ಅನುದಿನದ ಮನ್ನಾ
ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
Sunday, 9th of June 2024
0
0
244
Categories :
ನಾಯಕತ್ವ (leadership)
"ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು."(ಗಲಾತ್ಯದವರಿಗೆ 6:9)
ದೇವರು ಪ್ರತಿಯೊಬ್ಬ ಮನುಷ್ಯನ ಮುಂದೆಯೂ ಆಯ್ಕೆಯ ಹಕ್ಕನ್ನು ಇಟ್ಟಿದ್ದಾನೆ. ಹಾಗೆಯೇ, ನಾವು ಭೂಮಿಯ ಮೇಲೆ ಮಾಡಿದ ಪ್ರತಿಯೊಂದು ಆಯ್ಕೆಗೂ ಕಡೆಯ ದಿನದಂದು ಲೆಕ್ಕವನ್ನು ಒಪ್ಪಿಸಬೇಕು. ಅಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ! ನೀನು ತಪ್ಪು ಎಂದು ಬೆಟ್ಟು ಮಾಡಿ ತೋರಿಸುವ ಯಾವುದೇ ಬೆರಳುಗಳಿರುವುದಿಲ್ಲ. ಪ್ರತಿಯೊಬ್ಬ ಪುರುಷನು- ಸ್ತ್ರೀಯು ತಮ್ಮ ಕಾರ್ಯಗಳಿಗೆ ತಾವೇ ಜವಾಬ್ದಾರರಾಗಿರುತ್ತಾರೆ.
ನಾವು ಈ ಒಂದು ಸತ್ಯವನ್ನು ಅರಿತುಕೊಂಡು ಬಿಟ್ಟರೆ ಸಾಕು ನಮ್ಮ ಮುಂದೆ ಯಾರೇ ಪಾಪದಲಿ ಬೀಳುತ್ತಿದ್ದರೂ ನಾವು ಅದರ ಪ್ರಭಾವ ಕೊಳಗಾಗದೆ ನಾವು ನಮ್ಮನ್ನು ಪಾಪದಿಂದ ರಕ್ಷಿಸಿಕೊಳ್ಳಬಹುದು. ಮತಾಯ 24:12 ರಲ್ಲಿ ಯೇಸು ಕ್ರಿಸ್ತನಿಂದಾದ ಒಂದು ಖಚಿತವಾದ ಪ್ರವಾದನ ವಾಕ್ಯವಿದೆ. ಅದೇನೆಂದರೆ "ಇದಲ್ಲದೆ ಅಧರ್ಮವು ಹೆಚ್ಚಾಗುವದರಿಂದ ಬಹುಜನರ ಪ್ರೀತಿಯು ತಣ್ಣಗಾಗಿಹೋಗುವದು." ಎಂದು
ಮತ್ತಾಯ24:12ರಲ್ಲಿ ಇರುವಂತಹ ಸತ್ಯ ಪ್ರವಾದನೆಗಳೆಲ್ಲವೂ ನಮ್ಮನ್ನು ಮುಂದೆ ಬರಲಿರುವ ಘಟನಾವಳಿಗೆ ನಿಯಮ ಬದ್ಧಪಡಿಸಿ ಮತ್ತು ಬಲಪಡಿಸಿ ಸಿದ್ಧಗೊಳಿಸಲೆಂದೇ ಇವೆ. ಅವೆಲ್ಲವೂ ಭವಿಷ್ಯದಲ್ಲಿ ಉಂಟಾಗುವ ಸಂಗತಿಗಳಿಗೆ ಮುನ್ನೆಚ್ಚರಿಕೆಗಳಾಗಿವೆ. ಇಲ್ಲಿ "ಅನೇಕರಲ್ಲಿ" ದೇವರ ಮೇಲಿನ ಪ್ರೀತಿ ತಣ್ಣಗಾಗಿ ಹೋಗುತ್ತದೆ ಎಂದು ಹೇಳುವುದನ್ನು ಗಮನಿಸಿ. ಇದು ಕಡೆಯ ಕಾಲಕ್ಕೆ ಇರುವ ಒಂದು ಮುಖ್ಯ ಸೂಚನೆಯಾಗಿದೆ.
ದೇವರ ಮೇಲಿನ ಪ್ರೀತಿ ತಣ್ಣಗಾಗಿರುವುದರ ಚಿಹ್ನೆಗಳು.
1) ದೇವರ ಸಂಗತಿಗಳ ಕುರಿತು ನಿರ್ಲಪ್ತವಾದ ಸ್ವಭಾವ ತೋರುವುದು.
2) ಸಭೆಗೆ ಹೋಗುವುದಕ್ಕಾಗಲಿ ವಿಶ್ವಾಸಿಗಳ ಜೊತೆಗಿರುವುದಕ್ಕಾಗಲಿ ಮನಸ್ಸಿಲ್ಲದಿರುವುದು.
3) ಯಾವುದೇ ಮುಲಾಜಿಲ್ಲದೆ ತಮಗಿಷ್ಟ ಬಂದ ಹಾಗೆ ನಡೆದುಕೊಳ್ಳುವುದು.
4) ದೇವರ ಸಂಗತಿಗಳನ್ನು ಕುರಿತು ಸಂದೇಹ ಪಡುವುದು.
5) ಪ್ರಾರ್ಥನೆ ಮಾಡಲು ಉಪವಾಸ ಮಾಡಲು ದೇವರ ವಾಕ್ಯ ಅಧ್ಯಯನ ಮಾಡಲು ಉತ್ಸಾಹ ಕಡಿಮೆ ಯಾಗುವಂತದ್ದು.
6) ದೇವರ ವಾಕ್ಯಕ್ಕೆ ಅವಿಧೇಯತ್ವವನ್ನು ತೋರುವುದು
ಉದಾಹರಣೆಗೆ: ಕೊಡುವಿಕೆಯು ದೇವರಿಂದ ಬಂದ ಆಜ್ಞೆಯಾಗಿದೆ. (ಲೂಕ 6:38). ದೇವರ ಕಡೆಗಿನ ಪ್ರೀತಿಯು ಕಡಿಮೆಯಾದರೆ ಆ ವ್ಯಕ್ತಿಗೆ ಕೊಡುವಿಕೆಯು ಬಹಳ ಕಷ್ಟಕರ ಎನಿಸುತ್ತದೆ. ಹಾಗೆಯೇ, ಒಬ್ಬ ವ್ಯಕ್ತಿಗೆ ಕೊಡುವಿಕೆಯು ಕಷ್ಟಕರ ಎನಿಸಲು ಮತ್ತೊಂದು ಕಾರಣವೇನೆಂದರೆ, ಅವನಾಗಲೀ ಅವಳಾಗಲೀ ಅಂತರ್ಜಾಲ ಅಥವಾ ಸುದ್ದಿ ಮಾಧ್ಯಮಗಳಲ್ಲಿ ಓದುವ ವಿಚಾರಗಳಾಗಿವೆ.
ನೀವು ಒಬ್ಬ ವ್ಯಕ್ತಿಯ ಪತನ ನೋಡಿ ಅದರ ಪ್ರಭಾವ ಕ್ಕೊಳಗಾಗಿ ದೇವರು ಕೊಟ್ಟಿರುವ ನಿಯಮಗಳನ್ನು ಮೀರಿ ಪಾಪ ಮಾಡುವುದಾದರೆ ಅದು ನಿಮ್ಮ ಅವಿಧ್ಯೆಯತ್ವವೇ ಆಗಿರುತ್ತದೆ. ನಾನು ಮತ್ತು ನೀವು ಮಾಡಿರುವ ಎಲ್ಲಾ ಕೃತ್ಯಗಳು ದೇವರ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿವೆ ಮತ್ತು ಆ ದಿನದಲ್ಲಿ ಅದು ತೆರೆಯಲ್ಪಡುವಾಗ ಅವು ನಮ್ಮ ಕೃತ್ಯಗಳನ್ನು ಕುರಿತು ಹೇಳಲಾರಂಬಿಸುತ್ತವೆ. ಅಲ್ಲಿ ಎರಡು ಪದಗಳಲ್ಲಿ ಪ್ರತಿಯೊಬ್ಬರ ಗತಿಯು ಬದಲಾಗುತ್ತದೆ. ಆ ಪದಗಳಾಗುವೆಂದರೆ "ಬಿಟ್ಟು ತೊಲಗಿರಿ" ಅಥವಾ "ಮುನ್ನಡೆಯಿರಿ".
ದೇವರಿಗಾಗಿ ಜೀವಿಸಿ ಆಮೇಲೆ ತಮ್ಮ ಪ್ರೀತಿಯನ್ನು ತಣ್ಣಗೆ ಮಾಡಿಕೊಂಡ ಜನರೊಳಗೆ ನಾವು ಸೇರದೆ ಇರೋಣ. ಒಂದು ವಿಷಯ ನೆನಪಿಡಿರಿ ನೀವು ಕರ್ತನನ್ನು ಹಿಂಬಾಲಿಸುವಂಥದ್ದು ಅದೇನೋ ಜನಪ್ರಿಯವಾದ ವಿಷಯವೆಂದು ಅಲ್ಲ ಅಥವಾ ಬೇರೆ ಯಾರೋ ಕರ್ತನನ್ನು ಹಿಂಬಾಲಿಸುತ್ತಿರುವುದರಿಂದ ನೀವು ಆತನನ್ನು ಹಿಂಬಾಲಿಸುತ್ತಿಲ್ಲ ಅಥವಾ ಯಾವುದೋ ಭಯದಿಂದಲೋ ಅಥವಾ ಬಲವಂತದಿಂದಲೂ ಹಿಂಬಾಲಿಸುತ್ತಿಲ್ಲ. ನೀವು ಆತನನ್ನು ಹಿಂಬಾಲಿಸುವಂಥದ್ದು ಆತನ ಮೇಲಿನ ಪ್ರೀತಿ ಹಾಗೂ ತಿಳುವಳಿಕೆಯಿಂದಲೇ.
ಕೆಲವೊಂದು ಸಮಯದಲ್ಲಿ ಆತ್ಮಿಕವಾಗಿ ನಮಗಿಂತ ಬೆಳೆದ ವ್ಯಕ್ತಿಯು ಪಾಪದಲ್ಲಿ ಬಿದ್ದುಹೋದದನ್ನು ಕಂಡು ನಮ್ಮೊಳಗೆ ಆತ್ಮಿಕವಾದ ಅಹಂಕಾರದ ಚಿಗುರೊಡೆಯುತ್ತದೆ. ಆದರೆ ನಾವು ಬಿದ್ದು ಹೋಗದೆ ಇರುವುದಕ್ಕೆ ಕಾರಣ ನಾವೇನೋ ಅವರಿಗಿಂತ ಉತ್ತಮ ಎಂದಲ್ಲ. ದೇವರ ಕೃಪೆಯಿಂದಲೇ ನಾವು ನಿಂತಿದ್ದೇವಷ್ಟೇ, ಪಾಪದಲ್ಲಿ ಬಿದ್ದು ಹೋದವರಿಗಾಗಿ ಮನ ಪೂರ್ವಕವಾಗಿ ಪ್ರಾರ್ಥಿಸಬೇಕೇ ವಿನಹ ಅವರ ಪಾಪಗಳು ನಮ್ಮಲ್ಲಿರುವ ದೇವರ ಮೇಲಿನ ಪ್ರೀತಿಯನ್ನು ತಣ್ಣಗಾಗಿಸುವುದಕ್ಕೇ ಆಗಲೀ ದೇವರ ಮತ್ತು ಆತನ ನೀತಿಯ ಮೇಲೆ ಕಹಿತನ ಬೆಳೆಸಿಕೊಳ್ಳುವುದಕ್ಕಾಗಲೀ ಎಷ್ಟು ಮಾತ್ರಕ್ಕೂ ನಾವು ಅನುಮತಿಸಬಾರದು. (ಇಬ್ರಿಯ 12:15)
ಪ್ರಾರ್ಥನೆಗಳು
ತಂದೆಯೇ, ನಿನ್ನ ಕೃಪೆಯ ಪ್ರಕಟಣೆಯನ್ನು ನಾನು ಎಷ್ಟು ಮಾತ್ರಕ್ಕೂ ಕಳಕೊಳ್ಳದೆ ಶ್ರದ್ದೆಯಿಂದ ಇರಲು ನನಗೆ ಕೃಪೆ ಮಾಡು. ನನ್ನ ಆತ್ಮೀಕ ಮನುಷ್ಯನಲ್ಲಿ ನಾನು ಬೆಳೆಯಲು ಅವಕಾಶಕೊಟ್ಟ ಯಾವುದೇ ಕಹಿತನದ ಬೇರಾದರೂ ಯೇಸು ನಾಮದಲ್ಲಿ ಕಿತ್ತು ಬಿಸಾಡು. ನಿನ್ನ ಅಪೂರ್ವದ ಪ್ರೀತಿಯಿಂದ ನನ್ನನ್ನು ಯೇಸು ನಾಮದಲ್ಲಿ ಬಲಪಡಿಸು. ಆಮೆನ್.
Join our WhatsApp Channel
Most Read
● ಕರ್ತನಾದ ಯೇಸುವಿನ ಮುಖಾಂತರ ಕೃಪೆ● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ನಿಮ್ಮ ಗತಿಯನ್ನು ಬದಲಾಯಿಸಿ
● ಆ ಸಂಗತಿಗಳನ್ನು ಸಕ್ರಿಯ ಗೊಳಿಸಿ
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
ಅನಿಸಿಕೆಗಳು