ಅನುದಿನದ ಮನ್ನಾ
2
0
49
ದೇವರ ಭಾಷೆಯಾದ ಅನ್ಯಭಾಷೆಗಳು
Sunday, 1st of February 2026
Categories :
ಭಾಷೆ(Language)
ಕರ್ತನಾದ ಯೇಸು ಪರಲೋಕಕ್ಕೆ ಏರಿಹೋಗುವ ಮೊದಲು ಒಂದು ಪ್ರಬಲವಾದ ಹೇಳಿಕೆಯನ್ನು ನೀಡಿದನು:
“ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು; ಹಾವುಗಳನ್ನು ಕೈಗಳಿಂದ ಎತ್ತಿಕೊಳ್ಳುವರು; ವಿಷಪದಾರ್ಥಗಳನ್ನೇನಾದರು ಕುಡಿದರೂ ಅವರಿಗೆ ಯಾವ ಹಾನಿಯೂ ಆಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಸ್ವಸ್ಥವಾಗುವುದು” ಎಂದು ಹೇಳಿದನು.
(ಮಾರ್ಕ 16:17–18)
ಬಹಳ ಮುಖ್ಯವಾದದ್ದನ್ನು ಗಮನಿಸಿ. ಈ ಸೂಚಕಕಾರ್ಯಗಳು ಅಪೊಸ್ತಲರು, ಪ್ರವಾದಿಗಳು, ಪಾಸ್ಟರ್ ಗಳು ಅಥವಾ ಸುವಾರ್ತಾಬೋಧಕರನ್ನು ಮಾತ್ರ ಅನುಸರಿಸುತ್ತವೆ ಎಂದು ಕರ್ತನಾದ ಯೇಸು ಹೇಳಲಿಲ್ಲ. ಆದರೆ ಆತನು "ನಂಬುವವರು" ಎಂದು ಸ್ಪಷ್ಟವಾಗಿ ಹೇಳಿದನು.ಇಲ್ಲಿ ಉಲ್ಲೇಖಿಸಲಾದ ಏಕೈಕ ಅರ್ಹತೆ ನಂಬಿಕೆ. ಇದರರ್ಥ ಕರ್ತನಾದ ಯೇಸು ಕ್ರಿಸ್ತನಲ್ಲಿ ಪ್ರತಿಯೊಬ್ಬ ನಿಜವಾದ ನಂಬಿಕೆಯುಳ್ಳವನು ಈ ವಾಗ್ದಾನದಲ್ಲಿ ಸೇರಿದ್ದಾನೆ.
ಬಲವು ಬಿರುದಿನಲ್ಲಿ ಅಲ್ಲ, ನಂಬುವುದರಲ್ಲಿದೆ.
ಅನೇಕ ಕ್ರೈಸ್ತರು ಅದ್ಭುತಗಳು ಮತ್ತು ಆತ್ಮೀಕ ವರಗಳು ವಿಶೇಷ ಗುಂಪಿನ ಜನರಿಗೆ ಮಾತ್ರ ಎಂದು ಭಾವಿಸುತ್ತಾರೆ. ಧರ್ಮಗ್ರಂಥವು ಈ ಕಲ್ಪನೆಯನ್ನು ಬೆಂಬಲಿಸುವುದಿಲ್ಲ.
"ಈ ಸೂಚಕಕಾರ್ಯಗಳೆಲ್ಲ ನಾಯಕರಿಂದ ಉಂಟಾಗುತ್ತವೆ" ಎಂದು ಬೈಬಲ್ ಹೇಳುವುದಿಲ್ಲ. "ಈ ಸೂಚಕಕಾರ್ಯಗಳು ನಂಬುವವರಿಂದ ಉಂಟಾಗುತ್ತವೆ" ಎಂದು ಅದು ಹೇಳುತ್ತದೆ.ಇದಕ್ಕೆ ನಂಬಿಕೆ ಮುಖ್ಯವೇ ಹೊರತು ಸ್ಥಾನ, ವಯಸ್ಸು, ಶಿಕ್ಷಣ ಅಥವಾ ಹಿನ್ನೆಲೆ ಅಲ್ಲ.
ಯಹೂದಿ ಒಳನೋಟ: “ದೇವರ ಭಾಷೆ”
ದೇವರ ಗೌರವಾನ್ವಿತ ಮನುಷ್ಯನೊಬ್ಬ ಒಮ್ಮೆ ಆಕರ್ಷಕ ಯಹೂದಿ ಸಂಪ್ರದಾಯವನ್ನು ಹಂಚಿಕೊಂಡಿದ್ದ.
ಪ್ರಾಚೀನ ಯಹೂದಿ ನಂಬಿಕೆಯ ಪ್ರಕಾರ, ಮಹಾಯಾಜಕನು ಪ್ರಾಯಶ್ಚಿತ್ತದ ದಿನದಂದು ಪವಿತ್ರ ಸ್ಥಳವನ್ನು ಪ್ರವೇಶಿಸಿದಾಗ, ಅವನು ದೇವರು ಮತ್ತು ಪಾಸ್ಟರ್ ಮಾತ್ರ ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ದೇವರೊಂದಿಗೆ ಸಂವಹನ ನಡೆಸಬಲ್ಲನು. ಈ ಸಾಮರ್ಥ್ಯವು ಪವಿತ್ರ ಸ್ಥಳದ ಒಳಗೆ ಮಾತ್ರ ಇತ್ತು. ಪಾಸ್ಟರ್ ಹೊರಬಂದ ನಂತರ, ಅವನು ಇನ್ನು ಮುಂದೆ ಆ ಪರಲೋಕದ ಭಾಷೆಯನ್ನು ಮಾತನಾಡಲು ಸಾಧ್ಯವಾಗಲಿಲ್ಲ.
ನಂತರ, ಯಹೂದಿ ರಬ್ಬಿಗಳು ಈ ಅನುಭವವನ್ನು “ದೇವರ ಭಾಷೆ” ಎಂದು ಉಲ್ಲೇಖಿಸಿದರು. ಇದು ಗಮನಾರ್ಹವಲ್ಲವೇ?
ಹಳೆಯ ಒಡಂಬಡಿಕೆಯಲ್ಲಿ, ವರ್ಷಕ್ಕೊಮ್ಮೆ ಒಬ್ಬ ಮನುಷ್ಯನು ಮಾತ್ರ ಇದನ್ನು ಅನುಭವಿಸಬಹುದು. ಹೊಸ ಒಡಂಬಡಿಕೆಯಲ್ಲಿ, ಪ್ರತಿಯೊಬ್ಬ ವಿಶ್ವಾಸಿಯು ಪವಿತ್ರಾತ್ಮನ ಮೂಲಕ ದೇವರ ಸಾನಿಧ್ಯಕ್ಕೆ ಪ್ರವೇಶವನ್ನು ಹೊಂದಿರುತ್ತಾನೆ.
ಯಾರು ಅನ್ಯಭಾಷೆಗಳಲ್ಲಿ ಮಾತನಾಡಬಲ್ಲರು?
ಈ ಪ್ರಶ್ನೆಯನ್ನು ಹೆಚ್ಚಾಗಿ ಕೇಳಲಾಗುತ್ತದೆ ಮತ್ತು ಅದಕ್ಕೆ ಉತ್ತರವು ತುಂಬಾ ಸರಳವಾಗಿದೆ.
ಯೇಸು ಕ್ರಿಸ್ತನನ್ನು :
- ಕರ್ತನು ಮತ್ತು ರಕ್ಷಕನೆಂದು ನಂಬಿದ ಪವಿತ್ರಾತ್ಮನ
- ದೀಕ್ಷಾಸ್ನಾನವನ್ನು ಪಡೆದ ಯಾರಾದರೂ ಅನ್ಯಭಾಷೆಗಳಲ್ಲಿ ಮಾತನಾಡಬಲ್ಲರು.
ಈ ವರಕ್ಕೆ ಬೇರೆ ಯಾವುದೇ ಸತ್ಯವೇದ ವಿಧಾನದ ಆಧಾರವಿಲ್ಲ ಮತ್ತು ಬೇರೆ ಯಾವುದೇ ಕ್ರೈಸ್ತರ ವಿಶೇಷ ವರ್ಗವಿಲ್ಲ.
"ಯಾರು ದೇವರ ಆತ್ಮಾನುಸಾರವಾಗಿ ನಡೆದುಕೊಳ್ಳುತ್ತಾರೋ, ಅವರು ದೇವರ ಮಕ್ಕಳಾಗಿದ್ದಾರೆ".(ರೋಮನ್ನರು 8:14)
ಅನ್ಯಭಾಷೆಗಳು ಪ್ರಬುದ್ಧತೆಗೆ ಸಿಕ್ಕ ಪ್ರತಿಫಲವಲ್ಲ; ಅವು ವಿಶ್ವಾಸಿಗಳಿಗೆ ಅನುಗ್ರಹಿಸಲ್ಪಟ್ಟ ವರವಾಗಿದೆ.
ಕರ್ತನಾದ ಯೇಸು ಅದನ್ನು ಸ್ಪಷ್ಟವಾಗಿ ವಿವರಿಸಿದನು. ಆತನು ಹೇಳಿದ್ದೇನೆಂದರೆ:
“ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನನ್ನಲ್ಲಿ ಯಾವನು ನಂಬಿಕೆಯಿಡುವನೋ ಅವನೊಳಗಿನಿಂದ ಜೀವಕರವಾದ ನೀರಿನ ಬುಗ್ಗೆಗಳು ಹರಿಯುವವು” ಎಂದು ಕೂಗಿ ಹೇಳಿದನು. (ಯೋಹಾನ 7:38)
" ಆದರೆ ಯೇಸು ತನ್ನನ್ನು ನಂಬುವವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೀಗೆ ಹೇಳಿದನು. ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ ಕಾರಣ ಪವಿತ್ರಾತ್ಮವರವು ಇನ್ನೂ ಕೊಡಲ್ಪಟ್ಟಿರಲಿಲ್ಲ." ಎಂದುಬೈಬಲ್ ನಂತರ ವಿವರಿಸುತ್ತದೆ (ಯೋಹಾನ 7:39)
ಅನ್ಯಭಾಷೆಗಳು —ಮನಸ್ಸಿನಿಂದಲ್ಲ, ಭಾವನೆಗಳಿಂದಲ್ಲ, ಆದರೆ ವಿಶ್ವಾಸಿಯೊಳಗಿನ ದೇವರ ಆತ್ಮದ ಒಳಗಿನಿಂದ ಹರಿಯುತ್ತವೆ
ಅನ್ಯಭಾಷೆಗಳಲ್ಲಿ ಮಾತನಾಡುವುದು ಏಕೆ ಮುಖ್ಯ.
ಅನ್ಯಭಾಷೆಗಳಲ್ಲಿ ಮಾತನಾಡುವುದು:
- ನಿಮ್ಮ ಚೈತನ್ಯವನ್ನು ಬಲಪಡಿಸುತ್ತದೆ
- ಮಾನವ ಮಿತಿಗಳನ್ನು ಮೀರಿ ಪ್ರಾರ್ಥಿಸಲು
- ನಿಮಗೆ ಸಹಾಯ ಮಾಡುತ್ತದೆ ದೇವರೊಂದಿಗಿನ ನಿಮ್ಮ ಅನ್ಯೋನ್ಯತೆಯನ್ನು ಆಳಗೊಳಿಸುತ್ತದೆ.
“ಅನ್ಯಭಾಷೆಯಲ್ಲಿ ಮಾತನಾಡುವವನು ತನ್ನ ಭಕ್ತಿ ವೃದ್ಧಿ ಮಾಡಿಕೊಳ್ಳುತ್ತಾನೆ.” (1 ಕೊರಿಂಥ 14:4)
ಒಂದು ಕಾಲದಲ್ಲಿ ಪವಿತ್ರ ಸ್ಥಳಕ್ಕೆ ಮಾತ್ರ ಸೀಮಿತವಾಗಿದ್ದ ವಿಷಯವು ಈಗ ಪ್ರತಿಯೊಬ್ಬ ವಿಶ್ವಾಸಿಗೂ ಲಭ್ಯವಿದೆ - ಏಕೆಂದರೆ ಅದಕ್ಕಾಗಿ ಯೇಸು ಮಾರ್ಗ ಮಾಡಿಕೊಟ್ಟನು.
ನೀವು ಇದನ್ನು ತಿಳಿದುಕೊಳ್ಳಲೇಬೇಕು.
ಅನ್ಯಭಾಷೆಯು ವಿಚಿತ್ರವಲ್ಲ, ಭಾವನಾತ್ಮಕವಲ್ಲ ಅಥವಾ ಹಳೆಯದಲ್ಲ. ಅವು ನಂಬುವವರಿಗೆ ಸಂಕೇತವಾಗಿದೆ.
ನಿಜವಾದ ಪ್ರಶ್ನೆ "ಇದು ಇವತ್ತಿಗೂ ಇದೆಯೇ?" ಎಂಬುದಲ್ಲ. ನಿಜವಾದ ಪ್ರಶ್ನೆ: "ಯೇಸು ಹೇಳಿದ್ದನ್ನು ನಾನು ನಂಬುತ್ತೇನೆಯೇ?
Bibie Reading: Exodus 39-40
ಪ್ರಾರ್ಥನೆಗಳು
ತಂದೆಯೇ, ನಾನು ಅನ್ಯ ಭಾಷೆಯ ಮೂಲಕ ಪ್ರಾರ್ಥಿಸುವಾಗ ದೇವರ ಹೃದಯಕ್ಕನುಸಾರ ಪ್ರಾರ್ಥಿಸಲು ಯೇಸುನಾಮದಲ್ಲಿ ನನಗೆ ಸಹಾಯ ಸಿಗುತ್ತದೆ.
Join our WhatsApp Channel
Most Read
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದಿನ 26:40ದಿನಗಳ ಉಪವಾಸ ಪ್ರಾರ್ಥನೆ
● ಮನ್ನಾ, ಕಲ್ಲಿನ ಹಲಗೆಗಳು ಮತ್ತು ಆರೋನನ ಕೋಲು
● ಸಣ್ಣ ಬೀಜದಿಂದ ಎತ್ತರದ ಮರದವರೆಗೆ
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ಭಯಪಡಬೇಡ.
ಅನಿಸಿಕೆಗಳು
