ಅನುದಿನದ ಮನ್ನಾ
1
1
150
ನಿಮ್ಮ ಕನಸುಗಳನ್ನು ಜಾಗೃತಗೊಳಿಸಿ
Thursday, 16th of October 2025
Categories :
ಕನಸುಗಳು (Dreams)
"ನಾನು ನಿಮ್ಮನ್ನು ಕುರಿತು ಮಾಡುವ ಯೋಜನೆಗಳನ್ನು ಬಲ್ಲೆನು. ಅವು ಕೇಡಿಗಲ್ಲ, ನಿಮ್ಮ ಹಿತಕ್ಕಾಗಿರುವ ಯೋಜನೆಗಳು. ನಿಮಗೆ ಭವಿಷ್ಯವನ್ನೂ, ನಿರೀಕ್ಷೆಯನ್ನೂ ಕೊಡುವುದಕ್ಕಿವೆ. (ಯೆರೆಮೀಯ 29:11)
ಜೀವನವು ಸಾಮಾನ್ಯವಾಗಿ ಸವಾಲುಗಳ ಒಂದು ಚಕ್ರವ್ಯೂಹದಂತೆ ಭಾಸವಾಗುತ್ತದೆ, "ಸಾಕು ಬಿಟ್ಟುಬಿಡಿ. ನೀವು ಕಾಣುತ್ತಿರುವ ಕನಸುಗಳೆಲ್ಲಪ್ರಾಯೋಗಿಕವಾದದ್ದಲ್ಲಾ ಅಥವಾ ಅವು ಅವಾಸ್ತವಿಕವಾದದ್ದು" ಎಂದು ಪಿಸುಗುಟ್ಟುವ ಜನರು ಮತ್ತು ಸನ್ನಿವೇಶಗಳಿಂದ ಕೂಡಿದ ಚಕ್ರವ್ಯೂಹದಂತೆ ಭಾಸವಾಗುತ್ತದೆ.
ಅಷ್ಟೇ ಅಲ್ಲದೇ ಮತ್ತೊಂದು ದುಃಖಕರ ವಿಷಯವೆಂದರೆ, ಅನೇಕರು ಈ ಖಂಡನಾ ಸಲಹೆಯನ್ನು ಸ್ವೀಕರಿಸಿ ಅದರಂತೆ ಕನಸುಗಳು ಕಾಣುವುದನ್ನೇ ಬಿಟ್ಟಿಬಿಟ್ಟಿದ್ದಾರೆ. ಒಂದು ಕಾಲದಲ್ಲಿ ಅವರ ಹೃದಯಗಳನ್ನು ಉಬ್ಬಿಸಿದಂತಹ ಕನಸುಗಳನ್ನು ತ್ಯಜಿಸಿದ್ದಾರೆ.
ಆದರೆ ಇಂದು ಸ್ವಲ್ಪ ವಿರಾಮ ತೆಗೆದುಕೊಂಡು ನೆನಪುಮಾಡಿಕೊಳ್ಳಿ:
ಕನಸು ಕಾಣುವುದು ಕೇವಲ ವಿಚಿತ್ರವಲ್ಲ - ಇದು ದೈವಿಕ ದತ್ತಿ, ನಮ್ಮೊಳಗೆ ತುಂಬಿದ ಸೃಷ್ಟಿಕರ್ತನ ಸ್ವಂತ ಕಲ್ಪನೆಯ ಒಂದು ತುಣುಕಾಗಿದೆ. ಪ್ರಾಣಿಗಳು ಭವಿಷ್ಯದ ಕನಸು ಕಾಣುವುದಿಲ್ಲ; ಸಸ್ಯಗಳು ಮಣ್ಣಿನ ಆಚೆಗಿನ ಜೀವನವನ್ನು ದೃಶ್ಯೀಕರಿಸುವುದಿಲ್ಲ. ಇದು ದೇವರ ಪ್ರತಿರೂಪದಲ್ಲಿ ಕೆತ್ತಿದಂತ ಮನುಷ್ಯರಿಗೆ ಮಾತ್ರ ಇರುವ ವಿಶಿಷ್ಟವಾದ ಉಡುಗೊರೆಯಾಗಿದೆ.
“ನಾನು ನಿನ್ನನ್ನು ತಾಯಿಯ ಗರ್ಭದಲ್ಲಿ ನಿರ್ಮಿಸುವುದಕ್ಕಿಂತ ಮುಂಚೆಯೇ ನಿನ್ನನ್ನು ತಿಳಿದಿದ್ದೆನು. ನೀನು ಹುಟ್ಟುವುದಕ್ಕಿಂತ ಮುಂಚೆ ನಿನ್ನನ್ನು ಪ್ರತಿಷ್ಠಿಸಿದ್ದೆನು; ನಿನ್ನನ್ನು ಜನಾಂಗಗಳಿಗೆ ಪ್ರವಾದಿಯಾಗಿ ನೇಮಿಸಿದ್ದೇನೆ.”(ಯೆರೆಮೀಯ 1:5)
ಅದು ಸರಿಯಾಗಿದೆ. ದೇವರು ನಿಮ್ಮ ಕುರಿತು ಕನಸು ಕಂಡಿದ್ದಾನೆ ಅದನ್ನು ಊಹಿಸಿನೋಡಿ! ಬ್ರಹ್ಮಾಂಡದ ಸೃಷ್ಟಿಕರ್ತ ನಿಮ್ಮನ್ನು ಕಲ್ಪಿಸಿಕೊಂಡಿದ್ದಾನೆ, ಅನನ್ಯ ವರಗಳು ಮತ್ತು ಶ್ರೇಷ್ಠತೆಯ ಸಾಮರ್ಥ್ಯದಿಂದ ಸಜ್ಜುಗೊಂಡಿದ್ದಾನೆ. ನೀವು ಕಾಸ್ಮಿಕ್ ಆಕಸ್ಮಿಕದಲ್ಲಿ ಹುಟ್ಟಿದವರಲ್ಲ; ನೀವು ದೈವಿಕ ಉದ್ದೇಶದಿಂದ ಉಂಟಾದವರು. ಕನಸು ಕಾಣುವ ನಿಮ್ಮ ಸಾಮರ್ಥ್ಯ ಕ್ಷೀಣಿಸಿದೆ ಎಂದು ನೀವು ಭಾವಿಸಿದರೆ, ಈ ಅದ್ಭುತ ಗುಣವನ್ನು ನಿಮ್ಮಲ್ಲಿ ತುಂಬಿದವನೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ಸಮಯ ಇದಾಗಿದೆ.
"ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ".(ಕೀರ್ತನೆ 139:13-16)
ಇನ್ನೂ ಒಂದು ಹೆಜ್ಜೆ ಮುಂದೆ ಹೋಗೋಣ: ದೇವರು ಕನಸು ಕಾಣಬಲ್ಲವನಾಗಿದ್ದರೆ, ಮತ್ತು ಆತನು ನಿನ್ನ ಕುರಿತಾಗಿ ಕನಸು ಕಂಡಿದ್ದರೆ, ನೀನು ಕನಸು ಕಾಣದಂತೆ ನಿನ್ನನ್ನು ತಡೆಯುವುದೇನು? ನಿನ್ನ ಕನಸುಗಳು ಗಾಳಿಯಿಂದ ಬೀಸುವ ಹೊಗೆ ಮತ್ತು ಧೂಳಿನ ಸಾಮಾನ್ಯ ಮೋಡಗಳಲ್ಲ; ಅವು ನಂಬಿಕೆ ಮತ್ತು ಕಠಿಣ ಪರಿಶ್ರಮದ ಸ್ಪರ್ಶಕ್ಕಾಗಿ ಕಾಯುತ್ತಿರುವ ಸಂಭವನೀಯ ವಾಸ್ತವತೆಗಳಾಗಿವೆ.
"ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ [21] ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರು... (ಎಫೆಸ 3:20)
ಬಹುಶಃ ನೀನು ತುಂಬಾ ಚಿಕ್ಕವನು,ಅಥವಾ ತುಂಬಾ ವಯಸ್ಸಾದವನು, ತುಂಬಾ ಅನನುಭವಿ, ನಿಮ್ಮ ಕನಸುಗಳನ್ನು ಸಾಧಿಸಲು ತುಂಬಾ ಅದು 'ಏನೋ' ಎಂದು ನಿನಗೆ ಹೇಳಿರಬಹುದು. ಆದರೆ ದೇವರು ತನ್ನ ಉದ್ದೇಶಗಳನ್ನು ಪೂರೈಸಲು ಕಡಿಮೆ ಸಂಭವನೀಯ ಅಭ್ಯರ್ಥಿಗಳನ್ನು ಬಳಸುವುದರಲ್ಲಿಯೇ ಪರಿಣತಿ ಹೊಂದಿದವನಾಗಿದ್ದಾನೆ.
ಮೋಶೆ ತೊದಲು ಮಾತಾಡುವವನು, ಆದರೂ ಅವನು ಒಂದು ರಾಷ್ಟ್ರವನ್ನು ಮುನ್ನಡೆಸಿದನು. ದಾವೀದನು ಒಬ್ಬ ಕುರುಬ ಹುಡುಗನಾಗಿದ್ದನು, ಅವನು ರಾಜನಾದನು. ಮರಿಯಳು ಒಬ್ಬ ವಿನಮ್ರ ಹದಿಹರೆಯದವಳಾಗಿದ್ದು, ಯೇಸುವಿನ ತಾಯಿಯಾದಳು. ಇದು ನಿಮ್ಮ ಸಾಮರ್ಥ್ಯಗಳ ಕುರಿತು ಅಲ್ಲ; ಅದು ನಿನ್ನ ಮೂಲಕ ಕಾರ್ಯ ಸಾಧಿಸುವ ಆತನ ಸಾಮರ್ಥ್ಯದ ಕುರಿತಾಗಿದೆ.
ಆದ್ದರಿಂದ, ಪ್ರತಿದಿನ ಬೆಳಿಗ್ಗೆ, ನಿಮಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ: ನಿಮ್ಮ ಕನಸುಗಳ ಸೌಕರ್ಯದೊಳಗೆ ನಿದ್ರಿಸುವುದನ್ನು ಮುಂದುವರಿಸಿ ಅಥವಾ ಎಚ್ಚರಗೊಂಡು ಅವುಗಳನ್ನು ಜೀವಂತಗೊಳಿಸಿ. ಕೇವಲ ಹಗಲುಗನಸುಗಾರನಾಗಬೇಡಿ; ಹಗಲಲ್ಲಿ ಕನಸುಸಾಕಾರಗೊಳಿಸುವವನಾಗು.
ನಿಮ್ಮ ಕನಸುಗಳು, ಎಂದರೆ ಎಲ್ಲಕ್ಕಿಂತ ಮಿಗಿಲಾಗಿ, ಅದು ನಿಮಗೋಸ್ಕರ ಮಾತ್ರವಲ್ಲ; ಅವು ನೀವು ಸ್ಪರ್ಶಿಸುವ ಜನರಿಗಾಗಿಯೂ ನೀವು ಪರಿಹರಿಸುವ ಸಮಸ್ಯೆಗಳನ್ನು ಮತ್ತು ನೀವು ಸೃಷ್ಟಿಸುವ ವಾತಾವರಣಕ್ಕಾಗಿಯೂ ಇದೆ. ನಿಮ್ಮ ಕನಸುಗಳು ದೇವರು ಭೂಮಿಯ ಮೇಲೆ ತನ್ನ ರಾಜ್ಯವನ್ನು ಪ್ರಕಟಿಸಲು ಉದ್ದೇಶಿಸಿರುವ ವಾಹನಗಳಾಗಿವೆ.
ನಿಮ್ಮ ಕನಸನ್ನು ನನಸಾಗಿಸಲು ಇರುವ ಪ್ರಾಯೋಗಿಕ ಹಂತಗಳು:
1. ಕನಸು ನೀಡುವವರೊಂದಿಗೆ ಮತ್ತೆ ಸಂಪರ್ಕ ಸಾಧಿಸಿ:
ಪ್ರಾರ್ಥನೆಯಲ್ಲಿಯೂ ಮತ್ತು ದೇವರ ವಾಕ್ಯದಲ್ಲಿಯೂ ಸಮಯ ಕಳೆಯಿರಿ. ನೀವು ಸಾಯಲು ಬಿಟ್ಟ ಕನಸುಗಳನ್ನು ಪುನರುಜ್ಜೀವನಗೊಳಿಸಲು ಅಥವಾ ನಿಮಗೆ ಹೊಸ ಕನಸುಗಳನ್ನು ಪ್ರಕಟಿಸಲು ಆತನನ್ನು ಬೇಡಿಕೊಳ್ಳಿ.
2. ಅದನ್ನು ಬರೆಯಿರಿ: ನಿಮ್ಮ ಕನಸುಗಳನ್ನು ದಾಖಲಿಸಲು, ಅವು ಎಷ್ಟೇ ಸಾಧಿಸಲಾಗದಂತೆ ತೋರಿದರೂ ಸಹ ಹಬಕ್ಕೂಕ 2:2 ದರ್ಶನವನ್ನು ಬರೆದಿಡಬೇಕೆಂದು ಮತ್ತು ಅದನ್ನು ಸ್ಪಷ್ಟಪಡಿಸಬೇಕೆಂದು ಹೇಳುತ್ತದೆ.
3. ನಂಬಿಕೆಯಲ್ಲಿ ಹೆಜ್ಜೆ ಹಾಕಿ: ಪ್ರತಿಯೊಂದು ಕನಸಿಗೂ ಕ್ರಿಯೆಯ ಅಗತ್ಯವಿದೆ. ಇಂದು ನಿಮ್ಮ ಕನಸಿಗೆ ಹೊಂದಿಕೆಯಾಗುವ ಒಂದು ಸಣ್ಣ ಹೆಜ್ಜೆಯನ್ನು ತೆಗೆದುಕೊಳ್ಳಿ. ದೇವರು ನಿಮ್ಮ ಕನಸುಗಳನ್ನು ನಂಬುತ್ತಾನೆ - ಈಗ ನಂಬಬೇಕಾದ ಸರದಿ ನಿಮ್ಮದು. ಆಮೆನ್.
Bible Reading: Matthew 21-22
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ಹೃದಯಗಳನ್ನು ದೈವಿಕ ಕನಸುಗಳಿಂದ ಬೆಳಗಿಸಿ, ಆಗ ನಿಮ್ಮ ಭವ್ಯ ವಿನ್ಯಾಸದಲ್ಲಿ ನಾವು ನಿರ್ಭೀತ ಸಹ-ಸೃಷ್ಟಿಕರ್ತರಾಗಬಹುದು. ಕರ್ತನೇ, ನಮ್ಮ ಭವಿಷ್ಯಕ್ಕೆ ಹೆಜ್ಜೆ ಹಾಕಲು, ಜೀವ ವನ್ನು ಸ್ಪರ್ಶಿಸಲು ಮತ್ತು ಭೂಮಿಯ ಮೇಲೆ ನಿಮ್ಮ ರಾಜ್ಯವನ್ನು ಪ್ರಕಟಿಸಲು ನಮಗೆ ಯೇಸುನಾಮದಲ್ಲಿ ಅಧಿಕಾರ ನೀಡಿ. ಆಮೆನ್!
Join our WhatsApp Channel
Most Read
● ದುಷ್ಟ ಮಾದರಿಗಳಿಂದ ಹೊರಬರುವುದು.● ಧಾರ್ಮಿಕತೆಯ ಆತ್ಮವನ್ನು ಗುರುತಿಸುವುದು
● ಹೋಲಿಕೆಯ ಬಲೆ
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ದೇವರ ಸ್ವಭಾವ
● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
● ದೇವರ 7 ಆತ್ಮಗಳು: ಆಲೋಚನೆ ನೀಡುವ ಆತ್ಮ
ಅನಿಸಿಕೆಗಳು
