english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಆತ್ಮೀಕ ಹೆಮ್ಮೆಯನ್ನು ಜಯಿಸುವ 4 ಮಾರ್ಗಗಳು
ಅನುದಿನದ ಮನ್ನಾ

ಆತ್ಮೀಕ ಹೆಮ್ಮೆಯನ್ನು ಜಯಿಸುವ 4 ಮಾರ್ಗಗಳು

Tuesday, 18th of November 2025
1 0 120
"ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ಉದಾಸೀನಮಾಡುವಂಥ ಕೆಲವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಒಬ್ಬನು ಸುಂಕದವನು. ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ - ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ.ವಾರಕ್ಕೆ ಎರಡಾವರ್ತಿ ಉಪವಾಸ ಮಾಡುತ್ತೇನೆ; ನಾನು ಸಂಪಾದಿಸುವ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ ಅಂದುಕೊಂಡನು. ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ಎದೆಯನ್ನು ಬಡುಕೊಳ್ಳುತ್ತಾ - ದೇವರೇ, ಪಾಪಿಯಾದ ನನ್ನನ್ನು ಕರುಣಿಸು ಅಂದನು. ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು, ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು."(ಲೂಕ 18:9-14)

 ಆತ್ಮೀಕ ಜೀವನವು ಒಂದು ಅಪಾಯಕಾರಿ ಪ್ರಯಾಣವಾಗಿದ್ದು ನಾವು  ಬಾಹ್ಯದಲ್ಲಿ ಸವಾಲುಗಳನ್ನು ಎದುರಿಸುವುದು ಮಾತ್ರವಲ್ಲದೇ, ನಮ್ಮ ಸ್ವಭಾವವನ್ನು ಪರೀಕ್ಷಿಸುವ ಆಂತರಿಕ ಹೋರಾಟಗಳನ್ನೂ ಸಹ ಎದುರಿಸಬೇಕಾಗುತ್ತದೆ. ಇವುಗಳಲ್ಲಿ ಅತ್ಯಂತ ಕಪಟವಾದದ್ದು ಆತ್ಮೀಕ ಹೆಮ್ಮೆ. ಫರಿಸಾಯ ಮತ್ತು ಸುಂಕದವನ ಉದಾಹರಣೆಯೊಂದಿಗೆ ಶಸ್ತ್ರಸಜ್ಜಿತರಾಗಿ, ಈ ಆತ್ಮೀಕ ಬಲೆಯನ್ನು ಎದುರಿಸುವ ಮಾರ್ಗಗಳನ್ನು ಅನ್ವೇಷಿಸೋಣ.

1. ನಿಮ್ಮ ಮೇಲೆಯೇ ನೀವು ಗಮನಹರಿಸುವುದಕ್ಕಿಂತ ದೇವರ ಮೇಲೆ ಹೆಚ್ಚು ಗಮನಹರಿಸಿ.

ನಮ್ಮ ಸ್ವನೀತಿಯಲ್ಲಿ ಮುಳುಗುವಂ ತದ್ದು ಸುಲಭವೇ. ಆದರೆ ಕೊಲೊಸ್ಸೆ 3:2-3 ನಮಗೆ ನೆನಪಿಸುವಂತೆ, "ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ. ಯಾಕಂದರೆ ನೀವು ಸತ್ತಿರಲ್ಲಾ, ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿಟ್ಟದೆ"ನಮ್ಮ ಗಮನವು ದೇವರ ಮಹಿಮೆ ಮತ್ತು ಒಳ್ಳೆಯತನದ ಮೇಲೆ ಕೇಂದ್ರೀಕರಿಸುವುದರಿಂದ ನಮ್ಮ ದೃಷ್ಟಿ  ನಮ್ಮಿಂದ ತೆಗೆದು ನಿಜವಾಗಿಯೂ ಅರ್ಹನಾದವನ ಮೇಲೆ  ತಿರುಗುತ್ತದೆ. ಗಮನಹರಿಸುವುದರಲ್ಲಿನ  ಈ ಬದಲಾವಣೆಯು ಹೆಮ್ಮೆಯನ್ನು ಹೆಚ್ಚಿಸುವ ರೋಗಕ್ಕೆ ನಿರೋಧಕವಾಗಿ ಕಾರ್ಯಮಾಡುತ್ತದೆ.

 2. ಪ್ರಾರ್ಥಿಸಿ 

ಆತ್ಮೀಕ ಹೆಮ್ಮೆಯ ಕ್ಷೇತ್ರದಲ್ಲಿ, ಪ್ರಾರ್ಥನೆಯು ದೀನತೆಯ ಕೋಟೆಯಾಗುತ್ತದೆ. ಅಪೊಸ್ತಲನಾದ ಯಾಕೋಬನು , "ಹಾಗಾದರೆ, ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿ ಆಗ, ಅವನು ನಿಮ್ಮಿಂದ ಓಡಿಹೋಗುವನು" (ಯಾಕೋಬ 4:7).ಎಂದು ನೆನಪಿಸುತ್ತಾನೆ.

ಪ್ರಾರ್ಥನೆಯು ನಾವು ದೇವರಿಗೆ ನಮ್ಮನ್ನು ಒಪ್ಪಿಸಿಕೊಟ್ಟು ಆತನ ಮಾರ್ಗದರ್ಶನವನ್ನು ಬೇಡಿಕೊಳ್ಳುವ ಸ್ಥಳವಾಗಿದೆ. ಅಲ್ಲಿ ನಾವು ನಮ್ಮ ಹೆಮ್ಮೆಯನ್ನು ಬಿಟ್ಟು ದೇವರನ್ನು ನಮ್ಮ ಹೃದಯಗಳನ್ನು ಪರಿಶೋಧೀಸು ಎಂದು ಆಹ್ವಾನಿಸುವವರಾಗುತ್ತೇವೆ. ಕೀರ್ತನೆ 139:23-24 ರಲ್ಲಿ ದಾವೀದನು ಪ್ರಾರ್ಥಿಸಿದಂತೆ, " ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು" ಎಂದು ಬೇಡುತ್ತೇವೆ

3. ಕಲಿಯಲು ಆಸಕ್ತರಾಗಿರ್ರಿ
ಕಲಿಯಲು ಮತ್ತು ಬೆಳೆಯಲು ಇರುವ ಇಚ್ಛಾಶಕ್ತಿಯು ದೀನತೆಯ ಸಂಕೇತವಾಗಿದೆ.

ಜ್ಞಾನೋಕ್ತಿ 9:9 ಕಲಿಯುವ ಮನೋಭಾವವನ್ನು ಶ್ಲಾಘಿಸುತ್ತದೆ. "ಜ್ಞಾನಿಗೆ ಉಪದೇಶಿಸಿದರೆ ಹೆಚ್ಚು ಜ್ಞಾನವನ್ನು ಹೊಂದುವನು, ನೀತಿವಂತನಿಗೆ ಬೋಧಿಸಿದರೆ ಹೆಚ್ಚು ತಿಳುವಳಿಕೆಯನ್ನು ಪಡೆಯುವನು." ಮೋಶೆಯು ತನ್ನ ಮಾವ ಜೆತ್ರೋನಿಂದ ಜ್ಞಾನಹೊಂದಲು ಮುಕ್ತನಾಗಿದ್ದನು (ವಿಮೋಚನಕಾಂಡ 18:13-24). ಕಲಿತುಕೊಳ್ಳುವುದು ಎಂದರೆ ಮೋಸಹೋಗುವವರಾಗಿರುವುದು ಎಂದಲ್ಲ; ಇದರರ್ಥ ಸಲಹೆಯನ್ನು ಜ್ಞಾನದಿಂದ ತೂಗಿ ನೋಡಿ ತಮ್ಮನ್ನು ಬದಲಾಯಿಸಿಕೊಳ್ಳಲು ಸಿದ್ಧರಿರುವುದು ಎಂದು. ನಾವು ನಮ್ಮ ಹೃದಯಗಳನ್ನು ತೆರೆದುಕೊಡುವಾಗ, ನಮ್ಮಲ್ಲಿ ಪವಿತ್ರಾತ್ಮನು ಮಾಡುವ ಕಾರ್ಯವನ್ನು ನಾವು ಹೆಚ್ಚಾಗಿ ಗ್ರಹಿಕೆಹೊಂ ಡಿಕೊಳ್ಳುತ್ತೇವೆ ಅದು ನಮ್ಮನ್ನು ಹೆಮ್ಮೆಯಿಂದ ದೂರವಿಡುತ್ತದೆ.

4. ಉಪವಾಸ
ಉಪವಾಸವು ಆತ್ಮೀಕ ಪರಿಣಾಮಗಳನ್ನು ಹೊಂದಿಕೊಳ್ಳುವ ದೈಹಿಕ ಕ್ರಿಯೆಯಾಗಿದೆ. ಇದು ನಮ್ಮ ದೈಹಿಕ ಹಸಿವನ್ನು ಕರಗತ ಮಾಡಿಕೊಳ್ಳಲು ಮತ್ತು ನಮ್ಮ ಆತ್ಮೀಕ ದೃಷ್ಟಿಯನ್ನು ಮರುಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಯೆಶಾಯ 58:6-7 ಉಪವಾಸದ ನಿಜವಾದ ಉದ್ದೇಶದ ಕುರಿತು ಮಾತನಾಡಿ, ಇದು ಆಹಾರದಿಂದ ದೂರವಿರುವುದು ಮಾತ್ರವಲ್ಲದೆ ಅನ್ಯಾಯದ ಸರಪಳಿಗಳನ್ನು ಸಡಿಲಿಸಿ ದಮನಿತರನ್ನು ಮುಕ್ತಗೊಳಿಸುವುದರ ಕುರಿತು ಹೇಳುತ್ತದೆ. ನೀವು ಉಪವಾಸ ಮಾಡುವಾಗ, ನಿಮ್ಮ ದೌರ್ಬಲ್ಯ ಗಳು ಮತ್ತು ಮಿತಿಗಳನ್ನು ನಿಮಗೆ ನೆನಪಿಸಲಾಗುತ್ತದೆ, ಇದರಿಂದಾಗಿ ದೇವರ ಕೃಪೆಯು ನಿಮ್ಮ ಮೂಲಕ ಹರಿಯಲು ಅವಕಾಶವನ್ನು ಸೃಷ್ಟಿಸುತ್ತದೆ. ನಾನು ನಿಮ್ಮನ್ನು ಎಚ್ಚರಿಸಲು ಅನುಮತಿಸುವುದೇನೆಂದರೆ. ಈ ತತ್ವಗಳನ್ನು ನಿರ್ಲಕ್ಷಿಸುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ನಾವು ದೃಢವಾಗಿ ನಿಂತಿದ್ದೇವೆ ಎಂದು ನಾವು ಭಾವಿಸುವವರಾದರೂ ಬೀಳದಂತೆ ಎಚ್ಚರಿಕೆಯಿಂದಿರಬೇಕು. (1 ಕೊರಿಂಥ 10:12).
ಇಲ್ಲಿ ಈ ದೃಷ್ಟಾಂತದಲ್ಲಿರುವ ಫರಿಸಾಯನು ತಾನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿದ್ದೇನೆ ಎಂದು ಭಾವಿಸಿದ್ದನು ಎಂಬುದನ್ನು ಮರೆಯಬಾರದು, ಆದರೆ ಕ್ರಿಸ್ತನಿಂದ ಬೇರೆ ರೀತಿಯಲ್ಲಿ ನಿರ್ಣಯಿಸಲ್ಪಟ್ಟಿದ್ದನು. 

Bible Reading: Acts 5-7
ಪ್ರಾರ್ಥನೆಗಳು
ತಂದೆಯೇ, ಪ್ರತಿದಿನ ನನಗೆ ಬೇಕಾದ ನಿನ್ನ ಕೃಪೆ ಮತ್ತು ಜ್ಞಾನದ ಅಗತ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ. ನಿನ್ನ ಮೇಲೆ ಹೆಚ್ಚು ಗಮನಹರಿಸಲು, ಪ್ರಾರ್ಥನಾಶೀಲನಾಗಿರಲು ಮತ್ತು ಕಲಿಸಬಹುದಾದವನಾಗಿರಲು ಮತ್ತು ಉಪವಾಸದ ಮೂಲಕ ನನ್ನನ್ನು ವಿನಮ್ರಗೊಳಿಸಿಕೊಳ್ಲು ನನಗೆ ಸಹಾಯ ಮಾಡಿ. ನಾನು ಮಾಡುವ ಎಲ್ಲದರಲ್ಲೂ ನಿನ್ನನ್ನು ಮಹಿಮೆಪಡಿಸುವಂತೆ ಆತ್ಮೀಕ ಹೆಮ್ಮೆಯ ಬಲೆಯಿಂದ ನನ್ನನ್ನು ರಕ್ಷಿಸಿ. ಯೇಸುವಿನ ಹೆಸರಿನಲ್ಲಿ ಬೇಡಿದ್ದೇನೆ ಆಮೆನ್.

Join our WhatsApp Channel


Most Read
● ನಿಮ್ಮ ಕಾಲುಗಳ ಮೇಲೆ ನೀವೇ ಕಲ್ಲುಹಾಕಿಕೊಳ್ಳಬೇಡಿ
● ನಮ್ಮ ಹಿಂದಿರುವ ಉರಿಯುವ ಸೇತುವೆಗಳು
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೈನಂದಿನ ಮನ್ನಾ
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕನಸು ಕಾಣುವ ಧೈರ್ಯ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್