ಅನುದಿನದ ಮನ್ನಾ
ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
Thursday, 29th of August 2024
1
1
327
Categories :
ಆರೋಗ್ಯ ಮತ್ತು ಸ್ವಸ್ಥತೆ - Health and Healing
ಒತ್ತಡ (Stress)
ದೈಹಿಕ ಸಮಸ್ಯೆಗಳು ಮಾನಸಿಕ ಸಮಸ್ಯೆಗಳು ಆರೋಗ್ಯ ಸಮಸ್ಯೆಗಳು ಮುರಿದ ಸಂಬಂಧಗಳು ಮತ್ತು ಇಂದಿನ ಆಧುನಿಕ ಸಮಾಜವು ಜೀವನ ಎಂದು ಕರೆಯುವಂತಹ ಗೊತ್ತುಗುರಿಯಿಲ್ಲದ ಓಟ. ಒತ್ತಡ ಎಂಬುದು ಇಂದಿನ ದಿನಮಾನಗಳಲ್ಲಿ ನಂಬರ್ 1 ಕೊಲೆಪಾತಕವಾಗಿದೆ. ಆದರೆ ಅದನ್ನು ಗೆಲ್ಲಲು ಸಾಧ್ಯವಿಲ್ಲ ಎಂದೇನಿಲ್ಲ. ವಾಸ್ತವವಾಗಿ ದೇವರು ತನ್ನ ಜ್ಞಾನದಲ್ಲಿ ತನ್ನ ಜೀವವುಳ್ಳ ವಾಕ್ಯದ ಮೂಲಕ ಇದನ್ನು ಹೇಗೆ ಜಯಿಸಬಹುದು. ಎಂಬುದರ ಕುರಿತು ನಮಗೆ ಸ್ಪಷ್ಟವಾದ ಮಾರ್ಗದರ್ಶನವನ್ನು ನೀಡಿದ್ದಾನೆ.
"ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು ಅಂದನು."(ಮತ್ತಾಯ 11:28-30)
ಆತನ ಸಮ್ಮುಖಕ್ಕೆ ಬನ್ನಿರಿ
ನೀವು ನಿಯಮಿತವಾಗಿ ಬಳಲಿ ಹೋಗುವವರು ಮತ್ತು ಹೊರೆ ಹೊತ್ತವರಾಗಿದ್ದರೆ ಇದುವೆ ಪ್ರಾಯಶಃ ನಿಮಗೆ ಆತನ ಸಮ್ಮುಖದಲ್ಲಿ ಕಾಲಕಳೆಯುವಂತೆ ಆತನ ಉಪಸ್ಥಿತಿಗೆ ಬರಲು ಸುಸಮಯವಾಗಿದೆ.ಕರ್ತನು ತನ್ನ ವಿಶ್ರಾಂತಿಯನ್ನು ಮತ್ತು ಆದರಣೆಯನ್ನು ಹೀಗೆ ಮಾಡುವವರಿಗಾಗಿಯೇ ವಾಗ್ದಾನ ಮಾಡಿದ್ದಾನೆ. ಹಾಗಾಗಿ ನೀವು ಆತನ ಸಮ್ಮುಖಕ್ಕೆ ಬನ್ನಿರಿ ಮೆಲುವಾದ ಸುಮಧುರವಾದ ಆರಾಧನೆ ಗೀತೆಗಳನ್ನು ಹಾಕಿಕೊಳ್ಳಿ. ನಿಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿರಿ. ಕೇವಲ ಆತನ ಪ್ರಸನ್ನತೆಯಲ್ಲಿರುವ ಸಮಾಧಾನವನ್ನು ಚೈತನ್ಯವನ್ನು ಮಾತ್ರ ಆನಂದಿಸಿ. ನಿಧಾನವಾಗಿ ದೇವರ ವಾಕ್ಯದ ಭಾಗವನ್ನು ಓದಿರಿ ಮತ್ತು ಅದು ನಿಮ್ಮೊಡನೆ ಮಾತಾಡಲು ಅವಕಾಶ ಮಾಡಿಕೊಡಿ ಇದು ನಿಮ್ಮ ಪ್ರಾಣ- ಶರೀರದಲ್ಲಿ ಅದ್ಭುತವನ್ನು ಮಾಡುತ್ತದೆ.
ಲಕ್ಷ್ಯವಹಿಸಿ
ನಿಮ್ಮ ಸುತ್ತಲೂ ಜನರೆಲ್ಲರೂ ಮಾಡುತ್ತಿರುವುದೆಲ್ಲವನ್ನೂ ನೀವೂ ಮಾಡಲು ಹೋಗಬೇಡಿರಿ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಎಲ್ಲಾ ಸಂಗತಿಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಹೋಗಬೇಡಿರಿ. ನೀವು ಯಾವ ವಿಚಾರದಲ್ಲಿ ಉತ್ತಮವಾಗಿದ್ದೀರೋ ಅದಕ್ಕೆ ಮಾತ್ರ ನಿಮ್ಮ ಸಮಯ ಮತ್ತು ಶಕ್ತಿಯನ್ನು ನೀಡುವುದಕ್ಕಾಗಿ ಲಕ್ಷ್ಯ ವಹಿಸಬೇಕು. ನೆನಪಿಡಿರಿ. ಬಹು ಕಾರ್ಯಗಳನ್ನು ಮಾಡುತ್ತಿರುವುದೇ ಫಲದಾಯಕತೆ ಅಲ್ಲ ಹಾಗಾಗಿ ಅಂತಹ ಕಾರ್ಯಗಳಿಂದ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳಿರಿ.ಇದು ಮೊದಮೊದಲು ನಿಮಗೆ ನೋವು ತರಬಹುದು. ಆದರೆ ಇದು ನಿಮ್ಮ ಜೀವನವನ್ನೇ ರಕ್ಷಿಸುತ್ತದೆ, ದೇವರೊಂದಿಗೆ ಸಮಯ ಕಳೆಯಲು ಇರುವ ಒಂದು ಕೀಲಿಕೈ ಎಂದರೆ ನಿಮ್ಮ ದಿನವನ್ನೇ ಕ್ರಮ ಗೊಳಿಸುವಂತೆ ದೇವರಲ್ಲಿ ಜ್ಞಾನವನ್ನು ಬೇಡಿಕೊಳ್ಳುವುದು.
ವಿಶ್ರಾಂತಿ
"ನನ್ನ ಮನವೇ, ನಿನ್ನ ವಿಶ್ರಾಂತಿಯ ನೆಲೆಗೆ ತಿರುಗು. ಯೆಹೋವನು ನಿನಗೆ ಮಹೋಪಕಾರಗಳನ್ನು ಮಾಡಿದ್ದಾನಲ್ಲಾ."(ಕೀರ್ತನೆಗಳು 116:7)
ವಿಶ್ರಾಂತಿ ಎನ್ನುವುದು ಕೇವಲ ಒಂದು ಉತ್ತಮ ಆಲೋಚನೆಯಲ್ಲ.ಅದು ದೇವರ ಆಲೋಚನೆಯಾಗಿದೆ..
"ಆರು ದಿವಸಗಳು ನಿಮ್ಮ ಕೆಲಸವನ್ನು ನಡಿಸಿ ಏಳನೆಯ ದಿನದಲ್ಲಿ ಯಾವ ಕೆಲಸವನ್ನೂ ಮಾಡದೆ ಇರಬೇಕು. ಆ ಹೊತ್ತು ನಿಮ್ಮ ಎತ್ತುಗಳೂ ಕತ್ತೆಗಳೂ ದಾಸದಾಸಿಯರೂ ಪರದೇಶಸ್ಥರೂ ವಿಶ್ರವಿುಸಿಕೊಳ್ಳಲಿ."(ವಿಮೋಚನಕಾಂಡ 23:12)
ಕರ್ತನು ಇನ್ನೂ ಮುಂದುವರೆದು ಹೇಳುವುದೇನೆಂದರೆ " ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ ಹಾಗೆಯೇ ಏಳನೆಯ ದಿನದಲ್ಲಿ ಕೆಲಸಮಾಡದೆ ಇರಬೇಕು."(ವಿಮೋಚನಕಾಂಡ 34:21)
ರಾತ್ರಿಯಲ್ಲಿ ತೆಗೆದುಕೊಳ್ಳುವ ಉತ್ತಮ ವಿಶ್ರಾಂತಿಯೂ ಕೂಡ ನಿಮ್ಮ ಜೀವನದಿಂದ ಒತ್ತಡಗಳನ್ನು ತೆಗೆದು ಹಾಕುವಂತಹ ಅದ್ಭುತಗಳನ್ನು ಮಾಡುತ್ತದೆ.ಅಗತ್ಯ ವಿಶ್ರಾಂತಿಯನ್ನು ಪಡೆಯುವ ಮೂಲಕ ನಿಮ್ಮ ವಾರವನ್ನು ಪ್ರಾರಂಭಿಸಿ ಆಗ ನೀವು ಉತ್ತಮ ಫಲದಾಯಕತೆಯ ವಾರವನ್ನು ದೈಹಿಕವಾಗಿಯೂ ಮತ್ತು ಆತ್ಮಿಕವಾಗಿಯು ಹೊಂದಿಕೊಳ್ಳುವಿರಿ
ಪ್ರಾರ್ಥನೆಗಳು
1. ತಂದೆಯೇ, ನಾನು ಎಲ್ಲವನ್ನು ನನ್ನ ಸ್ವಂತ ಬಲದಲ್ಲಿ ಮಾಡಲು ಪ್ರಯತ್ನಿಸಿದ್ದಕ್ಕಾಗಿ ದಯಮಾಡಿ ನನ್ನನ್ನು ಕ್ಷಮಿಸಿ.
2. ತಂದೆಯೇ, ಯೇಸುವಿನ ನಾಮದಲ್ಲಿ ಈ ಒಂದು ಕ್ಷಣದಿಂದ ನಿನ್ನ ಚಿತ್ತವೇ ನನ್ನ ಜೀವಿತದಲ್ಲಿ ನೆರವೇರಲಿ.ನಿನ್ನ ನಾಮ ಮಹಿಮೆಗಾಗಿ ನನ್ನ ಜೀವಿತವನ್ನು ಯೇಸುವಿನ ನಾಮದಲ್ಲಿ ಕ್ರಮಗೊಳಿಸು. ಆಮೆನ್
2. ತಂದೆಯೇ, ಯೇಸುವಿನ ನಾಮದಲ್ಲಿ ಈ ಒಂದು ಕ್ಷಣದಿಂದ ನಿನ್ನ ಚಿತ್ತವೇ ನನ್ನ ಜೀವಿತದಲ್ಲಿ ನೆರವೇರಲಿ.ನಿನ್ನ ನಾಮ ಮಹಿಮೆಗಾಗಿ ನನ್ನ ಜೀವಿತವನ್ನು ಯೇಸುವಿನ ನಾಮದಲ್ಲಿ ಕ್ರಮಗೊಳಿಸು. ಆಮೆನ್
Join our WhatsApp Channel
Most Read
● ಪುರುಷರು ಏಕೆ ಪತನಗೊಳ್ಳುವರು -6● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಹೋಲಿಕೆಯ ಬಲೆ
● ದೇವರವಾಕ್ಯವನ್ನು ಮಾರ್ಪಡಿಸಬೇಡಿರಿ
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
ಅನಿಸಿಕೆಗಳು