ಅನುದಿನದ ಮನ್ನಾ
ಆ ಸಂಗತಿಗಳನ್ನು ಸಕ್ರಿಯ ಗೊಳಿಸಿ
Friday, 28th of June 2024
1
1
236
Categories :
ದೇವರವಾಕ್ಯದ ಅರಿಕೆ(Confessing the word)
ಆದಿಕಾಂಡ ಪುಸ್ತಕವು ಎಲ್ಲ ಸಂಗತಿಗಳ ಆರಂಭಗಳ ಪುಸ್ತಕ ವಾಗಿದೆ. ನೀವು ಮದುವೆ ಮತ್ತು ಸಂಪತ್ತಿನ ಕುರಿತು ಅರ್ಥಮಾಡಿಕೊಳ್ಳಲಿಕ್ಕೆ ಬಯಸುವುದಾದರೆ ನೀವು ಆದಿಕಾಂಡ ಪುಸ್ತಕವನ್ನು ಓದಬೇಕು. ನೀವು ಪ್ರಕಟಣೆ ಪುಸ್ತಕವನ್ನು ಅರ್ಥಮಾಡಿಕೊಳ್ಳಲಿಷ್ಟ ಪಡುವುದಾದರೆ ಆದಿ ಕಾಂಡ ಪುಸ್ತಕವನ್ನು ಓದಬೇಕು. ನೀವು ಆದಿಕಾಂಡ ಪುಸ್ತಕವನ್ನು ಅರ್ಥ ಮಾಡಿಕೊಳ್ಳದೇ ಹೋದರೆ ನೀವು ಜೀವನವನ್ನೇ ಅರ್ಥ ಮಾಡಿಕೊಳ್ಳಲಾಗುವುದಿಲ್ಲ.
"ಆದಿಯಲ್ಲಿ ದೇವರು ಆಕಾಶವನ್ನೂ ಭೂವಿುಯನ್ನೂ ಉಂಟುಮಾಡಿದನು. ಭೂವಿುಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು; ಆದಿಸಾಗರದ ಮೇಲೆ ಕತ್ತಲಿತ್ತು; ದೇವರಾತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು. ಆಗ ದೇವರು - ಬೆಳಕಾಗಲಿ ಅನ್ನಲು ಬೆಳಕಾಯಿತು."(ಆದಿಕಾಂಡ 1:1-3)
ನಿಮ್ಮ ಜೀವನದಲ್ಲಿ ನಿಮ್ಮ ವ್ಯವಹಾರದಲ್ಲಿಯೇ ಆಗಲೀ, ನಿಮ್ಮ ಉದ್ಯೋಗದಲ್ಲಾಗಲೀ ಕ್ರಮವಿಲ್ಲದೆಯೂ ಬರಿದಾಗಿಯೂ ಇರಬಹುದು. ಎಲ್ಲಿ ನೋಡಿದರೂ ಅಂಧಕಾರವೇ ಕಾಣುತ್ತಿರಬಹುದು. ನಿಮಗೆ ಯಾವುದೇ ನಿರೀಕ್ಷೆಯಿಲ್ಲದೆ ಹೋಗಿರಬಹುದು. ಸೈತಾನನು ಒಬ್ಬ ಸುಳ್ಳುಗಾರ. ಅವನು ನಿಮಗೆ ದೇವರು ನಿಮ್ಮ ಕೈ ಬಿಟ್ಟು ಬಿಟ್ಟಿದ್ದಾನೆ ನಿಮಗೆ ಯಾವುದೂ ಒಳ್ಳೆಯದು ಆಗುವುದೇ ಇಲ್ಲ ಎಂದೆಲ್ಲ ಹೇಳುತ್ತಿರಬಹುದು. ಆದರೆ ಗಮನಿಸಿ ಆ ಕ್ರಮವಿಲ್ಲದೆಯೂ ಬರಿದಾಗಿಯೂ ಇರುವ ಒಂದು ಸಂಗತಿ ಮೇಲೆ ದೇವರಾತ್ಮನು ಚಲಿಸುತ್ತಿದ್ದದನ್ನು ನೋಡಿರಿ. ದೇವರು ನಿತ್ಯಕ್ಕೂ ಇರುವಾತನಾಗಿದ್ದಾನೆ. ಆತನು ನಿಮ್ಮನ್ನು ಬಿಟ್ಟುಬಿಡುವನಲ್ಲ.
ಆದರೆ ನೀವು ಕೆಲವು ಸಂಗತಿಗಳನ್ನು ನಿಮ್ಮ ಜೀವಿತದಲ್ಲಿ ಸಕ್ರಿಯಗೊಳಿಸಿಕೊಳ್ಳದೇ ಹೋದರೆ ಆ ಅಂಧಕಾರವು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ನಿಮಗೆ ವಿವರಿಸಲು ನನಗೆ ಅನುಮತಿಸಿ..
ದೇವರಾತ್ಮನು ಆ ಕತ್ತಲೆಯ ಮೇಲೂ ಕ್ರಮವಿಲ್ಲದೆಯೂ ಬರಿದಾಗಿರುವುದರ ಮೇಲೂ ಚಲಿಸುತ್ತಿದ್ದರರೂ ಅಲ್ಲಿ ಏನೂ ಬದಲಾವಣೆ ಉಂಟಾಗಲಿಲ್ಲ. ದೇವರ ಬಾಯಿಂದ ಒಂದು ಮಾತು ಬರುವವರೆಗೂ ಏನೂ ಜರುಗಿರಲಿಲ್ಲ. ಆಗ "ದೇವರು ಬೆಳಕಾಗಲಿ" ಎಂದನು.
ಅಲ್ಲಿ ಜೀವ ಸಾಕಾರಗೊಳ್ಳುವ ಮುಂಚಿತವಾಗಿ ದೇವರ ಬಾಯಿಂದ ಮಾತು ಹೊರಡಬೇಕಾಗಿತ್ತು. ದೇವರು ನಿಮ್ಮ ಜೀವಿತದಲ್ಲಿ ಏನೆಲ್ಲಾ ಸಾಕಾರಗೊಳಿಸಬೇಕೆಂದು ನೀವು ಆಶಿಸುತ್ತೀರೋ ಅದೆಲ್ಲಾದಕ್ಕೂ ಸಹ ಈ ನಿಯಮವೇ ಅನ್ವಯವಾಗಿರುತ್ತದೆ. ಈಗ ನೀವು ನಿಮ್ಮ ಕೆಲಸಕ್ಕಾಗಿಯೋ ಆತ್ಮಿಕ ಬೆಳವಣಿಗೆಗಾಗಿಯೋ ಪ್ರಾರ್ಥಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆ ಕ್ಷೇತ್ರಕ್ಕೆ ಸಂಬಂಧಿಸಿದ ದೇವರ ವಾಕ್ಯವನ್ನು ನೀವು ಬಾಯಿಂದ ಅರಿಕೆ ಮಾಡಲು ಆರಂಭಿಸಿ. ( ನೀವು ನೋಹಾ ಆಪ್ ನಲ್ಲಿರುವ ದೈನಂದಿನ ಅರಿಕೆಗಳನ್ನು ನೋಡಿ. ನಿಮ್ಮ ಅಗತ್ಯಕ್ಕೆ ಸಂಬಂಧಿಸಿದ ದೇವರ ವಾಕ್ಯವನ್ನು ಅರಿಕೆ ಮಾಡಬಹುದು) ನಿಮ್ಮ ಬಾಯನ್ನು ತೆರೆದು ನಿಮ್ಮ ಪರಿಸ್ಥಿತಿಗಳ ಮೇಲೆ ಅಧಿಕಾರದಿಂದ ನುಡಿಯಿರಿ. ಆಗ ಮಾತ್ರವೇ ನಿಮ್ಮ ಜೀವಿತದಲ್ಲಿ ಕ್ರಮ ಬರುತ್ತದೆ.
ದೇವರು ಕಾರ್ಯ ಮಾಡುವ ರೀತಿಯನ್ನು ನಾವೆಷ್ಟು ಕಡಿಮೆಯಾಗಿ ಅರ್ಥೈಸಿಕೊಳ್ಳುತ್ತೇವೋ ನಮ್ಮ ಕ್ರಿಸ್ತೀಯ ಜೀವಿತದ ಮಾರ್ಗದಲ್ಲಿ ಅಷ್ಟೇ ಹೆಚ್ಚಾಗಿ ಹತಾಶೆಗೊಳಗಾಗುತ್ತೇವೆ. ಆಮೇಲೆ ದೇವರ ಮೇಲೆ ಗುಣು ಗುತ್ತಾ ಸಭೆಯವರ ಮೇಲೆ ಬೇಸರಗೊಳ್ಳುತ್ತಾ ಇರಬೇಕಾಗುತ್ತದೆ. ಇನ್ನು ಕೆಲವರಂತೂ ಆ ಸಭೆಗಳನ್ನು ಬಿಟ್ಟು ಬಿಟ್ಟು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಾರೆ.
ಅರಿಕೆಗಳು
1. "ಕರ್ತನು ನನ್ನನ್ನು ನಿರಂತರವಾಗಿ ಮಾರ್ಗದರ್ಶಿಸುವನು" ಎಂದು ಅರಿಕೆ ಮಾಡುವ ಮೂಲಕ ನಾನು ಆತನ ನಿರಂತರವಾದ ಮಾರ್ಗದರ್ಶನವನ್ನು ಸ್ವಾಧೀನ ಪಡಿಸಿಕೊಳ್ಳುವೆನು. (ಯೆಶಾಯ 58:11)
2. "ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನನ್ನ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು." ಎನ್ನುವ ವಾಕ್ಯವನ್ನು ಅರಿಕೆ ಮಾಡುವ ಮೂಲಕ ದೇವರ ಶಾಂತಿಯನ್ನು ಸ್ವಾಧೀನ ಪಡಿಸಿಕೊಳ್ಳುವೆನು. (ಫಿಲಿಪ್ಪಿ 4:7)
3."ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ." ಎಂದು ಕರ್ತನು ಹೇಳಿರುವ ವಾಕ್ಯವನ್ನು ಅರಿಕೆ ಮಾಡುವ ಮೂಲಕ ನಾನು ನಿರ್ಭಯವಾಗಿರುವೆನು. (ಯೆಶಾಯ 41:13).
2. "ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನನ್ನ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು." ಎನ್ನುವ ವಾಕ್ಯವನ್ನು ಅರಿಕೆ ಮಾಡುವ ಮೂಲಕ ದೇವರ ಶಾಂತಿಯನ್ನು ಸ್ವಾಧೀನ ಪಡಿಸಿಕೊಳ್ಳುವೆನು. (ಫಿಲಿಪ್ಪಿ 4:7)
3."ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ." ಎಂದು ಕರ್ತನು ಹೇಳಿರುವ ವಾಕ್ಯವನ್ನು ಅರಿಕೆ ಮಾಡುವ ಮೂಲಕ ನಾನು ನಿರ್ಭಯವಾಗಿರುವೆನು. (ಯೆಶಾಯ 41:13).
Join our WhatsApp Channel
Most Read
● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?● ಪರಲೋಕದ ವಾಗ್ದಾನ
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಬೀಜದಲ್ಲಿರುವ ಶಕ್ತಿ -3
● ನಂಬಿಕೆ ಎಂದರೇನು ?
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
ಅನಿಸಿಕೆಗಳು