english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೂರದಿಂದ ಹಿಂಬಾಲಿಸುವುದು
ಅನುದಿನದ ಮನ್ನಾ

ದೂರದಿಂದ ಹಿಂಬಾಲಿಸುವುದು

Wednesday, 6th of November 2024
2 1 316
Categories : ಶಿಷ್ಯತ್ವ (Discipleship)
ಆದರೆ ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು. (ಲೂಕ 22:54)

ಯೇಸುವಿನ  ಜೊತೆಗೆ ಇದ್ದು ಆತನೊಂದಿಗೆ ನಿಕಟವಾಗಿ ನಡೆದ ಕೆಲವರು ಇದ್ದಾರೆ ಮತ್ತು ಹಾಗೆಯೇ ಯೇಸುವನ್ನು  ದೂರದಿಂದ ಹಿಂಬಾಲಿಸಿದವರೂ ಇದ್ದಾರೆ.  ನಾನು ಭೌತಿಕ ನಿಕಟತೆ ಕುರಿತು ಇಲ್ಲಿ ಮಾತನಾಡುತ್ತಿಲ್ಲ.  ಕೆಲವರು ಭೌತಿಕವಾಗಿ ಯೇಸುವಿಗೆ ಬಹಳ ಹತ್ತಿರವಾಗಿದ್ದರು. ಆದರೆ ಅವರ ಹೃದಯಗಳು ಆತನಿಂದ ದೂರವಿದ್ದವು. (ಮತ್ತಾಯ 15:8)

"ಇಷ್ಟು ಹತ್ತಿರ ಮತ್ತು ಇಷ್ಟು ದೂರ" ಎಂಬ ಮಾತನ್ನು ನೀವು ಕೇಳಿದ್ದೀರಾ? ನೀವು ಸಭೆಯಲ್ಲಿಯೇ ಕುಳಿತಿರಬಹುದು ಆದರೆ ಆ ಸಭೆಯ ಒಡೆಯನಿಂದ  ನೀವು ದೂರವಾಗಿರಬಹುದು.
ಪೇತ್ರನಂತೆ, ಇಂದು ಅನೇಕ ಕ್ರೈಸ್ತರು ಯೇಸುವನ್ನು ಹಿಂಬಾಲಿಸುತ್ತಿರುತ್ತಾರೆ  ಆದರೆ  ದೂರದಿಂದ ಹಿಂಬಾಲಿಸುವವರಾಗಿದ್ದಾರೆ.  ಅವರು ಯೇಸುವನ್ನು ತ್ಯಜಿಸಿಲ್ಲ. ಆದರೆ  ಅದೇ ಸಮಯದಲ್ಲಿ ಆತನನ್ನು ಹಿಂಬಾಲಿಸಲು ಬೇಕಾದ ಉತ್ಸಾಹವಾಗಲೀ ಮತ್ತು ಉತ್ಸುಕತೆಯೂ ಅವರಿಗಿಲ್ಲ.

ಪೇತ್ರನು ಯೇಸುವನ್ನು ದೂರದಿಂದ  ಹಿಂಬಾಲಿಸಲು ಕಾರಣವೇನು? ತನ್ನ ಪ್ರೀತಿಯ ನಾಯಕನಿಗೆ ಏನಾಗುತ್ತಿದೆ ಎಂದು ಪೇತ್ರನು ನಿಜವಾಗಿಯೂ ಅರ್ಥಮಾಡಿಕೊಂಡಿರಲಿಲ್ಲ  ಎಂದು ತೀರ್ಮಾನಿಸುವುದೇ ಹೆಚ್ಚು  ಸುರಕ್ಷಿತವಾದ ವಾದವೆಂದು ಎಂದು ನಾನು ಭಾವಿಸುತ್ತೇನೆ. ಕರ್ತನು ಒಬ್ಬ ನಾಯಕನು ಎನ್ನುವುದಕ್ಕಿಂತ ಹೆಚ್ಚಾಗಿ - ಆತನು ರಕ್ಷಕನಾಗಿದ್ದನು.

ದೇವರು ಏನು ಮಾಡುತ್ತಿದ್ದಾನೆಂದು ಅರ್ಥಮಾಡಿಕೊಳ್ಳಲು ಕಷ್ಟವಾಗುವಾಗ, ಯೇಸುವಿನಿಂದ ದೂರದಲ್ಲಿ ಉಳಿದುಬಿಡುವುದು ಒಳ್ಳೆಯದು ಎನ್ನುವ  ಪ್ರಲೋಭನೆಗಳು ಉಂಟಾಗುತ್ತದೆ. ಯೇಸು ಯಾರಾಗಿದ್ದಾನೆ ಎಂದು ಅರ್ಥವಾಗದಿದ್ದರೂ ಆತನೊಂದಿಗೆ ನಿಕಟವಾಗಿ ನಡೆಯುವುದೋ  ಅಥವಾ ದೂರದಿಂದ  ಆತನನ್ನು ಹಿಂಬಾಲಿಸುವುದೋ ಎಂಬುದು  ನಮಗೇ ಬಿಟ್ಟದ್ದು. ಆದಾಗ್ಯೂ, ದೇವರವಾಕ್ಯವು ನಿರಂತರವಾಗಿ ದೇವರ ಸಾಮಿಪ್ಯದಲ್ಲಿರಬೇಕೆಂದು ಮತ್ತು ಆತನಿಂದ ಎಂದಿಗೂ ದೂರವಿರಬಾರದು ಎಂದು ಹೇಳುತ್ತದೆ . (ಯಾಕೋಬ 4:8)

ನೀವು ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದೀರಾ? ನೀವು ಆತನನ್ನು ನಂಬದಂತೆ ಈ ಅಂತರವನ್ನು ಅನುಮತಿಸಿದ್ದೀರಾ? ಈ  ನಿಮ್ಮ ಅಂತರವು ಯೇಸುವಿಗಾಗಿ ಸಂಪೂರ್ಣವಾಗಿ ನೀವು ಜೀವಿಸಲಾಗದಂತೆ  ಆತನನ್ನು ತ್ಯಜಿಸುವಂತೆ ಮಾಡಿಬಿಟ್ಟಿದೆಯಾ ? ಒಂದು ಶುಭ ಸುದ್ದಿ ಏನೆಂದರೆ, ಏನೇ ಆದರೂ ಯೇಸು ನಿಮ್ಮನ್ನು ಪ್ರೀತಿಸುವುದನ್ನು ಮಾತ್ರ  ನಿಲ್ಲಿಸಿಲ್ಲ ಮತ್ತು ಆತನೊಂದಿಗೆ ನೀವು ಮತ್ತೆ  ಅನ್ಯೋನ್ಯತೆಯನ್ನು ಪುನಃಸ್ಥಾಪಿಸಿ ಕೊಳ್ಳಬೇಕೆಂದು ಆತನು  ಬಯಸುತ್ತಾನೆ. ಯೇಸು ಪೇತ್ರನನ್ನು ಪುನಃಸ್ಥಾಪಿಸಿದನು, ಮತ್ತು ಅದರ ನಂತರ, ಪೇತ್ರನು ಮತ್ತೆ ಎಂದಿಗೂ ಹಿಂತಿರುಗಿ ನೋಡಲಿಲ್ಲ. (ಯೋಹನ 21:15-19). ಯೇಸು ಪೇತ್ರನನ್ನು ಪುನಃಸ್ಥಾಪಿಸಿದಾಗ, "ನನ್ನನ್ನು ಹಿಂಬಾಲಿಸು" (ಯೋಹಾನ  21:19) ಎಂದು ಹೇಳಿದನು.
ಪ್ರಾರ್ಥನೆಗಳು
ಕರ್ತನಾದ ಯೇಸುವೇ, ನಾನು ಪ್ರತಿನಿತ್ಯವೂ ನಿನ್ನನ್ನು ನಿಕಟವಾಗಿ ಹಿಂಬಾಲಿಸುವಂತೆಯೂ, ಎಲ್ಲಾ ಸಂದರ್ಭಗಳಲ್ಲಿಯೂ ನಿನ್ನ ವಾಕ್ಯವನ್ನು ಕೈಗೊಳ್ಳುವಂತೆಯೂ ನಿನ್ನ ಪರಿಶುದ್ಧ ನಾಮದಲ್ಲಿ ನನಗೆ ಕೃಪೆಯನ್ನು ಅನುಗ್ರಹಿಸು. ಆಮೆನ್


Join our WhatsApp Channel


Most Read
● ನಂಬಿಕೆಯ ಜೀವಿತ
● ಕ್ರಿಸ್ತ ಕೇಂದ್ರಿತ ಮನೆಯನ್ನು ನಿರ್ಮಿಸುವುದು.
● ವಿಧೇಯತೆ ಎಂಬುದು ಒಂದು ಆತ್ಮೀಕ ಸದ್ಗುಣ
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಗೌರವಿಸುವ ಜೀವಿತ ಜೀವಿಸಿ
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -5
● ಯೇಸುವಿನ ರಕ್ತವನ್ನು ಹಚ್ಚುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್