೀ ನಂಬಲು ನಿರಾಕರಿಸುವವರಾಗಿರುತ್ತಾರೆ. ಅಂತವರು ತಮ್ಮ ಪರಿಸ್ಥಿತಿಗಳು ಯಾರಿಂದಲೂ ಯಾವುದರಿಂದಲೂ ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ಆಗಲೇ ತಮ್ಮಲ್ಲಿ ನಿರ್ಧರಿಸಿ ಬಿಟ್ಟಿರುತ್ತಾರೆ.
ನಾವು ಎಂತಹ ಜನರೊಂದಿಗೆ ಸೇರುತ್ತೇವೋ ಅವು ಗಾಢವಾದ ಪ್ರಭಾವವನ್ನು ನಮ್ಮ ಮೇಲೆ ಬೀರುವಂತಹ ಸಂಗತಿಯಾಗಿವೆ. ಅದು ನಮ್ಮ ವರ್ತನೆ, ನಮ್ಮ ನಡವಳಿಕೆ ಹಾಗೂ ನಮ್ಮ ಭವಿಷ್ಯದ ಮೇಲೂ ಪರಿಣಾಮ ಬೀರುವಂತಹುಗಳಾಗಿವೆ. ನಾವು ಏನನ್ನು ನೋಡುತ್ತೇವೆಯೋ,ನಾವು ಏನನ್ನು ಓದುತ್ತೇವೆಯೋ ಮತ್ತು ನಾವು ಯಾರೊಂದಿಗೆ ಸಹವಾಸದಲ್ಲಿ ಇರುತ್ತೇವೆಯೋ ಅವು ನಮ್ಮ ಭವಿಷ್ಯದ ಮೇಲೆ ಆಳವಾದ ಪ್ರಭಾವವನ್ನು ಬೀರುವಂತಹುಗಳಾಗಿವೆ ಎಂಬ ಸತ್ಯವನ್ನು ಲೌಕಿಕವಾದ ಸಂಶೋಧನೆಗಳು ಸಹ ಸಾಬೀತುಪಡಿಸಿವೆ.
" ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು."(ಜ್ಞಾನೋಕ್ತಿಗಳು 13:20)
"ಆಗ ಯೆಹೋವನ ಆತ್ಮವು ನಿನ್ನ ಮೇಲೂ ಬರುವದರಿಂದ ನೀನೂ ಮಾರ್ಪಟ್ಟು ಪ್ರವಾದಿಸುವಿ." ಎಂದು ಪ್ರವಾದಿಯಾದ ಸಮುವೇಲನು ಸೌಲನಿಗೆ ಹೇಳುತ್ತಾ ಪ್ರವಾದನೆ ನುಡಿಯುತ್ತಾನೆ (1 ಸಮುವೇಲನು 10:6
" ಅವನು ದೇವಗಿರಿಗೆ ಬಂದ ಕೂಡಲೆ ಪರವಶವಾದ ಪ್ರವಾದಿಸಮೂಹವು ತನ್ನೆದುರಿಗೆ ಬರುವದನ್ನು ಕಂಡನು. ದೇವರ ಆತ್ಮವು ಅವನ ಮೇಲೆ ಬಂದದರಿಂದ ಅವನೂ ಪರವಶನಾಗಿ ಅವರೊಳಗೆ ಸೇರಿ ಪ್ರವಾದಿಸಿದನು. ಅವನು ಪರವಶನಾಗಿ ಮಾತಾಡುವದನ್ನು ಗುರುತಿನವರು ಕಂಡು ತಮ್ಮ ತಮ್ಮೊಳಗೆ - ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿದ್ದಾನೋ ಎಂದು ಮಾತಾಡಿಕೊಳ್ಳುತ್ತಿರುವಾಗ... "(1ಸಮುವೇಲನು 10:10-11)
ಸೌಲನು ಬೆನ್ಯಮಿನ ಕುಲಕ್ಕೆ ಸೇರಿದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ. ಆದರೆ ಅವನು ಪ್ರವಾದಿ ಮಂಡಳಿಯೊಡನೆ ಸೇರಿಕೊಂಡಾಗ ಪ್ರವಾದನೆ ಆತ್ಮ ಅವನ ಮೇಲೆ ಇಳಿದು ಬಂತು. ಒಂದು ಅದ್ಭುತವಾದ ಸಂಗತಿ ಅಲ್ಲಿ ಜರುಗಿತು. ಪ್ರವಾದನೆಯ ಆತ್ಮವು ಸೌಲನ ಮೇಲೆ ಇಳಿದು ಬಂದಾಗ ಸೌಲನು ಸಹ ಪ್ರವಾದಿಸಲು ಆರಂಭಿಸಿದನು. ಇಲ್ಲೂ ಒಂದು ನಿಯಮವಿದೆ. ಸಹವಾಸದಲ್ಲಿ ಅಭಿಷೇಕವೂ ಕೂಡ ಒಬ್ಬರಿಂದ ಒಬ್ಬರಿಗೆ ಹರಿದು ಬರುತ್ತದೆ.
"ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವದನ್ನು ಆ ಸಭಿಕರು ನೋಡಿ ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು. " ಎಂದು ಅಪೊಸ್ತಲರ ಕೃತ್ಯಗಳು 4:13 ಹೇಳುತ್ತದೆ.
ಯೇಸು ಸ್ವಾಮಿಯ ಬಹುತೇಕ ಶಿಷ್ಯರು ಮೀನುಗಾರರಾಗಿದ್ದು ಅನಕ್ಷರಸ್ಥರು ಮತ್ತು ಯಾವುದೇ ತರಬೇತಿ ಇಲ್ಲದವರಾಗಿದ್ದರು. ಆದರೂ ಅವರು ಮೂರುವರೆ ವರ್ಷಗಳ ಕಾಲ ಆತನ ಸಾಮೀಪ್ಯದಲ್ಲೇ ಇದ್ದಾಗ ಯೇಸು ಸ್ವಾಮಿಯಲ್ಲಿ ಇದ್ದಂತಹ ಅಭಿಷೇಕವು ಅವರಲ್ಲಿ ಹರಿಯುವಂತೆ ಮಾಡಿತ್ತು. ಇದು ಅದೆಷ್ಟು ಮಹತ್ತರ ಪರಿಣಾಮವನ್ನು ಅವರ ಮೇಲೆ ಬೀರಿತ್ತೆಂದರೆ ಅದರ ಪರಿಣಾಮವಾಗಿ ಅವರೂ ಸಹ ಯೇಸುವಿನಂತೆಯೇ ಫಲ ಕೊಡುವರಾದರು.
ದಾವಿದನ ಜೀವಿತವನ್ನು ನೋಡೋಣ:
"ಇದಲ್ಲದೆ ಕುಗ್ಗಿದವರೂ ಸಾಲಗಾರರೂ ಮನನೊಂದವರೂ ಆಗಿರುವ ಸರ್ವಜನರೂ ಬಂದು ಅವನನ್ನು ಆಶ್ರಯಿಸಿಕೊಳ್ಳಲು ಅವನು ಸುಮಾರು ನಾನೂರು ಜನರಿಗೆ ನಾಯಕನಾದನು."(1 ಸಮುವೇಲನು 22:2)
ದಾವೀದನನ್ನು ಕೂಡಿಕೊಂಡ ಜನರೆಲ್ಲರೂ ಸಾಲಗಾರರು, ಮನನೊಂದಿದವರು, ಎಲ್ಲರಿಂದ ತೊರೆಯಲ್ಪಟ್ಟವರು ಆಗಿದ್ದರು. ಆದರೆ ಅವರೆಲ್ಲರೂ ದಾವೀದನೊಂದಿಗೆ ಸೇರಿದಾಗ ಅವರ ಜೀವಿತದಲ್ಲಿ ಸಂಗತಿಗಳು ಬದಲಾಗತೊಡಗಿತು. ಆ ಕುಗ್ಗಿಹೋದವರು, ಎಲ್ಲರಿಂದ ತೊರೆಯಲ್ಪಟ್ಟವರೇ ಉನ್ನತ ಪುರುಷರನ್ನು ಕೊಂದು ಹಾಕಿದರು. ಮತ್ತೆ ಇಲ್ಲಿ ಕಾಣುವ ನಿಯಮವೆಂದರೆ ಸಹವಾಸದಿಂದ ಅಭಿಷೇಕವು ನಾವು ಕಾಣುವಂತೆ ವೃದ್ಧಿ ಹೊಂದುತ್ತಾ ಹೋಗುತ್ತದೆ.
ಸರಿಯಾದ ಸಹವಾಸವು ಮಹತ್ತರವಾದ ವ್ಯತ್ಯಾಸವನ್ನು ಉಂಟುಮಾಡುತ್ತದೆ, ಯಹೋಶುವನು ಮೋಶೆಯ ಸಹವಾಸದಲ್ಲಿದ್ದನು. ತಿಮೋತಿಯು ಪೌಲನ ಸಹವಾಸದಲ್ಲಿದ್ದನು...... ಹೀಗೆ ಮುಂದುವರೆಯುತ್ತಾ ಹೋಗುತ್ತದೆ.
ಇಂದಿನ ಅನೇಕ ಮಹಾನ್ ಬೋಧಕರು ಹಾಗೂ ಆಧುನಿಕ ದಿನದ ಪ್ರವಾದಿಗಳೂ ಸಹ ಅವರು ಆಸೆ ಪಡುವಂತಹ ವರವನ್ನು ಹೊಂದಿರುವಂತಹ ಮಾರ್ಗದರ್ಶಕರೊಂದಿಗೆ ಸಂಪರ್ಕ ಹೊಂದಿರುತ್ತಾರೆ.
ಕೆಲವೊಮ್ಮೆ ನೀವು ಆಸೆ ಪಡುವ ಅಭಿಷೇಕದಲ್ಲಿ ಕಾರ್ಯ ಮಾಡುವ ವ್ಯಕ್ತಿಗಳೊಡನೆ ಭೌತಿಕವಾಗಿ ಹತ್ತಿರದಲ್ಲಿರುವುದು ಯಾವಾಗಲೂ ಸಾಧ್ಯವಿಲ್ಲದೆ ಇರಬಹುದು. ಆಗ ನೀವು ಅವರ ಬೋಧನೆಗಳಿಗೆ ಹತ್ತಿರವಾಗಿರಿ. ಅವರ ಸಂದೇಶಗಳಿಗೆ ಹತ್ತಿರವಾಗಿರಿ. ಈ ರೀತಿಯಾಗಿ ನೀವು ಅವರ ಸಹವಾಸದಲ್ಲಿರಬಹುದು. ಆ ರೀತಿಯಾಗಿ ನೀವು ಆ ಅಭಿಷೇಕದೊಂದಿಗೆ ಸಂಪರ್ಕ ಸಾಧಿಸಬಹುದು.
ಕಡೆಯದಾಗಿ ಒಂದು ಎಚ್ಚರಿಕೆಯ ಮಾತು :
"ಜ್ಞಾನಿಯ ನಿವಾಸದಲ್ಲಿ ಎಣ್ಣೆಯೂ ಶ್ರೇಷ್ಠ ಸಂಪತ್ತೂ ಇರುವವು, ಜ್ಞಾನಹೀನನು ಇದ್ದದ್ದನ್ನೆಲ್ಲಾ ನುಂಗಿಬಿಡುವನು."(ಜ್ಞಾನೋಕ್ತಿಗಳು 21:20).
ಈ ಮೇಲಿನ ದೇವರ ವಾಕ್ಯವು ನಮಗೆ ಸ್ಪಷ್ಟವಾಗಿ ಹೇಳುವುದೇನೆಂದರೆ ಜ್ಞಾನಿಯ ಸಹವಾಸದಲ್ಲಿ ಅಮೂಲ್ಯ ಸಂಪತ್ತು ಮತ್ತು ಎಣ್ಣೆಯೂ ಇರುತ್ತದೆ (ಇದು ಅಭಿಷೇಕವನ್ನು ಕುರಿತು ಹೇಳುತ್ತಿದೆ) ಎಂದು ಹೇಳುತ್ತದೆ. ಇದಕ್ಕೆ ತದ್ವಿರದ್ಧವಾದದ್ದು ಸತ್ಯವೇ ಆಗಿದೆ.
ನೀವು ತಪ್ಪಾದ ಸಹವಾಸದ ಸ್ಥಳಕ್ಕೆ ಹೋದರೆ ಅಥವಾ ತಪ್ಪಾದ ವ್ಯಕ್ತಿಗಳೊಡನೆ ಸಂಪರ್ಕದಲ್ಲಿದ್ದರೆ ನಿಮ್ಮ ಅಭಿಷೇಕ ಒಣಗಿಹೋಗುತ್ತದೆ. ನಿಮ್ಮಲ್ಲಿರುವ ಅಲ್ಪ ಅಭಿಷೇಕ ಕೂಡ ನಶಿಸಿ ಹೋಗುತ್ತದೆ. ಆದ್ದರಿಂದ ದೇವರು ಕಾರ್ಯ ಮಾಡುವ ಸ್ಥಳದೊಂದಿಗೆ ಸಂಪರ್ಕ ಹೊಂದಿಕೊಳ್ಳಿರಿ.
ಅರಿಕೆಗಳು
ನಾನು ಜ್ಞಾನಿಗಳೊಂದಿಗೆ ನಡೆದು ಯೇಸು ನಾಮದಲ್ಲಿ ಇನ್ನೂ ಹೆಚ್ಚಿನ ಜ್ಞಾನಿಯಾಗುವೆನು.
ತಂದೆಯೇ ಇನ್ನೂ ಹೆಚ್ಚಿನ ಅಭಿಷೇಕದಲ್ಲಿ ನಾನು ಬೆಳೆಯುವಂತೆ ಸಹಾಯಮಾಡುವ ದೈವೀಕ ಸಹವಾಸದಲ್ಲಿ ನನ್ನನ್ನು ಸೇರಿಸಬೇಕೆಂದು ಯೇಸು ನಾಮದಲ್ಲಿ ಬೇಡಿಕೊಳ್ಳುತ್ತೇನೆ.
ತಂದೆಯೇ ಇನ್ನೂ ಹೆಚ್ಚಿನ ಅಭಿಷೇಕದಲ್ಲಿ ನಾನು ಬೆಳೆಯುವಂತೆ ಸಹಾಯಮಾಡುವ ದೈವೀಕ ಸಹವಾಸದಲ್ಲಿ ನನ್ನನ್ನು ಸೇರಿಸಬೇಕೆಂದು ಯೇಸು ನಾಮದಲ್ಲಿ ಬೇಡಿಕೊಳ್ಳುತ್ತೇನೆ.
Join our WhatsApp Channel
Most Read
● ಪುರುಷರು ಯಾಕೆ ಪತನಗೊಳ್ಳುವರು -2● ಸತ್ತವರೊಳಗಿಂದ ಮೊದಲು ಎದ್ದು ಬಂದವನು.
● ಹೆಚ್ಚು ಹೆಚ್ಚಾಗಿ ಬೆಳೆಯುವ ನಂಬಿಕೆ
● ದೈವೀಕ ಅನುಕ್ರಮ -2
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I
● ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
ಅನಿಸಿಕೆಗಳು