"ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ 4ಇಸಾಕನೆಂದು ಹೆಸರಿಟ್ಟು...."(ಆದಿಕಾಂಡ 21:3)
Lol ಎಂಬುದು ಸಾಮಾಜಿಕ ಜಾಲತಾಣದ ಪದಕೋಶದಲ್ಲಿ ಜೋರಾಗಿ ನಗು ಎಂಬುವ ಅರ್ಥ ಕೊಡುವ ಪದವಾಗಿದೆ. ಎಷ್ಟು ಜನ ಈ ಒಂದು ಅಭಿವ್ಯಕ್ತಿಯನ್ನು ಉಪಯೋಗಿಸಿದಾಗ ಹೀಗೆ ಜೋರಾಗಿ ನಕ್ಕರೋ ನನಗಂತೂ ಖಚಿತವಾಗಿ ತಿಳಿದಿಲ್ಲ.ನಗು ಎಂಬ ಪದವನ್ನು ಸತ್ಯವೇದದಲ್ಲಿ ಮೊದಲ ಬಾರಿಗೆ ಆದಿಕಾಂಡ 17ನೇ ಅಧ್ಯಾಯದಲ್ಲಿ ಉಪಯೋಗಿಸಲಾಗಿದೆ.
"ಅಬ್ರಹಾಮನು ಅಡ್ಡಬಿದ್ದು ನಕ್ಕು- 17ನೂರು ವರುಷದವನಿಗೆ ಮಗ ಹುಟ್ಟುವದುಂಟೇ? ತೊಂಭತ್ತು ವರುಷದವಳಾದ ಸಾರಳು ಹೆತ್ತಾಳೇ ಎಂದು ಮನಸ್ಸಿನಲ್ಲಿ ಅಂದುಕೊಂಡು..."(ಆದಿಕಾಂಡ 17:16-17). ಅಬ್ರಹಾಮನು ದೇವರ ನಿತ್ಯ ಶಕ್ತಿಯನ್ನು ಅನುಮಾನಿಸಿ ನಗಲಿಲ್ಲ.(ರೋಮ 4:20-21) ಆದರೆ ತಾನು 100ರ ಇಳಿ ವಯಸ್ಸಿನಲ್ಲಿ ತಂದೆಯಾದರೆ ಹೇಗೆ ಎಂಬುದನ್ನು ನೆನೆಸಿ ಹಾಸ್ಯವಾಗಿ ನಕ್ಕನು.
ದೇವರು ತನ್ನ ಸ್ನೇಹಿತನಾದ ಅಬ್ರಾಹಾಮನ ಆ ನಗುವಿಗೆ ಸ್ಪಂದಿಸುತ್ತಾ ಅವನಿಗೆ ಮುಂದೆ ಹುಟ್ಟಲಿರುವ ಮಗನಿಗೆ ಆ ಹೆಸರೇ ಇಡುವಂತೆ ಒಂದು ಅಪರೂಪವಾದ ಕಾರ್ಯವನ್ನು ನಿರ್ಧರಿಸಿದ!ಆತನು ಅಬ್ರಹಾಮನಿಗೆ ಹುಟ್ಟುವ ಮಗನ ಹೆಸರನ್ನು "ಇಸಾಕ"ನೆಂದು ಘೋಷಿಸಿದ. ಇಬ್ರಿಯ ಭಾಷೆಯಲ್ಲಿ ಇದರ ಅರ್ಥ "ನಗುವವನು"/ " ಅವನು ನಗುತ್ತಾನೆ" ಎಂದು (ಆದಿಕಾಂಡ 17:19).
ದೇವರು ಸಾರಾಳಿಗೆ ಮುಪ್ಪಿನಲ್ಲಿ ಮಗನನ್ನು ಹಡೆಯುವೆ ಎಂದು ಹೇಳಿದಾಗ ಆಕೆಯು ನಕ್ಕಳು. ಏಕೆಂದರೆ ಅವಳಿಗೆ ಅದನ್ನು ನಂಬಲು ಸಾಧ್ಯವಿರಲಿಲ್ಲ. ಈಗ ಅಪನಂಬಿಕೆಯ ಆ ನಗು ಹೋಗಿ ದೇವರು ಅವರನ್ನು ಅನುಗ್ರಹಿಸಿದ ವಾಗ್ದಾನದಿಂದಾಗಿ ಆನಂದದ ನಗುವಾಗಿ ಬದಲಾಯಿತು.
"ಸಾರಳು - ದೇವರು ನನ್ನನ್ನು ನಗುವಂತೆ ಮಾಡಿದ್ದಾನೆ; ಕೇಳುವವರೆಲ್ಲರೂ ನನ್ನೊಡನೆ ನಗುವರು......ಎಂದಳು "(ಆದಿಕಾಂಡ 21:6 )
ಈ ಲೋಕದಲ್ಲಿ ಎರಡು ರೀತಿಯ ಜನರನ್ನು ನಾವು ನೋಡುತ್ತೇವೆ. ಒಬ್ಬರು ನಮ್ಮನ್ನು ನೋಡಿ ನಗುತ್ತಾರೆ ಮತ್ತೊಬ್ಬರು ನಮ್ಮ ಜೊತೆ ಸೇರಿ ನಗುತ್ತಾರೆ.ನಿಮ್ಮನ್ನು ಅಪಹಾಸ್ಯ ಮಾಡುವವರೇ ಬೆಚ್ಚಿ ಬೀಳುವ ಮತ್ತು ಅಚ್ಚರಿ ಪಡುವಂತಹ ನೂತನ ಕಾಲವನ್ನು ದೇವರು ನಿಮ್ಮ ಜೀವಿತದಲ್ಲಿ ತರುತ್ತಾನೆ ಎಂದು ನಾನು ನಂಬುತ್ತೇನೆ. ಕರ್ತನು ನಿಮ್ಮ ಜೊತೆಯಲ್ಲಿ ಸೇರಿ ಸಂತೋಷಪಡುವಂತ ಜನರನ್ನು ನಿಮಗೆ ಅನುಗ್ರಹಿಸಲಿ.
ಒತ್ತಡ ಆತಂಕಗಳಿಂದ ಆಗುವ ಋಣಾತ್ಮಕ ಪರಿಣಾಮಗಳನ್ನು ಓಡಿಸಲು ಇರುವ ಬದಶಾಲಿಯಾದ ಔಷದವೆಂದರೆ ಅದು "ನಗು". ವೈಜ್ಞಾನಿಕ ಸಂಶೋಧನೆಯೂ ಸಹ ನಗುವು ನಾವು ಆರೋಗ್ಯವಾಗಿರಲು ಸ್ವಸ್ತತೆಯಿಂದ ಜೀವಿಸಲು ಬಹಳ ಪ್ರಯೋಜನಕಾರಿಯಾಗಿದೆ ಎಂದು ಹೇಳುತ್ತದೆ. ಒತ್ತಡವನ್ನು ಉಂಟುಮಾಡುವ ನಕರಾತ್ಮಕ ಪರಿಣಾಮಗಳನ್ನು ತಕ್ಷಣವೇ ಪರಿಹರಿಸಲು ಕೆಲವು ವಿಚಾರಗಳು ಉಪಯುಕ್ತವಾಗಿವೆ. ಅವುಗಳಲ್ಲಿ ನಗುವೂ ಒಂದು. ಹಾಸ್ಯವು ನಮ್ಮ ಮನಸ್ಸನ್ನು ತಿಳಿಗೊಳಿಸುತ್ತದೆ. ನಮ್ಮನ್ನು ಕೆಲಕಾಲ ಹಾಯಾಗಿರಲು ಮತ್ತು ಒತ್ತಡ ಕಡಿಮೆ ಮಾಡಿಕೊಳ್ಳಲು ಅದು ಸಹಾಯ ಮಾಡುತ್ತದೆ. ದೇವರು ತನ್ನ ವಿವೇಕದಿಂದಲೇ ಒಂದು ಉದ್ದೇಶಕ್ಕಾಗಿಯೇ ನಮಗೆ ಈ ನಗುವನ್ನು ಅನುಗ್ರಹಿಸಿದ್ದಾನೆ.
"ಆತನು ಇನ್ನು ಮೇಲೆ ನಿನ್ನ ಬಾಯನ್ನು ನಗೆಯಿಂದಲೂ ತುಟಿಗಳನ್ನು ಉತ್ಸಾಹಧ್ವನಿಯಿಂದಲೂ ತುಂಬಿಸುವನು."(ಯೋಬನು 8:21)
ಮೇಲ್ಚಾವಣಿಗಳನ್ನು ರೂಪಿಸಿಕೊಳ್ಳುವುದೆಂದರೆ ಮಿತಿಗಳನ್ನು ಹೇರಿಕೊಳ್ಳುವುದು ಎಂದು ನಾನು ನಂಬುತ್ತೇನೆ. ಕೆಲವು ಮೇಲ್ಚಾವಣಿಗಳನ್ನು ಈ ಪ್ರಪಂಚವು ನಿಮ್ಮ ಮೇಲೆ ಹೇರಿದ್ದರೆ ಮತ್ತು ಕೆಲವನ್ನು ನಿಮಗೆ ನೀವೇ ಹೇರಿಕೊಂಡಿರುತ್ತೀರಿ. ದೇವರು ಮತ್ತೊಮ್ಮೆ ನೀವು ನಗುವಂತೆ ಮಾಡುತ್ತಾನೆ. ಈ ವಾಕ್ಯವನ್ನು ಹೊಂದಿಕೊಳ್ಳಿರಿ.
ಪ್ರಾರ್ಥನೆಗಳು
ತಂದೆಯೇ ಯೇಸು ನಾಮದಲ್ಲಿ ನನ್ನ ಹಾಗೂ ನನ್ನ ಕುಟುಂಬದವರ ಬಾಯನ್ನು ನಗುವಿನಿಂದ ತುಂಬಿಸು. ಆಮೆನ್.
ಗಮನಿಸಿ: ಈ ಸಂದೇಶವನ್ನು ಇನ್ನಷ್ಟು ಆಳವಾಗಿ ಅರ್ಥೈಸಿಕೊಳ್ಳಲು ಪಾಸ್ಟರ್ ಮೈಕಲ್ ಫರ್ನಾಂಡಿಸ್ ರವರ "ನೀವು ನಿಮ್ಮ ನಗುವನ್ನು ಕಳೆದುಕೊಂಡಿದ್ದೀರಾ" ಎಂಬ ಇ-ಪುಸ್ತಕವನ್ನು ಓದಿರಿ.
ಗಮನಿಸಿ: ಈ ಸಂದೇಶವನ್ನು ಇನ್ನಷ್ಟು ಆಳವಾಗಿ ಅರ್ಥೈಸಿಕೊಳ್ಳಲು ಪಾಸ್ಟರ್ ಮೈಕಲ್ ಫರ್ನಾಂಡಿಸ್ ರವರ "ನೀವು ನಿಮ್ಮ ನಗುವನ್ನು ಕಳೆದುಕೊಂಡಿದ್ದೀರಾ" ಎಂಬ ಇ-ಪುಸ್ತಕವನ್ನು ಓದಿರಿ.
Join our WhatsApp Channel
Most Read
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ● ವಿವೇಚನೆ v/s ತೀರ್ಪು
● ಯಾಬೇಚನ ಪ್ರಾರ್ಥನೆ
● ನೀವು ಎಷ್ಟು ವಿಶ್ವಾಸಾರ್ಹರು?
● ಆ ಸಂಗತಿಗಳನ್ನು ಸಕ್ರಿಯ ಗೊಳಿಸಿ
● ಕ್ರಿಸ್ತನ ರಾಯಭಾರಿಗಳು
● ಕಾಮದ ದುರಿಚ್ಛೆಗಳಿಂದ ಹೊರಬರುವುದು
ಅನಿಸಿಕೆಗಳು