ಅನುದಿನದ ಮನ್ನಾ
1
0
29
ಅಂದುಕೊಂಡಿದ್ದಕ್ಕಿಂತ ಮಿಗಿಲಾಗಿ ಅಧ್ಭುತಗಳನ್ನು ಮಾಡುವ ದೇವರು
Friday, 13th of February 2026
Categories :
ಪ್ರಾರ್ಥನೆ (prayer)
"ಆಕೆಯು ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಭೂವಿುಯನ್ನು ಕೇಳಬೇಕೆಂದು ಗಂಡನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿಂದ ಇಳಿದಳು. ಕಾಲೇಬನು ನಿನಗೇನು ಬೇಕೆಂದು ಆಕೆಯನ್ನು ಕೇಳಲು ಆಕೆಯು - ನನಗೊಂದು ದಾನ ಕೊಡಬೇಕು; ನನ್ನನ್ನು ಬೆಗ್ಗಾಡಿಗೆ ಕೊಟ್ಟುಬಿಟ್ಟಿಯಲ್ಲಾ; ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು ಅಂದಳು. ಆಗ ಅವನು ಆಕೆಗೆ ಮೇಲಣ ಮತ್ತು ಕೆಳಗಣ ಬುಗ್ಗೆಗಳನ್ನು ಕೊಟ್ಟನು."(ಯೆಹೋಶುವ 15:18–19)
“ದಕ್ಷಿಣ ಭೂಮಿ”ಯ ಅರ್ಥ
ಇಂದು, ನಮ್ಮ ಪಠ್ಯದಲ್ಲಿ, ಅಕ್ಷಾಳು ತನ್ನ ತಂದೆ ಕಾಲೇಬನ ಬಳಿ ತನಗೆ “ದಕ್ಷಿಣ ಭೂಮಿ”ಯನ್ನು ಇದರ ಅರ್ಥ ಹೀಬ್ರೂ ಭಾಷೆಯಲ್ಲಿ “ಬರಡು ” ಎಂದರ್ಥ ಕೊಡುವ ಭೂಮಿಯನ್ನು ಕೊಡಲ್ಪಟ್ಟಿದೆ ಎಂಬುದಾಗಿ ಹೇಳಿದ್ದನ್ನು ನಾವು ಕಾಣುತ್ತೇವೆ.
ಏಕೆಂದರೆ ಪ್ಯಾಲೆಸ್ಟೈನ್‌ನ ದಕ್ಷಿಣ ಪ್ರದೇಶವು ಮರುಭೂಮಿಯಂತೆ ಬರುಡಾಗಿತ್ತು. ಅಕ್ಷಾಳು ತನ್ನ ತಂದೆಯಾದ ಕಾಲೇಬನಿಗೆ ಅವನಿಂದ “ಬಂಜರು ಭೂಮಿ”ಯನ್ನು ತಾನು ಹೊಂದಿಕೊಂಡಿದ್ದೇನೆ ಎಂಬುದಾಗಿ ಹೇಳಿದಳು. ಆದರಿಂದ ಅವಳು ತನ್ನ ತಂದೆಯ ಬಳಿಗೆ ಬಂದಾಗ, ಅವಳು : “ನನಗೆ ನೀರಿನ ಬುಗ್ಗೆಗಳನ್ನು ಸಹ ಕೊಡು” ಎಂದು ಕೇಳುತ್ತಾಳೆ.
ಇಲ್ಲಿ ಅವಳು ನಾಚಿಕೆಪಡದೇ, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ತನ್ನ ತಂದೆಯ ಬಳಿಗೆ ಬಂದು, ತನ್ನ ತಂದೆಯು ತನ್ನನ್ನು ಪ್ರೀತಿಸುತ್ತಿದ್ದರಿಂದ ಮತ್ತು ತಂದೆ-ಮಗಳ ಸಂಬಂಧದದ ಆಧಾರದ ಮೇಲೆ ಅವನನ್ನು ಬೇಡಿಕೊಳ್ಳುತ್ತಾಳೆ.ಈಗ, ಧೈರ್ಯ ಎಂದರೆ ಅಗೌರವದಿಂದ ಎಂದಲ್ಲ. “ಅವಳು ತನ್ನ ಕತ್ತೆಯಿಂದ ಇಳಿದು ಬಂದು ” ಎಂದು ಶಾಸ್ತ್ರವು ಹೇಳುತ್ತದೆ. ಅಂದರೆ ಅವಳು ತನ್ನ ತಂದೆಗೆ ಸಲ್ಲಬೇಕಾದ ಗೌರವವನ್ನು ನೀಡಿದಳು. (ರೋಮನ್ನರು 13:7 ಓದಿ.)
ಬೇಡಿದಕ್ಕಿಂತಲೂ ಹೆಚ್ಚಿನದನ್ನು ಪಡೆದುಕೊಳ್ಳುವುದು.
ಮತ್ತು ಈಗ ಈ ಕಥೆಯು ನಮ್ಮ ಎಲ್ಲಾ ಕನಸುಗಳನ್ನು ಮೀರಿ ಅಪೊಸ್ತಲ ಪೌಲನು ಎಫೆಸದ ಕ್ರೈಸ್ತರಿಗೆ ಹೇಳಿದ ಕ್ಷೇತ್ರಕ್ಕೆ ಹೋಗುತ್ತದೆ - ಅದೇನೆಂದರೆ ನಮ್ಮ ದೇವರು "ನಾವು ಬೇಡುವುದುದಕ್ಕಿಂತಲೂ ಅಥವಾ ಯೋಚಿಸುವುದಕ್ಕಿಂತಲೂ ಹೆಚ್ಚಾಗಿ" ಮಾಡುವಾತಾನು ಎಂಬುದಾಗಿದೆ. (ಎಫೆಸ 3:20.)
ಕಾಲೇಬನಂತಹ ಇಹಲೋಕದ ತಂದೆಯೇ ತನ್ನ ಮಗಳು ಕೇಳಿದ್ದಕ್ಕಿಂತ ಹೆಚ್ಚಾಗಿ ಆಶೀರ್ವದಿಸುವ ಹೃದಯವನ್ನು ಹೊಂದಿದ್ದರೆ, ನಮ್ಮ ಪರಲೋಕದ ತಂದೆ ಹೃದಯವು ಇನ್ನು ಎಷ್ಟರ ಮಟ್ಟಿಗಿರಬೇಕು?
ನಮ್ಮ ದೇವರ ಹೆಸರುಗಳಲ್ಲಿ ಒಂದು ಹೆಸರು "ಯೆಹೋವ ಯೀರೆ", ಅಂದರೆ "ಎಲ್ಲವನ್ನೂ ಒದಗಿಸುವವನು"ಎಂದು. ಆತನು ಯಾವಾಗಲೂ ಬೇಕಾದಕ್ಕಿಂತ ಮಿಗಿಲಾಗಿ ಒದಗಿಸುವವನಾಗಿದ್ದಾನೆ. ಈ ಮಿಗಿಲಾಗಿ ನೀಡುವ ದೇವರು ನರರೂಪದಲ್ಲಿ ಬಂದು ತನ್ನ ಜನರ ನಡುವೆ ನಡೆದಾಡಿದನು. ಆತನು ಗಲಿಲಾಯ ಸಮುದ್ರದ ತೀರದಲ್ಲಿ ನಡೆಯುತ್ತಿರುವಾಗ, ಆತನು ಪೇತ್ರನಿಗೆ, "ಆಳಕ್ಕೆ ಹೋಗಿ ಮೀನು ಹಿಡಿಯಲು ನಿಮ್ಮ ಬಲೆಯನ್ನು ಹಾಕಿರಿ" ಎಂದು ಹೇಳಿದನು. (ಲೂಕ 5:4.)
ಅದು ಎಷ್ಟು ಮೀನು ಹಿಡಿಯುವಂತಾಯಿತು ಅಂದರೆ - ದೋಣಿ ಮುಳುಗಿ, ಬಲೆ ಹರಿಯುವಷ್ಟು ಹಿಡಿದಷ್ಟು ಮೀನುಗಳಾಗಿತ್ತು! ಅದು ಎಷ್ಟು ದೊಡ್ಡ ಮತ್ತು ಅನಿರೀಕ್ಷಿತ ಆಶೀರ್ವಾದವಾಗಿತ್ತೆಂದರೆ, ಪೇತ್ರ ಮತ್ತು ಅವನ ಜೊತೆಗಿದ್ದವರೆಲ್ಲರೂ "ತಮಗೆ ಸಿಕ್ಕಿದ್ದ ಮೀನುಗಳ ರಾಶಿಯನ್ನು ನೋಡಿ ಆಶ್ಚರ್ಯಚಕಿತರಾದರು."
ಕಡಿಮೆ ಮಟ್ಟದಕ್ಕೆ ತೃಪ್ತ ರಾಗಬೇಡಿರಿ
ಕಡಿಮೆ ಮಟ್ಟದಕ್ಕೆ ತೃಪ್ತ ರಾಗಬೇಡಿ. ನಿಮಗೆ ಕೆಲಸವಿಲ್ಲದಿದ್ದರೆ, ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ. ನಿಮಗೆ ಈಗಾಗಲೇ ಕೆಲಸವಿದ್ದರೆ, ಅದರಲ್ಲಿ ನಿಮಗೆ ಬಡ್ತಿ ಮತ್ತು ಸ್ಥಾನ ಸಿಗುತ್ತದೆ. ನಿಮಗೆ ಮನೆ ಇಲ್ಲದಿದ್ದರೆ, ಕರ್ತನು ನಿಮಗಾಗಿ ಒಂದು ಮನೆಯನ್ನು ಒದಗಿಸುತ್ತಾನೆ; ನಿಮಗೆ ಈಗಾಗಲೇ ಮನೆ ಇದ್ದರೆ, ಆತನು ನಿಮ್ಮ ಮನೆಯನ್ನು ಒಳ್ಳೆಯ ವಸ್ತುಗಳಿಂದ ತುಂಬಿಸುವನು. ಆತನು ಮಿಗಿಲಾಗಿ ಒದಗಿಸುವ ದೇವರಾಗಿದ್ದಾನೆ.
Bible Reading: Number 1-2
ಪ್ರಾರ್ಥನೆಗಳು
ನಾನು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುತ್ತೇನೆ; ಆಗ, ನನಗೆ ಬೇಕಾದ ಎಲ್ಲವೂ ನನಗೆ ದೊರಕುವುದು. (ಲೂಕ 12:31)
ಅಬ್ರಹಾಮನ ಆಶೀರ್ವಾದಗಳೆಲ್ಲವೂ ನನ್ನವೇ. (ಗಲಾತ್ಯ 3:14)
ಅಬ್ರಹಾಮನ ಆಶೀರ್ವಾದಗಳೆಲ್ಲವೂ ನನ್ನವೇ. (ಗಲಾತ್ಯ 3:14)
Join our WhatsApp Channel
Most Read
● ದೇವರು ಮುಯ್ಯಿ ತೀರಿಸಲಿ.● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
● ಆತ್ಮದಲ್ಲಿ ಉರಿಯುತ್ತಿರ್ರಿ.
● ಬೀಜದಲ್ಲಿರುವ ಶಕ್ತಿ-1
● ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 5
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಇದು ಕೇವಲ ಸಾಂದರ್ಭಿಕವಾಗಿ ಹೇಳುವ ಶುಭಾಶಯವಲ್ಲ
ಅನಿಸಿಕೆಗಳು
