ಅನುದಿನದ ಮನ್ನಾ
ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
Monday, 22nd of April 2024
2
2
376
Categories :
ವಂಚನೆ (Deception)
ಸಿದ್ಧಾಂತ (Doctrine)
"ಯಾಕಂದರೆ ನಾವು ಪ್ರಸಿದ್ಧಿಪಡಿಸದಿದ್ದ ಮತ್ತೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವರು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೆ ವಿಧವಾದ ಆತ್ಮಪ್ರೇರಣೆಯನ್ನು ಹೊಂದುವಾಗಲೂ ಅವಲಂಬಿಸದೆಯಿದ್ದ ಬೇರೊಂದು ಸುವಾರ್ತೆಯನ್ನು ಕೇಳುವಾಗಲೂ ನೀವು ಸಹಿಸಿಕೊಳ್ಳುತ್ತಿರುವದು ಬಹು ಆಶ್ಚರ್ಯ."(2 ಕೊರಿಂಥದವರಿಗೆ 11:4)
ಈ ಮೇಲಿನ ದೇವರ ವಾಕ್ಯದಲ್ಲಿ ಇರುವುದನ್ನು ಗಮನಿಸಿ.
- ಮತ್ತೊಬ್ಬ ಯೇಸು
- ಬೇರೊಂದು ವಿಧವಾದ ಆತ್ಮ
- ಬೇರೊಂದು ಸುವಾರ್ತೆ
ಇವುಗಳು ನಮ್ಮನ್ನು ನಾಶನಕ್ಕೆ ನಡೆಸುತ್ತವೆ ಎಂದು ದೇವರವಾಕ್ಯವು ಎಚ್ಚರಿಸುತ್ತಿದೆ.
ಇಂದು ಕೆಲವರು ತೀಟೆಕಿವಿಯುಳ್ಳವರಾಗಿರುವುದರಿಂದ ತಮಗಿಷ್ಟವಾದಂತಹ ರೀತಿಯಲ್ಲಿ ಭೋದಿಸುವವರು ಚರ್ಚಿನಲ್ಲಿ ಸಿಗದ ಕಾರಣ ಸಭಾ ಸೇವೆಗಳಿಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಆದ್ದರಿಂದ ಅವರು ಅದಕ್ಕೆ ಬದಲಾಗಿ ತಮ್ಮನ್ನು 'ಆಳಕ್ಕೆ' ಸೆಳೆದು ಕೊಂಡು ಹೋಗುವಂತ 'ಅಗಾದ'ಬೋಧನೆಗಳಿಗೆ ಕಿವಿ ಕೊಡಲು ಯೂಟ್ಯೂಬ್ ನಲ್ಲಿ ಅಂಥಹ ಬೋಧನೆಗಳನ್ನು ಹುಡುಕಲು ಆರಂಭಿಸುತ್ತಾರೆ.ಇದು ನಿಜಕ್ಕೂ ಅಪಾಯಕಾರಿಯಾದದ್ದು.
ಇತ್ತೀಚೆಗಷ್ಟೇ ಒಬ್ಬ ಸಭಾ ಪಾಲಕರು ನನಗೆ ಕರೆ ಮಾಡಿ ತಮ್ಮ ಸಭೆಯ ಕೆಲವರ ಮನೆಯಲ್ಲಿ ಮೋಸದಿಂದ ನಡೆದ ಬೋಧಕರ ಸೆಮಿನಾರ್ ಒಂದರಲ್ಲಿ ಭಾಗವಹಿಸಿದ ನಂತರ ತಮ್ಮ ಸಭೆಯ ಅನೇಕ ಸದಸ್ಯರು ತಮ್ಮ ಸಭೆಯನ್ನು ತೊರೆದು ಹೋದರೆಂದು ಕಣ್ಣೀರಿಟ್ಟರು.ಆ ಸೆಮಿನಾರ್ನಲ್ಲಿದ್ದ ಬೋಧಕರು ಸಭಾ ಪಾಲಕರೆಲ್ಲರೂ ತಪ್ಪಾಗಿ ಬೋಧಿಸುತ್ತಿದ್ದಾರೆ ತಾವೊಬ್ಬರೇ "ನಿಜವಾದ ಪ್ರಕಟಣೆ"ಯನ್ನು ಹೊಂದಿರುವಂಥದ್ದು ಎಂದು ಹೇಳಿದರಂತೆ.
ಹೊಸ-ಹೊಸ ಸುಳ್ಳು ಬೋಧನೆಗಳು, ಹೊಸ-ಹೊಸ ಸುಳ್ಳು ಪ್ರಕಟನೆಗಳು ಮತ್ತು ಹೊಸ -ಹೊಸ ಸುವಾರ್ತೆಗಳು ಹೆಚ್ಚು ಕಡಿಮೆ ಪ್ರತಿದಿನವೂ ಪುಟ್ಟಿಯುತ್ತಲೇ ಇದೆ. ಮತ್ತದು ದಿನ ದಿನಕ್ಕೆ ಹದಗೆಡುತ್ತಾ ಹೋಗುತ್ತಿದೆ.ನಾವು ಕಂಡರಿಯದ ಮತ್ತೊಬ್ಬ ಯೇಸುವನ್ನು, ಬೇರೊಂದು ಆತ್ಮವನ್ನು, ಬೇರೊಂದು ಸುವಾರ್ತೆಯನ್ನು ಪರಿಚಯಿಸುತ್ತಾರೆ ಎಂದು ಸತ್ಯವೇದವು ಆಗಲೇ ನಮ್ಮನ್ನು ಸ್ಪಷ್ಟವಾಗಿ ಎಚ್ಚರಿಸಿ ಆಗಿದೆ. (2 ಕೊರಿಯಂತೆ 11:4).
ಇಂದಿಗೂ ಸಹ ಕೆಲವು ಸಂಸ್ಥೆಗಳು ಯೇಸು ಕ್ರಿಸ್ತನು ಪ್ರಧಾನ ದೇವದೂತನಾದ ಮಿಕಾಯೇಲ್ ಎಂದು ಬೋದಿಸುತ್ತಿವೆ. -ಅದು ಮತ್ತೊಬ್ಬ ಯೇಸುವನ್ನು ಕುರಿತ ಬೋಧನೆ
ಇನ್ನೊಂದು ಸಂಸ್ಥೆಯು ಪಾಪ ಪರಿಹಾರಕ್ಕಾಗಿ ಯೇಸುಕ್ರಿಸ್ತನ ಶಿಲುಬೆ ಮೇಲೆ ಮಾಡಿದ ಬಲಿದಾನ ಒಂದೇ ಸಾಲದು, ಮನುಷ್ಯ ಸತ್ತ ಮೇಲೆ ತನ್ನ ಪಾಪ ಪರಿಹಾರಕ್ಕಾಗಿ ಶುದ್ಧೀಕರಣ ಸ್ಥಳಕ್ಕೆ (Purgatory) ಹೋಗಿ ತನ್ನ ಆತ್ಮವನ್ನು ಶುದ್ಧೀಕರಿಸಿಕೊಳ್ಳಬೇಕು ಎಂದು ಭೋದಿಸುತ್ತಿವೆ.- ಇದು ಬೇರೊಂದು ಸುವಾರ್ತೆ.
"ಬೇರೊಂದು ಸುವಾರ್ತೆ" ಎಂಬ ಪದದ ಅರ್ಥ ವಿರೂಪಗೊಳಿಸು ಎಂದು ( ತಿರುಚಿ ಹೇಳುವಂಥದ್ದು ನಂಬಿಕೆಯನ್ನು ತಪ್ಪಿಸುವಂಥದ್ದು ಎಂಬ ಅರ್ಥ ಕೊಡುತ್ತದೆ)
ಈ ರೀತಿ ಸುವಾರ್ತೆಯನ್ನು ವಿರೂಪಗೊಳಿಸುವವರು ಬೇಡವಾದದನ್ನು ಸೇರ್ಪಡೆ ಮಾಡುವ ಮೂಲಕ, ವ್ಯಕ್ತಿಯ ಸ್ವಭಾವ ಮತ್ತು ಕ್ರಿಸ್ತನ ಕಾರ್ಯಗಳನ್ನು ಅಸ್ಪಷ್ಟಗೊಳಿಸುವ ಮೂಲಕ ವಿರೂಪಗೊಳಿಸಿ ಸುವಾರ್ತೆಯನ್ನು ನಾಶ ಮಾಡಲು ಯತ್ನಿಸುತ್ತಾರೆ.
ಮತ್ತೆ, ಈ ಸಂಸ್ಥೆಯು ಪವಿತ್ರಾತ್ಮ ಎಂಬುದು ಸರ್ವಶಕ್ತನ ಒಂದು "ಅಗೋಚರ ಶಕ್ತಿಯೇ" ಹೊರತು ವ್ಯಕ್ತಿಯಲ್ಲ ಎಂದು ಭೋದಿಸುತ್ತಿವೆ.- ಇದು ಬೇರೊಂದು ಆತ್ಮದ ಕುರಿತ ಬೋಧನೆ.
ಇಂದು, "ದೇವರಾತ್ಮನು ಹೀಗೆ ಮಾಡಿ ಎಂದು ನನ್ನನ್ನು ನಡೆಸಿದನು. ದೇವರಾತ್ಮನು ಇದನ್ನು ನಂಬುವಂತೆ ನನ್ನನ್ನು ಪ್ರೇರೇಪಿಸಿದನು" ಎಂದು ಕೆಲವರು ಹೇಳುವಂಥದ್ದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಅವರು ತಮ್ಮ ಮನುಷ್ಯ ಆತ್ಮದ ಮಾತುಗಳನ್ನು ಕೇಳುವುದರ ಫಲವಾಗಿ ಈ ರೀತಿಯ ಬಹಳಷ್ಟು ಗೊಂದಲಗಳು ಉಂಟಾಗುತ್ತವೆ ಹಾಗಾಗಿ ನಾವೀಗ ದೇವರ ವಾಕ್ಯಗಳ ಕಡೆಗೆ ತಿರುಗಿಕೊಂಡು ದೇವರಾತ್ಮನು ಹೇಳುವ ಮಾತಿಗೆ ಪ್ರಥಮ ಸ್ಥಾನ ಕೊಡುವುದನ್ನು ಕಲಿಯಬೇಕು.ನೀವು ಕೇಳಿಸಿಕೊಳ್ಳುವಂತಹ ಮಾತುಗಳು ದೇವರ ವಾಕ್ಯಕ್ಕನುಗುಣವಾಗಿ ಇರದಿದ್ದರೇ ನೀವು ಬೇರೊಂದು ಆತ್ಮಕ್ಕೆ ಕಿವಿ ಕೊಡುತ್ತಿದ್ದೀರಿ ಎಂದು ಅರ್ಥ.
ಪ್ರಾರ್ಥನೆಗಳು
ತಂದೆಯೇ, ನಿನ್ನ ಪರಿಶುದ್ಧ ವಾಕ್ಯವು ನನ್ನ ಹೃದಯವನ್ನು ಶೋಧಿಸಿ ನಾನು ಕೇಡಿನ ಮಾರ್ಗದಲ್ಲಿದ್ದರೆ ನನ್ನ ಹೃದಯವನ್ನು ಮಾರ್ಪಡಿಸಲಿ. ಸರಿಯಾದ ಜನರೊಂದಿಗೆ ನಾನು ಸಂಪರ್ಕ ಹೊಂದುವಂತೆ ನನಗೆ ಸಹಾಯ ಮಾಡು. ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಸುಳ್ಳು ಬೋಧನೆಗಳಿಂದ ತಪ್ಪಿಸಿ ಕಾಪಾಡು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್
Join our WhatsApp Channel
Most Read
● ಆತ್ಮೀಕ ನಿಯಮ : ಸಹವಾಸ ನಿಯಮ● ನಂಬಿಕೆಯ ಶಾಲೆ
● ನಂಬಿಕೆಯಲ್ಲಿಯೋ ಅಥವಾ ಭಯದಲ್ಲಿಯೋ
● ಕ್ಷಿಪ್ರವಾಗಿ ವಿಧೇಯರಾಗುವುದರಲ್ಲಿರುವ ಬಲ
● ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರ ರೀತಿಯ ಪ್ರೀತಿ
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು