english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರವಾಕ್ಯವನ್ನು ಮಾರ್ಪಡಿಸಬೇಡಿರಿ
ಅನುದಿನದ ಮನ್ನಾ

ದೇವರವಾಕ್ಯವನ್ನು ಮಾರ್ಪಡಿಸಬೇಡಿರಿ

Sunday, 21st of April 2024
1 0 450
Categories : ಬುದ್ಧಿವಂತಿಕೆ (Wisdom) ಸತ್ಯವೇದ ( Bible)
ಕ್ರೈಸ್ತರಾಗಿ ನಾವು ದೇವರವಾಕ್ಯವನ್ನು ಗೌರವದಿಂದಲೂ-ಜಾಗರೂಕತೆಯಿಂದಲೂ ನಿರ್ವಹಣೆ ಮಾಡಲು ಕರೆಯಲ್ಪಟ್ಟವರಾಗಿದ್ದೇವೆ.ಸತ್ಯವೇದ ಎಂಬುದು ಒಂದು ಸಾಮಾನ್ಯವಾದ ಪುಸ್ತಕವಲ್ಲ. ಅದು ದೇವರಾತ್ಮ ಪ್ರೇರೇಪಣೆಯಿಂದ ಬರೆಯಲ್ಪಟ್ಟಿದ್ದು, ಶಾಶ್ವತವಾದದ್ದು ದೋಷಾತೀತವಾದದ್ದು ಆಗಿರುವ ದೇವರ ಮಾತುಗಳಾಗಿವೆ.
ಇದು ನಾವು ನಮ್ಮ ಜೀವಿತವನ್ನು ನಿರ್ಮಿಸಿಕೊಳ್ಳುವ ಅಸ್ತಿವಾರವು ಮತ್ತು ಕ್ರಿಸ್ತನಲ್ಲಿ ನಮ್ಮನ್ನು ನಡೆಸಲು ಮಾರ್ಗದರ್ಶನ ನೀಡುವ ಸತ್ಯದ ಮೂಲವೂ ಆಗಿದೆ. ಆದುದರಿಂದ,ದೇವರ ವಾಕ್ಯಕ್ಕೆ ಏನನ್ನೂ ಸೇರಿಸದೇ  ಅದರಿಂದ ಏನನ್ನೂ ತೆಗೆಯದೆ, ಅದರಲ್ಲಿರುವ ಸತ್ಯಾರ್ಥಗಳನ್ನು ಅರ್ಥಮಾಡಿಕೊಳ್ಳಬೇಕೆಂಬ ಹಂಬಲದಲ್ಲಿ ದೀನತೆಯಿಂದ ನಾವು ಅದಕ್ಕೆ ಕಿವಿ ಕೊಡಬೇಕು.

ದೇವರ ವಾಕ್ಯವನ್ನು ಸಂರಕ್ಷಿಸಬೇಕಾದ ಪ್ರಾಮುಖ್ಯತೆ
‭‭ಧರ್ಮೋಪದೇಶಕಾಂಡ‬ ‭4:2‬ ‭ರಲ್ಲಿ ಹೇಳಿರುವ ಪ್ರಕಾರ "ನಿಮ್ಮ ದೇವರಾದ ಯೆಹೋವನು ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಮಾತುಗಳನ್ನು ನೀವು ಕೈಕೊಳ್ಳಬೇಕೇ ಹೊರತು ಅವುಗಳಿಗೆ ಏನೂ ಕೂಡಿಸಬಾರದು, ಅವುಗಳಿಂದ ಏನೂ ತೆಗೆದುಬಿಡಬಾರದು." ನಾವು ದೇವರ ವಾಕ್ಯದಲ್ಲಿರುವ ಸಮಗ್ರತೆಯನ್ನು ಸಂರಕ್ಷಿಸಬೇಕಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ನಾವು ದೇವರ ವಾಕ್ಯಕ್ಕೆ ಏನಾದರೂ ಕೂಡಿಸುವಾಗ ಅಥವಾ ಅದರಿಂದ ಏನಾದರೂ ತೆಗೆದುಹಾಕುವಾಗ ಮೂಲಭೂತವಾಗಿ ದೇವರ ಮಾತನ್ನು ಮಾರ್ಪಡಿಸುವವರಾಗಿ ಕಂಡು ಬರುವವರಾಗುತ್ತೇವೆ ಮತ್ತು ಇದು ಬಹು ಗಂಭೀರವಾದ ಅಪರಾಧವಾಗಿದೆ.

ಜ್ಞಾನೋಕ್ತಿಗಳ ಪುಸ್ತಕವು ದೇವರವಾಕ್ಯವನ್ನು ಹಾಳುಮಾಡುವುದರ ವಿರುದ್ಧ ನಮ್ಮನ್ನು ಹೀಗೆ ಎಚ್ಚರಿಸುತ್ತದೆ... " ‭‭ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು; ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ. [6] ಆತನ ಮಾತುಗಳಿಗೆ ಯಾವದನ್ನೂ ಸೇರಿಸಬೇಡ; ಆತನು ನಿನ್ನನ್ನು ಖಂಡಿಸುವಾಗ ನೀನು ಸುಳ್ಳುಗಾರನೆಂದು ತೋರಿಬಂದೀಯೆ." ಎಂದು (ಜ್ಞಾನೋಕ್ತಿಗಳು‬ ‭30:5‭-‬6‬)ದೇವರ ವಾಕ್ಯವನ್ನು ಮಾರ್ಪಡಿಸಲು ಪ್ರಯತ್ನಿಸುವ ಮೂಲಕ ದೇವರ ಮಾತು ದೋಷಪೂರಿತವಾಗಿದೆ ಅಥವಾ ಅಪೂರ್ಣವಾಗಿದೆ ಎಂದು ನಾವು ಸೂಚಿಸುವವರಾಗುತ್ತೇವೆ. ಇದು ಗರ್ವದ ಮತ್ತು ದುರಹಂಕಾರದ ಒಂದು ರೂಪವಾಗಿದೆ.

ದೇವರ ವಾಕ್ಯವನ್ನು ಮಾರ್ಪಡಿಸುವದರಿಂದಾಗುವ  ಪರಿಣಾಮಗಳು
ನಾವು ದೇವರ ವಾಕ್ಯವನ್ನು ಮಾರ್ಪಡಿಸುವಾಗ ನಾವು ಅದರ ಬಲ ಮತ್ತು ಅಧಿಕಾರವನ್ನು ಕಡಿಮೆಯಾದಂತೆ ಮಾಡುತ್ತೇವೆ. ಪ್ರವಾದಿಯಾದ ಯೆರೆಮಿಯಾನು ಸಂಶೋಧಿಸಿ ಕಂಡುಕೊಂಡಂತೆ ದೇವರ ವಾಕ್ಯಕ್ಕೆ ಏನನ್ನೂ  ಸೇರಿಸದೆ ಏನನ್ನು ಮಾರ್ಪಡಿಸದೇ ಹೇಗಿದೆಯೋ ಹಾಗೆ ಪರಿಪೂರ್ಣವಾಗಿ ತಲುಪಿಸಬೇಕು. ಯೆರೆಮಿಯ 26:2ರಲ್ಲಿ ಯಹೋವನು ಪ್ರವಾದಿಗೆ " ಒಂದು ಮಾತನ್ನೂ ಬಿಡಬೇಡ"ಎಂದು ಸೂಚಿಸುತ್ತಾನೆ.ನಾವು ದೇವರ ಸಂದೇಶದಲ್ಲಿ ಕೆಲವೊಂದು ಬಿಟ್ಟು ಹೇಳುವಾಗ ಅಥವಾ ಮಾರ್ಪಡಿಸುವಾಗ ಅದನ್ನು ಕೇಳುವವರ ಜೀವಿತದಲ್ಲಿ ಆ ವಾಕ್ಯದ ಪ್ರಭಾವವನ್ನು ಮತ್ತು ಪರಿಣಾಮಕಾರತ್ವವನ್ನು ಕಡಿಮೆ ಮಾಡುವವರಾಗುತ್ತೇವೆ.

ಇದಲ್ಲದೆ, ದೇವರ ವಾಕ್ಯವನ್ನು ಮಾರ್ಪಡಿಸುವಂಥದ್ದು ಆತ್ಮಿಕ ಗೊಂದಲಗಳಿಗೂ ಮತ್ತು ವಂಚನೆಗಳಿಗೂ ಕಾರಣವಾಗಬಹುದು. ಏದೇನ್ ತೋಟದಲ್ಲಿ ಹವ್ವಳು ಸರ್ಪದ ಶೋಧನೆಗೆ ಒಳಗಾದಾಗ ಆಕೆಯು "ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ - ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ" ಎನ್ನುವ ಮೂಲಕ ದೇವರ ಆಜ್ಞೆಯಲ್ಲಿರುವ ನಿರ್ಣಾಯಕ ಅಂಶಗಳಲ್ಲಿ ಕೆಲವೊಂದನ್ನು ಬಿಟ್ಟುಬಿಟ್ಟಳು ಮತ್ತು ಕೆಲವೊಂದನ್ನು ಹೆಚ್ಚಾಗಿ ಸೇರಿಸಿದಳು. (ಆದಿಕಾಂಡ‬ ‭3:3‬)
ದೇವರ ವಾಕ್ಯವು ಹೇಗಿದೆಯೋ ಹಾಗೆ ನಿಖರವಾಗಿ ಪ್ರತಿನಿಧಿಸುವಲ್ಲಿ ಅವಳು ವಿಫಲಳಾದ್ದರಿಂದ ಸರ್ಪದ ವಂಚನೆಗೆ ಈಡಾದಳು ಮತ್ತು ಅಷ್ಟೇ ಅಲ್ಲದೆ ಇದು ಇಡೀ ಮನುಕುಲಕ್ಕೆ ನಾಶನದ ಬಾಗಿಲನ್ನು ತೆರೆದು ಕೊಟ್ಟಿತು.

ದೇವರ ವಾಕ್ಯಕ್ಕೆ ನಮ್ರತೆಯಿಂದ ಕಿವಿ ಕೊಡುವುದು
ನಾವು ಸತ್ಯವೇದವನ್ನು ಅಧ್ಯಯನ ಮಾಡುವಾಗ ದೀನ  ಹೃದಯದಿಂದಲೂ ಯಥಾರ್ಥವಾದ ಕಲಿಯುವಿಕೆಯ  ಮನೋಭಾವದಿಂದಲೂ ಸಮೀಪಿಸಬೇಕು. ನಮ್ಮ ತಿಳುವಳಿಕೆಯ ಸಾಮರ್ಥ್ಯವು ಸೀಮಿತವಾಗಿರುವುದರಿಂದ ದೇವರ ವಾಕ್ಯವನ್ನು ಗ್ರಹಿಸಿಕೊಳ್ಳಲು ನಮಗೆ ಪವಿತ್ರಾತ್ಮನ ಮಾರ್ಗದರ್ಶನದ ಅಗತ್ಯವಿದೆ ಎಂಬುದನ್ನು ನಾವು ಗುರುತಿಸಿಕೊಳ್ಳಬೇಕು."ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತು, ಹೌದು, [ನನ್ನ ಕೈಯಿಂದಲೇ] ಇವುಗಳೆಲ್ಲಾ ಉಂಟಾದವು. ನಾನು ಕಟಾಕ್ಷಿಸುವವನು ಎಂಥವನೆಂದರೆ ದೀನನೂ ಮನಮುರಿದವನೂ ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ." ಎಂದು ಯೆಶಾಯ 66:2ರ ವಾಕ್ಯ ನಮಗೆ ನೆನಪಿಸುವಂತೆ ನಾವು ದೇವರ ವಾಕ್ಯವನ್ನು ಗೌರವದಿಂದಲೂ ಭಯ ಭಕ್ತಿಯಿಂದಲೂ ಸ್ವೀಕರಿಸುವಾಗ ಆತನ ಮಾತ್ರ ಅನುಗ್ರಹಿಸಲು ಸಾಧ್ಯವಿರುವ ಜ್ಞಾನ ವಿವೇಕಗಳನ್ನು ಹೊಂದಿಕೊಳ್ಳುವವರಾಗುತ್ತೇವೆ.

ದೇವರ ವಾಕ್ಯವನ್ನು ಶ್ರದ್ದೆಯಿಂದ ಅಧ್ಯಯನ ಮಾಡುವುದರಲ್ಲಿರುವ ಬಲ
ನಾವು ಎಷ್ಟು ವಾಕ್ಯಗಳನ್ನು ಈ ದಿನ ಓದುತ್ತಿದ್ದೇವೆ ಎನ್ನುವ ಬಗ್ಗೆ ಗಮನಹರಿಸುವ ಬದಲು ಅದರಿಂದ ನಾವು ಎಷ್ಟನ್ನು ಅರಿತುಕೊಂಡೆವು ಎನ್ನುವ ಅಧ್ಯಯನದ ಗುಣಮಟ್ಟಕ್ಕೆ ಆದ್ಯತೆ ನಾವು ನೀಡಬೇಕು. ಸತ್ಯವೇದದ ಪ್ರತಿಯೊಂದು ವಾಕ್ಯವು ನಮ್ಮ ಜೀವಿತವನ್ನು ಪರಿವರ್ತಿಸಲು ಸಾಧ್ಯವಾದ ಆಳವಾದ ಸತ್ಯಗಳಿಂದಲೂ ಒಳನೋಟಗಳಿಂದಲೂ ತುಂಬಿದೆ. ದೇವರ ವಾಕ್ಯವನ್ನು ಧ್ಯಾನಿಸಲು ಮತ್ತು ಅದನ್ನು ಗ್ರಹಿಸಿಕೊಳ್ಳಲು ಸಮಯವನ್ನು ಮೀಸಲಿಡುವಾಗ ನಮ್ಮ ಹೃದಯಗಳಲ್ಲಿ ಆ ವಾಕ್ಯಗಳು ಬೇರೂರಿ ನಮ್ಮ ಜೀವಿತದಲ್ಲಿ ನಮಗೆ ಫಲವನ್ನು ಫಲಿಸಲು ಅವಕಾಶ ಮಾಡಿಕೊಡುವವರಾಗುತ್ತೇವೆ.

ಕೀರ್ತನೆಗಾರನು  ಘೋಷಿಸುವಂತೆ ದೇವರ ವಾಕ್ಯವು "ನಮ್ಮ ಕಾಲಿಗೆ ದೀಪವು,ದಾರಿಗೆ ಬೆಳಕು ಆಗಿದೆ" (ಕೀರ್ತನೆಗಳು 119 105).  ನಾವು ದೇವರ ವಾಕ್ಯಧ್ಯಾನದಲ್ಲಿ ಮುಳುಗಿದ್ದಾಗ ಮತ್ತು ನಾವು ಪ್ರತಿಯೊಂದು ಹೆಜ್ಜೆ ಇಡುವುದಕ್ಕೂ ದೇವರ ವಾಕ್ಯದ ಮಾರ್ಗದರ್ಶನವನ್ನು ಎದುರು ನೋಡುವಾಗ,  ದೇವರ ಚಿತ್ತಕ್ಕೆ ವಿದೇಯರಾಗಿ ನಡೆಯುವುದರಿಂದ ಉಂಟಾಗುವ ಆನಂದವನ್ನು ಮತ್ತು ದೈವೀಕ ಸಮಾಧಾನವನ್ನು ಅನುಭವಿಸುವವರಾಗುತ್ತೇವೆ.
ಪ್ರಾರ್ಥನೆಗಳು
ಪರಲೋಕದಲ್ಲಿರುವ ಪ್ರೀತಿಯುಳ್ಳ ತಂದೆಯೇ, ನಿನ್ನ ಪವಿತ್ರವಾದ ವಾಕ್ಯವನ್ನು ಅನುಸರಿಸಲು ಮತ್ತು ಸಂರಕ್ಷಿಸಲು ಜ್ಞಾನವನ್ನು ಅನುಗ್ರಹಿಸಿ. ನಿಮ್ಮಲ್ಲಿರುವ ಸತ್ಯತೆಯನ್ನು ಗ್ರಹಿಸಿಕೊಳ್ಳುವುದಕ್ಕಾಗಿ ನಾನು ಪ್ರತಿದಿನವೂ ನಿನ್ನ ವಾಕ್ಯವನ್ನು ಗೌರವದಿಂದಲೂ ಭಯ ಭಕ್ತಿಯಿಂದಲೂ ದೀನತ್ವದಿಂದಲೂ ಸಮೀಪಿಸುತ್ತೇನೆ. ನಿಮ್ಮ ವಾಕ್ಯಗಳಿಗೆ ಯಾವುದನ್ನಾದರೂ ಸೇರಿಸುವ ಅಥವಾ ತೆಗೆದುಬಿಡುವಂತ ಶೋಧನೆಗಳಿಂದ ನನ್ನನ್ನು ತಪ್ಪಿಸಿ ಕಾಪಾಡಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್


Join our WhatsApp Channel


Most Read
● ಸ್ನೇಹ ವಿನಂತಿ: ಪ್ರಾರ್ಥನಾಪೂರ್ವಕವಾಗಿ ಆಯ್ಕೆಮಾಡಿ.
● ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ಹೊಗಳಿಕೆವಂಚಿತ ನಾಯಕರು
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್