ಅನುದಿನದ ಮನ್ನಾ
ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
Sunday, 13th of October 2024
1
0
108
Categories :
Relationships
"ಪಸ್ಕಹಬ್ಬದ ಮುಂದೆ ಯೇಸು ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಕಾಲ ಬಂತೆಂದು ತಿಳುಕೊಂಡು ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ ಪರಿಪೂರ್ಣವಾಗಿ ಅವರನ್ನು ಪ್ರೀತಿಸುತ್ತಾ ಬಂದನು."(ಯೋಹಾನ 13:1)
ನಮ್ಮ ಕುಟುಂಬ ಸದಸ್ಯರೊಂದಿಗೆ ನಾವು ಪಡೆಯುವ ಪ್ರತಿ ಕ್ಷಣವನ್ನು ಆನಂದಿಸೋಣ. ನಾಳೆಯ ದಿನಗಳಲ್ಲಿ ನಮಗೆ ಅಂತಹ ಕ್ಷಣಗಳ ಸೌಭಾಗ್ಯ ಸಿಗಬಹುದು ಇಲ್ಲವೇ ಸಿಗದೇ ಹೋಗಬಹುದು.
ಒಂದು ದಿನ ಒಬ್ಬ ಪ್ರಸಿದ್ಧ ಪಾಸ್ಟರ್ ಒಬ್ಬರು ತಮ್ಮ ಭಾನುವಾರದ ಪ್ರಸಂಗವನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದರು. ಅವರ ಪುಟ್ಟ ಮಗಳು ಸದ್ದಿಲ್ಲದೆ ಹಿಂದಿನಿಂದ ಬಂದು ಅವರನ್ನು ಗಟ್ಟಿಯಾಗಿ "ಡಾಡ" ಎಂದು ಅಪ್ಪಿ ಕೊಂಡಳು.. ಆ ಪಾಸ್ಟರ್ ಅವರು ಮೆರುದನಿಯಲ್ಲಿ ಆ ಮಗುವನ್ನು ಗದರಿಸಿ, ಈಗ ಅವಳೊಂದಿಗೆ ಸಮಯ ಕಳೆಯಲು ಬಿಡುವಿಲ್ಲ ಎಂದು ಹೇಳಿದರು.
ಆ ಸಮಯದಲ್ಲಿಯೇ ಅಲ್ಲಿದ್ದ ಆ ಪಾಸ್ಟರ್ರವರ ಹೆಂಡತಿಯು ಚಿಕ್ಕ ಮಗುವಾಗಿ ಆಕೆ ತೋರುತ್ತಿರುವ ಪ್ರೀತಿ ಮತ್ತು ವಾತ್ಸಲ್ಯ ಸ್ವಲ್ಪ ವರ್ಷಗಳು ಹೋದ ಮೇಲೆ ಮತ್ತೆ ಸಿಗುವುದಿಲ್ಲ ಎಂದು ಮೃದುವಾಗಿ ನೆನಪಿಸಿ ಸಿಕ್ಕಿರುವ ಈ ಸಮಯದಲ್ಲಿ ಅದನ್ನು ಆನಂದಿಸಿರಿ ಎಂದು ಸಲಹೆ ಇತ್ತಳು. ಆಗ ಆ ಪಾಸ್ಟರ್ ಅವರು ಆ ಮಾತಿನಲ್ಲಿರುವ ಸತ್ಯತೆ ಮತ್ತು ತೀವ್ರತೆಯನ್ನು ಅರಿತುಕೊಂಡು ತಕ್ಷಣವೇ ತಮ್ಮ ಕೆಲಸವನ್ನು ಬದುಗಿಟ್ಟು ಆ ಪುಟ್ಟ ಮಗಳೊಂದಿಗೆ ಸಮಯ ಕಳೆದರು.
ಅನೇಕ ಬಾರಿ "ಬಿಡುವಿಲ್ಲ" ಎನ್ನುವಂತದ್ದು "ಪ್ರಯೋಜನ"ಎನ್ನುವುದಕ್ಕೆ ಸಮಾನವಾಗಿರುವುದಿಲ್ಲ ಎಂಬುದನ್ನು ನಾನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಲೇ ಇರುತ್ತೇನೆ. ಕೇವಲ ಅವಿರತವಾದ ಚಟುವಟಿಕೆಯೇ ಸಾಧನೆಯನ್ನು ತಂದುಕೊಡುವುದಿಲ್ಲ ಮತ್ತು ಫಲ ಭರಿತವನ್ನಾಗಿಯೂ ಮಾಡುವುದಿಲ್ಲ.
ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಕಳೆಯುವ ಕ್ಷಣಗಳು ಅಮೂಲ್ಯವಾದ ಕ್ಷಣಗಳಾಗಿವೆ. ಅವುಗಳನ್ನು ವ್ಯರ್ಥಗೊಳಿಸಿಕೊಳ್ಳಬೇಡಿರಿ. ಯಾರಿಗೆ ಗೊತ್ತು ನಾಳೆಯ ದಿನಗಳಲ್ಲಿ ನಾವು ಅವುಗಳನ್ನು ಪಡೆಯದೆ ಹೋಗಬಹುದೇನೋ? ನೀವು ನಿಮ್ಮ ಕುಟುಂಬದೊಂದಿಗೆ ( ಅಂದರೆ ನಿಮ್ಮ ಹೆಂಡತಿ ಮಕ್ಕಳು ನಿಮ್ಮ ಪೋಷಕರ ಜೊತೆಗೆ) ಇರುವಾಗ ಸಾಮಾಜಿಕ ಜಾಲತಾಣ ವೀಕ್ಷಿಸುವುದರಲ್ಲಿ ನಿರತರಾಗಬೇಡಿರಿ. ಅದನ್ನು ಬೇರೆ ಸಮಯದಲ್ಲಿ ಮಾಡಿರಿ. ಶಕ್ತಿಯುತವಾಗಿರುವ ಕುಟುಂಬದ ಲಕ್ಷಣವೆಂದರೆ ಅದು ಅವರು ಕುಟುಂಬವಾಗಿ ಕಳೆಯುವ ಗುಣಮಟ್ಟದ ಸಮಯದ ಮೇಲೆ ನಿರ್ಧರಿತವಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಶಿಲುಬೆಗೆ ಹೋಗುವ ಮೊದಲು ತನ್ನ ಅಪೋಸ್ತಲರೊಂದಿಗೆ ಸಮಯ ಕಳೆಯುವುದು ಎಷ್ಟು ಮುಖ್ಯ ಎಂದು ಕರ್ತನಾದ ಯೇಸು ಕೂಡ ತಿಳಿದಿದ್ದನು. ಹಾಗಾಗಿ ನಾವು ಸಹ ನಮ್ಮ ಕುಟುಂಬದ ಸದಸ್ಯರಿಗೆ ಗುಣಮಟ್ಟದ ಸಮಯವನ್ನು ನೀಡೋಣ ಮತ್ತು ಅಂತಹ ಕ್ಷಣಗಳನ್ನು ಒಟ್ಟಾಗಿ ಆನಂದಿಸೋಣ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೀನು ಅನುಗ್ರಹಿಸಿದ ನನ್ನ ಕುಟುಂಬದ ಸದಸ್ಯರಿಗಾಗಿ ನಿನಗೆ ಸ್ತೋತ್ರ. ಅವರುಗಳನ್ನು ನಿನ್ನ ಕಣ್ಣಿನ ಗುಡ್ಡೆಯಂತೆ ಕಾಪಾಡು. ನನ್ನ ಕುಟುಂಬದವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನನಗೆ ಯೇಸು ನಾಮದಲ್ಲಿ ಕೃಪೆ ನೀಡಿರಿ, ಆಮೆನ್.
Join our WhatsApp Channel
Most Read
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ಕೃತಜ್ಞತೆಯ ಯಜ್ಞ
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #2
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರ ಕನ್ನಡಿ
ಅನಿಸಿಕೆಗಳು